ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ತಿಂಗಳಲ್ಲಿ ನಡೆಯುವ ಗಗನ ಕೌತುಕಗಳು; ತಪ್ಪದೇ ತಿಳಿದಿರಿ

|
Google Oneindia Kannada News

ಖಗೋಳಾಸಕ್ತರಿಗೆ ಪ್ರತೀ ದಿನವೂ ಕೌತುಕವೇ. ನಮ್ಮ ಭೂಮಂಡಲ, ಬ್ರಹ್ಮಾಂಡ, ಆಗಸದಲ್ಲಿ ಏನಾದರೊಂದು ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಕ್ಷುದ್ರಗ್ರಹಗಳು ಸಾಗಿ ಹೋಗುವುದು, ಹಲವು ಗ್ರಹಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು, ವಿವಿಧ ಗ್ರಹಣಗಳು ಹೀಗೆ ಕೌತುಕಗಳು ಆಸಕ್ತರಿಗೆ ಇದ್ದೇ ಇರುತ್ತವೆ.

ಅದರಲ್ಲೂ ಜುಲೈ ತಿಂಗಳು ಖಗೋಳಾಸಕ್ತರಿಗೆ ಬಹಳ ಕುತೂಹಲ ಗರಿಗೆದರಿಸುವ ಸಮಯ. ಬಹಳಷ್ಟು ಅದ್ಭುತ ವಿದ್ಯಮಾನಗಳು ನಡೆಯುವ ತಿಂಗಳು ಇದು. ಆಗಸದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ನಕ್ಷತ್ರ, ನಮ್ಮ ಮಿಲ್ಕಿ ವೇ ಗೆಲಾಕ್ಸಿಯ ತುಣಕು ಇತ್ಯಾದಿಯನ್ನು ಗಮನಿಸಬಹುದು. ಹಾಗೆಯೇ, ಮಂಗಳ, ಗುರು, ಶನಿ ಇತ್ಯಾದಿ ಗ್ರಹಗಳನ್ನು ನೀವು ಬೆಳಗಿನ ಹೊತ್ತು ಕಾಣಬಹುದು. ಉಲ್ಕಾಪಾತದ ಸೊಬಗನ್ನು ಕಣ್ತುಂಬಿಕೊಳ್ಳಬಹುದು.

ಇಂದು ಸೂರ್ಯ-ಭೂಮಿ ನಡುವಿನ ಅಂತರ ಹೆಚ್ಚು: ಕಾರಣ ತಿಳಿಯಿರಿಇಂದು ಸೂರ್ಯ-ಭೂಮಿ ನಡುವಿನ ಅಂತರ ಹೆಚ್ಚು: ಕಾರಣ ತಿಳಿಯಿರಿ

ಡಾಗ್ ಸ್ಟಾರ್, ಟೀ ಪಾಟ್, ಅಫಿಲಿಯನ್, ಬಕ್ ಬೂನ್, ಥಂಡರ್ ಮೂನ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುವ ಹಲವು ವಿದ್ಯಮಾನಗಳು ಜುಲೈ ತಿಂಗಳಲ್ಲಿ ಕಾಣಸಿಗುತ್ತವೆ. ಅದಕ್ಕೆ ಖಗೋಳಾಸಕ್ತರಿಗೆ ಜುಲೈ ಎಂದರೆ ರೋಚಕತೆ ಸೃಷ್ಟಿಸುವ ತಿಂಗಳೆನಿಸಿದೆ.

ಡಾಗ್ ಸ್ಟಾರ್

ಡಾಗ್ ಸ್ಟಾರ್

ಜುಲೈ ತಿಂಗಳಲ್ಲಿ ನೀವು ಸೂರ್ಯಾಸ್ತ ಆದ ಬಳಿಕ ದಕ್ಷಿಣದತ್ತ ನೋಡಿದರೆ ಹಲವು ಪ್ರಕಾಶಮಾನ ನಕ್ಷತ್ರಗಳನ್ನು ಕಾಣಬಹುದು. ವಿವಿಧ ಆಕಾರಗಳಲ್ಲಿರುವ ನಕ್ಷತ್ರ ಪುಂಜಗಳು ಇರುತ್ತವೆ. ಅದರಲ್ಲಿ ಪ್ರಮುಖವಾಗಿರುವುದು ಧನು ಮತ್ತು ವೃಶ್ಚಿಕ ನಕ್ಷತ್ರ ಪುಂಜಗಳು. ಧನು ನಕ್ಷತ್ರ ಪುಂಜದಲ್ಲಿ ಧನಸ್ಸುವಿನ ಆಕಾರದಲ್ಲಿ ನಕ್ಷತ್ರಗಳ ಸಂಯೋಜನೆ ಇದ್ದಂತಿರುತ್ತದೆ. ವೃಶ್ಚಿಕದಲ್ಲಿ ಚೇಳಿನ ಆಕಾರಕ್ಕೆ ಹೋಲಿಸಬಹುದು. ನೀವು ಇವುಗಳನ್ನು ಸಂಜೆಯಾದ ಬಳಿಕ ದಕ್ಷಿಣ ದಿಕ್ಕಿಗೆ ತಿರುಗಿ ನಿಂತರೆ ನೋಡಬಹುದು.

ಹಾಗೆಯೇ, ಜುಲೈ ತಿಂಗಳಲ್ಲಿ ಸೂರ್ಯನ ತುಂಟಾಟವೂ ಇರುತ್ತದೆ. ನಮ್ಮ ಭೂಮಿಯ ಉತ್ತರ ಗೋಳಾರ್ಧವು ಜುಲೈ ತಿಂಗಳಲ್ಲಿ ಸೂರ್ಯನ ಕಡೆ ತಿರುಗಿರುತ್ತದೆ. ಈಗ ಆ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚೇ ಇರುತ್ತದೆ. ಇದೇ ವೇಳೆ, ದಕ್ಷಿಣ ಗೋಳಾರ್ಧದಲ್ಲಿ ಉಷ್ಣಾಂಶ ಕಡಿಮೆ ಇರುತ್ತದೆ. ಭಾರತ ಇದೇ ದಕ್ಷಿಣ ಗೋಳಾರ್ಧಕ್ಕೆ ಬರುತ್ತದೆ. ನೀವು ಜುಲೈ ತಿಂಗಳಲ್ಲಿ ರಣಬಿಸಿಲನ್ನು ಸಾಮಾನ್ಯವಾಗಿ ಕಾಣುವುದಿಲ್ಲ.

ಟೀಪಾಟ್

ಟೀಪಾಟ್

ನಮ್ಮ ಭೂಮಂಡಲ, ಸೌರಮಂಡಲ ಎಲ್ಲವೂ ಇರುವುದು ಮಿಲ್ಕಿ ವೇ ಗೆಲಾಕ್ಸಿಯಲ್ಲಿ. ಇದರ ತುಣುಕನ್ನು ನೀವು ಜುಲೈ ತಿಂಗಳಲ್ಲಿ ಕಾಣಬಹುದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಂತು ಆಗಸ ನೋಡಿದರೆ ಮಿಲ್ಕಿ ವೇ ಗೆಲಾಕ್ಸಿಯ ಸೊಬಗು ಕಣ್ಕುಕ್ಕುವಂತೆ ಕಾಣಬಹುದು.

ಟೀಪಾಟ್ ಎಂದೇ ಕರೆಯಲಾಗುವ ಧನು ನಕ್ಷತ್ರಪುಂಜವನ್ನು ನೀವು ಗಮನಿಸಿದ್ದರೆ ಮಿಲ್ಕಿ ವೇ ಸುಳಿವು ಸಿಗುತ್ತದೆ. ಚಹಾ ಪಾತ್ರೆ ಅಥವಾ ಬಟ್ಟಲಿನಿಂದ ಬಿಸಿಯ ಹಬೆ ಹೊರಗೆ ಬರುತ್ತಿರುವಂತೆ ಧನು ನಕ್ಷತ್ರಪುಂಜ ಕಾಣಿಸುತ್ತದೆ. ಅದಕ್ಕೆ ಟೀ ಪಾಟ್ ಎಂದು ಬಾಯಿಮಾತಿಗೆ ಕರೆಯುತ್ತಾರೆ. ಈ ಟೀ ಪಾಟ್‌ನಲ್ಲಿರುವ ನಕ್ಷತ್ರಗಳ ಬಲಬದಿಯಲ್ಲಿ ಮಿಲ್ಕಿ ವೇ ಗೆಲಾಕ್ಸಿಯ ಕೇಂದ್ರ ಬಿಂದು ಇರುವುದು. ಹೀಗಾಗಿ, ನಿಮಗೆ ಟೀಪಾಟ್ ಮತ್ತು ಮಿಲ್ಕಿ ವೇ ಎರಡೂ ಒಟ್ಟೊಟ್ಟಿಗೆ ಕಣ್ಣಿಗೆ ಬೀಳುತ್ತದೆ. ಇದಕ್ಕಿಂತ ರೋಚಕತೆ ಬೇಕೆ?

ಐದು ಗ್ರಹಗಳ ಸಂಯೋಜನೆ, ಬರಿಗಣ್ಣಿಗೆ ಕಾಣುವ ಕೌತುಕ- ಇದು ನೋಡುವುದು ಹೇಗೆ?ಐದು ಗ್ರಹಗಳ ಸಂಯೋಜನೆ, ಬರಿಗಣ್ಣಿಗೆ ಕಾಣುವ ಕೌತುಕ- ಇದು ನೋಡುವುದು ಹೇಗೆ?

ಅಫಿಲಿಯನ್

ಅಫಿಲಿಯನ್

ಸೂರ್ಯನಿಂದ ನಮ್ಮ ಭೂಮಿ ಅತಿ ದೂರಕ್ಕೆ ಹೋಗುವ ಜಾಗವೇ ಅಫಿಲಿಯನ್ (Aphelian). ಇಂದು, ಅಂದರೆ ಜುಲೈ 4ರಂದು ಈ ವಿದ್ಯಮಾನ ಇದೆ. ಜುಲೈ 4ರಂದು ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರ 15.21 ಕೋಟಿ ಕಿಲೋಮೀಟರ್. ಸೋಮವಾರ ಮಧ್ಯಾಹ್ನ 12:40ಕ್ಕೆ (ಭಾರತೀಯ ಕಾಲಮಾನ) ಭೂಮಿಯು ಅಫಿಲಿಯನ್ ತಲುಪಿತು ಎನ್ನಲಾಗುತ್ತಿದೆ.

ಥಂಡರ್ ಮೂನ್

ಥಂಡರ್ ಮೂನ್

ಜುಲೈ 13-14ರಂದು ಮಹಾಹುಣ್ಣಿಮೆ ಇದೆ. ಹುಣ್ಣಿಮೆಯಂದು ಚಂದ್ರ ಮತ್ತು ಸೂರ್ಯನ ಮಧ್ಯೆ ಭೂಮಿ ಇರುತ್ತದೆ. ಅಂದು ಚಂದ್ರ ಸಂಪೂರ್ಣವಾಗಿ ಭೂಮಿಯಲ್ಲಿರುವವರಿಗೆ ದರ್ಶನ ನೀಡುತ್ತಾನೆ. ಈ ಜುಲೈ ತಿಂಗಳಲ್ಲಿನ ಹುಣ್ಣಿಮೆಯು ಸೂಪರ್ ಮೂನ್ ಕೂಡ ಆಗಿರುವುದು ವಿಶೇಷ. ಸೂಪರ್ ಮೂನ್ ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತಿ ಸಮೀಪಕ್ಕೆ ಬಂದಿರುತ್ತಾನೆ. ಹೀಗಾಗಿ, ಸೂಪರ್ ಮೂನ್ ವೇಳೆ ಮಾಮೂಲಿಯ ಹುಣ್ಣಿಮೆಗಿಂತ ಚಂದ್ರ ಹೆಚ್ಚು ಪ್ರಕಾಶಮಾನವಾಗಿರುತ್ತಾನೆ.

ಈ ಬಾರಿಯ ಸೂಪರ್ ಮೂನ್ ಅನ್ನು ಬಕ್ ಮೂನ್ ಎಂದೂ ಆಡುಮಾತಿನಲ್ಲಿ ಕರೆಯುತ್ತಾರೆ. ಬಕ್ ಎಂದರೆ ಜಿಂಕೆ ಜಾತಿಯ ಚಿಗರೆ. ಜುಲೈ ತಿಂಗಳಲ್ಲಿ ಬರುವ ಸೂಪರ್ ಮೂನ್‌ಗೆ ಬಕ್ ಮೂನ್ ಎಂದು ಕರೆಯಲು ಕಾರಣ ಅಮೆರಿಕದ ಬುಡಕಟ್ಟು ಜನಾಂಗದವರು. ಜಿಂಕೆಗೆ ಹೊಸ ಕೋಡುಗಳು ಇದೇ ಸಮಯದಲ್ಲಿ ಹುಟ್ಟುತ್ತವಂತೆ. ಹೀಗಾಗಿ, ಬಕ್ ಮೂನ್ ಎಂದು ಕರೆಯಲಾಗುತ್ತದೆ. ಈ ಸೂಪರ್ ಮೂನ್‌ಗೆ ಥಂಡರ್ ಮೂನ್, ಹೇ ಮೂನ್ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ.

ಉಲ್ಕಾಪಾತ

ಉಲ್ಕಾಪಾತ

ಜುಲೈ 28ರ ರಾತ್ರಿ ಮತ್ತು ಜುಲೈ 29ರ ಬೆಳಗ್ಗೆ ಈ ಅವಧಿಯಲ್ಲಿ ನೀವು ಆಗಸವನ್ನು ನೋಡಿದರೆ ಉಲ್ಕಾಪಾತದ ಸೊಬಗಿನ ದರ್ಶನ ಪಡೆಯಬಹುದು. ಆಗ ಡೆಲ್ಟಾ ಆಕ್ವಾರಿಡ್ಸ್ ಉಲ್ಕಾಪಾತದ ಸುರಿಮಳೆ ಆಗುತ್ತದೆ. ಒಂದು ಗಂಟೆಯಲ್ಲಿ 20 ಉಲ್ಕೆಗಳು ಹೊರಬೀಳುತ್ತವೆ. ಜುಲೈ 28, 29 ಮಾತ್ರವಲ್ಲ ಜುಲೈ 12ರಿಂದ ಆಗಸ್ಟ್ 23ರವರೆಗೆ ಉಲ್ಕಾಪಾತ ಇರುತ್ತದೆ.

ಗ್ರಹಗಳ ದರ್ಶನ

ಗ್ರಹಗಳ ದರ್ಶನ

ಜುಲೈ ತಿಂಗಳಲ್ಲಿ ನಮಗೆ ಮಂಗಳ, ಗುರು ಮತ್ತ ಶನಿ ಗ್ರಹಗಳ ದರ್ಶನ ಸಿಗುತ್ತದೆ. ಬೆಳಗಿನ ಹೊತ್ತು ನೋಡಿದರೆ ಇವು ಕಾಣಬಹುದು. ಶುಕ್ರ ಗ್ರಹ ಕೂಡ ಮಸುಕುಮಸುಕಾಗಿ ಕಾಣುತ್ತದೆ. ಹಾಗೆಯೇ, ಜುಲೈ ೨೦ರಂದು ಮಂಗಳ ಮತ್ತು ಗುರುಗ್ರಹಗಳ ಮಧ್ಯೆ ಅರ್ಧಚಂದ್ರನನ್ನು ಕಾಣಬಹುದು. ಜುಲೈ ೨೧ರಂದು ಚಂದ್ರ ಮಂಗಳನ ಸಮೀಪಕ್ಕೆ ಹೋಗಿರುತ್ತಾನಂತೆ.

(ಒನ್ಇಂಡಿಯಾ ಸುದ್ದಿ)

Recommended Video

BJP ನಾಯಕರು ಸಚಿವ ಸ್ಥಾನ ಬೇಡವೆನ್ನಲು ಕಾರಣವೇನು | OneIndia Kannada

English summary
The month of July one can spot the Buck Moon, Aphelion, Teapot, Delta Aquarids Meteor Shower among others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X