ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಸಚಿವರು, ಸಂಸದರು, ಜನ ನಾಯಕರ ಮನೆ-ಮಠಗಳೆಲ್ಲ ಪೀಸ್ ಪೀಸ್!

|
Google Oneindia Kannada News

ಕೋಲಂಬೋ, ಮೇ 11: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಜನಾಕ್ರೋಶಕ್ಕೆ ಕಾರಣವಾಗಿದೆ. ಹೊತ್ತಿನ ತುತ್ತಿಗೂ ಪರಿತಪಿಸುವಂಥ ದುಸ್ಥಿತಿಯನ್ನು ಹುಟ್ಟು ಹಾಕಿರುವ ನಾಯಕರ ವಿರುದ್ಧ ಪ್ರಜೆಗಳೇ ಕೆಂಡ ಕಾರುತ್ತಿದ್ದಾರೆ.

ಶ್ರೀಲಂಕಾದಲ್ಲಿ ಕುಪಿತಗೊಂಡ ಪ್ರಜೆಗಳು ಆಡಳಿತ ಪಕ್ಷದ ಮಂತ್ರಿಗಳು, ಸಂಸದರು ಮತ್ತು ಸ್ಥಳೀಯ ಸರ್ಕಾರದ ಸದಸ್ಯರ ಒಡೆತನದ ಹಲವಾರು ಮನೆಗಳು ಮತ್ತು ಇತರ ಆಸ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ಸಿಯೆರಾ ಲಿಯೋನ್ ಪೀಪಲ್ಸ್ ಪಾರ್ಟಿಯ ರಾಜಕಾರಣಿಗಳ ಮನೆಗಳು ಮತ್ತು ಆಸ್ತಿಗಳ ಮೇಲೆ ಸೋಮವಾರ ದಾಳಿ ನಡೆಸಲಾಗಿದೆ.

ಶ್ರೀಲಂಕಾದ ನಿಗೊಂಬೋದಲ್ಲಿ ಘರ್ಷಣೆ; 8 ಸಾವು ಶ್ರೀಲಂಕಾದ ನಿಗೊಂಬೋದಲ್ಲಿ ಘರ್ಷಣೆ; 8 ಸಾವು

ದೇಶದಲ್ಲಿ ಜನಾಕ್ರೋಶಕ್ಕೆ ತುತ್ತಾಗಿರುವ ನಾಯಕರು ಯಾರು?, ಯಾವ ಸಚಿವರು ಮತ್ತು ಸಂಸದರ ಮನೆಗಳನ್ನು ಧ್ವಂಸಗೊಳಿಸಲಾಗಿದೆ?, ವಾಸ್ತವದಲ್ಲಿ ಪ್ರಜೆಗಳ ಕೋಪಕ್ಕೆ ಕಂಗಾಲಾಗಿರುವ ನಾಯಕರು ಯಾರು ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ಶ್ರೀಲಂಕಾದ ಮಾಜಿ ಸಚಿವರ ಮನೆಗಳ ಮೇಲೆ ದಾಳಿ

ಶ್ರೀಲಂಕಾದ ಮಾಜಿ ಸಚಿವರ ಮನೆಗಳ ಮೇಲೆ ದಾಳಿ

* ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ಸೇರಿದ ವೀರಕೇಟಿಯ ಮತ್ತು ಮೆಡಮುಲಾನ ವಾಲವ್ವಾದಲ್ಲಿನ ಕಾರ್ಲ್ಟನ್ ಹೌಸ್

* ರಾಜಪಕ್ಸೆ ಕುಟುಂಬದ D. A. ರಾಜಪಕ್ಸೆ ವಸ್ತುಸಂಗ್ರಹಾಲಯ ಮತ್ತು ಸ್ಮಾರಕಗಳು

* ಮಾಜಿ ಸಚಿವ ಬಾಸಿಲ್ ರಾಜಪಕ್ಸೆಯ ಮಾಲ್ವಾನಾದಲ್ಲಿನ ನಿವಾಸ

* ಮಾಜಿ ಸಚಿವ ಚಮಲ್ ರಾಜಪಕ್ಸೆ ಮನೆ

* ಮಾಜಿ ಸಚಿವ ಕೆಹೆಲಿಯ ರಂಬುಕವೆಲ್ಲಾ ಕ್ಯಾಂಡಿ ಮನೆ

* ಮಾಜಿ ಸಚಿವ ವಿದುರ ವಿಕ್ರಮನಾಯಕ

* ಮಾಜಿ ಸಚಿವ ವಿಮಲ್ ವೀರವಂಶ ಹೊಕಂದರ ನಿವಾಸ

* ಮಾಜಿ ಸಚಿವ ಶೆಹನ್ ಸೇಮನ್‌ಸಿಂಗ್ ಮನೆ

* ಮಾಜಿ ಉಪ ಸ್ಪೀಕರ್ ರಂಜಿತ್ ಸಿಯಂಬಲಪಿಟಿಯ ಮನೆ

* ಮಾಜಿ ಸಚಿವ ರೋಹಿತ ಅಬೇಗುಣವರ್ಧನಗೆ ಸೇರಿದ ಕಲುತಾರದ ಕಚೇರಿ ಮತ್ತು ಪಾಯಾಗಲ ನಿವಾಸ

* ಮಾಜಿ ಸಚಿವ ಜಾನ್ಸ್ಟನ್ ಫೆರ್ನಾಂಡೋಗೆ ಸೇರಿದ ಕುರುನೇಗಾಲ ಮತ್ತು ಲಿಲ್ಲಿ ಸ್ಟ್ರೀಟ್, ಕೊಲಂಬೊದಲ್ಲಿನ ಕಚೇರಿಗಳು

* ಮಾಜಿ ಸಚಿವ ನಿಮಲ್ ಲಾಂಜಾ ನೆಗೊಂಬೊದಲ್ಲಿ ಮನೆ

* ಮಾಜಿ ಸಚಿವ ಬಂಡುಲ ಗುಣವರ್ಧನ್ ಸೇರಿದ ನುಗೆಗೋಡ ನಿವಾಸ

* ಮಾಜಿ ಸಚಿವ ಡಾ ರಮೇಶ ಪತಿರಣಗೆ ಸೇರಿರುವ ಗಾಲೆಯ ಮನೆ

* ಮಾಜಿ ಸಚಿವ ಅರುಂಧಿಕಾ ಫೆರ್ನಾಂಡೋರಿಗೆ ಸೇರಿರುವ ವೆನ್ನಪ್ಪುವ ನಿವಾಸ

* ಮಾಜಿ ಸಚಿವ ಪ್ರೊಫೆಸರ್ ಚನ್ನ ಜಯಸುಮನ ಅನುರಾಧಪುರ ಮನೆ

ಸಂಸದರ ಮನೆಗಳು ಪ್ರಜೆಗಳ ಕೋಪಕ್ಕೆ ಧ್ವಂಸ

ಸಂಸದರ ಮನೆಗಳು ಪ್ರಜೆಗಳ ಕೋಪಕ್ಕೆ ಧ್ವಂಸ

* ಸಂಸದ ಸನತ್ ನಿಶಾಂತ್ ರಿಗೆ ಸೇರಿದ ಅರಚ್ಚಿಕಟ್ಟುವ ಮನೆ

* ಸಂಸದ ಗಾಮಿನಿ ಲೋಕುಗೆ ಹಾಗೂ ಇಬ್ಬರು ಸಹೋದರರಿಗೆ ಸೇರಿ ಮನೆ

* ಸಂಸದ ಗುಣಪಾಲ ರತ್ನಶೇಖರರಿಗೆ ಸೇರಿದ ಪಾಂಡುವಾಸ್ನುವಾರದ ಕಚೇರಿ ಮತ್ತು ಕುರುಣೇಗಾಲದ ಮನೆ

* ಸಂಸದೆ ಸಮನಪ್ರಿಯಾ ಹೆರಾತ್ ಅವರ ಕುರುನೇಗಾಲದ ಮನೆ ಮತ್ತು ಕಚೇರಿ

* ಸಂಸದ ಜನಕ ಬಂಡಾರಗೆ ಸೇರಿದ ಯಾಪಗಾಮದ ಮನೆ ಮತ್ತು ಕಚೇರಿ

* ಸಂಸದ ಅಶೋಕ್ ಪ್ರಿಯಾಂತರಿಗೆ ಸೇರಿದ ನಟ್ಟಾಂಡಿಯಲ್ಲಿನ ಮನೆ ಮತ್ತು ಕಚೇರಿ

* ಸಂಸದ ನಲಕ ಗೋಡಹೇವಾರಿಗೆ ಸೇರಿರುವ ಯಾಗೋಡದಲ್ಲಿನ ನಿರ್ಮಾಣ ಹಂತದ ಮನೆ

* ಸಂಸದ ಪ್ರಸನ್ನ ರಣವೀರಗೆ ಸೇರಿದ ಎಂದೆರಮುಲ್ಲಾ ನಿವಾಸ

* ಸಂಸದ ವಿಮಲವೀರ ಡಿಸ್ಸಾನಾಯಕ ಮನೆ

* ಸಂಸದ ಅಲಿ ಸಬ್ರಿ ರಹೀನ್ ಪುಟ್ಟಲಂನಲ್ಲಿನ ಮನೆ

* ಸಂಸದ ಪ್ರಸನ್ನ ರಣತುಂಗರಿಗೆ ಸೇರಿದ ಉಡುಗಂಪೋಲದ ಮನೆ

* ಸಂಸದ ದುಮಿಂದ ದಿಸಾನಾಯಕ ಮನೆ

* ಸಂಸದ ಎಸ್.ಎಂ.ಚಂದ್ರಸೇನ ನಿವಾಸ

* ಸಂಸದ ನುವಾನ್ ಆತುಕೋರಲ ನಿವಾಸ

* ಸಂಸದ ಸಹನ್ ಪ್ರದೀಪ್ ರಿಗೆ ಸೇರಿದ ಕಡವತದಲ್ಲಿನ ಮನೆ

* ಸಂಸದ ಸಿರಿಪಾಲ ಗಮ್ಲತ್ ಅವರ ಪೊಲೊನ್ನರುವಾ ನಿವಾಸ

* ಸಂಸದೆ ಕೋಕಿಲಾ ಗುಣವರ್ಧನರಿಗೆ ಸೇರಿದ ಮೀರಿಗಾಮದಲ್ಲಿ ಮನೆ

* ಸಂಸದ ತಿಸ್ಸ ಕುಟ್ಟಿ ಅರಚ್ಚಿಗೆ ಸೇರಿದ ಬಂಡಾರವೇಲದಲ್ಲಿನ ನಿವಾಸ

* ಸಂಸದ ಚಿಂತಕ ಮಾಯದುನ್ನೆರಿಗೆ ಸೇರಿದ ಪುಟ್ಟಲಮ್‌ನಲ್ಲಿ ಮನೆ ಮತ್ತು ಕಛೇರಿ

* ಸಂಸದೆ ಅನುರಾಧಾ ಜಯರತ್ನರ ಗ್ಯಾಂಪೋಳದಲ್ಲಿನ ಕಚೇರಿ

* ಸಂಸದ ಸನತ್ ನಿಶಾಂತ ಮನೆ

* ಸಂಸದೆ ಅನುಪಾ ಪಾಸ್ಕುಲ್ ಅವರ ಮತ್ತುಗಾಮದಲ್ಲಿನ ನಿವಾಸ

* ಸಂಸದ ಅಕಿಲ ಸಾಲಿಯ ಎಲ್ಲವಳರಿಗೆ ಸೇರಿದ ಬಲಂಗೋಡ ಮನೆ

* ಸಂಸದ ವಿದುರ ವಿಕ್ರಮನಾಯಕ ಅವರ ಹೊರಣದ ನಿವಾಸ

* ಸಂಸದ ಡಿ.ಬಿ.ಹೇರತ್ ರಿಗೆ ಸೇರಿದ ವಾರಿಯಪೋಲದ ಮನೆ

* ಸಂಸದೆ ಪವಿತ್ರಾ ವನ್ನಿಯಾರಾಚಿಯ ಪೆಲ್ಮಡುಲ್ಲಾ ಮತ್ತು ರತ್ನಪುರ ನಿವಾಸ

* ಸಂಸದ ಚಂಡಿಮ ವೀರಕ್ಕೋಡಿ ಮನೆ

ಸ್ಥಳೀಯ ನಾಯಕರ ನಿವಾಸಗಳನ್ನೂ ಬಿಟ್ಟಿಲ್ಲ ಜನರು

ಸ್ಥಳೀಯ ನಾಯಕರ ನಿವಾಸಗಳನ್ನೂ ಬಿಟ್ಟಿಲ್ಲ ಜನರು

* ಮೊರಟುವಾ ಮೇಯರ್ ಸಮನ್ ಲಾಲ್ ಫೆರ್ನಾಂಡೋ ಮನೆ

* ಅಟ್ಟಣಗಲ್ಲು ಪ್ರಾಂತೀಯ ಸಭೆಯ ಅಧ್ಯಕ್ಷರು ನಿವಾಸ

* ಕೋಟಿಕಾವಟ್ಟೆ ಮುಳ್ಳೇರಿಯ ಪ್ರಾಂತೀಯ ಸಭೆಯ ಅಧ್ಯಕ್ಷರ ಮನೆ

* ವಲಲ್ಲಾವಿಟ ಪ್ರದೇಶ ಸಭೆಯ ಅಧ್ಯಕ್ಷರ ನಿವಾಸ

* ಎಲ್ಪಿಟಿಯ ಪ್ರದೇಶ ಸಭೆಯ ಅಧ್ಯಕ್ಷರ ಮನೆ

* ಅಂಪಾರು ನಗರಸಭೆ ಅಧ್ಯಕ್ಷರ ನಿವಾಸ

* ಅಂಪಾರು ಪ್ರದೇಶ ಸಭೆಯ ಉಪಾಧ್ಯಕ್ಷರ ಮನೆ

* ಗಂಪನ ಮೇಯರ್ ಯಕ್ಕಲ ನಿವಾಸ

* ದಂಬುಳ್ಳದ ಮೇಯರ್ ಅವರಿಗೆ ಸೇರಿದ ತಿಥ್ವೇಲ್ಗೊಲ್ಲದ ಮನೆ

* ಹೊರಾಣ ಮೇಯರ್ ನಿವಾಸ

ಭಾರತಕ್ಕೆ ಬಂದಿಲ್ಲ ಮಹಿಂದಾ ರಾಜಪಕ್ಸೆ

ಭಾರತಕ್ಕೆ ಬಂದಿಲ್ಲ ಮಹಿಂದಾ ರಾಜಪಕ್ಸೆ

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಪ್ರಜೆಗಳ ಪ್ರತಿಭಟನೆ ಹಿನ್ನೆಲೆ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕುರ್ಚಿ ಬಿಟ್ಟು ಕೆಳಗಿಳಿದ ರಾಜಪಕ್ಸೆ ದೇಶವನ್ನೇ ತೊರೆದು ಪರಾರಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಮೂಲಗಳ ಪ್ರಕಾರ, ಮಹಿಂದಾ ರಾಜಪಕ್ಸೆ ಭಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಭಾರತ ನಿರಾಕರಿಸಿದೆ.

Recommended Video

Pollard ಹೊಡೆತ ತಿಂದ ಅಂಪೈರ್ ಸುಸ್ತ್,ರೋಹಿತ್ ಶರ್ಮಾ‌ ಶಾಕ್!! | Oneindia Kannada

English summary
Sri Lanka Crisis: The residences and property of the following Sierra Leone People's Party (SLPP ) politicians were attacked so far. here is the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X