ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಈ ಎರಡು ಅಂಶದತ್ತ ಗಮನ ಕೊಡಿ, ಲಸಿಕೆ ಪರಿಣಾಮ ನೋಡಿ..."

|
Google Oneindia Kannada News

ವಿಶ್ವದಾದ್ಯಂತ ಕೊರೊನಾ ಲಸಿಕೆ ನೀಡುವ ಅಭಿಯಾನ ಬೃಹತ್ ಮಟ್ಟದಲ್ಲಿ ನಡೆಯುತ್ತಿದೆ. ಭಾರತದಲ್ಲಿಯೂ ಇದುವರೆಗೆ ಸುಮಾರು 19 ಲಕ್ಷ ಮಂದಿ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಕೊರೊನಾ ಸೋಂಕಿನಿಂದ ದೂರವುಳಿಯಲು ಸದ್ಯಕ್ಕೆ ಲಸಿಕೆಯೊಂದೇ ದಾರಿ ಎನ್ನಲಾಗಿದೆ. ಆದರೆ ಲಸಿಕೆ ದೇಹದಲ್ಲಿ ಪರಿಣಾಮಕಾರಿಯಾಗಿ ವರ್ತಿಸಬೇಕಾದರೆ, ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ಅಂಶಗಳನ್ನು ಪಾಲಿಸಿದರೆ ಉತ್ತಮ ಎಂದು ಅಧ್ಯಯನ ಸಲಹೆ ನೀಡಿದೆ.

ಈಚೆಗೆ ನಡೆದ ಅಧ್ಯಯನವೊಂದು ಈ ಕುರಿತು ಮಾಹಿತಿಯನ್ನು ಕಲೆ ಹಾಕಿದೆ. ಲಸಿಕೆ ಪಡೆಯುವ ಮುನ್ನ ಅನುಸರಿಸಬೇಕಾದ ಎರಡು ಕ್ರಮಗಳನ್ನು ಕಂಡುಕೊಂಡಿದೆ. ಈ ಎರಡು ಕ್ರಮಗಳನ್ನು ಅಳವಡಿಸಿಕೊಂಡರೆ ನೀವು ತೆಗೆದುಕೊಳ್ಳುವ ಲಸಿಕೆಯು ಪರಿಣಾಮಕಾರಿಯಾಗಿ ನಿಮ್ಮ ದೇಹದಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದೆ. ಆ ಎರಡು ಅಂಶಗಳೇನು? ಮುಂದೆ ಓದಿ...

 ಒತ್ತಡ, ಖಿನ್ನತೆಯಿಂದ ದೂರ ಉಳಿಯುವುದು ಅವಶ್ಯಕ

ಒತ್ತಡ, ಖಿನ್ನತೆಯಿಂದ ದೂರ ಉಳಿಯುವುದು ಅವಶ್ಯಕ

ಲಸಿಕೆಯೊಂದೇ ನಿಮ್ಮನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯವಿಲ್ಲ. ದೇಹದಲ್ಲಿ ಬಲಿಷ್ಠ ರೋಗ ನಿರೋಧಕ ಶಕ್ತಿ ಅವಶ್ಯಕವಾಗಿರುತ್ತದೆ. ಆದರೆ ಒತ್ತಡದ ಬದುಕು, ಖಿನ್ನತೆಯಂಥ ಅಂಶಗಳು ಆಂತರಿಕ ವ್ಯವಸ್ಥೆ, ಶಕ್ತಿ ಮೇಲೆ ಪರಿಣಾಮ ಬೀರಬಹುದು. ಇದು ರೋಗನಿರೋಧಕ ಶಕ್ತಿಯನ್ನು ಕುಂದಿಸಬಹುದು. ಈಚೆಗೆ ಪರ್ಸ್ ಪೆಕ್ಟಿವ್ ಆನ್ ಸೈಕಲಾಜಿಕಲ್ ಸೈನ್ಸ್ ನಲ್ಲಿ ಅಧ್ಯಯನ ಪ್ರಕಟಗೊಂಡಿದ್ದು, ನಿದ್ದೆ ಮತ್ತು ವ್ಯಾಯಾಮ ಈ ಎರಡೂ ಚಟುವಟಿಕೆಗಳು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದು ತಿಳಿಸಿದೆ.

ಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕುಕೋವ್ಯಾಕ್ಸಿನ್ ಲಸಿಕೆಯ ಕೊನೆಯ ಹಂತದ ಪರಿಣಾಮ ಅರಿಯಲು ಕೆಲವು ವಾರಗಳು ಬೇಕು

 ನಿದ್ದೆ, ವ್ಯಾಯಾಮ ಇವೆರಡೂ ಬಹು ಮುಖ್ಯ

ನಿದ್ದೆ, ವ್ಯಾಯಾಮ ಇವೆರಡೂ ಬಹು ಮುಖ್ಯ

ಮುಂದಿನ ದಿನಗಳಲ್ಲಿ ಲಸಿಕಾ ಅಭಿಯಾನ ಇನ್ನಷ್ಟು ಚುರುಕುಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಜನರೂ ಜಾಗೃತವಾಗಬೇಕಿದೆ. ಅಗತ್ಯವಿದ್ದಷ್ಟು ನಿದ್ದೆ ಮಾಡುವುದನ್ನು ಅಳವಡಿಸಿಕೊಳ್ಳಬೇಕಿದೆ. ಲಸಿಕೆ ತೆಗೆದುಕೊಳ್ಳುವವರು ಸಾಕಷ್ಟು ನಿದ್ದೆ ಮಾಡಬೇಕು ಹಾಗೂ ನಿದ್ದೆಗೂ 24 ಗಂಟೆಗಳ ಮುನ್ನ ವ್ಯಾಯಾಮ ಮಾಡಿರಬೇಕು ಎಂದು ಅಧ್ಯಯನ ತಿಳಿಸಿದೆ. ಈ ನಿಯಮಗಳನ್ನು ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ, ಲಸಿಕೆಯ ಪ್ರಯೋಜನಗಳನ್ನು ಸಿದ್ಧಿಸಿಕೊಳ್ಳಬಹುದು ಎಂದು ತಿಳಿಸಿದೆ.

"ಲಸಿಕೆ ತೆಗೆದುಕೊಳ್ಳುವವರು ಚೆನ್ನಾಗಿ ನಿದ್ದೆ ಮಾಡಿ"

"ಬಿಹೇವಿಯರಲ್ ಮೆಡಿಸನ್" ಎಂಬ ನಿಯತಕಾಲಿಕೆಯಲ್ಲಿಯೂ ಈ ಅಂಶ ಪ್ರಸ್ತಾಪವಾಗಿದೆ. ಲಸಿಕೆ ತೆಗೆದುಕೊಳ್ಳುವ ಹಿಂದಿನ ಎರಡು ರಾತ್ರಿಗಳಲ್ಲಿ ಸಾಕಷ್ಟು ನಿದ್ದೆ ಮಾಡಿರಬೇಕು ಎಂದು ತಿಳಿಸಿದೆ. ಇದನ್ನೇ ಹೆಪಟೈಟಿಸ್ ಎ ಹಾಗೂ ಹೆಪಟೈಟಿಸ್ ಬಿ ಸಮಸ್ಯೆಗೆ ಲಸಿಕೆ ತೆಗೆದುಕೊಳ್ಳುವಾಗಲೂ ಸೂಚಿಸಲಾಗುತ್ತದೆ.

ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ

 ಲಸಿಕೆ ಪರಿಣಾಮಕಾರಿಯಾಗಬೇಕೆಂದರೆ...

ಲಸಿಕೆ ಪರಿಣಾಮಕಾರಿಯಾಗಬೇಕೆಂದರೆ...

ನಿದ್ದೆ ಕೊರತೆ ದೇಹದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸಲು ಅವಶ್ಯಕವಾದ ರೋಗನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿಕಾಯಗಳ ಪ್ರಮಾಣವನ್ನು ಕಾಪಾಡಿಕೊಳ್ಳಲು ನಿದ್ದೆ ಅತಿ ಅವಶ್ಯಕ. ಕೊರೊನಾ ಲಸಿಕೆ ಪಡೆಯುವ ಮುನ್ನ ಚಟುವಟಿಕೆಯಿಂದಿರುವುದು ಲಸಿಕೆ ಪಡೆದ ನಂತರವೂ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ತಿಳಿದುಬಂದಿದೆ. ಮಲಗಲು ತೆರಳುವ ಮೂವತ್ತು ನಿಮಿಷಕ್ಕೂ ಮುನ್ನ ಟಿ.ವಿ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ಆಫ್ ಮಾಡಬೇಕು. ಮದ್ಯ ಸೇವನೆ, ಕಾಫಿ ಸೇವನೆ ಹಾಗೂ ಮಲಗುವ ಮುನ್ನ ಹೆಚ್ಚಿನ ಊಟ ಸೇವಿಸಬಾರದು ಎಂದು ಸಲಹೆ ನೀಡಿದೆ.

English summary
Study urges people to do these important two things before vaccination to increase efficiency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X