ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವುದು ಸುಲಭ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯುತ್ತಿದೆ. ಜನವರಿ 1, 2021ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ ಮತ್ತು ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದ ಅಂಗವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆ, ತಾಲೂಕು ಕಛೇರಿಗಳಲ್ಲಿ, ಸಹಾಯಕ ಕಮೀಷನರ್ ಕಛೇರಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ; ಹೆಸರು ಸೇರಿಸುವುದು ಹೇಗೆ? ಮತದಾರರ ಪಟ್ಟಿ ಪರಿಷ್ಕರಣೆ; ಹೆಸರು ಸೇರಿಸುವುದು ಹೇಗೆ?

ಭಾವಚಿತ್ರವಿಲ್ಲದ ಮತದಾರರ ಪಟ್ಟಿಗಳ ಭಾಗಗಳನ್ನು ಮುಖ್ಯ ಚುನಾವಣಾಧಿಕಾರಿಗಳವರ ವೆಬ್‍ಸೈಟ್ www.ceokarnataka.kar.nic.in ನಲ್ಲಿ ಹಾಗೂ ಆಯಾ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿಯೂ ಜನರು ನೋಡಿ, ಪರಿಶೀಲನೆ ಮಾಡಬಹುದು.

ಮತದಾರರ ಪಟ್ಟಿ ಪರಿಷ್ಕರಣೆ; ಹೆಸರು ಸೇರಿಸಲು ಅವಕಾಶ ಮತದಾರರ ಪಟ್ಟಿ ಪರಿಷ್ಕರಣೆ; ಹೆಸರು ಸೇರಿಸಲು ಅವಕಾಶ

 Special Drive How To Enroll Name For Voter List

ವಿಶೇಷ ಅಭಿಯಾನ; ಜನರು ಅವರ ಭಾಗದ ಮತಗಟ್ಟೆ ಹಂತದ ಅಧಿಕಾರಿಯನ್ನು ಸಂಪರ್ಕಿಸಿ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ಮತ್ತು ವಿವರಗಳನ್ನು ಪರಿಶೀಲನೆ ಮಾಡಬಹುದು. ಡಿಸೆಂಬರ್ 17 ರವರೆಗೆ ಕರಡು ಮತದಾರರ ಪಟ್ಟಿಗಳಿಗೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ನಮೂನೆ-6 ಮತ್ತು ನಮೂನೆ-7 ರಲ್ಲಿ ಸಲ್ಲಿಸಬಹುದು.

ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ ಅಂಚೆ ಮತಗಳ ಚಲಾವಣೆ; ವಯೋಮಿತಿ ಇಳಿಕೆ ಇಲ್ಲ

ಜನವರಿ 1, 2021ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ ಮತ್ತು ಯುವತಿಯರು ತಮ್ಮ ಹೆಸರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಲು ನಮೂನೆ-6 ರಲ್ಲಿ ತಾವು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾಸಂಸ್ಥೆಯಲ್ಲಾಗಲೀ, ತಮ್ಮ ಭಾಗದ ಮತಗಟ್ಟೆ ಹಂತದ ಅಧಿಕಾರಿಗೆ, ತಾಲೂಕು ಕಛೇರಿಗೆ ಹಾಗೂ ಭಾರತ ಚುನಾವಣಾ ಆಯೋಗದ ಆನ್‍ಲೈನ್ ವೆಬ್‍ಸೈಟ್ www.nvsp.in ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಮತದಾರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮೃತ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರನ್ನು ಕೈಬಿಡಲು ಸಂಬಂಧಪಟ್ಟವರು ನಮೂನೆ-7 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

Recommended Video

ರಾಜ್ಯದಲ್ಲಿ ರಂಗೇರಲಿದೆ ಗ್ರಾಮ ಪಂಚಾಯಿತಿ ಅಖಾಡ | Oneindia Kannada

ಮತದಾರರ ಪಟ್ಟಿಯಲ್ಲಿ ವರ್ಗಾವಣೆಯನ್ನು ಬಯಸುವ ಮತದಾರರ ನಮೂನೆ-8ಎ ರಲ್ಲಿ ಮತ್ತು ಮತದಾರರ ಪಟ್ಟಿಯಲ್ಲಿನ ತಿದ್ದುಪಡಿ ಮತ್ತು ವಿಳಾಸ ಬದಲಾವಣೆ, ಭಾವಚಿತ್ರ ಬದಲಾವಣೆಗೆ ನಮೂನೆ-8 ರಲ್ಲಿ ಅರ್ಜಿ ಹಾಕಬೇಕು.

English summary
Special voter list enrollment drive Karnataka in all assembly seats. People can enroll as a new voter. How to enroll here are the guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X