ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Stories of strength: 11 ದಿನದಲ್ಲಿ ಕೋವಿಡ್‌ ಗೆದ್ದ ಕೇರಳದ ಶತಾಯುಷಿ ಮಹಿಳೆ

|
Google Oneindia Kannada News

ತಿರುವನಂತಪುರ, ಜೂ.13: ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಲು ಹಲವಾರು ಯುವಕರಿಗೆ ಸುಮಾರು 14 ದಿನಕ್ಕೂ ಅಧಿಕ ದಿನ ಬೇಕಾಗುತ್ತದೆ. ಈ ನಡುವೆ ಕೇರಳದ ಕಣ್ಣೂರು ಜಿಲ್ಲೆಯ ಶತಾಯುಷಿ ಮಹಿಳೆಯೊಬ್ಬರು 11 ದಿನಗಳಲ್ಲಿ ಕೊರೊನಾವನ್ನು ಸೋಲಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ.

''104 ವರ್ಷದ ಜಾನಕಿ ಅಮ್ಮ ಮೇ 31 ರಂದು ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಈ ಶತಾಯುಷಿ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು'' ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Stories of strength; 10 ದಿನದಲ್ಲಿ ಕೋವಿಡ್ ಗೆದ್ದ ವೈದ್ಯೆ!Stories of strength; 10 ದಿನದಲ್ಲಿ ಕೋವಿಡ್ ಗೆದ್ದ ವೈದ್ಯೆ!

ಆಮ್ಲಜನಕದ ಮಟ್ಟದಲ್ಲಿ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಜಾನಕಿ ಅಮ್ಮರನ್ನು ತಾಲಿಪರಂಬದಲ್ಲಿರುವ ಕೋವಿಡ್‌ ಆರೈಕೆ ಕೇಂದ್ರದಿಂದ ವೈದ್ಯಕೀಯ ಕಾಲೇಜು ಐಸಿಯುಗೆ ದಾಖಲು ಮಾಡಲಾಗಿತ್ತು. ಆದರೆ ಈಗ 11 ದಿನಗಳಲ್ಲಿ ಕೊರೊನಾವನ್ನು ಸೋಲಿಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 Stories of strength: 104-year-old woman in Kerala beats COVID-19 in 11 days

ಶುಕ್ರವಾರ ಆಸ್ಪತ್ರೆಯಿಂದ ಶತಾಯುಷಿ ಜಾನಕಿ ಅಮ್ಮ ಬಿಡುಗಡೆಯಾದ ಸಂದರ್ಭ ಪರಿಯಾರಾಮ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು, ಡಾ.ಎಸ್. ಅಜಿತ್ ಮತ್ತು ಇತರ ಆಸ್ಪತ್ರೆಯ ಸಿಬ್ಬಂದಿಗಳು ಶುಭ ಹಾರೈಸಿದರು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಜಾನಕಿ ಅಮ್ಮನ ಸೊಸೆ ಮತ್ತು ಸೊಸೆಯ ತಾಯಿ ಇನ್ನೂ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ಗೆದ್ದ ಈ ಶತಾಯುಷಿ ಮಹಿಳೆಯನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಭಿನಂದಿಸಿದ್ದಾರೆ. "ಈ ವಯಸ್ಸಿನಲ್ಲಿ ಜಾನಕಿ ಅಮ್ಮನ ವಿಶ್ವಾಸವು ರೋಗದ ವಿರುದ್ಧ ಹೋರಾಡಲು ಎಲ್ಲರಿಗೂ ಸ್ಫೂರ್ತಿಯಾಗಿದೆ" ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

Stories of Strength: ಮಹಾರಾಷ್ಟ್ರದ ಈ ಗ್ರಾಮ ಕೋವಿಡ್‌ ಮುಕ್ತ - ರಾಜ್ಯದ ಕಿರಿಯ ಸರ್ಪಂಚ್‌ಗೆ ಧನ್ಯವಾದStories of Strength: ಮಹಾರಾಷ್ಟ್ರದ ಈ ಗ್ರಾಮ ಕೋವಿಡ್‌ ಮುಕ್ತ - ರಾಜ್ಯದ ಕಿರಿಯ ಸರ್ಪಂಚ್‌ಗೆ ಧನ್ಯವಾದ

ಇನ್ನು ಜಾನಕಿ ಅಮ್ಮ ಕೊರೊನಾದಿಂದ ಗುಣಮುಖರಾಗಲು ತಮ್ಮ ಆರೈಕೆಯ ಮೂಲಕ ಸಹಾಯ ಮಾಡಿದ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳನ್ನು ಸಚಿವರು ಶ್ಲಾಘಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
104-year-old woman Janaki Amma in Kerala beats COVID-19 in 11 days, Health Minister Veena George greeted Janaki Amma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X