ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರದ ವಿಶೇಷ: ಬಾಹ್ಯಾಕಾಶ ಟೂರಿಸಂಗೆ ಸಕತ್ ಡಿಮ್ಯಾಂಡ್!

|
Google Oneindia Kannada News

'ಅಪೊಲೊ' ಹಾಗೂ 'ಸ್ಪೇಸ್ ಶೆಟಲ್' ನಾಸಾದ ಎರಡು ಪ್ರಮುಖ ಬಾಹ್ಯಾಕಾಶ ನೌಕೆಗಳು. ನಾಸಾ ಹಲವು ವರ್ಷಗಳಿಂದ ರಾಕೆಟ್, ಬ್ಯಾಹಾಕಾಶ ಮಿಷನ್‌ಗಳ ಕಾರ್ಯಾಚರಣೆಯನ್ನು ಮಾಡುತ್ತಲೇ ಬರುತ್ತಿದೆ. ಭಾರತದಲ್ಲಿ 'ಚಂದ್ರಯಾನ'ದಂತೆ ಅಮೆರಿಕಾದ ನಾಸಾ ಸದ್ಯ 'ಮಂಗಳ'ದ ಅಂಗಳದಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಆ ಮೂಲಕ ಜಗತ್ತಿನ ಗಮನವನ್ನು ಮತ್ತೆ ಸೆಳೆದಿದೆ.

Recommended Video

ಅಂತರಿಕ್ಷಕ್ಕೆ ಹೋಗಿ ಬಂದ ಅನುಭವ ಹಂಚಿಕೊಂಡ ಜೆಫ್ ಬೆಜೋಸ್ | Oneindia Kannada

''ಕೆಲವರಿಗೆ ಸ್ವಿಜರ್‌ಲ್ಯಾಂಡ್‌ಗೆ ಹೋಗಬೇಕು, ಸಾಗದೊಳಗೆ ಈಜಬೇಕು, ಅರಣ್ಯಕ್ಕೆ ಹೋಗಬೇಕು,'' ಎಂಬ ಕ್ರೇಜ್ ಇರುತ್ತದೆ. ಅದರಂತೆ ಸದ್ಯ 'ಕರ್ಮಶಿಯಲ್ ಬಾಹ್ಯಾಕಾಶ ಪ್ರವಾಸ' ಮಾಡಬೇಕೆಂಬ ಕ್ರೇಜ್ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ಅದಕ್ಕಾಗಿ ಖಾಸಗಿ ಕಂಪನಿಗಳು ಬಾಹ್ಯಾಕಾಶದಲ್ಲಿ ಪ್ರವಾಸ ಮಾಡಿಸುವ ಆರ್‌ಗಳನ್ನು ನೀಡುತ್ತಿವೆ. ಯಾರ ಬಳಿ ಹೆಚ್ಚು ರಾಕೆಟ್, ಮಿಷನ್‌ಗಳು ಇವೆಯೋ ಆ ಕಂಪನಿ ಬಾಹ್ಯಾಕಾಶ ಯಾನಕ್ಕೆ ಸೂಕ್ತ ಆಯ್ಕೆ ಎಂಬ ಅಭಿಪ್ರಾಯವೂ ಎಲ್ಲೆಡೆ ಕೇಳಿ ಬರುತ್ತಿದೆ. ಸದ್ಯ ಮೂರು ಪ್ರಮುಖ ಕಂಪನಿ ಮಾಲೀಕರು ಈ ವಿಷಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ.

ಅದರಲ್ಲಿ ಒಬ್ಬರೆಂದರೆ ವರ್ಜಿನ್ ಗ್ಯಾಲಕ್ಟಿಕ್‌ನ ಸಂಸ್ಥಾಪಕ ಬ್ರಿಟಿಷ್ ಉದ್ಯಮಿ ರಿಚರ್ಡ್ ಬ್ರಾನ್ಸನ್. ಸದ್ಯ ಈ ಕಂಪನಿಯ ಐವರು ಸಿಬ್ಬಂದಿ ರಾಕೆಟ್‌ನಲ್ಲಿ ಬಾಹ್ಯಾಕಾಶದ ಆರ್ಬಿಟ್ ಲೈನ್' ಅನ್ನು ಯಶಸ್ವಿಯಾಗಿ ಮುಟ್ಟಿ ಬಂದಿದ್ದಾರೆ. 50 ಮೈಲಿ ಸಾಗಿಬಂದಿದ್ದಾರೆ. ಇದು ಅಮೆರಿಕಾ ಗುರುತಿಸಿರುವ ಭೂಮಿ ಹಾಗೂ ಬಾಹ್ಯಾಕಾಶದ ಗಡಿಯಾಗಿದೆ. ಆ ಮೂಲಕ ರಿಚರ್ಡ್ ಬ್ರಾನ್ಸನ್ ತನ್ನ ಸಹವರ್ತಿ ಬಿಲಿಯನೇರ್ ಜೆಜ್ ಬೆಜೋಸ್ ಅವರನ್ನು ಬಾಹ್ಯಾಕಾಶ ಸ್ಪರ್ಧಿಯಲ್ಲಿ ಸೋಲಿಸಿದ್ದಾನೆ. ಈ ಘಟನೆಯಾದ ನಂತರ ಇಲ್ಲಿಯವರೆಗೆ ಒಂದೂವರೆ ಗಂಟೆ ಪ್ರಯಾಣಕ್ಕೆ 600 ಬುಕ್ಕಿಂಗ್‌ಗಳು ಬಂದಿವೆ. ಒಬ್ಬರಿಗೆ ಎರಡೂವರೆ ಲಕ್ಷ ಡಾಲರ್ ಇದಕ್ಕೆ ನಿಗದಿಯಾಗಿರುವ ಮೊತ್ತ.

ಮತ್ತೊಬ್ಬರೆಂದರೆ ಬೆಜೋಸ್ ತನ್ನದೇ ಎಲ್ಎಲ್ಸಿಯ ರಾಕೆಟ್‌ನಲ್ಲಿ ಬಾಹ್ಯಾಕಾಶ ಸಾಹಸವನ್ನು ಕೈಗೊಳ್ಳಲು ಯೋಜಿಸಿದ್ದಾನೆ. ಬಿಡ್ಡರ್ ಒಬ್ಬ ಬೆಜೋಸ್ ಜೊತೆ ಕೈಜೋಡಿಸಿದ್ದಾನೆ. ಬೆಜೋಸ್ ಸಹೋದರ ಮಾರ್ಕ್ ಮತ್ತು ಗಗನಯಾತ್ರಿ ಜೊತೆ ಖಾಸಗಿ ವ್ಯಕ್ತಿಯೊಬ್ಬ ಯಾತ್ರೆಗೆ ಹೋಗಲು ಸಿದ್ಧತೆ ನಡೆಸಿದ್ದರು. 11 ನಿಮಿಷಗಳ ಸವಾರಿಗಾಗಿ ಪ್ರತಿಯೊಬ್ಬರು 28 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ. ಆದರೆ, ರಾಕೆಟ್ ಓಡಿಸಬೇಕಿದ್ದ ಬಿಡ್ಡರ್ ಕೊನೆಯ ಗಳಿಗೆಯಲ್ಲಿ ಹೋಗುವುದು ರದ್ದಾಗುತ್ತದೆ. ಬದಲಿಗೆ 18 ವರ್ಷದ ಬಿಡ್ಡರ್ ಮಗ ಅವನ ಸ್ಥಾನವನ್ನು ತುಂಬುತ್ತಾನೆ.

Provided by Deutsche Welle

ಮೂರನೇಯವನು ಎಲೋನ್ ಮಸ್ಕ್ ಎಂಬಾತ ಸ್ಪೇಸ್‌ಎಕ್ಸ್ ಎಂಬ ಕಂಪನಿ ಇಟ್ಟುಕೊಂಡಿದ್ದಾನೆ. ಹೂಸ್ಟನ್ ಮೂಲದ ಆಕ್ಸಿಯಾಮ್ ಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾನೆ. ಆ ಒಪ್ಪಂದದ ಪ್ರಕಾರ ಮೂವರು ನಾಗರಿಕರು, ಮಾಜಿ ನಾಸಾ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತೀರ್ಮಾನವಾಗಿದೆ. ಇದಕ್ಕಾಗಿ ಪ್ರಯಾಣಿಕರು ಅಲ್ಲಿ ಹೋಗಿ ಹಾರಾಟ ಮಾಡಿ ವಾಸ್ತವ್ಯ ಹೂಡಲು 55 ಮಿಲಿಯನ್ ಪಾವತಿಸುತ್ತಿದ್ದಾರೆ. ಮುಂದಿನ ವರ್ಷ ಆರಂಭದಲ್ಲಿ ಈ ಅಂತರರಾಷ್ಟ್ರೀಯ ಬಾಹ್ಯಾಕಾಶ ಯಾನ ಆರಂಭಗೊಳ್ಳಲಿದೆ.

ಬಾಹ್ಯಾಕಾಶ ಪ್ರವಾಸೋದ್ಯಮದಿಂದ ಪರಿಸರದ ಮೇಲೆ ಆಗುವ ಪರಿಣಾಮವೇನು?
ಈ ಮೂವರು ಕೋಟ್ಯಾಧಿಪತಿಗಳು ತಮ್ಮ ತಮ್ಮ ಕಂಪನಿಗಳಿಂದ ಬಾಹ್ಯಾಕಾಶ ಪ್ರವಾಸವನ್ನು ಮಾಡುವುದಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಬಾಹ್ಯಾಕಾಶ ಪ್ರವಾಸವನ್ನು ಪ್ರಾರಂಭಿಸುತ್ತಿರುವವರಲ್ಲಿ ಇವರೇ ಮೊದಲಿಗರಲ್ಲ. 20 ವರ್ಷದ ಹಿಂದೆ ಅಂದರೆ 2021ರ ಏಪ್ರಿಲ್ 28ರಂದು ಅಮೆರಿಕದ ಎಂಜಿನಿಯರ್ ಡೆನ್ನಿಸ್ ಟಿಟೊ ಬಾಹ್ಯಾಕಾಶದಲ್ಲಿ ಯಾನ ನಡೆಸಲು 20 ಮಿಲಿಯನ್ ಡಾಲರ್ ಅನ್ನು ರಷ್ಯಾದ ಕಂಪನಿಯೊಂದಕ್ಕೆ ನೀಡಿದ್ದನು. ಅಲ್ಲದೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ನಾಗರಿಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. 2001ರಲ್ಲಿ ಅಷ್ಟು ಜನರನ್ನು ತಲುಪಲು ಸಾಧ್ಯವಾಗದ ಬಾಹ್ಯಾಕಾಶ ಪ್ರವಾಸೋದ್ಯಮ ಇದೀಗ ಎಲ್ಲರನ್ನೂ ಮುಟ್ಟುತ್ತಿದ್ದೆ. ಇದಕ್ಕೆ ಆಶ್ಚರ್ಯಪಡುವ ಅಗತ್ಯ ಇಲ್ಲ. ಬಾಹ್ಯಾಕಾಶ ಯಾನ ಕೈಗೊಳ್ಳುವಾಗ ಸೂರ್ಯನಿಂದ ಹಾನಿಕಾರಕ ವಿಕಿರಣಕ್ಕೆ ಮನುಷ್ಯ ತುತ್ತಾಗಬಹುದು. ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ಮನುಷ್ಯನಿಗೆ ಆರೋಗ್ಯದ ಸಮಸ್ಯೆ ಎದುರಾಗುವ ಜೊತೆಗೆ ಪ್ರಕೃತಿ ಮೇಲೆ ಏನು ಪರಿಣಾಮ ಉಂಟು ಮಾಡಬಹುದು ಎಂಬುದರ ಬಗ್ಗೆಯೂ ಆಲೋಚಿಸಬೇಕಿದೆ.

Provided by Deutsche Welle

ಲಂಡನ್ ವಿಶ್ವವಿದ್ಯಾಲಯದ ಭೌಗೋಳಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಲೋಯಿಸ್ ಮಾರೈಸ್ ಪ್ರಕಾರ, ಈ ರೀತಿ ಬಾಹ್ಯಾಕಾಶ ಯಾನ ಕೈಗೊಳ್ಳುವುದರಿಂದ ಓಜೋನ್ ಪದರ ಸವೆಯುವ ಆತಂಕವೂ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸೂರ್ಯನ ಹಾನಿಕಾರಕ ವಿಕಿರಣಗಳಿಂದ ನಮಗೆ ಓಜೋನ್ ಪದರ ರಕ್ಷಣೆ ಒದಗಿಸಿದೆ. ಹಾಗಾಗಿ ರಾಕೆಟ್, ಮಿಷನ್ ಯಾನದಿಂದ ಓಜೋನ್ ಪದರದ ಸ್ಥಿತಿ ಏನಾಗಬಹುದು ಎಂಬ ಭಯವೂ ಇದೆ. ಸದ್ಯ ಮೂರು ಕಂಪನಿಗಳ ರಾಕೆಟ್‌ನಲ್ಲಿ ಎರಡು ಕಂಪನಿಗಳಲ್ಲಿ ಕ್ಲೋರಿನ್ ಇಲ್ಲಘಿ.

ಆದರೆ ಸಾರಜನಕ ಆಕ್ಸೈಡ್‌ಗಳನ್ನು ಉತ್ಪಾದಿಸುವ ಇತರ ಘಟಕಗಳನ್ನು ಹೊಂದಿವೆ. ಇದು ಮೇಲೆ ಹೋದಂತೆ ಓಜೋನ್ ಪದರವನ್ನು ಹರಿಯುತ್ತ ಬರುತ್ತದೆ ಎಂದು ತಿಳಿಸಿದ್ದಾರೆ. ವಾಣಿಜ್ಯದ ಉದ್ದೇಶದಿಂದ ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಕಳುಹಿಸುವುದರಿಂದ ಏನೆಲ್ಲಾ ಸಮಸ್ಯೆ ಆಗಬಹುದು ಎಂಬುದರ ಬಗ್ಗೆ ಎಲೋಯಿಸ್ ಮಾರೈಸ್ ಸಂಶೋಧನೆ ನಡೆಸಿದ್ದಾರೆ. ಅವರ ಸಂಶೋಧನೆ ಪ್ರಕಾರ ಓಜೋನ್ ಪದರಕ್ಕೆ ಹಾನಿ ಉಂಟಾಗಲಿದೆ ಎಂಬುದನ್ನು ತಿಳಿಸಿದ್ದಾರೆ.

ಮುಂದಿನ ವಾರ ಬ್ಲೂ ಆರಿಜಿನ್ ಕಂಪನಿಯವರು ಒಂದು ರಾಕೆಟ್ ಅನ್ನು ಉಡಾವಣೆ ಮಾಡುತ್ತಿದ್ದಾರೆ. ಆದರೆ, ಆ ರಾಕೆಟ್‌ನಲ್ಲಿ ಲಿಕ್ವಿಡ್ ಆಕ್ಸಿಜನ್ ಹಾಗೂ ಲಿಕ್ವಿಡ್ ಹೈಡ್ರೋಜನ್ ಬಳಸುತ್ತಿದ್ದಾರೆ. ಇವೆರಡು ಒಟ್ಟಿಗೆ ಸೇರಿದರೆ ನೀರು ಉತ್ಪತಿಯಾಗುತ್ತದೆ. ಒಂದೇ ರಾಕೆಟ್‌ನಲ್ಲಿ ಇವೆರಡು ಸೇರಿ ನೀರು ಉತ್ಪತಿಯಾಗಿ ಅದು ಓಜೋನ್ ಪದರದ ಮೇಲೆ ಬಿದ್ದರೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಹವಾವಾಮಾನದಲ್ಲೂ ನಾನಾ ವ್ಯತ್ಯಾಸಗಳು ಆಗಬಹುದು ಎಂದೂ ಕೂಡ ಎಲೋಯಿಸ್ ಮಾರೈಸ್ ಎಚ್ಚರಿಸಿದ್ದಾರೆ.

Bezos has said he wants to make space travel environmentally sustainable

ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಸಹ ಕಳವಳಕಾರಿ ಸಂಗತಿಯಾಗಿದೆ. ಹಸಿರು ಮನೆ ಪರಿಣಾಮ ಇಂಗಾಲ ಡೈ ಆಕ್ಸೆಡ್‌ನಿಂದಲೇ ಉಂಟಾಗುತ್ತಿದೆ. ಏಕೆಂದರೆ ಇದು ಹವಾಮಾನ ಬದಲಾವಣೆಗೆ ಕಾರಣವಾಗುವ ಅತ್ಯಂತ ದೀರ್ಘಕಾಲೀನ ಹಸಿರುಮನೆ ಅನಿಲವಾಗಿದೆ. ವರ್ಜಿನ್ ಗ್ಯಾಲಕ್ಸಿಯ ವಿಎಸ್‌ಎಸ್ ಯೂನಿಟಿ ಬಾಹ್ಯಾಕಾಶ ವಿಮಾನವು ಸಾಂಪ್ರದಾಯಿಕ ರಾಕೆಟ್ ಇಂಧನವನ್ನು ಬಳಸುತ್ತದೆ. ಅಲ್ಲದೆ, ಇದು ಇಂಗಾಲ ಡೈ ಆಕ್ಸೆಡ್ ಅನ್ನು ಉತ್ಪತಿ ಮಾಡುತ್ತಿದೆ. ಅಟ್ಲಾಂಟಿಕ್‌ನಿಂದ ಒಂದು ಸುತ್ತು ಪ್ರವಾಸ ಮಾಡಿ ಬಂದರೆ ಎಷ್ಟು ಸಮಯ ಹಿಡಿಯುತ್ತದೋ ಅಷ್ಟು ಇಂಗಾಲ ಡೈ ಆಕ್ಸೆಡ್ ಅನ್ನು ಇದು ಉತ್ಪತಿ ಮಾಡುತ್ತದೆ. ಅಲ್ಲಿಗೆ ಒಂದು ಕಂಪನಿಯಿಂದ ನೀರು ಮತ್ತು ಮತ್ತೊಂದು ಕಂಪನಿ ಇಂಗಾಲಡೈ ಆಕ್ಸೆಡ್ ಬಿಡುಗಡೆ ಆಗುತ್ತದೆ. ಹೈಡ್ರೋಜನ್ ಆಯಿಲ್ ಇದರಿಂದ ಕಡಿಮೆ ಆಗುತ್ತದೆ ಎಂಬ ಅನುಮಾನವನ್ನು ಅಲ್ಲಗಳೆಯುವಂತಿಲ್ಲ.

ಆರ್ಥಿಕ ಮತ್ತು ತಾಂತ್ರಿಕ ಲಾಭಗಳು

ಪ್ರಸ್ತುತ ಬಾಹ್ಯಾಕಾಶ ಪ್ರವಾಸೋದ್ಯಮವು ವಾಣಿಜ್ಯ ವಲಯವಾಗಿ ಬೆಳೆಯುತ್ತಿದೆ. ತುಂಬಾ ಜನರಿಗೆ ಇದರೆಡೆ ಆಸಕ್ತಿ ಬೆಳೆಯುತ್ತಿದೆ. ದುಡ್ಡು ಮಾಡುವ ಉದ್ದೇಶವೂ ಇದರ ಹಿಂದೆ ಇದೆ. ಇದರ ಪರಿಣಾಮವಾಗಿ, ಉದ್ಯಮದಲ್ಲಿ ಹೊಸತನವನ್ನು ಬೆಂಬಲಿಸಲು ಹೆಚ್ಚಿನ ಆರ್ಥಿಕ ಬೆಂಬಲ ದೊರೆಯುತ್ತಿದೆ. ಉದ್ಯಮವಾಗಿ ಬೆಳೆಯಲು ಕೂಡ ಅವಕಾಶ ಒದಗಿಸಿಕೊಡುತ್ತಿದೆ. ವಿನೂತನವಾದ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಬಾಹ್ಯಾಕಾಶ ಯಾನ ಮತ್ತೊಂದು ದಿಕ್ಕನ್ನು ಕಾಣುವ ಲಕ್ಷಣವೂ ಗೋಚರಿಸುತ್ತಿದೆ.
''ಭೂಮಿ ಒಳಗೆ ಹೇಗೆ ಮುಖ್ಯವಾದ ವಸ್ತು, ಖನಿಜಗಳು ಇದೆಯೋ ಹಾಗೆ ಭೂಮಿ ಹೊರಗಡೆಯೂ ಸಂರಕ್ಷಣೆ ಮಾಡುವ ಸಾಕಷ್ಟು ವಸ್ತುಗಳು ಇರುತ್ತವೆ. ನಾವು ಅದನ್ನು ಮರೆತಿರುತ್ತೇವೆ. ಆದರೆ, ನಾವು ನಮ್ಮ ಅಗತ್ಯಗಾಗಿ ಅದನ್ನು ಬಳಸುತ್ತಿದ್ದೇವೆ,'' ಎಂದು ಬಾಹ್ಯಾಕಾಶ ಪ್ರವಾಸದ ಅಧ್ಯಾಪಕಿಯಾದ ಆನೆಟ್ ಟೊವೊನೆನ್ ಅಭಿಪ್ರಾಯ ಪಟ್ಟಿದ್ದಾರೆ. ಹೆಲ್ಸಿಂಕಿಯ ಹಾ-ಹೆಲಿಯಾ ಯೂನಿವರ್ಸಿಟಿ ಇವರು ಸುಸ್ಥಿರ ಬಾಹ್ಯಾಕಾಶದ ಪರಿಚಯ ಎಂಬ ಪುಸ್ತಕವನ್ನು ಬರೆದಿದ್ದಾರೆ.

Richard Branson beat his fellow space tourism competitors into suborbital space

ಹೊಸ ಮತ್ತು ಉತ್ತಮವಾದ ಬಾಹ್ಯಾಕಾಶ ನೌಕೆಗಳ ತಯಾರಿಕೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. 2021ರ ಆರಂಭದಲ್ಲಿ, ನಾಸಾ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸುಮಾರು 350 ಸಣ್ಣ ಉದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ 45 ಮಿಲಿಯನ್ ನೀಡುವುದಾಗಿ ಘೋಷಿಸಿದೆ. ಮೂರು ಜನ ಕೋಟ್ಯಾಧೀಶರು ತಮ್ಮ ಸ್ವತಃ ದುಡ್ಡಿನಿಂದ ಬಾಹ್ಯಾಕಾಶ ಪ್ರವಾಸಕ್ಕೆ ಒತ್ತು ನೀಡುತ್ತಿದ್ದಾರೆ. ನಾಸಾ ಕೂಡ ಇದಕ್ಕೆ ಪೋತ್ಸಾಹ ಮತ್ತು ಬೆಂಬಲ ನೀಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಹಾಗೂ ವಿಜ್ಞಾನದ ವಿಕಸನದ ಹಾದಿಗೆ ಎಲ್ಲರೂ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂದು ಆನೆಟ್ ಟೊವೊನೆನ್ ಅಭಿಪ್ರಾಯ ಪಟ್ಟಿದ್ದಾರೆ.

ಈ ರೀತಿಯ ಆವಿಷ್ಕಾರಗಳಿಂದ ಬಾಹ್ಯಾಕಾಶದ ವ್ಯಾಪ್ತಿ ವಿಸ್ತಾರವಾಗಲಿ, ಬೆಳೆಯಲಿ ಎಂದು ದುಡ್ಡು ಹಾಕುವ ಮಂದಿ ಹೆಚ್ಚಾಗಿದ್ದಾರೆ. ಇದರಿಂದ ಬೇರೆ ಬೇರೆ ಕೈಗಾರಿಕೆಗಳಿಗೂ ಅನುಕೂಲಕರವಾದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ 'Fossil Fuel'ಗೂ ಪರ್ಯಾಯ ಮಾರ್ಗ ಹುಡುಕಿಕೊಳ್ಳಬಹುದು. ಹೈಡ್ರೋಜನ್‌ಗೆ ಪ್ರತ್ಯೇಕ ವಸ್ತು ಈ ರೀತಿಯ ಪ್ರಯತ್ನಗಳಿಂದ ಸಿಗಬಹುದು. ಇದಕ್ಕೆ ಹೂಡಿಕೆ ಹೆಚ್ಚಾದಂತೆ ವಿಜ್ಞಾನಿಗಳು ಹೊಸದು ಏನಾದರೂ ಕಂಡು ಹಿಡಿಯಲು ಹೋಗುತ್ತಾರೆ,'' ಎಂದು ಟೊವೊನೆನ್ ತಿಳಿಸಿದ್ದಾರೆ.

ಇಂದು ಬಾಹ್ಯಾಕಾಶ ಪ್ರವಾಸೋದ್ಯಮವು ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮವಾಗುತ್ತಿದೆ. ಯುಬಿಎಸ್ ಸ್ವಿಸ್ ಬ್ಯಾಂಕ್‌ನ ಕಳೆದ ವರ್ಷ ವರದಿ ಪ್ರಕಾರ, 2030ರ ವೇಳೆಗೆ ಭೂಮಿಗೂ ಬಾಹ್ಯಾಕಾಶಕ್ಕೂ ಇರುವ ಗಡಿ ಪ್ರದೇಶ ಮಾರುಕಟ್ಟೆ ಮೌಲ್ಯ 3 ಬಿಲಿಯನ್ ಆಗುತ್ತದೆ ಎಂದು ಅಂದಾಜಿಸಿದೆ.

ಇಷ್ಟೆಲ್ಲದರ ನಡುವೆ ಕಾಡುವ ಒಂದು ಪ್ರಶ್ನೆ ಎಂದರೆ ಭೂಮಿಯ ಆಚೆ ಇರುವ ಜಾಗ ಭೂಮಿಯಲ್ಲಿ ಇರುವವರಿಗೆ ಸ್ವತಂದ್ದಾ?
ಇಲ್ಲಿ ಒಂದು ದೊಡ್ಡ ನೈತಿಕ ವಿಷಯವಿದೆ, ನಾವು ನಮ್ಮ ಗ್ರಹವಾದ ಭೂಮಿಯ ಹಾಳು ಮಾಡಿದ್ದೇವೆ. ಇದೀಗ ನಾವು ಬಾಹ್ಯಾಕಾಶಕ್ಕೆ ಹೋಗಿ ಅದನ್ನೂ ನಾಶಪಡಿಸುವ ಪ್ರಯತ್ನದಲ್ಲಿ ಇದ್ದೇವೆ. ಇದಕ್ಕೆಲ್ಲ ಅವಕಾಶವೇ ಕೊಡಬಾರದು? ಭೂಮಿಯಿಂದ ಆಚೆ ಹೋಗಿ ಈ ರೀತಿ ಕೆಲಸ ಮಾಡಲು ಅನುಮತಿ ಕೊಟ್ಟವರಾರು ಎಂದು ಟೊವೊನೆನ್ ಪ್ರಶ್ನಿಸಿದ್ದಾರೆ.

ಬಾಹ್ಯಾಕಾಶಕ್ಕೆ ವಾಣಿಜ್ಯ ಸ್ವರೂಪದ ಓಟವೊಂದು ಒದಗಿ ಬಂದಿದೆ. ಇದೀಗ ಬೈಕ್‌ನಲ್ಲಿ ಹೋದರೆ ಮೊದಲು ಸೇರುತ್ತೇವೋ, ಬಸ್, ರೈಲು ಎಂದು ಯೋಚಿಸುವಂತೆ ಮುಂದೊಂದು ದಿನ ಯಾವ ರಾಕೆಟ್‌ನಲ್ಲಿ ಹೋದರೆ ಬಾಹ್ಕಾಕಾಶವನ್ನು ಬೇಗ ತಲುಪುತ್ತೇವೆ ಎಂಬ ಸ್ಪರ್ಧೆ ಹುಟ್ಟಿಕೊಂಡರೂ ಆಶ್ಚರ್ಯಪಡುವಂತಿಲ್ಲ. 2024ರಲ್ಲಿ ಮೊದಲ ಬಾಹ್ಯಾಕಾಶ ಪ್ರವಾಸಕ್ಕೆ ಯೋಜನೆ ಸಿದ್ಧವಾಗಿದೆ. ರಾಕೆಟ್‌ನಲ್ಲಿ ಹೋಗಲು ನಿಮಗೆ ತೊಂದರೆ ಇಲ್ಲ ಎಂಬ ಅಭಿಪ್ರಾಯವಿದ್ದರೆ ಇದನ್ನು ಕಾರ್ಯಗತಗೊಳಿಸಲು ನಾನಾ ಕಂಪನಿಗಳು ಸಿದ್ಧಗೊಂಡಿವೆ. ಹೈಡ್ರೋಜನ್ ಹಾಗೂ ಹಾಟ್ ಏರ್ ಬಾಲ್ ಬಳಸಿಕೊಂಡು ಕ್ರೀಡಾಂಗಣದಷ್ಟು ದೊಡ್ಡ ಜಾಗದಿಂದ ಹೊರಡಿಸಲು ಕಂಪನಿಗಳು ಯೋಜಿಸಿವೆ. ಪ್ರತಿ ಟಿಕೆಟ್‌ಗೆ 1.25 ಲಕ್ಷ ಡಾಲರ್ ನಿಗದಿಪಡಿಸಲಾಗಿದೆ.

ನೀವು ಬೇರೆ ರೀತಿಯ ರಜಾದಿನವನ್ನು ಸವಿಯಲು ಯೋಜಿಸುತ್ತಿದ್ದರೆ, ಆರ್ಬಿಟಲ್ ಅಸೆಂಬ್ಲಿ ಕಾರ್ಪೊರೇಷನ್ ಕಂಪನಿಯು 2027 ರಲ್ಲಿ ಬಾಹ್ಯಾಕಾಶದಲ್ಲೇ ಐಷಾರಾಮಿ ಹೋಟೆಲ್ ತೆರೆಯಲು ಯೋಜಿಸಿದೆ. ತೇಲಾಡುವ ಆ ರಾಕೆಟ್ ರೆಸ್ಟೋರೆಂಟ್, ಬಾರ್, ಜಿಮ್ ಒಳಗೊಂಡಿರುತ್ತದೆ. ಮೂರೂವರೆ ದಿನ ಹೋಗಿ ಅಲ್ಲಿ ನಿಮ್ಮ ರಜಾದಿನ ಕಳೆಯಬೇಕೆಂದರೆ 5 ಮಿಲಿಯನ್ ಡಾಲರ್ ನೀಡಬೇಕಿದೆ.

English summary
If you've run out of ideas of where to go on holiday and want to take it to the next level, space tourism could be your thing — if you have the money to spare. Here's a look at some of the pros and cons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X