ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಪ್ರಯಾಣಿಕರು ಶುಲ್ಕ ಪಾವತಿ ಇಲ್ಲ

|
Google Oneindia Kannada News

ದೇಶದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಚೆಕ್-ಇನ್ ಮಾಡುವ ವೇಳೆ ನೀವು ಇನ್ನು ಮುಂದೆ ಹೆಚ್ಚಿನ ಶುಲ್ಕವನ್ನು ನೀಡಬೇಕಾಗಿಲ್ಲ. ವಿಮಾನಯಾನ ಪ್ರಯಾಣಿಕರಿಗೆ ಚೆಕ್-ಇನ್ ವೇಳೆ ಅಥವಾ ಬೋರ್ಡಿಂಗ್ ಪಾಸ್‌ ತೆಗೆದುಕೊಳ್ಳವ ಸಮಯದಲ್ಲಿ ವಿಧಿಸಲಾಗುತ್ತಿರುವ ಶುಲ್ಕವನ್ನು ವಿಮಾನ ಪ್ರಯಾಣಿಕರಿಂದ ತೆಗೆದುಕೊಳ್ಳಬಾರದು ಹಾಗೂ ಹೆಚ್ಚಿನ ಶುಲ್ಕ ವಿಧಿಸುವುದನ್ನು ಕೂಡಲೇ ನಿಲ್ಲಿಸುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ.

ವಿಮಾನ ನಿಲ್ದಾಣಗಳ ಟಿಕೆಟ್‌ ಚೆಕ್-ಇನ್ ಕೌಂರ್‌ಗಳ ಮೇಲೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಇಂತಹ ಒಂದು ಸೂಚನೆಯನ್ನು ವಿಮಾನಯಾನ ಸಚಿವಾಲಯವು ಖಾಸಗಿ ಏರ್‌ಲೈನ್ಸ್‌ ಕಂಪನಿಗಳಿಗೆ ಶುಲ್ಕವನ್ನು ವಸೂಲಿ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದೆ.

ವಿಮಾನ ನಿಲ್ದಾಣದ ಕೌಂಟರ್‌ಗಳಲ್ಲಿ ಚೆಕ್-ಇನ್ ಮಾಡಲು ವಿಮಾನಯಾನ ಪ್ರಯಾಣಿಕರು ಇನ್ನು ಮುಂದೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ, ಈ ಕುರಿತು ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ವಿಮಾನಯಾನ ಸಚಿವಾಲಯವು ತಕ್ಷಣವೇ ಶುಲ್ಕ ವಸೂಲಿ ನಿಲ್ಲಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದೆ.

 ಪ್ರಯಾಣಿಕರಿಂದ ಹಣ ವಸೂಲಿ

ಪ್ರಯಾಣಿಕರಿಂದ ಹಣ ವಸೂಲಿ

ಈ ಸೇವೆಗಾಗಿ ವಿಮಾನಯಾನ ಸಂಸ್ಥೆಗಳು ಪ್ರತಿ ಪ್ರಯಾಣಿಕರಿಗೆ ಸುಮಾರು 200 ರೂ. ಹಾಗೂ ಇದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಒಂದು ವೇಳೆ ನೀವು ಚೆಕ್‌ ಇನ್‌ ಆಗುವ ಸಂದರ್ಭದಲ್ಲಿ ಅನಿವಾರ್ಯವಾಗಿ ಈ ಶುಲ್ಕವನ್ನು ಕಟ್ಟಬೇಕಾಗುತ್ತಿತ್ತು. ಆದರೆ ಈಗ ಪ್ರಯಾಣಿಕರಿಂದ ಬೋರ್ಡಿಂಗ್ ಪಾಸ್ ನೀಡಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡುತ್ತಿರುವುದು ವಿಮಾನಯಾನ ಸಚಿವಾಲಯದ ಗಮನಕ್ಕೆ ಬಂದಿದ್ದು ಈ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದು ಕಂಪನಿಗಳಿಗೆ ಅಧಿಕೃತವಾಗಿ ಹೇಳಿದೆ.

 ಚೆಕ್-ಇನ್ ಶುಲ್ಕ ಮತ್ತು ಪ್ರಯಾಣಿಕರು

ಚೆಕ್-ಇನ್ ಶುಲ್ಕ ಮತ್ತು ಪ್ರಯಾಣಿಕರು

ಪ್ರಯಾಣಿಕರಿಂದ ಬೋರ್ಡಿಂಗ್ ಪಾಸ್ ನೀಡಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡುತ್ತಿರುವುದು ವಿಮಾನಯಾನ ಸಚಿವಾಲಯದ ಗಮನಕ್ಕೆ ಬಂದ ಬಳಿಕ ಈಗ ಈ ಹೆಚ್ಚುವರಿ ಮೊತ್ತವು (ನಿಯಮಗಳಿಗೆ) ಅನುಸಾರವಾಗಿಲ್ಲ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್‌ಗಳನ್ನು ನೀಡಲು ಹೆಚ್ಚುವರಿ ಮೊತ್ತ ತೆಗೆದುಕೊಳ್ಳಬಾರದು ಈ ಖಾಸಗಿ ಏರ್‍ಲೈನ್‌ ಸಂಸ್ಥೆಗಳು ಈ ರೀತಿ ಹಣ ವಸೂಲಿ ಮಾಡುವುದು ವಿಮಾನ ನಿಯಮಗಳಾದ 1937ರ ನಿಯಮ 135ರ ಅಡಿಯಲ್ಲಿ ಒದಗಿಸಲಾದ 'ಸುಂಕ'ದೊಳಗೆ ಇದನ್ನು ಪರಿಗಣಿಸಲಾಗುವುದಿಲ್ಲ ಎಂದು ನಾಗರಿಕ ಮತ್ತು ವಿಮಾನಯಾನ ಸಚಿವಾಲಯ ನಿಯಮಾನುಸಾರ ಖಡಕ್‌ ಸೂಚನೆ ನೀಡಿದೆ.

 ಹಾರಾಟದ ದೂರ, ಸಮಯವನ್ನು ಆಧರಿಸಿ ಚೆಕ್-ಇನ್ ಶುಲ್ಕ

ಹಾರಾಟದ ದೂರ, ಸಮಯವನ್ನು ಆಧರಿಸಿ ಚೆಕ್-ಇನ್ ಶುಲ್ಕ

ಇನ್ನು ಇದು ಕನಿಷ್ಠ ಮತ್ತು ಗರಿಷ್ಠ ದರಗಳನ್ನು ವಿಮಾನಯಾನ ಸಂಸ್ಥೆಗಳು ಹಾರಾಟದ ದೂರ, ಸಮಯವನ್ನು ಆಧರಿಸಿ ವಿವಿಧ ದೇಶೀಯ ಮಾರ್ಗಗಳಿಗೆ ವಿಧಿಸಬಹುದು. "ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಮಾಡುವ ಪ್ರಯಾಣಿಕರಿಗೆ ಶುಲ್ಕ ವಿಧಿಸುವುದು ವಿಮಾನಯಾನ ಸಂಸ್ಥೆಗಳ ವಾಣಿಜ್ಯ ನಿರ್ಧಾರವಾಗಿದೆ. ಈಗ ಸಚಿವಾಲಯವು ಏನು ಶುಲ್ಕ ವಿಧಿಸಬಹುದು ಅಥವಾ ವಿಧಿಸಬಾರದು ಎಂಬುದನ್ನು ನಿರ್ಧರಿಸುತ್ತಿದೆ (ಅದು ವಿಮಾನಯಾನ ಸಂಸ್ಥೆಗಳಿಗೆ ನಿರ್ಧಾರವಾಗಬೇಕಿತ್ತು), ದೇಶೀಯ ವಿಮಾನ ದರವನ್ನು ತೆಗೆದುಹಾಕಬೇಕು. ಈ ಫೇರ್ ಬ್ಯಾಂಡ್‌ಗಳು ಸಹ .ಈ ಫೇರ್ ಬ್ಯಾಂಡ್‌ಗಳನ್ನು (ಈಗ 15 ದಿನಗಳ ರೋಲಿಂಗ್ ಆಧಾರದ ಮೇಲೆ ಅನ್ವಯಿಸುತ್ತದೆ) ಜೆಟ್ ಇಂಧನ ಬೆಲೆಯಲ್ಲಿ ಕಡಿದಾದ ಏರಿಕೆ ಮತ್ತು ರೂಪಾಯಿಯ ಕುಸಿತದ ಹೊರತಾಗಿಯೂ ಪರಿಷ್ಕರಿಸಲಾಗಿಲ್ಲ" ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

 ಬೋರ್ಡಿಂಗ್ ಪಾಸ್‌ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

ಬೋರ್ಡಿಂಗ್ ಪಾಸ್‌ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ

ಗುರುವಾರ ಹೊರಡಿಸಲಾದ "ಏರ್‌ಲೈನ್ಸ್ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗಳನ್ನು ನೀಡಲು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ" ಎಂಬ ಶೀರ್ಷಿಕೆಯ ಸಚಿವಾಲಯದ ಆದೇಶವು ಹೀಗೆ ಹೇಳಿದೆ. ಮೇ 2020ರ ದೇಶೀಯ ವಿಮಾನ ಪುನರಾರಂಭದ ಆದೇಶವನ್ನು ಉಲ್ಲೇಖಿಸಲು ನಿರ್ದೇಶಿಸಲಾಗಿದೆ. ಪ್ರಯಾಣಿಕರು ವೆಬ್ ಚೆಕ್‌ನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸುತ್ತದೆ. ಚೆಕ್‌ಇನ್ ಮತ್ತು ಬೋರ್ಡಿಂಗ್ ಪಾಸ್‌ನ್ನು ವಿಮಾನಯಾನ ಸಂಸ್ಥೆಗಳು ಸಕಾಲಿಕ ವೆಬ್ ಚೆಕ್-ಇನ್ ಮತ್ತು ಬ್ಯಾಗ್ ಟ್ಯಾಗ್ ಪ್ರಿಂಟಿಂಗ್ ಮಾಡಲು ಮತ್ತು ಪ್ರಯಾಣಿಸುವ, ಪ್ರಯಾಣಿಕರಲ್ಲಿ-ವೆಬ್-ಚೆಕ್-ಅಲ್ಲದ ಮೇಲೆ ದಂಡದ ಶುಲ್ಕವನ್ನು ಕಡಿಮೆ ಮಾಡಲು / ತಪ್ಪಿಸಲು ವಿಮಾನ ಪ್ರಯಾಣಿಕರಿಗೆ ಸಹಾಯವಾಗುವಂತೆ ವಿಮಾನಯಾನವು ಖಾಸಗಿ ಸಂಸ್ಥೆಗಳಿಗೆ ಸೂಚಿಸಲಾಗಿದೆ.

English summary
Passengers no longer have to pay extra for checking-in at airports as the central government has directed that the check-in fees for airline passengers should not be collected from the passengers and the overcharging should be stopped immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X