ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಗಂಭೀರವಾಗಲು ಈ 5 ಜೀನ್ಸ್‌ಗಳು ಕಾರಣ: ಮಹತ್ವದ ಸಂಶೋಧನೆ

|
Google Oneindia Kannada News

ಕೋವಿಡ್ 19ರ ಅತ್ಯಂತ ತೀವ್ರ ಸ್ವರೂಪಕ್ಕೆ ಸಂಬಂಧಿಸಿದ ಐದು ಪ್ರಮುಖ ವಂಶವಾಹಿಗಳನ್ನು ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ಶುಕ್ರವಾರ ತಿಳಿಸಿದ್ದಾರೆ.

IFNAR2, TYK2, OAS1, DPP9 ಮತ್ತು CCR2 ಎಂಬ ವಂಶವಾಹಿಗಳ ಬಗ್ಗೆ ಅಧ್ಯಯನ ಮಾಡಿರುವ ವಿಜ್ಞಾನಿಗಳು, ಕೋವಿಡ್ ಸೋಂಕಿಗೆ ಒಳಗಾದ ಕೆಲವು ಏಕೆ ವಿಪರೀತ ಕಾಯಿಲೆಗೆ ಒಳಗಾಗುತ್ತಾರೆ ಮತ್ತು ಕೆಲವರಿಗೆ ಏಕೆ ಅದು ಬಾಧಿಸುವುದಿಲ್ಲ ಎಂಬುದನ್ನು ಭಾಗಶಃ ವಿವರಿಸಿದ್ದಾರೆ.

ಅಧ್ಯಯನದ ಪ್ರಕಾರ ಈ ಐದು ಜೀನ್ಸ್‌ಗಳು ನಾವೆಲ್ ಕೊರೊನಾ ವೈರಸ್‌ನ ಅತ್ಯಂತ ತೀವ್ರತರದ ಸ್ವರೂಪಕ್ಕೆ ಸಂಬಂಧಿಸಿವೆ. ಜತೆಗೆ ಪ್ರಸ್ತುತ ಲಭ್ಯವಿರುವ ಕೆಲವು ಔಷಧಗಳನ್ನು ಸೋಂಕಿನಿಂದ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿರುವ ಮತ್ತು ಅಪಾಯಕ್ಕೆ ತುತ್ತಾಗಿರುವ ಜನರ ಚಿಕಿತ್ಸೆಗೆ ಬಳಸಬಹುದು ಎಂದು ತಿಳಿಸಲಾಗಿದೆ.

60 ಕೋಟಿ ಕೊರೊನಾ ಲಸಿಕೆ ಸಂಗ್ರಣ ಹಾಗೂ ವಿತರಣೆಗೆ ಭಾರತ ಸಿದ್ಧ 60 ಕೋಟಿ ಕೊರೊನಾ ಲಸಿಕೆ ಸಂಗ್ರಣ ಹಾಗೂ ವಿತರಣೆಗೆ ಭಾರತ ಸಿದ್ಧ

ಬ್ರಿಟನ್‌ನ 208 ತುರ್ತು ನಿಗಾ ಘಟಕದಲ್ಲಿನ 2,700 ಕೋವಿಡ್ 19 ರೋಗಿಗಳ ಡಿಎನ್‌ಎ ಮಾದರಿಯನ್ನು ಅಧ್ಯಯನ ನಡೆಸಿದ ಸಂಶೋಧಕರು, ಅನೇಕ ಗಂಭೀರ ಪ್ರಕರಣಗಳಲ್ಲಿ ಮುಖ್ಯವಾಗಿ ಕಂಡುಬಂದಿರುವ ಆಂಟಿವೈರಲ್ ಇಮ್ಯುನಿಟಿ ಮತ್ತು ಶ್ವಾಸಕೋಶ ಉರಿಯೂತದ ಎರಡು ಆಣ್ವಿಕ ಪ್ರಕ್ರಿಯೆಗಳಲ್ಲಿ ಐದು ವಂಶವಾಹಿಗಳು ಭಾಗಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಮುಂದೆ ಓದಿ.

ಔಷಧಗಳ ಆಯ್ಕೆಗೆ ಅನುಕೂಲ

ಔಷಧಗಳ ಆಯ್ಕೆಗೆ ಅನುಕೂಲ

'ನಮ್ಮ ಫಲಿತಾಂಶಗಳು ಕ್ಲಿನಿಕಲ್ ಪರೀಕ್ಷೆಯಲ್ಲಿನ ಪಟ್ಟಿಯಲ್ಲಿ ಮೊದಲ ಜಾಗದಲ್ಲಿ ಯಾವ ಔಷಧಗಳು ಇರಬೇಕು ಎಂಬುದನ್ನು ತತ್‌ಕ್ಷಣವೇ ಮುಖ್ಯವಾಗಿ ಗುರುತಿಸಿವೆ' ಎಂದು ಈ ಸಂಶೋಧನೆಯ ಸಹ ನೇತೃತ್ವ ವಹಿಸಿದ್ದ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಅಕಾಡೆಮಿಕ್ ಕನ್ಸಲ್ಟೆಂಟ್ ಕೆನ್ನೆತ್ ಬೈಲಿ ಹೇಳಿದ್ದಾರೆ.

ಮಾನವ ಪರೀಕ್ಷೆಗೆ ಅನುಮೋದನೆ ಪಡೆದ ದೇಶದ ಮೊದಲ ಎಂಆರ್‌ಎನ್‌ಎ ಲಸಿಕೆಮಾನವ ಪರೀಕ್ಷೆಗೆ ಅನುಮೋದನೆ ಪಡೆದ ದೇಶದ ಮೊದಲ ಎಂಆರ್‌ಎನ್‌ಎ ಲಸಿಕೆ

ಐಎನ್‌ಎಫ್ಆರ್2 ವಂಶವಾಹಿ ಮೇಲೆ ಗಮನ

ಐಎನ್‌ಎಫ್ಆರ್2 ವಂಶವಾಹಿ ಮೇಲೆ ಗಮನ

ಈ ಹೊಸ ಅಧ್ಯಯನದಲ್ಲಿ ಪತ್ತೆಯಾದ ಅಂಶಗಳು ಕೋವಿಡ್ ವಿರುದ್ಧ ಅಭಿವೃದ್ಧಿಪಡಿಸಲಾಗುತ್ತಿರುವ ಪರಿಣಾಮಕಾರಿ ಲಸಿಕೆಯ ಸೃಷ್ಟಿಗೆ ನೆರವು ನೀಡಲಿದೆ. ಎಲಿ ಲಿಲ್ಲಿ ಸಂಸ್ಥೆಯ ಜಾಕ್ ಇನ್‌ಹಿಬಿಟರ್ಸ್ ಔಷಧವು ಉರಿಯೂತದ ನಿಗ್ರಹಕ್ಕೆ ಸಹಕಾರಿಯಾಗಲಿದೆ ಎಂದು ಬೈಲಿ ತಿಳಿಸಿದ್ದಾರೆ. ಹಾಗೆಯೇ ಐಎನ್‌ಎಫ್ಆರ್2 ವಂಶವಾಹಿಯಲ್ಲಿ ಚಟುವಟಿಕೆಯನ್ನು ವೃದ್ಧಿಸುವಂತೆ ಮಾಡಿದರೂ ಅದು ಕೋವಿಡ್ 19ರ ವಿರುದ್ಧ ರಕ್ಷಣೆಯನ್ನು ಸೃಷ್ಟಿಸಬಲ್ಲದು. ಏಕೆಂದರೆ ಅದು ನಿರೋಧಕ ಪ್ರೋಟೀನ್‌ಗಳಿಂದ ನೀಡುವ ಚಿಕಿತ್ಸೆ ಪರಿಣಾಮವನ್ನೇ ಉಂಟುಮಾಡುತ್ತದೆ ಎಂದಿದ್ದಾರೆ.

ಲಭ್ಯವಿರುವ ಔಷಧಗಳ ಪ್ರಯೋಗ

ಲಭ್ಯವಿರುವ ಔಷಧಗಳ ಪ್ರಯೋಗ

ಇಂಟರ್‌ಫೆರಾನ್-ಬೀಟಾ-1ಎ, ಇಂಟರ್ಲೀಕಿನ್-1 ಪ್ರತಿರಕ್ಷಕ ಮತ್ತು ಸನೋಫಿಯ ವಾತರೋಗದ ಔಷಧ ಕೆವ್‌ಜರಾ ಸೇರಿದಂತೆ ಹಾಲಿ ಇರುವ ಅನೇಕ ಔಷಧಗಳನ್ನು ಕೋವಿಡ್ 19ರ ಹೋರಾಟದ ಕ್ಲಿನಿಕಲ್ ಪ್ರಯೋಗಕ್ಕೆ ಬಳಸಲಾಗುತ್ತಿದೆ.

ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?

ರೆಮ್ಡೆಸಿವಿರ್ ಔಷಧ

ರೆಮ್ಡೆಸಿವಿರ್ ಔಷಧ

ಇದುವರೆಗೂ ಡೆಕ್ಸಮೆಥಾಸೋನ್ ಎಂಬ ಸ್ಟೆರಾಯ್ಡ್ ಮತ್ತು ಗಿಲೀಡ್ ತಯಾರಿಸಿದ ನೂತನ ಅಭಿವೃದ್ಧಿಪಡಿಸಿದ ಆಂಟಿವೈರಲ್ ಔಷಧ ರೆಮ್ಡೆಸಿವಿರ್ ಔಷಧಗಳನ್ನು ಮಾತ್ರ ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಜಗತ್ತಿನಲ್ಲಿ ಅನುಮತಿ ನೀಡಲಾಗಿದೆ. ಆದರೆ ರೆಮ್ಡೆಸಿವಿರ್ ಔಷಧದ ಪ್ರಯೋಗದಲ್ಲಿ ಮಿಶ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಗಂಭೀರ ಸ್ವರೂಪದ ಕಾಯಿಲೆ ಇದ್ದವರಿಗೆ ಈ ಔಷಧವನ್ನು ನೀಡದಂತೆ ಸೂಚಿಸಲಾಗಿದೆ.

English summary
A study has found 5 key genes that are linked with the most severe form of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X