ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stories of strength; ನಾನೀಗ ಇನ್ನಷ್ಟು ಗಟ್ಟಿಯಾಗಿದ್ದೇನೆ; ಮಲೈಕಾ ಅರೋರಾ ಕೊರೊನಾ ಅನುಭವ...

|
Google Oneindia Kannada News

"ಶಕ್ತಿ" ಎಂಬುದನ್ನು ಹೇಗೆ ವ್ಯಾಖ್ಯಾನಿಸಬಹುದು? ಕೊರೊನಾ ಸೋಂಕು ದೃಢಪಟ್ಟ ಆರಂಭದ ದಿನಗಳಲ್ಲಿ ಈ ಪದ ನನ್ನ ಮನಸ್ಸಿನಲ್ಲಿ ಹಲವು ಬಾರಿ ಸುಳಿದು ಹೋಯಿತು. ಕೊರೊನಾ ಸೋಂಕಿನಿಂದ ಗುಣಮುಖಳಾದ ನಂತರ, "ನೀವು ತುಂಬಾ ಅದೃಷ್ಟವಂತರು, ಇಷ್ಟು ಸುಲಭವಾಗಿ ಗುಣಮುಖರಾಗಿಬಿಟ್ಟಿರಿ" ಎಂದು ಎಷ್ಟೋ ಜನ ಹೇಳಿದರು. ಹೌದು. ಪ್ರಪಂಚದಲ್ಲಿ ನನಗೆ ಸಿಕ್ಕ ಎಷ್ಟೋ ಸಂಗತಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ ನನ್ನ ಜೀವನದಲ್ಲಿ ಅದೃಷ್ಟದ ಪಾತ್ರ ತುಂಬಾ ಕಿರಿದು. "ಸುಲಭ"! ಖಂಡಿತ ಕೊರೊನಾದಿಂದ ಹೊರಗೆ ಬರುವುದು ಸುಲಭವಾಗಿರಲೇ ಇಲ್ಲ...

ಬಾಲಿವುಡ್ ನಟಿ ಮಲೈಕಾ ಅರೋರಾ ಕೊರೊನಾ ಸೋಂಕನ್ನು ತಾವು ಗೆದ್ದ ಬಂದ ಬಗೆಯ ಕುರಿತು ಮಾಡಿದ್ದ ಇನ್‌ಸ್ಟಾಗ್ರಾಂ ಪೋಸ್ಟ್‌ ಮುನ್ನುಡಿ ಹೀಗಿತ್ತು...

Stories of Strength: ಬೇಗ ಚಿಕಿತ್ಸೆ ತೆಗೆದುಕೊಳ್ಳಿ, ವೈದ್ಯರ ಮಾತು ಕೇಳಿ Stories of Strength: ಬೇಗ ಚಿಕಿತ್ಸೆ ತೆಗೆದುಕೊಳ್ಳಿ, ವೈದ್ಯರ ಮಾತು ಕೇಳಿ

ಈಚೆಗೆ ಮಲೈಕಾ ಅರೋರಾ ಇನ್‌ಸ್ಟಾಗ್ರಾಂನಲ್ಲಿ ತನ್ನ ಕೊರೊನಾ ಅನುಭವದ ಕುರಿತು ಪೋಸ್ಟ್‌ ಹಂಚಿಕೊಂಡಿದ್ದರು. 47 ವರ್ಷದ ನಟಿ ಮಲೈಕಾ ಅರೋರಾ ಅವರು ಸೆಪ್ಟೆಂಬರ್‌ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆ ಅನುಭವಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಮಾತುಗಳ ಸಾರ ಇಲ್ಲಿದೆ...

 ಕೊರೊನಾದೊಂದಿಗಿನ ಹೋರಾಟ ಸುಲಭವಾಗಿರಲಿಲ್ಲ

ಕೊರೊನಾದೊಂದಿಗಿನ ಹೋರಾಟ ಸುಲಭವಾಗಿರಲಿಲ್ಲ

ಕೊರೊನಾ ಕುರಿತು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದರು. ಹಲವರು ಅಂದುಕೊಂಡಂತೆ ಅಥವಾ ಊಹಿಸಿದಂತೆ ಕೊರೊನಾ ಸೋಂಕಿನೊಂದಿಗಿನ ಹೋರಾಟ ಸುಲಭವಾಗಿರಲಿಲ್ಲ. ಕೊರೊನಾದಿಂದ ಹೊರಬರಲು ಆತ್ಮಸ್ಥೈರ್ಯ, ಶಕ್ತಿ ಎಷ್ಟು ಅವಶ್ಯಕವಿರುತ್ತದೆ ಎಂಬುದು ಸುಲಭಕ್ಕೆ ಎಲ್ಲರಿಗೂ ತಿಳಿಯುವುದಿಲ್ಲ.

ಸೆಪ್ಟೆಂಬರ್‌ 5ರಂದು ನನಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅದು ನಿಜಕ್ಕೂ ಕೆಟ್ಟ ಸಂಗತಿ ಎನಿಸಿತ್ತು. ನನ್ನ ಸುತ್ತಲಿದ್ದವರು ಕೊರೊನಾದಿಂದ ಹೊರಬರುವುದು ಸುಲಭ ಎನ್ನುತ್ತಿದ್ದರು. ಆದರೆ ನನಗಾದ ಅನುಭವಗಳು ಸುಲಭ ಎನ್ನುವ ಪದವನ್ನು ಒಪ್ಪಲಿಲ್ಲ...
 ದೈಹಿಕವಾಗಿ ಮುರಿದುಹೋದಂಥ ಅನುಭವ

ದೈಹಿಕವಾಗಿ ಮುರಿದುಹೋದಂಥ ಅನುಭವ

ಕೊರೊನಾ ದೃಢಪಟ್ಟ ನಂತರ ಈ ಸಣ್ಣ ಸೋಂಕು ನನ್ನನ್ನು ದೈಹಿಕವಾಗಿ ಮುರಿದು ಹಾಕಿದಂತೆ ಭಾಸವಾಯಿತು. ಎರಡು ಹೆಜ್ಜೆ ಮುಂದಿಡುವುದೂ ಕಠಿಣ ಎನಿಸಿಬಿಟ್ಟಿತು. ಕುಳಿತುಕೊಳ್ಳುವುದು, ಹಾಸಿಗೆ ಬಿಟ್ಟು ಒಂದಷ್ಟು ಹೆಜ್ಜೆ ಮುಂದೆ ಹೋಗುವುದು, ಕಿಟಕಿ ಬಳಿ ನಿಲ್ಲುವುದೇ ದೊಡ್ಡ ಪ್ರಯಾಣ ಎನಿಸಿಬಿಟ್ಟಿತು. ಈ ಅವಧಿಯಲ್ಲೇ ನನ್ನ ತೂಕ ಹೆಚ್ಚಿತು. ದೇಹ ದುರ್ಬಲವಾದಂತೆ ಕಾಣಿಸಿತು. ತ್ರಾಣ ಕಳೆದುಹೋಗುತ್ತಿತ್ತು. ಕುಟುಂಬದಿಂದ ದೂರವಿದ್ದದ್ದು ಈ ಎಲ್ಲಾ ಸಂಕಟವನ್ನು ಇನ್ನಷ್ಟು ಹೆಚ್ಚಿಸಿತ್ತು. ತಲೆಯಲ್ಲಿನ ಆಲೋಚನೆಗಳು ಸೂತ್ರ ಹರಿದ ಗಾಳಿಪಠದಂತೆ ಎಲ್ಲೆಲ್ಲೋ ಹರಿದಾಡುತ್ತಿತ್ತು.
ಒಂದೊಂದು ದಿನವೂ ಒಂದೊಂದು ಕಠಿಣ ಅನುಭವ... ಇಷ್ಟೆಲ್ಲದರ ನಡುವೆ ಸೆಪ್ಟೆಂಬರ್ 26ರಂದು ಮತ್ತೆ ಕೊರೊನಾ ಪರೀಕ್ಷೆಗೆ ಒಳಗಾದೆ. ಆಗ ನೆಗೆಟಿವ್ ವರದಿ ಬಂತು. ಕೊನೆಗೂ ಕೊರೊನಾ ಗೆದ್ದೆ ಎನ್ನುವುದು ನನಗೆ ಬಹಳ ದೊಡ್ಡ ಸಂಗತಿಯಾಗಿತ್ತು. ಆದರೆ ಎಷ್ಟೋ ದಿನಗಳವರೆಗೂ ಸುಸ್ತು ದೇಹವನ್ನು ಬಿಟ್ಟು ಹೋಗಲಿಲ್ಲ.

Story of strength: ನನ್ನ ದೇಹ ಕೊರೊನಾವನ್ನೇ ಗೆದ್ದು ಬಂದಿತ್ತು, ಮನಸ್ಸು Story of strength: ನನ್ನ ದೇಹ ಕೊರೊನಾವನ್ನೇ ಗೆದ್ದು ಬಂದಿತ್ತು, ಮನಸ್ಸು "ಪಾಸಿಟಿವ್" ಆಗಿತ್ತು...

 ನನ್ನನ್ನು ನಾನೇ ರೂಪಿಸಿಕೊಳ್ಳಲು ಸಾಧ್ಯ

ನನ್ನನ್ನು ನಾನೇ ರೂಪಿಸಿಕೊಳ್ಳಲು ಸಾಧ್ಯ

ನನ್ನ ಮನಸ್ಸು ಹೇಳಿದಂತೆ ದೇಹ ಕೇಳುತ್ತಿಲ್ಲ ಎನ್ನುವುದೇ ನಿರಾಶೆ ಮೂಡಿಸಿತ್ತು. ಮೊದಲಿದ್ದ ಶಕ್ತಿ ಮತ್ತೆ ಬರುತ್ತದೋ ಇಲ್ಲವೋ ಎಂಬ ಆತಂಕವೇ ಆವರಿಸಿತ್ತು. ದಿನದಲ್ಲಿ ಒಂದು ಕೆಲಸ ಮಾಡಲು ತುಂಬಾ ಹೊತ್ತು ತೆಗೆದುಕೊಳ್ಳುತ್ತಿದ್ದೆ. ಜೊತೆಗೆ ಕೊರೊನಾದಿಂದ ಗುಣಮುಖವಾದ ನಂತರ ವ್ಯಾಯಾಮ ಮುಂದುವರೆಸಲು ತೀರ್ಮಾನಿಸಿದೆ. ಆದರೆ ಮೊದಲ ಪ್ರಯತ್ನ ಅತಿ ಕಠಿಣವಾಗಿತ್ತು. ನನಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಇನ್ನು ನನ್ನ ಫಿಟ್ನೆಸ್ ಕಾಯ್ದುಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಕುಸಿದಂತೆ ಅನ್ನಿಸಿತು.
ಆದರೆ ಇಂಥ ನೆಗೆಟಿವ್ ಆಲೋಚನೆಗಳ ನಡುವೆಯೇ ಮಿಂಚಿನ ಶಕ್ತಿ ನನ್ನನ್ನು ಆವರಿಸಿದಂತೆ ಅನಿಸಿತು. ಎರಡನೇ ದಿನ ಬೆಳಿಗ್ಗೆ ಎದ್ದೆ. ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿಕೊಂಡಂತೆ ನನಗೆ ನಾನೇ ಹೇಳಿಕೊಂಡೆ "ನನ್ನನ್ನು ನಾನೇ ರೂಪಿಸಿಕೊಳ್ಳಲು ಸಾಧ್ಯ" ಎಂದು. ಪ್ರಯತ್ನ ಮುಂದುವರೆಸಿದೆ. ಮೂರನೇ ದಿನ, ನಾಲ್ಕನೇ ದಿನ, ಐದನೇ ದಿನ... ಹೀಗೆ ಕಳೆಯಿತು... ಕೊನೆಗೂ ಬದುಕು ಮೊದಲಿನಂತೆ ಆದಂಥ ಅನುಭವ...

 ಮೊದಲಿಗಿಂತ ನಾನು ಗಟ್ಟಿಯಾದೆ...

ಮೊದಲಿಗಿಂತ ನಾನು ಗಟ್ಟಿಯಾದೆ...

ಇದೀಗ ಕೊರೊನಾದಿಂದ ಗುಣಮುಖವಾಗಿ 32 ವಾರವಾಗಿದೆ. ನಾನು ಮತ್ತೆ ಮೊದಲಿನ ಹಾಗೆ ಆಗಿದ್ದೇನೆ. ಮುಂಚಿನಂತೆ ವ್ಯಾಯಾಮ ಮಾಡುತ್ತಿದ್ದೇನೆ. ಉಸಿರಾಟವೂ ಸರಾಗವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಮೊದಲಿಗಿಂತ ಗಟ್ಟಿಯಾಗಿದ್ದೇನೆ. ಆದರೆ ಇಷ್ಟೆಲ್ಲಾ ಬದಲಾವಣೆಗೆ ಒಂದು ಕಾರಣವೂ ಇದೆ. ಅದೇ HOPE.
Hope ಎಂಬ ನಾಲ್ಕು ಅಕ್ಷರದ ಪದ ನನ್ನನ್ನು ಮುಂದಕ್ಕೆ ತಳ್ಳಿತು. ಯಾವುದೂ ಸರಿಯಿಲ್ಲದಾಗಲೂ ಎಲ್ಲವೂ ಸರಿ ಹೋಗುತ್ತದೆ ಎನ್ನುವ ಭರವಸೆ ನನ್ನನ್ನು ಕಾಪಾಡಿತು. ನನಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಕಳುಹಿಸುತ್ತಿದ್ದವರಿಗೆ ಧನ್ಯವಾದ. ನನ್ನಲ್ಲಿ ಸ್ಥೈರ್ಯ ತುಂಬುವಲ್ಲಿ ಈ ಸಂದೇಶಗಳೂ ಕಾರಣವಾಗಿವೆ. ಇಡೀ ವಿಶ್ವವೇ ಕೊರೊನಾದಿಂದ ಗುಣಮುಖವಾಗಬೇಕಿದೆ. ಎಲ್ಲರೂ ಒಟ್ಟಾಗಿ ಸೋಂಕಿನ ವಿರುದ್ಧ ಹೋರಾಡಬೇಕಿದೆ.

English summary
Bollywood actress Malaika Arora shares her experience over recovering from coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X