ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಯನ: ಬ್ರೆಜಿಲ್‌ನ ಸರ್ಪದ ವಿಷ ಕೋವಿಡ್‌ ಅನ್ನು ಗುಣಪಡಿಸುವ ಸಾಧ್ಯತೆ!

|
Google Oneindia Kannada News

ಬ್ರೆಜಿಲಿಯಾ, ಸೆಪ್ಟೆಂಬರ್‌ 01: ಕೆಲವು ಬ್ರೆಜಿಲ್‌ನ ಸರ್ಪದಲ್ಲಿರುವ ವಿಷದ ಅಣುವು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಪರಿಣಾಮಕಾರಿಯಾಗಿದೆ ಎಂಬ ಅಂಶವನ್ನು ಬ್ರೆಜಿಲ್‌ನ ತಜ್ಞರು ಪತ್ತೆ ಹಚ್ಚಿದ್ದಾರೆ. ಬ್ರೆಜಿಲ್‌ನ ವೈಜ್ಞಾನಿಕ ಮಾಸ ಪತ್ರಿಕೆ ಮೊಲೆಕ್ಯೂಲಸ್‌ ಈ ತಿಂಗಳು ಪ್ರಕಟ ಮಾಡಿದ ಈ ಅಧ್ಯಯನ ವರದಿಯಲ್ಲಿ ಸರ್ಪವೊಂದರ ವಿಷದಲ್ಲಿರುವ ಅಣುವಿನಿಂದ ಕೋತಿಗಳಲ್ಲಿರುವ ವೈರಸ್‌ ಅನ್ನು ಶೇಕಡ 75 ರಷ್ಟು ಪರಿಣಾಮಕಾರಿಯಾಗಿ ಎದುರಿಸಲು ಸಹಕಾರಿಯಾಗಿದೆ ಎಂದು ವರದಿಯಾಗಿರುವುದಾಗಿ ಮಾಧ್ಯಮಗಳು ತಿಳಿಸಿದೆ.

ಈ ಬಗ್ಗೆ ಈ ಅಧ್ಯಯನ ವರದಿಯಲ್ಲಿ ಉಲ್ಲೇಖ ಮಾಡಿರುವ ಅಧ್ಯಯನದ ಲೇಖಕ, ಸಾವೋ ಪೌಲೋ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ರಫೀಲ್‌ ಗೈಡೋ, "ಕೊರೊನಾ ವೈರಸ್‌ನಲ್ಲಿರುವ ಪ್ರಮುಖವಾಗಿ ಪ್ರೋಟಿನ್‌ ಅನ್ನು ಈ ಜರರಕುಸು ಎಂಬ ಸರ್ಪದ ವಿಷದಲ್ಲಿರುವ ಒಂದು ಅಣುವು ಪರಿಣಾಮಕಾರಿಯಾಗಿ ತಡೆಯುತ್ತದೆ ಎಂದು ನಮಗೆ ಅಧ್ಯಯನದಿಂದ ತಿಳಿದು ಬಂದಿದೆ ಎಂಬುವುದನ್ನು ನಿಮಗೆ ತಿಳಿಸಲು ಸಂತೋಷವಾಗಿದೆ," ಎಂದು ಹೇಳಿದ್ದಾರೆ.

ಕೊರೊನಾ ತಡೆಯಲು ಹಾವು ಜಗಿದು ವಿಡಿಯೋ ಹರಿಬಿಟ್ಟ ಭೂಪಕೊರೊನಾ ತಡೆಯಲು ಹಾವು ಜಗಿದು ವಿಡಿಯೋ ಹರಿಬಿಟ್ಟ ಭೂಪ

ಸರ್ಪದ ವಿಷದಲ್ಲಿರುವ ಈ ಅಣುವು ಒಂದು ಪೆಪ್ಟೈಡ್ ಅಥವಾ ಒಂದಕ್ಕಿಂತ ಅಧಿಕ ಅಮೈನೋ ಆಮ್ಲಗಳನ್ನು ಹೊಂದಿದ್ದು, ಅದು ಪಿಎಲ್‌ಪ್ರೊ ಎಂಬ ಕೊರೊನಾವೈರಸ್‌ ಕಿಣ್ವಕ್ಕೆ ಸಂಪರ್ಕ ಕಲ್ಪಿಸಬಹುದು. ಇನ್ನು ಈ ಕಿಣ್ವವು ಇತರ ಜೀವಕೋಶಗಳಿಗೆ ಹಾನಿಯಾಗದಂತೆ ವೈರಸ್‌ನ ಹೊಸ ರೂಪಾಂತರ ಬೆಳವಣಿಗೆಗೆ ಮುಖ್ಯವಾಗಿದೆ.

Study reveals Brazilian Viper Venom May Become Tool In Fight Against Coronavirus

ಪೆಪ್ಟೈಡ್ ಎಂದು ಕರೆಯಲ್ಪಡುವ ಈ ಅಂಶವು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಈಗಾಗಲೇ ಹೆಸರುವಾಸಿಯಾಗಿದ್ದು, ಇದನ್ನು ಪ್ರಯೋಗಾಲಯದಲ್ಲಿ ಸಂಶ್ಲೇಷಿಸಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿರುವ ಸಾವೋ ಪೌಲೋ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ರಫೀಲ್‌ ಗೈಡೋ, ಇದೇ ಸಂದರ್ಭದಲ್ಲಿ ಹಾವುಗಳನ್ನು ಹಿಡಿಯುವುದು ಅಥವಾ ಸಾಕುವುದು ಅನಗತ್ಯವಾಗಿದೆ ಎಂದು ಉಲ್ಲೇಖ ಮಾಡಿದರು.

"ಈ ಅಧ್ಯಯನದಿಂದ ಈ ಸರ್ಪ ಜರರುಕುಸುವಿನ ವಿಷವು ಕೊರೊನಾ ವೈರಸ್‌ ವಿರುದ್ದ ಪರಿಣಾಮಕಾರಿಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಈಗ ಜನರು ನಾವು ವಿಶ್ವವನ್ನು ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆ ಮಾಡುತ್ತೇವೆ ಎಂದು ಭಾವಿಸಿಕೊಂಡು ಸರ್ಪ ಜರರುಕುಸುವನ್ನು ಕಾಡುಗಳಿಂದ ಹಿಡಿಯಲು ಆರಂಭ ಮಾಡಬಹುದು ಎಂಬ ಆತಂಕ ಸೃಷ್ಟಿಯಾಗಿದೆ," ಎಂದು ಇದೇ ಸಂದರ್ಭದಲ್ಲಿ ಸಾವೊ ಪೌಲೊದಲ್ಲಿ ಬುಟಾಂತನ್ ಸಂಸ್ಥೆಯ ಜೈವಿಕ ಸಂಗ್ರಹವನ್ನು ನಡೆಸುತ್ತಿರುವ ಸಸ್ಯಶಾಸ್ತ್ರಜ್ಞ ಗೈಸೆಪೆ ಪೋರ್ಟೊ ಹೇಳಿದ್ದಾರೆ.

Video: ಗುಲಾಬಿ ಮೇಲೆ ಕುಳಿತಿರುವ ನೀಲಿ ಹಾವಿನ ವೀಡಿಯೋ ವೈರಲ್Video: ಗುಲಾಬಿ ಮೇಲೆ ಕುಳಿತಿರುವ ನೀಲಿ ಹಾವಿನ ವೀಡಿಯೋ ವೈರಲ್

"ಆದರೆ ಜನರು ಈ ಸರ್ಪದ ವಿಷದ ಒಂದು ಅಣುವಿನಿಂದ ವಿಶ್ವವನ್ನೇ ಕೊರೊನ ವೈರಸ್‌ನಿಂದ ರಕ್ಷಣೆ ಮಾಡುತ್ತೇವೆ ಎಂದು ಭಾವಿಸಿಕೊಳ್ಳುವುದು ಸರಿಯಲ್ಲ. ಈ ವಿಷದ ಒಂದು ಅಣು ಮಾತ್ರ ಇದ್ದರೆ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಹೋರಾಡಲು ಸಾಧ್ಯವಿಲ್ಲ," ಎಂದು ಸಸ್ಯಶಾಸ್ತ್ರಜ್ಞ ಗೈಸೆಪೆ ಪೋರ್ಟೊ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಈ ಅಧ್ಯಯನದಲ್ಲಿ ಭಾಗಿಯಾಗಿರುವ ಸಾವೋ ಪೌಲೋದ ರಾಜ್ಯ ವಿಶ್ವವಿದ್ಯಾನಿಲಯ, "ಸಂಶೋಧಕರು ಮೊದಲು ಈ ಒಂದು ಅಣುವು ಪರಿಣಾಮಕಾರಿಯಾಗಿ ಕೊರೊನಾವೈರಸ್‌ ಅನ್ನು ಎಷ್ಟು ಪ್ರಮಾಣದಲ್ಲಿ ಎದುರಿಸ ಬಲ್ಲದು ಎಂದು ತಿಳಿಯುತ್ತೇವೆ. ಹಾಗೆಯೇ ಬೇರೆ ಯಾವುದಾದರೂ ಕಣ ಕೋವಿಡ್‌ ವಿರುದ್ದ ಪರಿಣಾಮಕಾರಿಯೇ ಎಂದು ಪತ್ತೆ ಹಚ್ಚು‌ತ್ತೇವೆ. ಹಾಗೆಯೇ ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿಯುವುದು ಅತೀ ಮುಖ್ಯ," ಎಂದು ತಿಳಿಸಿದ್ದಾರೆ.

ವಿಶ್ವದಾದ್ಯಂತ ಪ್ರಸ್ತುತ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಈ ಲಸಿಕೆಗಳು ಕೊರೊನಾ ವೈರಸ್‌ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲಾರದು. ಈ ಹಿನ್ನೆಲೆ ಕೊರೊನಾ ವೈರಸ್‌ ಸೋಂಕಿನ ನಿರ್ಮೂಲನೆಯ ನಿಟ್ಟಿನಲ್ಲಿ ಅಗತ್ಯ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ.

(ಒನ್‌ ಇಂಡಿಯಾ ಸುದ್ದಿ)

English summary
Study reveals Brazilian Viper Venom May Become Tool In Fight Against Coronavirus. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X