ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stories of Strength: ಬೇಗ ಚಿಕಿತ್ಸೆ ತೆಗೆದುಕೊಳ್ಳಿ, ವೈದ್ಯರ ಮಾತು ಕೇಳಿ

|
Google Oneindia Kannada News

ಕೊರೊನಾದ ಕೆಲವು ಲಕ್ಷಣಗಳು ಏನೆಂದರೆ ಬಿಟ್ಟು ಬಿಟ್ಟು ಜ್ವರ ಬರುವುದು ಕೆಲವೊಮ್ಮೆ ಚಳಿ ಜ್ವರವೂ ಬರುವುದು. ಹಾಗೆ ನಿಮಗೆ ಶೀತ ಆಗಿದೆ ಅನಿಸಿದ್ದಲ್ಲಿ ಮನೆಯವರಿಂದ ದೂರ ಇದ್ದು ಮಾಸ್ಕ್ ಹಾಕಿಕೊಂಡು ನಿಮ್ಮ ಮನೆಯವರನ್ನು ಅಪಾಯದಿಂದ ದೂರ ಇಡಬಹುದು. ಮುಖ್ಯವಾಗಿ ನಿಮಗೆ ಗಂಟಲಿನಲ್ಲಿ ಕಫ ಆಗಿದೆ ಅನಿಸಿದರೆ ಕೂಡಲೇ ಜಾಗೃತರಾಗಿ ಕೊರೊನಾ ಪರೀಕ್ಷೆ ಮಾಡಿಸುವುದು ಸೂಕ್ತ ಕ್ರಮ.

ಒಣ ಕಫವಾದರೆ ಎಂಜಲಿನ ಕಣಗಳು ಹೊರಗೆ ಬರುವುದಿಲ್ಲ ಒಂದು ವೇಳೆ ಹಸಿ ಕಫವಾದರೆ ಮಾಸ್ಕ್ ಧರಿಸುವುದು ಒಳ್ಳೆಯದು. ಅದರಿಂದ ಕೆಮ್ಮಿದಾಗ ಕಣಗಳು ಮಾಸ್ಕಿನಲ್ಲೇ ಉಳಿಯುತ್ತದೆ. ಇನ್ನೂ ಉತ್ತಮ ಏನೆಂದರೆ ನಿಮಗೆ ಗಂಟಲಿನಲ್ಲಿ ಕಫ ಇದೆ ಅನಿಸಿದ ಕೂಡಲೇ ಮಾಸ್ಕ್ ಧರಿಸುವುದರಿಂದ ನಿಮ್ಮ ಅಕ್ಕ ಪಕ್ಕದವರನ್ನು ರಕ್ಷಿಸಬಹುದು. ಕಫ ಶ್ವಾಸಕೋಶಕ್ಕೆ ಹೋಗಿ ನ್ಯುಮೋನಿಯಾ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಇದರಿಂದ ಮುಂದೆ ಉಸಿರಾಟ ಕಷ್ಟ ಆಗುವ ಸಾಧ್ಯತೆಗಳು ಜಾಸ್ತಿ ಹಾಗಾಗಿ ಮೊದಲೇ ವೈದ್ಯರನ್ನು ಸಂಪರ್ಕಿಸಿ. ಕೊರೊನಾ ಎನ್ನುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಆಗಿರುವುದರಿಂದ ಕಫ ಆದಾಗ ಬೇಗ ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು.

Stories of Strength: ಧೈರ್ಯ ಇದ್ದರೆ ಮಾತ್ರ ಬೇಗ ಗುಣವಾಗಲು ಸಾಧ್ಯStories of Strength: ಧೈರ್ಯ ಇದ್ದರೆ ಮಾತ್ರ ಬೇಗ ಗುಣವಾಗಲು ಸಾಧ್ಯ

ವಾಟ್ಸಾಪ್, ಟಿವಿ ಸುದ್ದಿ ಎಲ್ಲಾ ನಂಬಬೇಡಿ

ವಾಟ್ಸಾಪ್, ಟಿವಿ ಸುದ್ದಿ ಎಲ್ಲಾ ನಂಬಬೇಡಿ

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಬೇರೆಯವರ ಮಾತುಗಳನ್ನು ಕೇಳಿ ಯಾವುದಾವದೋ ಕಷಾಯಗಳನ್ನು ಕುಡಿಯುವುದು ಮೊದಲು ನಿಲ್ಲಿಸಿ. ಕೊರೊನಾದ ಬಗ್ಗೆ ತಿಳಿದಿರುವ ವೈದ್ಯರು ಅಥವಾ ಅದರ ಕರ್ತವ್ಯದಲ್ಲಿ ಇರುವ ಅಧಿಕಾರಿಗಳನ್ನು ಸಂಪರ್ಕಿಸಿ ಮುಂದೇನು ಮಾಡಬೇಕು ಎಂಬ ಮಾಹಿತಿ ತೆಗೆದುಕೊಳ್ಳಿ. ಆರಂಭಿಕ ಹಂತದಲ್ಲೇ ಜಾಗೃತರಾಗಿ ವೈದ್ಯರು ನೀಡಿದ ಮಾಹಿತಿ ಅನುಸಾರವಾಗಿ ನಡೆಯುವುದು ಉತ್ತಮ. ದಯವಿಟ್ಟು ಆಯುರ್ವೇದ ಔಷಧಕ್ಕೆ ಮೊರೆ ಹೋಗಬೇಡಿ ನಿಮಗೆ ನೀವೇ ಅಪಾಯ ತಂದುಕೊಳ್ಳುತ್ತೀರಾ.

ಇನ್ನೂ ಕೆಲವು ದಡ್ಡ ಶಿಖಾಮಣಿಗಳು ಕೊರೊನಾ ಅನ್ನುವುದು ಸುಳ್ಳು ಎನ್ನುತ್ತಾ ವಾಟ್ಸಾಪ್ ಅಲ್ಲಿ ಬರುವ ಊಹಾಪೋಹಗಳನ್ನು ನಂಬಿ ಮಾಸ್ಕ್ ಇಲ್ಲದೇ ತಿರುಗುತ್ತಿದ್ದಾರೆ ಅಂತವರನ್ನು ನಿಮ್ಮಿಂದ ದೂರ ಇಟ್ಟರೇ ನಿಮಗೂ ನಿಮ್ಮ ಆಪ್ತರಿಗು ಒಳ್ಳೆಯದು. ಆದಷ್ಟು ಟಿವಿ ಮಾಧ್ಯಮಗಳನ್ನು ನೋಡದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಭಯದ ವಾತಾವರಣದಲ್ಲಿ ಬದುಕುವುದು ಬೇಡ ಆದರೆ ನಿರ್ಲಕ್ಷ್ಯ ಧೋರಣೆ ಬೇಡ.

ಮಾಸ್ಕ್ ಸರಿಯಾಗಿ ಧರಿಸಿ

ಮಾಸ್ಕ್ ಸರಿಯಾಗಿ ಧರಿಸಿ

ನಾನು ಗಮನಿಸಿದ ಹಾಗೆ ಕೆಲವರು ಮಾಸ್ಕ್ ಧರಿಸಿದ್ದರೂ ಮೂಗಿನ ಕೆಳಗೆ ಹಾಕಿರುತ್ತಾರೆ ಇದು ಮೂರ್ಖತನದ ಪರಮಾವಧಿ. ಈಗಿನ ಸಮಯದಲ್ಲಿ ಕಷ್ಟವಾದರೂ ಸರಿ ಮೂಗು ಬಾಯಿ ಮುಚ್ಚುವಂತೆ 2 ಮಾಸ್ಕ್ ಧರಿಸುವುದರಿಂದ ಕರೋನ ಬರುವ ಸಾಧ್ಯತೆ ಕಡಿಮೆ ಮಾಡಬಹುದು. ಹಾಗೆ ಮೈ ಮುಚ್ಚುವಂತೆ ಬಟ್ಟೆ ಧರಿಸಿದರೆ ಇನ್ನೂ ಉತ್ತಮ.

ಕೊರೊನಾ ಬಂದು ಆಸ್ಪತ್ರೆಗೆ ಸೇರಿದವರಿಗೆ ಅದರ ತೀವ್ರತೆ ಅರ್ಥ ಆಗಿರುತ್ತದೆ, ಮನೆಯಲ್ಲೇ ಟಿವಿ ಮಾಧ್ಯಮ ವಾಟ್ಸಾಪ್ ಅವರಿವರು ಹೇಳುವುದನ್ನು ಕೇಳಿದವರಿಗೆ ಅದರ ವಾಸ್ತವಿಕತೆಯ ಪರಿಚಯ ಇರುವುದಿಲ್ಲ. ಆದ್ದರಿಂದ ಯಾರಾದರೂ ಗುಣಮುಖರಾಗಿ ಬಂದವರು ಬುದ್ಧಿ ಮಾತು ಹೇಳಿದರೆ ಸ್ವಲ್ಪ ಕಿವಿಗೊಟ್ಟು ಕೇಳಿ.ಆಸ್ಪತ್ರೆಗೆ ಸೇರಿ ಭಯದ ವಾತಾವರಣದಲ್ಲೇ ನಲುಗುವುದನ್ನು ತಪ್ಪಿಸಿಕೊಳ್ಳಿ.

ಚಿಕಿತ್ಸಾ ವೆಚ್ಚದ ಬಗ್ಗೆ

ಚಿಕಿತ್ಸಾ ವೆಚ್ಚದ ಬಗ್ಗೆ

ಇನ್ನೊಂದು ಮುಖ್ಯ ಅಂಶ ಏನೆಂದರೆ ಚಿಕಿತ್ಸಾ ವೆಚ್ಚಗಳು. ಆಸ್ಪತ್ರೆಗೆ ಸೇರಿದರೆ ಅಂದರೆ ಹೆಚ್ಚು ಕಡಿಮೆ ಎಂದರೂ 1 ಲಕ್ಷದ ಮೇಲೆ ಚಿಕಿತ್ಸೆಗೆ ಹಣ ಬೇಕು. ಹಣವಂತನಾದರೆ ಸರಿ ಬಡವನಾದರೆ ಒಂದು ಕಡೆ ಹಣ ಕಟ್ಟಲು ಪರದಾಟ ಇನ್ನೊಂದು ಕಡೆ ರೋಗಿಯ ನೋಡಿಕೊಳ್ಳುವ ಹೆಣಗಾಟ. ಹಾಗಾಗಿ ಆದಷ್ಟೂ ಜಾಗೃತರಾಗಿ ಕೊರೊನಾ ಆಗದಂತೆ ನೋಡಿಕೊಳ್ಳಬೇಕು, ಒಂದು ವೇಳೆ ಬಂದರೂ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಾಗದಂತೆ ನೋಡಿಕೊಳ್ಳಬೇಕು.

ನಿಮ್ಮಲ್ಲಿ ನೀವು ನಂಬಿಕೆ ಇಡಿ

ನಿಮ್ಮಲ್ಲಿ ನೀವು ನಂಬಿಕೆ ಇಡಿ

ಇದರ ಮೇಲೆ ಉಳಿದಿರುವುದು ಆತ್ಮ ನಂಬಿಕೆ, ನಿಮ್ಮಲ್ಲಿ ನೀವು ನಂಬಿಕೆ ಇಟ್ಟರೆ ಕೊರೊನಾ ಬಂದರೂ ಗುಣಮುಖರಾಗಿ ಹೊರಬರಬಹುದು. ಹಾಗೇ ಅತಿಯಾದ ಆತ್ಮವಿಶ್ವಾಸ ಕೂಡ ಒಳ್ಳೆಯದಲ್ಲ ಎಂಬುದು ಮನದಲ್ಲಿ ಇರಬೇಕು. 2 ಮಾಸ್ಕ್ ಧರಿಸಿ,ಕೈಯನ್ನು ಆಗಾಗ ಸಾನಿಟೈಜ್ ಮಾಡುತ್ತಿರಿ, ಬಿಸಿಯಾದ ನೀರನ್ನೇ ಕುಡಿಯಿರಿ, ಧೂಳು ಮಣ್ಣು ಮತ್ತು ಹಳೆಯ ವಸ್ತುಗಳಿಂದ ದೂರವಿರಿ.ಆದಷ್ಟು ಮೈ ಮುಚ್ಚುವಂತೆ ಬಟ್ಟೆಯನ್ನು ಧರಿಸಿ. ಅನಾರೋಗ್ಯ ಇರುವವರಿಂದ ದೂರವಿರಿ. ಸುಳ್ಳು ಸುದ್ದಿಗಳನ್ನು ನಂಬದಿರಿ. ವೈದ್ಯರು ನೀಡಿದ ಮಾತ್ರೆಗಳನ್ನು ಮಾತ್ರ ಸೇವಿಸಿ.

English summary
Stories of Strength: Akshaya Krishna Byrumane shares his experience of battled with Covid-19 and tips for person who have recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X