ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಲೆಂಟೈನ್ ಡೇ:ಎಂದಿಗೂ ವಂಚಕ ಪ್ರೇಮಿಯಾಗದಿರಿ...!

|
Google Oneindia Kannada News

ವ್ಯಾಲೆಂಟೈನ್ ಡೇ ಮತ್ತೆ ಬಂದಿದೆ. ಹದಿಹರೆಯದ ಹೃದಯಗಳಲ್ಲಿ ಪ್ರೇಮದ ಕಾರಂಜಿ ಚಿಮ್ಮತೊಡಗಿದೆ. ತಮ್ಮದೇ ಪರಿದಿಯಲ್ಲಿ ಪ್ರೇಮ ಪೂಜೆಗೆ ಬಹುತೇಕರು ಅಣಿಯಾಗುತ್ತಿದ್ದರೆ, ಮತ್ತೆ ಕೆಲವರು ತಾವು ಇಷ್ಟಪಟ್ಟವರನ್ನು ಹೇಗೆ ಒಲಿಸಿಕೊಳ್ಳೋದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಹಾಗೆ ನೋಡಿದರೆ ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳು ಹೆಚ್ಚು ಜನಪ್ರಿಯವಾಗಿರುವ ಕಾರಣ ಪ್ರಪೋಸ್ ಮಾಡೋದಕ್ಕೆ ವ್ಯಾಲೆಂಟೈನ್ ಡೇಯನ್ನೇ ಕಾಯಬೇಕಾಗಿಲ್ಲ. ಪ್ರತಿ ದಿನವೂ ಅವರ ಪಾಲಿಗೆ ಪ್ರೇಮಿಗಳ ದಿನವಾಗಿ ಪರಿವರ್ತಿತಗೊಂಡಿದೆ. ಪ್ರವಾಸಿ ತಾಣಗಳು, ಪಾರ್ಕ್‌ಗಳಲ್ಲಿ ಎಲ್ಲ ದಿನಗಳಲ್ಲಿಯೂ ಜೋಡಿ ಜೋಡಿಯಾಗಿ ವಿಹರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಯಾರು ನೋಡಲಿ, ಬಿಡಲಿ ತಮ್ಮದೇ ಲೋಕದಲ್ಲಿ ಅವರು ವಿಹರಿಸುತ್ತಿರುತ್ತಾರೆ. ದಶಕಗಳ ಹಿಂದೆಗೆ ಹೋಲಿಸಿದರೆ ಈಗ ಎಲ್ಲವೂ ಬದಲಾಗಿದೆ. ಮೊದಲಿನಂತೆ ಗ್ರೀಟಿಂಗ್ಸ್ ಕಾರ್ಡ್ ಮೂಲಕ, ಗುಲಾಬಿ ಹೂ ನೀಡಿ ಪ್ರೇಮ ನಿವೇದನೆ ಮಾಡುವುದು ಮರೆತು ಹೋಗಿದೆ. ಈಗ ಏನಿದ್ದರೂ ವಾಟ್ಸಪ್, ಫೇಸ್ ಬುಕ್ ಮೂಲಕವೇ ಪ್ರೇಮ ಮೂಡುತ್ತದೆ.

ಪ್ರೇಮಿಗಳ ದಿನಕ್ಕಾಗಿ ಪ್ರೀತಿಯ ಅರ್ಥ ಸ್ಪುರಿಸುವ ಸಂದೇಶಗಳು ಪ್ರೇಮಿಗಳ ದಿನಕ್ಕಾಗಿ ಪ್ರೀತಿಯ ಅರ್ಥ ಸ್ಪುರಿಸುವ ಸಂದೇಶಗಳು

ಜತೆಗ ಬಹಳ ಬೇಗವೇ ಪ್ರೇಮಿಗಳಾಗುತ್ತಾರೆ. ಕದ್ದು ಮುಚ್ಚಿ ಒಬ್ಬರನೊಬ್ಬರು ಸೇರುತ್ತಿದ್ದವರು ಇದೀಗ ನಿರ್ಭಯವಾಗಿ ಜತೆಯಲ್ಲೇ ಓಡಾಡುವಂತಾಗಿದೆ. ನಮ್ಮನ್ನು ಯಾರಾದರೂ ನೋಡಿ ಬಿಟ್ಟಾರು ಎಂಬ ಭಯವೆಲ್ಲವೂ ದೂರವಾಗಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಜತೆ ಜತೆಯಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

Special article on Valentines Day

ಇಷ್ಟಕ್ಕೂ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯ ಭರದಲ್ಲಿ ನಮ್ಮ ಯುವ ಜನಾಂಗ ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿದೆಯಾ ಎಂಬ ಆತಂಕವೂ ಕಾಡದಿರದು. ಏಕೆಂದರೆ ಓದುವ ವಯಸ್ಸಿನಲ್ಲಿ ಅಪ್ರಾಪ್ತರೇ ಪ್ರೀತಿ ಪ್ರೇಮ ಅಂಥ ತಲೆಕೆಡಿಸಿಕೊಂಡು ಪಾರ್ಕ್ ಸಿನಿಮಾ ಅಂಥ ಸುತ್ತಾಡುತ್ತಿರುವುದು ಹೆತ್ತವರಲ್ಲಿ ಭಯವನ್ನು ಹುಟ್ಟುಹಾಕುವಂತೆ ಮಾಡಿದೆ. ಅಷ್ಟೇ ಅಲ್ಲ ವಿದ್ಯಾರ್ಥಿ ಜೀವನವನ್ನೇ ಬಲಿತೆಗೆದುಕೊಳ್ಳತೊಡಗಿದೆ. ಸಾಮಾಜಿಕ ಜಾಲಗಳು ಅಭಿವೃದ್ಧಿಯಾದ ಬಳಿಕ ಪ್ರೀತಿ, ಪ್ರೇಮಕ್ಕಿಂತ ಆಕರ್ಷಣೆ ಹೆಚ್ಚುತ್ತಿದೆ. ಹೊಸ ಪರಿಚಯ ತನ್ನತ್ತ ಆಕರ್ಷಿಸತೊಡಗಿದೆ. ಎಲ್ಲೋ ಒಂದು ಕಡೆ ಆರಂಭವಾಗುವ ಪರಿಚಯ ಕ್ರಮೇಣ ಪ್ರೀತಿ, ಪ್ರೇಮದ ಕಡೆಗೆ ತಿರುಗುತ್ತಿದೆ.

ಗುಲಾಬಿ ಕೊಡುವ ಹೃದಯಕ್ಕೆ ಪ್ರೀತಿಯ ಬರವಿದೆ..!ಗುಲಾಬಿ ಕೊಡುವ ಹೃದಯಕ್ಕೆ ಪ್ರೀತಿಯ ಬರವಿದೆ..!

ಪೂರ್ವಾಪರ ಅರಿಯದ ಜೀವಗಳಲ್ಲಿ ಒಂದಾಗುವ ತವಕವನ್ನು ಹುಟ್ಟು ಹಾಕಿ ಹಲವು ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದೆ. ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರೀತಿ ಪ್ರೇಮಗಳ ಬಲೆಯಲ್ಲಿ ಬಿದ್ದು, ಓದಿನತ್ತ ಆಸಕ್ತಿ ಕಳೆದುಕೊಂಡು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜತೆಗೆ ಯುವಜನಾಂಗ ದುಂದು ವೆಚ್ಚ ಮಾಡಲು ಹಣಕ್ಕಾಗಿ ಅಡ್ಡ ದಾರಿ ಹಿಡಿಯುತ್ತಿರುವ ಪ್ರಕರಣಗಳು ಬೆಳಕಿಗೆ ಬರತೊಡಗಿದೆ. ಇಷ್ಟಕ್ಕೂ ಇವತ್ತು ಹೆಚ್ಚಿನವರು ಆಕರ್ಷಣೆಯನ್ನೇ ಪ್ರೀತಿ ಎಂದು ನಂಬಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಬದುಕಿನಲ್ಲಿ ನೆಲೆ ನಿಂತವರಿಗೆ ಪ್ರೀತಿ ಎನ್ನುವುದು ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ನಿರ್ಮಿಸಿಕೊಂಡ ಸೇತುವೆ. ಅಂಥವರು ಮುಂದೆ ಸುಖ ದಾಂಪತ್ಯದ ಬದುಕನ್ನು ಕಂಡುಕೊಳ್ಳುತ್ತಾರೆ. ಆದರೆ ಆಕರ್ಷಣೆಯನ್ನೇ ಪ್ರೀತಿ ಎಂದು ಪರಿಭಾವಿಸಿದವರು ಭವಿಷ್ಯದ ಬದುಕನ್ನು ಮರೆತು ಕಷ್ಟಗಳನ್ನು ತಂದೊಡ್ಡಿಕೊಳ್ಳುತ್ತಾರೆ. ಪ್ರೀತಿ, ಪ್ರೇಮಗಳು ಸಿನಿಮಾದಲ್ಲಿ ನೋಡೋದಕ್ಕೆ ಚೆಂದವಾಗಿ ಕಾಣುತ್ತದೆ ಮತ್ತು ಅದರಿಂದ ಪ್ರೇರೇಪಣೆಗೊಂಡು ತಾವು ಕೂಡ ಅದೇ ಹಾದಿಯನ್ನು ಅನುಕರಣೆ ಮಾಡುವವರು ಇದ್ದಾರೆ.

ಪ್ರೇಮಿಗಳ ದಿನದಂದು ಜೀಕುತ್ತಿದೆ 'ಜೋಕು' ಜೋಕಾಲಿ!ಪ್ರೇಮಿಗಳ ದಿನದಂದು ಜೀಕುತ್ತಿದೆ 'ಜೋಕು' ಜೋಕಾಲಿ!

ಇಲ್ಲಿ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಸಿನಿಮಾ ಮತ್ತು ಬದುಕು ಬೇರೆ, ಬೇರೆಯೇ.. ಬದುಕೋದಕ್ಕೊಂದು ದಾರಿ ಕಂಡು ಕೊಂಡ ಬಳಿಕ ಪ್ರೀತಿ ಪ್ರೇಮದ ಬಗ್ಗೆ ಯೋಚಿಸಬೇಕು. ಅದನ್ನು ಹೊರತುಪಡಿಸಿ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೇಮದ ಹೊಳೆಯಲ್ಲಿ ಈಜಾಡಲು ಹೋದರೆ ಅಪಾಯ ತಪ್ಪಿದಲ್ಲ. ಇತ್ತೀಚೆಗಿನ ದಿನಗಳಲ್ಲಿ ಪ್ರೀತಿಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಧೈರ್ಯ ಕಳೆದುಕೊಂಡ ಹಲವರು ಆತ್ಮಹತ್ಯೆಗೂ ಶರಣಾಗಿರುವ ಘಟನೆಗಳು ಸಾಕ್ಷಿಯಾಗಿ ಉಳಿದಿವೆ.

ಮೊದಲು ಮದುವೆಯಾಗಲು ಪ್ರೀತಿಸುತ್ತಿದ್ದರು. ಈಗ ಮದುವೆಯ ಬಯಕೆಯಿಲ್ಲದೆ ಪ್ರೀತಿಸುತ್ತಾರೆ. ಬಳಿಕ ಮದುವೆಯಾಗುತ್ತೇನೆ ಎಂಬ ಆಮಿಷವೊಡ್ಡಿ ದೈಹಿಕವಾಗಿಯೂ ಬಳಸಿಕೊಂಡು ವಂಚಿಸುತ್ತಾರೆ. ಇಲ್ಲಿ ಯಾರು ಯಾರಿಗೆ ವಂಚಿಸುತ್ತಾರೆ ಎಂಬುದು ಮುಖ್ಯವಲ್ಲ. ಆದರೂ ವಂಚನೆಗೊಳಗಾಗುತ್ತಿರುವವರು ಹೆಣ್ಣುಮಕ್ಕಳೇ ಎಂಬುದನ್ನು ತಳ್ಳಿಹಾಕುವಂತಿಲ್ಲ. ನಮ್ಮ ದೇಶದಲ್ಲಿ ಪ್ರೀತಿ, ಪ್ರೇಮಕ್ಕೆ ಪವಿತ್ರ ಸ್ಥಾನ ನೀಡಲಾಗಿದೆ. ಇಂತಹ ಪ್ರೇಮವನ್ನು ಅಪವಿತ್ರಗೊಳಿಸುವ ಮುನ್ನ ಒಂದು ಕ್ಷಣ ಯೋಚಿಸಿ ಪ್ರೀತಿ ಹೆಸರಿನಲ್ಲಿ ವಂಚಿಸುವ ಇರಾದೆ ನಿಮ್ಮಲ್ಲಿದ್ದರೆ ದಯವಿಟ್ಟು ಬಿಟ್ಟು ಬಿಡಿ.. ಎಂದಿಗೂ ವಂಚಕ ಪ್ರೇಮಿಯಾಗದಿರಿ. ನಿಮ್ಮ ಪವಿತ್ರವಾದ ಪ್ರೇಮ ದಾಂಪತ್ಯ ಸಾಗರದತ್ತ ಸಾಗುವ ಹಡಗಾಗಲಿ..

English summary
In recent days social networking sites become more popular. So some boys and girls do not wait for Valentine's Day to propose.Here's a Valentine's Day special article on how young people are going.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X