ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅಗ್ರ ಸುರಕ್ಷಿತ ರಾಷ್ಟ್ರಗಳು: ಈ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳಿವೆ?

|
Google Oneindia Kannada News

ನವದೆಹಲಿ, ಅಕ್ಟೋಬರ್‌ 17: ಈ ಕೊರೊನಾವೈರಸ್‌ ಸೋಂಕು ಸಂದರ್ಭದಲ್ಲಿ ನಾವು ಯಾವ ದೇಶಕ್ಕೆ ಹೋಗುವುದು ಸುರಕ್ಷಿತ ಎಂದು ಹಲವಾರು ಮಂದಿ ಯೋಚನೆ ಮಾಡುತ್ತಿರಬಹುದು. ಈ ಸಂದರ್ಭದಲ್ಲಿ ನಾವು ಯಾವ ದೇಶಕ್ಕೆ ಹೋಗುವುದು ಸುರಕ್ಷಿತ ಎಂಬ ಬಗ್ಗೆ ಸುದ್ದಿಯನ್ನು ಯುರೋಪಿಯನ್‌ ಸೆಂಟರ್‌ ಫಾರ್‌ ಡಿಸೀಸ್‌ ಪ್ರಿವೆಂಷನ್‌ ಆಂಡ್‌ ಕಂಟ್ರೋಲ್‌ (ಇಸಿಡಿಸಿ) ನೀಡಿದೆ.

ಯುರೋಪಿಯನ್‌ ಯೂನಿಯನ್(ಇಯು) ದೇಶಗಳ ಪೈಕಿ ಸ್ಪೇನ್‌, ಫ್ರಾನ್ಸ್‌, ಇಟಲಿ ಹಾಗೂ ಪೋಲ್ಯಾಂಡ್‌ ದೇಶಗಳು ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಸುರಕ್ಷಿತ ಎಂದು ಯುರೋಪಿಯನ್‌ ಸೆಂಟರ್‌ ಫಾರ್‌ ಡಿಸೀಸ್‌ ಪ್ರಿವೆಂಷನ್‌ ಆಂಡ್‌ ಕಂಟ್ರೋಲ್‌ (ಇಸಿಡಿಸಿ) ಹೇಳಿದೆ. ಈ ದೇಶಗಳಲ್ಲಿ ಅತೀ ಕಡಿಮೆ ಕೊರೊನಾ ವೈರಸ್‌ ಸೋಂಕು ಪ್ರರಕಣಗಳು ವರದಿ ಆಗುತ್ತಿದೆ ಎಂದು ಮಾಧ್ಯಮದ ವರದಿಗಳು ಹೇಳಿದೆ.

ಮಂಗಳೂರು; ಮಾಲ್, ಥಿಯೇಟರ್‌ಗೆ ಹೋಗಲು ವ್ಯಾಕ್ಸಿನ್ ಕಡ್ಡಾಯ!ಮಂಗಳೂರು; ಮಾಲ್, ಥಿಯೇಟರ್‌ಗೆ ಹೋಗಲು ವ್ಯಾಕ್ಸಿನ್ ಕಡ್ಡಾಯ!

ಸ್ಪೇನ್‌, ಫ್ರಾನ್ಸ್‌, ಇಟಲಿ ಹಾಗೂ ಪೋಲ್ಯಾಂಡ್‌ ದೇಶಗಳಲ್ಲಿ ಕಡಿಮೆ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿ ಆಗಿದೆ ಎಂದು ಸಂಶೋಧನೆಯು ಹೇಳಿದೆ. ಒಂದು ಲಕ್ಷ ಜನರ ಪೈಕಿ 50 ಕ್ಕೂ ಕಡಿಮೆ ಕೊರೊನಾ ವೈರಸ್‌ ಪ್ರಕರಣಗಳು ವರದಿ ಆಗಿದೆ. ಕಳೆದ ಎರಡು ವಾರಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಪಾಸಿಟಿವಿಟಿ ಪ್ರಮಾಣವು ನಾಲ್ಕು ಶೇಕಡಕ್ಕಿಂತ ಕಡಿಮೆ ಇದೆ. ಹಾಗಾದರೆ ನೀವು ಯಾವೆಲ್ಲಾ ದೇಶಗಳಿಗೆ ನೀವು ಭೇಟಿ ನೀಡುವುದು ಸುರಕ್ಷಿತ, ಆ ದೇಶಗಳ ಪೈಕಿ ಯಾವ ಪ್ರದೇಶಕ್ಕೆ ನೀವು ಭೇಟಿ ನೀಡುವುದು ಸುರಕ್ಷಿತ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ...

Spain, France Are Top Safest Countries in The World

ಯಾವ ಪ್ರದೇಶಕ್ಕೆ ನೀವು ಭೇಟಿ ನೀಡುವುದು ಸುರಕ್ಷಿತ?

* ಇಟಲಿ: ಅಕ್ವಿಲಾ, ಮೊಲಿಸಾ, ಅಬ್ರೂಜು, ಉಂಬಿರಿಯಾ, ಸರ್ದೇನಿಯಾ, ಪೀಡ್‌ಮಾಂಟ್, ಲಿಗುರಿಯಾ, ಲೊಂಬಾರ್ಡಿ, ಫ್ರಿಯುಲಿ-ವೆನೆಜಿಯಾ ಗಿಯುಲಿಯಾ
* ಫ್ರಾನ್ಸ್‌: ಬ್ರೆಟೇನ್, ನಾರ್ಮಂಡಿ, ಹಾಟ್ಸ್-ಡಿ-ಫ್ರಾನ್ಸ್, ಗ್ರ್ಯಾಂಡ್ ಎಸ್ಟೇಟ್, ಬೌರ್ಗೊನ್-ಫ್ರಾಂಚೆ-ಕಾಮೆಟ್, ಸೆಂಟರ್-ವಾಲ್ ಡಿ ಲೊಯಿರ್, ನೌವೆಲ್ಲೆ-ಅಕ್ವಿಟೈನ್
* ಸ್ಪೇನ್‌: ಗೆಲಿಸಿಯಾ, ಅಸ್ತೂರಿಯಸ್, ಕ್ಯಾಸ್ಟೈಲ್ ಆಂಡ್‌ ಲಿಯಾನ್, ಎಕ್ಸ್‌ಟ್ರೆಮದುರಾ, ಆಂಡಲೂಸಿಯಾ, ಲಾ ರಿಯೋಜಾ, ನವರೆ, ಮುರ್ಸಿಯಾ, ವೆಲೆನ್ಸಿಯಾ
* ಪೋಲ್ಯಾಂಡ್‌: ಪೊಮೆರೇನಿಯನ್, ಕುಯಾವಿಯಾ-ಪೊಮೆರೇನಿಯಾ, ಗ್ರೇಟರ್ ಪೋಲೆಂಡ್, ಲುಬುಜ್, ಲೋವರ್ ಸಿಲೇಸಿಯಾ, ಒಪೋಲ್ ಸಿಲೇಸಿಯಾ, ಕಡಿಮೆ ಪೋಲೆಂಡ್, ಸಬ್‌ಕಾರ್ಪತಿ, ಹೋಲಿ ಕ್ರಾಸ್ ಪ್ರಾಂತ್ಯ, ಲಾಡ್ಜ್

ದೀಪಾವಳಿ ಸಮಯದಲ್ಲೂ ಭಕ್ತಾದಿಗಳಿಗೆ ಜಗನ್ನಾಥನ ದರ್ಶನ ಭಾಗ್ಯವಿಲ್ಲದೀಪಾವಳಿ ಸಮಯದಲ್ಲೂ ಭಕ್ತಾದಿಗಳಿಗೆ ಜಗನ್ನಾಥನ ದರ್ಶನ ಭಾಗ್ಯವಿಲ್ಲ

ಇನ್ನು ಈ ದೇಶಗಳಿಗೆ ಹೋಗುವ ಪ್ರಯಾಣಿಕರು ಕೋವಿಡ್‌ ಪರೀಕ್ಷೆಗೆ ಒಳಗಾಗುವುದು ಹಾಗೂ ಸ್ವಯಂ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿಲ್ಲ. ಹಾಗಾಗಿ ಜನರು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ತಮ್ಮ ಚಳಿಗಾಳದ ರಜೆಯನ್ನು ಕಳೆಯಬಹುದಾಗಿದೆ. ಇನ್ನು ಈ ಮೇಲೆ ತಿಳಿಸಿದ ರಾಷ್ಟ್ರಗಳು ತಮ್ಮ ದೇಶದಲ್ಲಿ ಕೊರೊನಾ ವೈರಸ್‌ ವಿರುದ್ಧವಾಗಿ ಲಸಿಕೆ ನೀಡುವ ಅಭಿಯಾನವನ್ನು ಕೂಡಾ ಯಶಸ್ವಿಯಾಗಿ ನಡೆಸಿದೆ. ಈ ದೇಶಗಳ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುವ ಸಮದರ್ಭದಲ್ಲಿ ಪ್ರಯಾಣಿಕರು ಆರೋಗ್ಯ ಪಾಸ್‌ ಅನ್ನು ಹೊಂದಿರುವುದು ಮುಖ್ಯ. ಇದನ್ನು ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ರೂಪಕ್ಕೆ ತರಲಾಗಿದೆ. ಆದರೆ ನೀವು ಆ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ಇರುವ ನಿಯಮದ ಬಗ್ಗೆ ತಿಳಿಯುವುದನ್ನು ಮರೆಯಬೇಡಿ.

Spain, France Are Top Safest Countries in The World

ಈ ನಡುವೆ ಭಾರತದ ಪರಿಸ್ಥಿತಿಯು ವಿಭಿನ್ನವಾಗಿದೆ. ನವೆಂಬರ್‌ 15 ರಿಂದ ಭಾರತಕ್ಕೆ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ಭಾರತವು ಅವಕಾಶ ನೀಡಿದೆ. ಮಾರ್ಚ್ 2020 ರಿಂದ ಭಾರತದಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದು, ಭಾರತಕ್ಕೆ ವಿದೇಶಿ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ವಿದೇಶಿಗರು ಭಾರತಕ್ಕೆ ಬಂದ ಬಳಿಕ ಕ್ವಾರಂಟೈನ್‌ಗೆ ಒಳಗಾಗಬೇಕೇ?, ಸಂಪೂರ್ಣವಾಗಿ ಕೊರೊನಾ ವೈರಸ್‌ ಲಸಿಕೆ ಹಾಕಿಸಿಕೊಳ್ಳಬೇಕೇ? ಅಥವಾ ಕೋವಿಡ್‌ ನೆಗೆಟಿವ್‌ ವರದಿಯನ್ನು ಹೊಂದಿರಬೇಕೇ? ಎಂಬುವುದು ಈವರೆಗೂ ಸ್ಪಷ್ಟವಾಗಿಲ್ಲ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ಪ್ರವಾಸೋದ್ಯಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಪ್ರಯಾಣ ನಿರ್ಬಂಧವನ್ನು ಸಡಿಲಿಕೆ ಮಾಡುವುದರಿಂದ ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಏರಿಕೆಗೆ ಕಾರಣವಾಗಬಹುದು ಎಂಬುವುದು ಈ ಆತಂಕಕ್ಕೆ ಕಾರಣವಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Spain, France Are Top Safest Countries in The World, Where Does India Stand?. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X