• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2045ರ ಹೊತ್ತಿಗೆ ಮನುಷ್ಯ ಸರ್ವನಾಶ? ವಿಜ್ಞಾನಿಗಳ ಎಚ್ಚರಿಕೆ ಏನು?

|
Google Oneindia Kannada News

ಮನುಷ್ಯ ಅದೆಷ್ಟೇ ಆಟವಾಡಿದ್ರೂ ಪ್ರಕೃತಿಯ ಮುಂದೆ ಕೈಕಟ್ಟಿ ನಿಲ್ಲಲೇಬೇಕು ಎಂಬುದು ನಿಜವಾಗ್ತಿದೆ. 2045ರ ಹೊತ್ತಿಗೆ ಮನುಷ್ಯರೇ ಈ ಭೂಮಿ ಮೇಲಿಂದ ನಾಶವಾಗಿ ಹೋದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ವಿಜ್ಞಾನ ಲೋಕ. ಹೌದು, ಮನುಷ್ಯರ ಸಂತತಿ ಬೆಳೆಯಬೇಕಾದರೆ ವೀರ್ಯಾಣುಗಳ ಸಂಖ್ಯೆ ಅತ್ಯಗತ್ಯ.

ಆದ್ರೆ ಇತ್ತೀಚಿನ ಅಧ್ಯಯನದ ಪ್ರಕಾರ ವೀರ್ಯಾಣು ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಅಂತೆ. ಲೈಂಗಿಕ ಬದಲಾವಣೆಯ ಪರಿಣಾಮ ಮಾನವನ ಉಳಿವಿಗೆ ಅಪಾಯ ಎದುರಾಗಿದೆ ಎಂದು ಸಾಂಕ್ರಾಮಿಕ ರೋಗ ತಜ್ಞೆ ಶಾನ್ನಾ ಸ್ವಾನ್ ಆಘಾತಕಾರಿ ಮಾಹಿತಿ ತಿಳಿಸಿದ್ದಾರೆ.

ನ್ಯೂಯಾರ್ಕ್‌ನ ಮೌಂಟ್ ಸಿನಾಯ್ನಲ್ಲಿರುವ ಐಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಪರಿಸರ ಮತ್ತು ಸಂತಾನೋತ್ಪತ್ತಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಶಾನ್ನಾ ಸ್ವಾನ್ ಪುಸ್ತಕವೊಂದರಲ್ಲಿ ಈ ಬಗ್ಗೆ ಬರೆದಿದ್ದಾರೆ. ಅಂದಹಾಗೆ 2017 ರಲ್ಲಿ ಸ್ಫೋಟಕ ಅಧ್ಯಯನ ವರದಿ ಪ್ರಕಟವಾಗಿತ್ತು.
ವೀರ್ಯಾಣು ಪ್ರಮಾಣ ಕುಸಿಯುತ್ತಿರುವ ಬಗ್ಗೆ ವರದಿ ಆತಂಕ ವ್ಯಕ್ತಪಡಿಸಿತ್ತು. ಅಷ್ಟಕ್ಕೂ ಅಂದು ಪ್ರಕಟವಾಗಿದ್ದ ಆ ವರದಿಗೆ ಸಹ ಲೇಖಕಿಯಾಗಿದ್ದರು ಶಾನ್ನಾ ಸ್ವಾನ್. ಈಗ ಅವರೇ ಬರೆದಿರುವ ಪುಸ್ತಕದಲ್ಲಿ ಸರಾಸರಿ ವೀರ್ಯಾಣುಗಳ ಸಂಖ್ಯೆ 2045 ರ ಹೊತ್ತಿಗೆ ಶೂನ್ಯ ತಲುಪಲಿದೆ ಎಂದು ಎಚ್ಚರಿಸಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಫೆಕ್ಟ್..?

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಎಫೆಕ್ಟ್..?

ಹೌದು, 1973 ಹಾಗೂ 2011 ರ ನಡುವೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವೀರ್ಯಾಣುಗಳ ಸಂಖ್ಯೆ ಸರಾಸರಿ ಶೇ. 59ರಷ್ಟು ಕುಸಿತ ಕಂಡಿದೆ. ಭವಿಷ್ಯದಲ್ಲಿ ಇದು ಮತ್ತಷ್ಟು ವೇಗ ಪಡೆಯಬಹುದು ಎಂಬ ಎಚ್ಚರಿಕೆ ಸಂದೇಶವನ್ನು ಕೂಡ ರವಾನಿಸಲಾಗಿದೆ. ಹವಾಮಾನ ಬಿಕ್ಕಟ್ಟಿನ ರೀತಿ ಇದನ್ನ ಫಲವತ್ತತೆಯ ಬಿಕ್ಕಟ್ಟೆಂದು ಕರೆಯಲಾಗುತ್ತಿದೆ. ಹವಾಮಾನ ಬದಲಾವಣೆ ರೀತಿಯಲ್ಲೇ ಭವಿಷ್ಯದಲ್ಲಿ ಮಾನವನ ಸಂತತಿಗೂ ಇದು ದೊಡ್ಡ ಸವಾಲು ಎಂದು ವಿಜ್ಞಾನಿಗಳು ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಗಂಡಾಂತರ ಎದುರಾಗಲು ಕಾರಣವನ್ನೂ ವಿವರಿಸಿದ್ದಾರೆ.

ಮನುಷ್ಯನೂ ಅಳಿವಿನಂಚಿನ ಜೀವಿ..?

ಮನುಷ್ಯನೂ ಅಳಿವಿನಂಚಿನ ಜೀವಿ..?

ಜಗತ್ತು ಸಮಯದ ಹಿಂದೆ ಓಡುತ್ತಿದೆ, ಸಮಯ ಎಂದರೆ ದುಡ್ಡು, ಹೀಗೆ ಡೈಲಾಗ್ ಮೇಲೆ ಡೈಲಾಗ್‌ಗಳನ್ನ ಹೊಡೆಯೋರನ್ನು ನೋಡಿದ್ದೇವೆ. ಆದರೆ ಇದೇ ಆಧುನಿಕ ಜೀವನ ಶೈಲಿ ವೀರ್ಯಾಣುಗಳ ಮೇಲೆ ಪ್ರಭಾವ ಬೀರುತ್ತಿದೆ ಅಂತೆ. ಇದು ಮಾನವನ ಲೈಂಗಿಕ ಶಕ್ತಿ ಅಥವಾ ಸಂತಾನೋತ್ಪತ್ತಿಗೆ ಹಾಗೂ ಫಲವತ್ತತೆಗೆ ಬೆದರಿಕೆ ಹಾಕುತ್ತಿದೆ ಎನ್ನಲಾಗಿದೆ. ವ್ಯತಿರಿಕ್ತ ಜೀವನಶೈಲಿ ಮತ್ತು ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಾನವ ಕೂಡ ಅಳಿವಿನಂಚಿನ ಪ್ರಭೇದ ಆಗಬಹುದು ಎಂದು ತಮ್ಮ ಪುಸ್ತಕದಲ್ಲಿ ಎಚ್ಚರಿಸಿದ್ದಾರೆ ಶಾನ್ನಾ ಸ್ವಾನ್.

ಸಂತಾನಕ್ಕೂ ಎದುರಾಯ್ತು ಗಂಡಾಂತರ..!

ಸಂತಾನಕ್ಕೂ ಎದುರಾಯ್ತು ಗಂಡಾಂತರ..!

1964ರಿಂದ 2018 ರ ನಡುವೆ ಜಾಗತಿಕ ಫಲವತ್ತತೆ ದರ ಮಹಿಳೆಯರಲ್ಲಿ ಅರ್ಧಕ್ಕೆ ಅರ್ಧ ಭಾಗ ಕುಸಿದಿದೆ. ಬೆಳವಣಿಗೆ ದರ 5.06 ಜನ ಪ್ರಮಾಣದಿಂದ 2.4 ಕ್ಕೆ ಇಳಿದಿದೆ. ಇದಕ್ಕೆ ಹಲವು ಸಮಸ್ಯೆಗಳು ಕಾರಣವಾಗಿವೆ ಎಂದು ತಜ್ಞೆ ಎಚ್ಚರಿಸಿದ್ದಾರೆ. ಗರ್ಭನಿರೋಧಕಗಳ ಬಳಕೆ, ಸಾಂಸ್ಕೃತಿಕ ಬದಲಾವಣೆ, ಮಕ್ಕಳನ್ನು ಹೊಂದುವ ಮುನ್ನ ಪ್ಲ್ಯಾನಿಂಗ್, ಇದಕ್ಕಾಗಿ ಕಠಿಣ ನಿಯಮಗಳ ಪಾಲನೆ. ಇಷ್ಟೇ ಅಲ್ಲದೆ ಹುಡುಗರಲ್ಲಿ ಹೆಚ್ಚು ಜನನಾಂಗದ ವೈಪರೀತ್ಯ ಮತ್ತು ಚಿಕ್ಕ ವಯಸ್ಸಿಗೆ ಬಾಲಕಿಯರ ಪ್ರೌಢಾವಸ್ಥೆ ಕೂಡ ಇದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

‘ಬ್ಯೂಟಿ’ ನೋಡಿದ್ರೆ ಜೀವನ ಹಾಳು..!

‘ಬ್ಯೂಟಿ’ ನೋಡಿದ್ರೆ ಜೀವನ ಹಾಳು..!

ಮುಂದುವರಿದು ತಮ್ಮ ಪುಸ್ತಕದಲ್ಲಿ ಹಲವು ವಿಚಾರಗಳನ್ನ ವಿವರಿಸಿರುವ ಶಾನ್ನಾ ಸ್ವಾನ್, ಪ್ಲಾಸ್ಟಿಕ್ ಹಾಗೂ ಸೌಂದರ್ಯ ವರ್ಧಕ ಮತ್ತು ಕೀಟನಾಶಕಗಳ ಅತಿಯಾದ ಬಳಕೆ ಕೂಡ ಗಂಡಾಂತರಕ್ಕೆ ಕಾರಣ ಎಂದಿದ್ದಾರೆ. ಇದರಿಂದ ಎಂಡೋಕ್ರೈನ್‌ಗಳಾದ ಥಾಲೇಟ್ಸ್ ಹಾಗೂ ಬಿಸ್ಫೆನಾಲ್-ಎ ಮೇಲೆ ಪರಿಣಾಮ ಉಂಟಾಗುತ್ತಿದೆ.

ನಮ್ಮ ಪರಿಸರದ ರಾಸಾಯನಿಕಗಳು ಹಾಗೂ ಆಧುನಿಕ ಜಗತ್ತಿನಲ್ಲಿ ಅನಾರೋಗ್ಯಕರ ಜೀವನಶೈಲಿ ಅಭ್ಯಾಸ, ಹಾರ್ಮೋನುಗಳ ಸಮತೋಲನ ನಾಶಗೊಳಿಸುತ್ತಿವೆ ಎಂದು ಎಚ್ಚರಿಸಿದ್ದಾರೆ. ಇದರ ಜೊತೆಗೆ ಧೂಮಪಾನ, ದುಶ್ಚಟಗಳ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.

English summary
Professor of environmental medicine Shanna Swan warned that sperm count can become zero by 2045.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X