ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಸಂದ್ರ ಮೆಟ್ರೋ ನಿಲ್ದಾಣ ಹಿಂದಿನ ಬಾಬಿ ದಾ ಡಾಬಾಗೆ ಹೋಗಿದ್ದೀರಾ?

By ಅನಿಲ್ ಆಚಾರ್
|
Google Oneindia Kannada News

"ಹಲಸೂರಿನ ಗುರುದ್ವಾರದ ಹತ್ತಿರ ಬಾಬಿ ದಾ ಡಾಬಾ ಇತ್ತು. ಈಗ ನಾಲ್ಕೈದು ವರ್ಷಗಳಿಂದ ನಾಗಸಂದ್ರ ಮೆಟ್ರೋ ಸ್ಟೇಷನ್ ಹಿಂಭಾಗ ಶುರುವಾಗಿದೆ. ಇಲ್ಲಿ ಸಿಗುವುದು ವೆಜಿಟೇರಿಯನ್ ಫುಡ್. ಸ್ವೀಟ್ ಲಸ್ಸಿ ಹಾಗೂ ದಾಲ್ ಮಖನಿ ಟ್ರೈ ಮಾಡಿ," ಎಂದು ವಾರಾಂತ್ಯದ ರಜಾ ಅನ್ನೋ ಕಾರಣಕ್ಕೆ ಸ್ನೇಹಿತವೊಬ್ಬರು ಈ ಬಾಬಾ ಡಾಬಾ ಬಗ್ಗೆ ಹೇಳಿದರು.

ತುಮಕೂರು ರಸ್ತೆಗೆ ತೆರಳಿ, ಅಲ್ಲಿ ನಾಗಸಂದ್ರ ಮೆಟ್ರೋ ಸ್ಟೇಷನ್ ಹಿಂಭಾಗದದಲ್ಲಿರುವ ಬಾಬಾ ಡಾಬಾ ತಲುಪುವ ವೇಳೆಗೆ ಶನಿವಾರ ರಾತ್ರಿ 8.30. "ಒನ್ ಅವರ್ ವೇಯ್ಟ್ ಕರ್ನಾ ಹೈ," ಎಂದರು ಆಜಾನುಬಾಹು ಬಾಬಿ. ಗಂಟಲಿನಲ್ಲಿ ಮೈಕ್ ಇಟ್ಟುಕೊಂಡಿದ್ದಾರೇನೋ ಎಂಬಂಥ ಧ್ವನಿ ಅವರದು.

ಹತ್ತಾರು ಮೇಜುಗಳಲ್ಲಿ ಇದ್ದ ಗ್ರಾಹಕರಿಗೆ ತಾವೇ ಸ್ವತಃ ಗಟ್ಟಿ ಮೊಸರನ್ನು ಹಂಚುತ್ತಿದ್ದರು. ದೊಡ್ಡ ಬಟ್ಟಲಿನಲ್ಲಿ ಇದ್ದ ಮೊಸರನ್ನು ತುಂಬ ಶ್ರದ್ಧೆಯಿಂದ ಸಣ್ಣ ಬಟ್ಟಲಿಗೆ ಹಾಕಿದರು. ಅದರ ಮೇಲೆ ಅದಾಗಲೇ ಪುಡಿ ಮಾಡಿಟ್ಟಿದ್ದ ಮೆಣಸನ್ನು ಹಾಕಿದರು. ಮತ್ತದೇ ಜೋರು ಧ್ವನಿಯಲ್ಲಿ ಏನು ಆರ್ಡರ್ ಬಂದಿದೆಯೋ ಅದನ್ನು ಹೇಳಲು ಶುರು ಮಾಡಿದರು.

ಬಾಬಿ ದಾ ಡಾಬಾಗೆ ಸೋಮವಾರ ರಜಾ

ಬಾಬಿ ದಾ ಡಾಬಾಗೆ ಸೋಮವಾರ ರಜಾ

ಬಾಬಾ ಡಾಬಾ ಮಂಗಳವಾರದಿಂದ ಭಾನುವಾರದ ತನಕ ಇರುತ್ತದೆ. ಸೋಮವಾರ ರಜಾ. ಮಧ್ಯಾಹ್ನ 12ರಿಂದ 4 ಹಾಗೂ ಮತ್ತೆ ರಾತ್ರಿ ಮೇಲೆ ಶುರು ಆಗುತ್ತದೆ. ಜಾಮೂನ್ ಹಾಗೂ ರಸಮಲೈ ಡಾಬಾದ ವಿಶೇಷ ಸಿಹಿ ಖಾದ್ಯಗಳು. ಪಂಜಾಬಿ ಖಾದ್ಯಗಳಿಗೆ ಬಾಬಿ ಡಾಬಾಗೆ ಒಂದು ಸಲ ಭೇಟಿ ನೀಡಲೇಬೇಕು.

ದಾಲ್ ಮಖನಿ, ರಾಜ್ ಮಾ ಚಾವಲ್, ಚೋಲೇ ಚಾವಲ್, ಫುಲ್ಕಾ, ಆಲೂ ಪರೋಟಾ, ಪನ್ನೀರ್ ಪರೋಟಾ ಹೀಗೆ ಕೆಲವು ಸಿಗ್ನೇಚರ್ ಎನಿಸುವಂಥ ಖಾದ್ಯಗಳು ದೊರೆಯುತ್ತವೆ. ಪಟ್ಟಿ ದೊಡ್ಡದಿರುವುದರಿಂದ ನಾಲ್ಕೈದು ಮಾತ್ರ ಇಲ್ಲಿ ಹೇಳಲಾಗಿದೆ.

ಬಾಬಿಯ ನಗು ಮುಖ, ಆದರಾತಿಥ್ಯ

ಬಾಬಿಯ ನಗು ಮುಖ, ಆದರಾತಿಥ್ಯ

ಬಾಬಿಯ ನಗು ಮುಖ, ಆದರಾತಿಥ್ಯಕ್ಕೆ ಮನಸೋಲದವರು ಕಡಿಮೆ. ಅವರ ಜತೆಗೆ ಮಗ ದರ್ಶ್ ಸಿಂಗ್ ಕೂಡ ಇದ್ದಾರೆ. ಆದರೆ ಶುಕ್ರವಾರ, ಶನಿವಾರ ಹಾಗೂ ಭಾನುವಾರದ ದಿನ ಇಲ್ಲಿಗೆ ತೆರಳುವಾಗ ಸ್ವಲ್ಪ ಸಮಯ ಇಟ್ಟುಕೊಂಡೇ ಹೋಗಬೇಕು. ಆತುರಾತರಕ್ಕೆ ಹೋದರೆ ತಕ್ಷಣಕ್ಕೆ ಸೀಟ್ ಸಿಗುವುದು ಕಷ್ಟ.

ಬಗೆ ಬಗೆ ಲಸ್ಸಿ ಇಲ್ಲಿ ಲಭ್ಯ

ಬಗೆ ಬಗೆ ಲಸ್ಸಿ ಇಲ್ಲಿ ಲಭ್ಯ

ಲಸ್ಸಿಯಲ್ಲಿ ಬೆಂಗಳೂರು, ದೆಹಲಿ ಹಾಗೂ ಪಟಿಯಾಲ ಲಸ್ಸಿ ಅಂತ ಮೂರು ಬಗೆಯ ಲೋಟ ಇಡಲಾಗಿದೆ. ದೊಡ್ಡ ಲೋಟದಲ್ಲಿ ಕುಡಿಯೋಣ ಅಂದುಕೊಂಡು ಹೇಳಿ, ಆ ನಂತರ ಅದನ್ನು ಪಾರ್ಸೆಲ್ ತೆಗೆದುಕೊಂಡು ಹೋಗೋರು ಕಂಡುಬಂದರು. ಆದ್ದರಿಂದ ಆರ್ಡರ್ 'ಚೀಟಿ' ಬರೆದುಕೊಡುವ ಮುಂಚೆ ಬಾಬಿ ಅವರ ಸಲಹೆ ಕೇಳಿದರೆ ಉತ್ತಮ.

ಇಲ್ಲಿನ ಆರ್ಡರ್ ಸಹ ಕಸ್ಟಮೈಸ್ಡ್

ಇಲ್ಲಿನ ಆರ್ಡರ್ ಸಹ ಕಸ್ಟಮೈಸ್ಡ್

ಇನ್ನು ಇಲ್ಲಿನ ಆರ್ಡರ್ ಸಹ ಕಸ್ಟಮೈಸ್ಡ್. ಖಾರ ಎಷ್ಟಿರಬೇಕು? ಒಂದೋ ಜಾಸ್ತಿ ಅಥವಾ ಕಡಿಮೆ. ಅದನ್ನೇ ಹೇಳಿದರೆ ತಕ್ಕಂತೆ ಮಾಡುತ್ತಾರೆ. ಬೆಣ್ಣೆ, ಮೊಸರು, ಪನ್ನೀರ್ ಎಲ್ಲವೂ ಯಥೇಚ್ಛವಾಗಿರುತ್ತದೆ. ನಾಲಗೆ ಮೇಲಿಟ್ಟರೆ ಕರಗವಂಥ ಆಹಾರ ಖಾದ್ಯಗಳು ಸವಿಯುತ್ತಾ, ಬಾಬಿಯ ಜೋರು ಧ್ವನಿ ಹಾಗೂ ಪ್ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅದ್ಯಾವ ಮಾಯೆಯಲ್ಲಿ ಪ್ಲೇಟು ಖಾಲಿಯಾಯಿತೋ ಗೊತ್ತೇ ಆಗಲಿಲ್ಲ.

Recommended Video

Virat Kohli ಈ ದಶಕದ ಶ್ರೇಷ್ಠ ಕ್ರಿಕೆಟಿಗ | Oneindia Kannada
ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟರು

ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟರು

ಬಾಬಿ ಅವರ ಮಗ ದರ್ಶನ್ ಬಳಿ, ನಿಮ್ಮ ತಂದೆಯವರದೊಂದು ಫೋಟೋ ತೆಗೆದುಕೊಳ್ಳಬಹುದಾ ಎಂದು ಕೇಳುವ ಹೊತ್ತಿಗೆ ರಾತ್ರಿ 10.20ರ ಹೊತ್ತಾಗಿತ್ತು. ಆಗಲೂ ಗ್ರಾಹಕರ ಆರ್ಡರ್ ತೆಗೆದುಕೊಳ್ಳುತ್ತಿದ್ದ ಬಾಬಿ, ಬಿಡುವು ಮಾಡಿಕೊಂಡು ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟರು.

ನಾವು ನಾಲ್ಕು ಜನ ಹೋಗಿದ್ದೆವು. ಒಂದು ಲಸ್ಸಿ, ಫುಲ್ಕಾ, ಆಲೂ ಪರೋಟ, ಪನ್ನೀರ್ ಪರೋಟಾ, ದಾಲ್ ಮಖನಿ, ರಾಜ್ ಮಾ ಚಾವಲ್, ಚೋಲೇ ಚಾವಲ್, ಪನ್ನೀರ್ ಬುರ್ಜಿ ಜತೆಗೆ ಮೂರು ಬಟ್ಟಲು ಮೊಸರು ಹಾಗೂ ಉಪ್ಪಿನಕಾಯಿ ತಿಂದೆವು. ಇಷ್ಟಕ್ಕೆ ನಮಗೆ 1100 ರುಪಾಯಿ ಬಿಲ್ ಆಯಿತು. ಹೊಟ್ಟೆ ಭರ್ತಿ ಆಗಿತ್ತು. ಒಬ್ಬರಿಗೆ 275 ರುಪಾಯಿ ಬಿತ್ತು ಅಂದುಕೊಂಡು ಕಾರು ಏರಿದೆವು; ಒಮ್ಮೆ ಬಾಬಿ ದಾ ಡಾಬಾ ಕಡೆ ಹಿಂತಿರುಗಿ ನೋಡುತ್ತಾ.

English summary
Here is the story of Bobby's Bhaba near Nagasandra metro station in Bengaluru. Head to Bobby's Dhaba if you are craving for authentic North-Indian Dhaba fare like Rajma Chawal, Aloo Parantha and much more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X