ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳಾಂಗಣದಲ್ಲೂ ಹುಷಾರಾಗಿರಿ; ಉಗುಳಿನ ಕಣ ತಂದೀತು ಅಪಾಯ

|
Google Oneindia Kannada News

ವಾಷಿಂಗ್ಟನ್, ಜೂನ್ 10: ಕೊರೊನಾ ಸೋಂಕಿಗೆ ಕಾರಣವಾಗುವ SARS-Cov-2 ವೈರಸ್ ಹರಡುವಿಕೆ ಅಪಾಯ ಒಳಾಂಗಣದಲ್ಲಿಯೇ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನವೊಂದು ಪ್ರತಿಪಾದಿಸಿದೆ.

ಒಳಾಂಗಣದಲ್ಲಿ ವ್ಯಕ್ತಿಯು ಮಾಸ್ಕ್ ಧರಿಸದೇ ಮಾತನಾಡುವಾಗ ಹೊರಸೂಸುವ ಉಗುಳಿನ ಗಾತ್ರ ಹಾಗೂ ಸೋಂಕಿನ ಭಿನ್ನ ಪ್ರಮಾಣ ಗಾಳಿಯಲ್ಲಿ ಸಾಗಿ ಮತ್ತೊಬ್ಬರಿಗೆ ಅಪಾಯ ಉಂಟು ಮಾಡುವ ಪ್ರಮಾಣ ಒಳಾಂಗಣದಲ್ಲಿಯೇ ಹೆಚ್ಚಿರುತ್ತದೆ. ಹಾಗಾಗಿ ಒಳಾಂಗಣದಲ್ಲಿಯೂ ಜಾಗರೂಕವಾಗಿರುವುದು ಅವಶ್ಯಕ ಎಂದು ಜರ್ನಲ್ ಆಫ್ ಇಂಟರ್‌ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. ಮುಂದೆ ಓದಿ...

ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

 ಗಾಳಿಯಲ್ಲಿ ಉಗುಳಿನಲ್ಲಿನ ವೈರಸ್

ಗಾಳಿಯಲ್ಲಿ ಉಗುಳಿನಲ್ಲಿನ ವೈರಸ್

ವ್ಯಕ್ತಿಯು ಹೊರಸೂಸುವ ಮಧ್ಯಮ ಗಾತ್ರದ ಉಗುಳಿನ ಹನಿಗಳು ಕೆಲವು ನಿಮಿಷಗಳ ಕಾಲ ಗಾಳಿಯಲ್ಲಿ ಉಳಿಯುತ್ತವೆ. ಈ ಹನಿಗಳು ಗಾಳಿಯಲ್ಲಿ ಸಾಕಷ್ಟು ದೂರದವರೆಗೆ ಸಾಗಬಲ್ಲವಾಗಿರುತ್ತವೆ. ಹೀಗಾಗಿ ಮತ್ತೊಬ್ಬ ವ್ಯಕ್ತಿಯಲ್ಲಿ ಈ ಉಗುಳಿನಲ್ಲಿನ ವೈರಸ್ ತಗುಲುವ ಸಾಧ್ಯತೆಯೂ ಅಧಿಕವಾಗಿಯೇ ಇರುತ್ತದೆ ಎಂದು ಅಧ್ಯಯನ ಪ್ರತಿಪಾದಿಸಿದೆ.

ಸೋಂಕಿತನ ಎಂಜಲು ಹಾಗೂ ಸಿಂಬಳ ವೈರಸ್ ಹರಡುವಿಕೆಯ ಪ್ರಮುಖ ವಾಹಕಗಳಾಗಿದ್ದು, ಯಾವುದೇ ಲಕ್ಷಣಗಳಿಲ್ಲದ ಸೋಂಕಿತ ವ್ಯಕ್ತಿ ಸುಲಭವಾಗಿ ಈ ಮೂಲಕ ವೈರಸ್ ಹರಡಬಹುದಾಗಿದೆ. ಗಾಳಿ ಬೆಳಕು ಯಥೇಚ್ಛವಾಗಿರದ ಸ್ಥಳಗಳಲ್ಲಿ ಸೋಂಕು ಬೇಗನೇ ಹರಡುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು.
 ಶ್ವಾಸಕೋಶದ ಸೋಂಕಿನ ಅಪಾಯ ತರಬಹುದು

ಶ್ವಾಸಕೋಶದ ಸೋಂಕಿನ ಅಪಾಯ ತರಬಹುದು

ಒಳಾಂಗಣ ಪರಿಸರದಲ್ಲಿ ಉಗುಳಿನ ಹನಿಗಳು ಗಾಳಿಯಲ್ಲಿ ಅಧಿಕ ಮಟ್ಟದಲ್ಲಿ ಶೇಖರಣೆಯಾಗಬಲ್ಲವು. ಈ ಹನಿಯಲ್ಲಿನ ವೈರಸ್ ಗಂಭೀರ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನ ತಿಳಿಸಿದೆ.
ಸೋಂಕಿತರ ಎಂಜಲು ಅಥವಾ ಮೂಗಿನ ದ್ರವವು ಎರಡು ಮೀಟರ್ ಅಂತರದಲ್ಲಿ ನೆಲದ ಮೇಲೆ ಅಥವಾ ಇನ್ನಾವುದೇ ಮೇಲ್ಮೈಗೆ ಬಿದ್ದರೆ ಆ ಕಣಗಳು ಹತ್ತು ಮೀಟರ್‌ವರೆಗೂ ಗಾಳಿಯಲ್ಲಿ ಪಸರಿಸಬಲ್ಲವು ಎಂದು ಈಚೆಗೆ ಸರ್ಕಾರದ ಕೊರೊನಾ ಮಾರ್ಗಸೂಚಿಯಲ್ಲಿಯೂ ತಿಳಿಸಲಾಗಿತ್ತು.

ಉತ್ತಮ ಗಾಳಿ, ಬೆಳಕು ಇದ್ದರೆ ಕೊರೊನಾ ಹೆಚ್ಚಾಗಿ ಹರಡಲ್ವಂತೆ!ಉತ್ತಮ ಗಾಳಿ, ಬೆಳಕು ಇದ್ದರೆ ಕೊರೊನಾ ಹೆಚ್ಚಾಗಿ ಹರಡಲ್ವಂತೆ!

"ಉಗುಳಿನಲ್ಲಿ ವೈರಸ್ ಪ್ರಮಾಣ ಹೆಚ್ಚು

ಜನರು ಮಾತನಾಡುವಾಗ ಉಗುಳು ಹೊರಬರುವುದು ಸಹಜ. ಆದರೆ ಇವು ಸೂಕ್ಷ್ಮವಾಗಿರುತ್ತದೆ. ಜೊತೆಗೆ ಉಗುಳಿನಲ್ಲಿ ವೈರಸ್ ಪ್ರಮಾಣ ಅತಿಯಾಗಿರುತ್ತದೆ. ಹನಿ ಆವಿಯಾದರೂ ವೈರಸ್ ಆ ಸ್ಥಳದಲ್ಲಿ ಉಳಿದುಕೊಂಡಿರುತ್ತದೆ. ಗಾಳಿಯಲ್ಲಿ ಈ ವೈರಸ್ ತೇಲುತ್ತದೆ. ಇದು ಇತರರಿಗೆ ತಗುಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚರುತ್ತದೆ" ಎಂದು ಅಮೆರಿಕದ ಮಧುಮೇಹ, ಜೀರ್ಣಾಂಗ ಮತ್ತು ಮೂತ್ರಪಿಂಡ ಕಾಯಿಲೆಗಳ ರಾಷ್ಟ್ರೀಯ ಸಂಸ್ಥೆಯ ಲೇಖಕ ಆಡ್ರಿಯಾನ್ ಬಾಕ್ಸ್ ಹೇಳಿದ್ದಾರೆ.

 ಒಳಾಂಗಣದಲ್ಲಿ ವೈರಸ್ ಹರಡುವಿಕೆ ಹೆಚ್ಚು

ಒಳಾಂಗಣದಲ್ಲಿ ವೈರಸ್ ಹರಡುವಿಕೆ ಹೆಚ್ಚು

ಸೋಂಕು ಗಾಳಿಯಲ್ಲಿ ಹರಡುವುದಷ್ಟೇ ಅಲ್ಲ, ಒಳಾಂಗಣದಲ್ಲಿ ಮಾಸ್ಕ್‌ ಧರಿಸದೇ ಮಾತನಾಡುವುದು ಬೇರೆಯವರಿಗೂ ಅಪಾಯ ಉಂಟು ಎಂಬುದನ್ನು ಅಧ್ಯಯನ ಸಾಕ್ಷೀಕರಿಸಿದೆ. ಒಳಾಂಗಣದಲ್ಲಿ ಜನರು ಹತ್ತಿರ ಕುಳಿತು ಮಾತನಾಡುವುದು, ತಿನ್ನುವುದು, ಕುಡಿಯುವುದು ಸಾಮಾನ್ಯವಾಗಿರುತ್ತದೆ. ಹೋಟೆಲ್, ಬಾರ್, ರೆಸ್ಟೊರೆಂಟ್‌ಗಳು ಸಾಮಾನ್ಯವಾಗಿ ಒಳಾಂಗಣದಲ್ಲಿರುವುದರಿಂದ ವೈರಸ್‌ಗಳ ಹರುಡುವಿಕೆ ಅತಿ ವೇಗವಾಗಿರುತ್ತದೆ. ಇಂಥ ಸ್ಥಳಗಳಿಂದ ದೂರವುಳಿಯುವುದು ಒಳಿತು ಎಂದು ಸಲಹೆ ನೀಡಲಾಗಿದೆ.

English summary
Coronavirus more likely to spread indoors through maskless interaction says a research published in journal of internal medicine,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X