ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಗೆ ಬರುತ್ತಿದೆ ಸ್ಪೇಸ್ ಎಕ್ಸ್ ನೌಕೆ..!

By ಅನಿಕೇತ್
|
Google Oneindia Kannada News

ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಆಶಯ ಮೂಡಿಸಿರುವ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಇದೇ ವರ್ಷದ ಮೇ. 30ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಲಾಂಚ್ ಆಗಿದ್ದ 'ಫಾಲ್ಕನ್-9' ನೌಕೆ ಇಡೀ ಜಗತ್ತಿನ ಗಮನ ಸೆಳೆದಿತ್ತು.

ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಐಎಸ್‌ಎಸ್‌ ತಲುಪುವ ಮೂಲಕ ಬಾಹ್ಯಾಕಾಶ ಲೋಕದಲ್ಲಿ ಹೊಸ ಅಧ್ಯಯನ ಆರಂಭಿಸಿತ್ತು. ಇತಿಹಾಸದಲ್ಲಿ ಪ್ರಥಮ ಬಾರಿಗೆ ಖಾಸಗಿ ಸಂಸ್ಥೆಯೊಂದು ರಾಕೆಟ್ ಉಡಾವಣೆ ಮಾಡಿದ ಕೀರ್ತಿಗೆ ಪಾತ್ರವಾಗಿತ್ತು ಸ್ಪೇಸ್ ಎಕ್ಸ್.

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಸ್ಪೇಸ್‌ಎಕ್ಸ್ ಯಶಸ್ವಿಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಸ್ಪೇಸ್‌ಎಕ್ಸ್ ಯಶಸ್ವಿ

ಇದೀಗ ಇದನ್ನೂ ಮೀರಿ ಮತ್ತೊಂದು ದಾಖಲೆ ಮಾಡಲು ಸ್ಪೇಸ್ ಎಕ್ಸ್ ಸಜ್ಜಾಗಿದೆ. 'ಫಾಲ್ಕನ್-9' ನೌಕೆ ಹೊತ್ತು ಸಾಗಿದ್ದ 'ಕ್ರೀವ್ ಡ್ರ್ಯಾಗನ್' ಕ್ಯಾಪ್ಸೂಲ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟಿದೆ. ಈ ಬಾಹ್ಯಾಕಾಶ ನೌಕೆ ಭೂಮಿ ತಲುಪಲು ಕ್ಷಣಗಣನೆ ಆರಂಭವಾಗಿದೆ. ಆದರೆ ಈ ಸಾಹಸಕ್ಕೆ ಪ್ರಾಕೃತಿಕ ವಿಕೋಪ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.

7 ತೀರಗಳಲ್ಲಿ ಸಕಲ ಸಿದ್ಧತೆ

7 ತೀರಗಳಲ್ಲಿ ಸಕಲ ಸಿದ್ಧತೆ

ಭೂಮಿಗೆ ಮರಳುತ್ತಿರುವ ಸ್ಪೇಸ್ ಎಕ್ಸ್ ನಿರ್ಮಿತ ‘ಫಾಲ್ಕನ್-9' ನೌಕೆಯಲ್ಲಿ ಇಬ್ಬರು ನಾಸಾ ಸಂಸ್ಥೆಗೆ ಸೇರಿದ ಗಗನಯಾನಿಗಳು ಇದ್ದಾರೆ. ರಾಬರ್ಟ್ ಬೆಹ್ನ್ಕೆನ್ ಮತ್ತು ಡೌಗ್ಲಾಸ್ ಹರ್ಲಿ ‘ಕ್ರೂ ಡ್ರ್ಯಾಗನ್' ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದಾರೆ. ಇನ್ನು ‘ಕ್ರೂ ಡ್ರ್ಯಾಗನ್'ಗಾಗಿ ಫ್ಲೋರಿಡಾದಲ್ಲಿ 7 ಸಂಭಾವ್ಯ ಸ್ಪ್ಲಾಶ್‌ಡೌನ್ ತಾಣಗಳನ್ನು ಗುರುತಿಸಲಾಗಿದೆ. ಪೆನ್ಸಕೋಲಾ, ಟ್ಯಾಂಪಾ, ತಲ್ಲಹಸ್ಸಿ, ಪನಾಮ ಸಿಟಿ, ಕೇಪ್ ಕೆನವೆರಲ್, ಡೇಟೋನಾ ಸೇರಿದಂತೆ ಜಾಕ್ಸನ್‌ವಿಲ್ಲೆ ತೀರಗಳು ಇದಕ್ಕಾಗಿ ಸಂಪೂರ್ಣ ಸಜ್ಜಾಗಿವೆ.

ಮರಳಿ ಬರುವುದೇ ದೊಡ್ಡ ಸಾಹಸ..!

ಮರಳಿ ಬರುವುದೇ ದೊಡ್ಡ ಸಾಹಸ..!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ಕೊಟ್ಟು ಭೂಮಿಗೆ ಮರಳುತ್ತಿರುವ ಇಬ್ಬರೂ ಗಗನಯಾನಿಗಳ ಮುಂದೆ ಬಹುದೊಡ್ಡ ಸವಾಲು ಎದುರಾಗಲಿದೆ. ‘ಐಎಸ್‌ಎಸ್'ನಿಂದ ಈಗಾಗಲೇ ಬೇರ್ಪಟ್ಟಿರುವ ‘ಫಾಲ್ಕನ್-9' ನೌಕೆ ಭೂಮಿಯತ್ತ ಸಾಗುತ್ತಿದೆ. ಆದರೆ ಯಾವಾಗ ಭೂಮಿಗೆ ಮರಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನೌಕೆ ಭೂಮಿಗೆ ಮರಳುವ ಸಮಯ ಹವಾಮಾನದ ಮೇಲೆ ನಿರ್ಧಾರವಾಗಲಿದೆ. ಗರಿಷ್ಠ 30 ಗಂಟೆವರೆಗೂ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ನೌಕೆ ಲಾಂಚ್ ಮಾಡುವುದಕ್ಕಿಂತ ಲ್ಯಾಂಡ್ ಮಾಡುವುದೇ ದೊಡ್ಡ ಸವಾಲಾಗಿರುತ್ತದೆ.

ಸುರಕ್ಷಿತವಾಗಿ ಮಂಗಳನ ಕಕ್ಷೆ ಸೇರಿದ ವಿಶ್ವದ ಶಕ್ತಿಶಾಲಿ ರಾಕೆಟ್ಸುರಕ್ಷಿತವಾಗಿ ಮಂಗಳನ ಕಕ್ಷೆ ಸೇರಿದ ವಿಶ್ವದ ಶಕ್ತಿಶಾಲಿ ರಾಕೆಟ್

17,500 ಮೈಲು ವೇಗ..!

17,500 ಮೈಲು ವೇಗ..!

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಒಂದೇ ರಾಕೆಟ್‌ನಲ್ಲಿ ಹೊರಡುವ ಗಗನಯಾತ್ರಿಗಳು, ಭೂಕಕ್ಷೆ ಪ್ರವೇಶಿಸುತ್ತಿದ್ದಂತೆ ಕ್ಯಾಪ್ಸೂಲ್‌ ಅನ್ನು ಮುಖ್ಯ ರಾಕೆಟ್‌ನಿಂದ ಬೇರ್ಪಡಿಸುತ್ತಾರೆ. ನಂತರ ಕ್ಯಾಪ್ಸೂಲ್‌ ಇಂಜಿನ್‌ ಉರಿಸಿ ಸಮುದ್ರ ತೀರ ಸೇರುತ್ತಾರೆ. ಭೂಕಕ್ಷೆಗೆ ಎಂಟ್ರಿ ಕೊಡುತ್ತಿದ್ದಂತೆ ಕ್ಯಾಪ್ಸೂಲ್ ಗಂಟೆಗೆ 17,500 ಮೈಲು ವೇಗ ಪಡೆಯಲಿದೆ. ಆಗ ನೌಕೆ ಗರಿಷ್ಠ 3,500 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನ ತಡೆದುಕೊಳ್ಳವಷ್ಟು ಶಕ್ತವಾಗಿರಲಿದೆ.

ಗಗನಯಾತ್ರಿ ಸಹಿತ ರಾಕೆಟ್ ಹಾರಾಟಕ್ಕೆ ಸಮಯ ನಿಗದಿಗೊಳಿಸಿದ ನಾಸಾಗಗನಯಾತ್ರಿ ಸಹಿತ ರಾಕೆಟ್ ಹಾರಾಟಕ್ಕೆ ಸಮಯ ನಿಗದಿಗೊಳಿಸಿದ ನಾಸಾ

ಹವಾಮಾನದ ಮೇಲೆ ನಿರ್ಧಾರ

ಹವಾಮಾನದ ಮೇಲೆ ನಿರ್ಧಾರ

ಡ್ರ್ಯಾಗನ್ ಎಂಡೀವರ್ 2 ಸೆಟ್ ಪ್ಯಾರಾಚೂಟ್‌ ಹೊಂದಿದ್ದು, ಸ್ಪ್ಲಾಶ್‌ಡೌನ್‌ಗೆ ಮೊದಲು ಕ್ಯಾಪ್ಸೂಲ್ ವೇಗ ಕಡಿಮೆ ಮಾಡುತ್ತವೆ. ಲ್ಯಾಂಡಿಂಗ್‌ಗೆ ಮುನ್ನ 6,000 ಅಡಿ ಎತ್ತರದಲ್ಲಿ 2ನೇ ಪ್ಯಾರಾಚೂಟ್ ತೆರೆದು ಕ್ಯಾಪ್ಸೂಲ್ ವೇಗವನ್ನು ಗಂಟೆಗೆ 350 ಮೈಲಿಗೆ ತಗ್ಗಿಸಲಿದೆ. ಎಲ್ಲವೂ ನೌಕೆ ಭೂಮಿಗೆ ಮರಳುವ ಸಮಯ ಹವಾಮಾನದ ಮೇಲೆ ನಿರ್ಧಾರವಾಗಲಿದೆ ಹಾಗೂ ಸಂಭಾವ್ಯ ಸ್ಪ್ಲಾಶ್‌ಡೌನ್ ತಾಣಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

SpaceX ನ ಚಂದ್ರಯಾನಕ್ಕೆ ರೆಡಿಯಾದ ಜಪಾನಿನ ಶ್ರೀಮಂತ ಉದ್ಯಮಿSpaceX ನ ಚಂದ್ರಯಾನಕ್ಕೆ ರೆಡಿಯಾದ ಜಪಾನಿನ ಶ್ರೀಮಂತ ಉದ್ಯಮಿ

English summary
SpaceX Crew Dragon spacecraft undocked from International Space Station with 2 US astronauts. But beginning their journey back to Earth despite a storm threatening Florida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X