ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರಿ ಅಪಾಯ ಕುರಿತು ನೀವು ತಿಳಿಯಲೇಬೇಕಾದ ಅಂಶಗಳಿವು!

|
Google Oneindia Kannada News

ಕೊರೊನಾ ಲಸಿಕೆಗಳು ರೂಪಾಂತರಿಗಳನ್ನು ಸೋಲಿಸುತ್ತಿವೆ ಆದರೆ ಲಸಿಕೆ ಹಾಕದವರಿಗೆ ಸೋಂಕು ಹೆಚ್ಚಾಗಿ ಹರಡುತ್ತಿದೆ.

ಸಿಡಿಸಿ ಪ್ರಕಾರ 2 ಡೋಸ್ ಲಸಿಕೆ ಪಡೆದಿರುವವರು ಕೂಡ ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ. ಲಸಿಕೆ ಪಡೆಯದಿರೋರು ಡೆಲ್ಟಾ ಪ್ರಭೇದದ ವೈರಸ್ ಹರಡುವಂತೆಯೇ ಲಸಿಕೆ ಪಡೆದಿರುವವರು ಕೂಡ ಹರಡುತ್ತಾರೆ ಅಂತಾ ಸಿಡಿಸಿ ಹೇಳಿದೆ.

ಸಿಡಿಸಿ ವರದಿ ಪ್ರಕಾರ ಡೆಲ್ಟಾ ಪ್ರಭೇದದ ವೈರಸ್ ವೇಗವಾಗಿ ಮೆರ್ಸ್, ಸಾರ್ಸ್, ಎಬೋಲಾಗಿಂತ ವೇಗವಾಗಿ ಹರಡುತ್ತೆ. ಜೊತೆಗೆ ಈಗ ಜಗತ್ತಿನಿಂದ ಮಾಯವಾಗಿರುವ ಸಿಡುಬಿನಷ್ಟೇ ಅಪಾಯಕಾರಿ ಅಂತಾ ಸಿಡಿಸಿ ನಿರ್ದೇಶಕಿ ರೊಚೆಲ್ಲೇ ವ್ಯಾಲೆಂಸ್ಕಿ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ 3ನೇ ಅಲೆ; ಅಮೆರಿಕ ಮಾದರಿಯ ಅಂದಾಜು ಏನಿದೆ?ದೇಶದಲ್ಲಿ ಕೊರೊನಾ 3ನೇ ಅಲೆ; ಅಮೆರಿಕ ಮಾದರಿಯ ಅಂದಾಜು ಏನಿದೆ?

ಕೊರೊನಾವೈರಸ್ ಇಡೀ ಪ್ರಪಂಚವನ್ನು ಆವರಿಸಿ 15 ತಿಂಗಳ ಬಳಿಕ ರೋಗ ರೂಪಾಂತರಿಗಳಿಂದಾಗಿ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ.

ಎಲ್ಲಾ ದೇಶಗಳಲ್ಲಿ ಆಯಾ ದೇಶಗಳಲ್ಲಿ ಅನುಮತಿ ನೀಡಲಾದ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ವಿಶ್ವಾದ್ಯಂತ ಒಟ್ಟು 3 ಬಿಲಿಯನ್ ಲಸಿಕೆಗಳನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಕೊರೊನಾ ರೂಪಾಂತರಿಗಳು ಹುಟ್ಟಿಕೊಂಡಿದ್ದು, ಅವು ಬಹುಬೇಗ ಸೋಂಕನ್ನು ಹರಡುತ್ತಿವೆ.

ಡೆಲ್ಟಾ ಇವೆಲ್ಲ ವೈಜ್ಞಾನಿಕ ವಲಯದಲ್ಲಿ ಕೇಳಿ ಬರ್ತಿದ್ದ ಪದಗಳು. ಈ ಪದಗಳು ಜನ ಸಾಮಾನ್ಯರ ಬಾಯಲ್ಲಿ ಸಾಮಾನ್ಯವಾಗಿ ಕೇಳಿ ಬರ್ತಿದೆ. ಇದಕ್ಕೂ ಈ ಕೊರೊನಾ ಅನ್ನೋ ಮಾರಕ ವೈರಸ್ ಕಾರಣವಾಗಿದೆ. ಇದರ ನಡುವೆ ಅಮೆರಿಕದ ರೋಗ ನಿಯಂತ್ರಣ ಮತ್ತು ರೋಗ ತಡೆಗಟ್ಟುವ ಕೇಂದ್ರ ನೀಡಿರುವ ವರದಿ ಹಲವರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

 ಲಸಿಕೆಗಳು ರೂಪಾಂತರಿಗಳನ್ನು ಸೋಲಿಸುತ್ತಿವೆ

ಲಸಿಕೆಗಳು ರೂಪಾಂತರಿಗಳನ್ನು ಸೋಲಿಸುತ್ತಿವೆ

ಲಸಿಕೆ ಯಾವಾಗಲೂ ಸೋಂಕನ್ನು ಸೋಲಿಸುತ್ತವೆ, ಮೊದಲ ಕೋವಿಡ್ 19 ಲಸಿಕೆ ಅಭಿಯಾನ ಆರಂಭವಾದಾಗ ಆಲ್ಫಾ ರೂಪಾಂತರಿ ಪ್ರಪಂಚದಾದ್ಯಂತ ಹರಡುತ್ತಿತ್ತು. ಫೈಜರ್ ಹಾಗೂ ಬಯೋ ಎನ್‌ ಟೆಕ್‌ನ ನೋವಾವ್ಯಾಕ್ಸ್ ಶೇ.90ರಷ್ಟು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ವಿವರಿಸಿದ್ದಾರೆ. ಲಭ್ಯವಿರುವ ಲಸಿಕೆಗಳು ವೈರಸ್‌ನ್ನು ಕನಿಷ್ಠ ಅರ್ಧದಷ್ಟು ಮತ್ತು ಹೆಚ್ಚು ಹೆಚ್ಚು ಹರಡುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ಲಸಿಕೆ ಪಡೆದವರಲ್ಲಿ ಸೋಂಕು ತಗುಲಿದರೂ ಸೌಮ್ಯ ಲಕ್ಷಣಗಳಿರುತ್ತದೆ. ಜೂನ್ 21ರ ಹೊತ್ತಿಗೆ ಸಿಡಿಸಿ ಸಂಪೂರ್ಣ ಲಸಿಕೆ ಪಡೆದ ಜನರಲ್ಲಿ 3907 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಕೇವಲ 750 ಸಾವುಗಳು ವರದಿಯಾಗಿವೆ.

 ಡೆಲ್ಟಾ ರೂಪಾಂತರಿ

ಡೆಲ್ಟಾ ರೂಪಾಂತರಿ

ಡೆಲ್ಟಾ ರೂಪಾಂತರಿಯು B.1.617.2 ಎಂದು ಕರೆಯಲ್ಪಡುತ್ತದೆ. ಇದು ಈಗಾಗಲೇ ಮೂಲ ವೃರ್‌ಗಿಂತ ಶೇ.43 ರಿಂದ 90ರಷ್ಟು ಹೆಚ್ಚು ಹರಡುತ್ತದೆ ಎಂದು ಅಂದಾಜಿಸಲಾಗಿದೆ. ಇದು ಮಾರಕವಾಗಬಹುದು. ಇದು ಅಮೆರಿಕದಲ್ಲಿ ಶೇ.26ರಷ್ಟು ಹೊಸ ಸೋಂಕುಗಳಿಗೆ ಕಾರಣವಾಗುತ್ತಿದೆ.

ಆಲ್ಫಾ ವೈರಸ್​ಗಿಂತಾ ಡೆಲ್ಟಾ ವೈರಸ್ ಹತ್ತು ಪಟ್ಟು ಹೆಚ್ಚು ಡೇಂಜರ್ ಅಂತಾ ಸಿಡಿಸಿ ಹೇಳಿದೆ. ಮೂಲ ವೈರಸ್​ನಿಂದ ಸೋಂಕಿತ ವ್ಯಕ್ತಿಯಲ್ಲಿರೋ ವೈರಾಣುಗಿಂತ ಸಾವಿರ ಪಟ್ಟು ಹೆಚ್ಚಿನ ಪ್ರಮಾಣದ ವೈರಾಣು ಡೆಲ್ಟಾ ಪ್ರಭೇದದ ವೈರಸ್ ಸೋಂಕಿತ ವ್ಯಕ್ತಿಯಲ್ಲಿರುತ್ತೆ ಅಂತಾ ಇತ್ತೀಚಿನ ಅಧ್ಯಯನ ಹೇಳಿದೆ. ಅಮೆರಿಕದ ಮೆಸ್ಯಾಚುವೆಟ್ಸ್ ಸೇರಿದಂತೆ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ಅಧ್ಯಯನದ ಆಧಾರದ ಮೇಲೆ ಸಿಡಿಸಿ ವರದಿ ಹೇಳಿದೆ.
ಪೂರ್ಣ ಲಸಿಕೆ ನೀಡುವುದು ಡೆಲ್ಟಾ ವಿರುದ್ಧ ಹೋರಾಡುವುದಕ್ಕೂ ಸಹಕಾರಿಯಾಗಲಿದೆ. ಅಮೆರಿಕದ ಅಧ್ಯಯನ ಪ್ರಕಾರ ಎರಡು ಡೋಸ್ ಫೈಜರ್ ಲಸಿಕೆ ಡೆಲ್ಟಾ ಸೋಂಕನ್ನು ತಡೆಗಟ್ಟುವಲ್ಲಿ ಶೇ.88ರಷ್ಟು ಪರಿಣಾಮಕಾರಿಯಾಗಿದೆ.

ಆದಾಗ್ಯೂ ಒಂದೇ ಡೋಸ್ ಶೇ.33ರಷ್ಟು ಸೋಂಕನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಇಸ್ರೇಲ್ ಹೆಚ್ಚು ಲಸಿಕೆ ಹಾಕಿರುವ ದೇಶವಾಗಿದೆ. ಆದರೂ ಡೆಲ್ಟಾ ರೂಪಾಂತರಿಯಿಂದ ಸಂಕಷ್ಟಕ್ಕೆ ಸಿಲುಕಿದೆ. ಹೊಸದಾಗಿ ಸೋಂಕು ತಗುಲಿದ ಶೇ.30ರಷ್ಟು ಮಂದಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರಾಗಿದ್ದಾರೆ. ಇಸ್ರೇಲ್‌ಲ್ಲಿ ಶೇ.85ರಷ್ಟು ವಯಸ್ಕರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ.

 ಲಸಿಕೆ ಹಾಕಿಸಿಕೊಳ್ಳದವರ ಮೇಲೆ ರೂಪಾಂತರಿಗಳ ಅಟ್ಯಾಕ್

ಲಸಿಕೆ ಹಾಕಿಸಿಕೊಳ್ಳದವರ ಮೇಲೆ ರೂಪಾಂತರಿಗಳ ಅಟ್ಯಾಕ್

ಲಸಿಕೆ ಹಾಕಿಸಿಕೊಂಡ ಜನರು ಬಹುತೇಕವಾಗಿ ಸೋಂಕಿನಿಂದ ಸುರಕ್ಷಿತವಾಗಿರುತ್ತಾರೆ. ಆದರೆ ಲಸಿಕೆ ಹಾಕಿಸಿಕೊಳ್ಳದವರಿಗೆ ಎಂದಿಗೂ ಅಪಾಯ ಕಟ್ಟಿಟ್ಟ ಬುತ್ತಿ, ಅವರಲ್ಲಿ ಈಗಾಗಲೇ ರೊಗ ನಿರೋಧಕ ಶಕ್ತಿ ಎತ್ತೇಚ್ಚವಾಗಿದ್ದು, ಸ್ವಲ್ಪ ಸಮಯಗಳ ಕಾಲ ರಕ್ಷಣೆ ಪಡೆದರೂ ಕೂಡ ಅಪಾಯದಿಂದ ಹೊರತಾಗಿರುವುದಿಲ್ಲ. ಡೆಲ್ಟಾದಂತಹ ವೈರಸ್‌ಗಳು ಲಸಿಕೆ ಪಡೆದವರಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವುದರಿಂದ ಲಸಿಕೆ ಪಡೆಯದವರ ಮೇಲೆ ಇನ್ನೂ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.
ಯುಕೆಯಲ್ಲಿ ಶೇಕಡಾ ಅರ್ಧದಷ್ಟು ಮಂದಿ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ, ಆದರೂ ಡೆಲ್ಟಾ ಪ್ರಕರಣಗಳು ದೇಶದಲ್ಲಿ ಕಾಣಿಸಿಕೊಂಡ ಬಳಿಕ ದೇಶದಲ್ಲಿ ಕೊರೊನಾ ಪ್ರಕರಣಗಳು ಶೇ.6 ಪಟ್ಟು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದ್ವಿಗುಣಗೊಂಡಿದೆ. ಹೆಚ್ಚು ಲಸಿಕೆ ಹಾಕಿಸಿರುವ ದೇಶದಲ್ಲಿ ಕೂಡ ಸೋಂಕು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ಡೆಲ್ಟಾ ಬಂದಿರುವ ದೇಶದಲ್ಲಿ ಎಲ್ಲರೂ ಸಾಯುತ್ತಾರೆ ಎಮದು ಅರ್ಥವಲ್ಲ, ಆಲ್ಫಾ ಯುರೋಪ್‌ನಲ್ಲಿ ಪ್ರಾಬಲ್ಯ ಸಾಧಿಸಿದಾಗ ಅನೇಕ ದೇಶಗಳು ತಮ್ಮ ನಿರ್ಬಂಧಗಳನ್ನು ಸಡಿಲಗೊಳಿಸದಿರಲು ನಿರ್ಧರಿಸಿದವು, ಹಾಗೂ ಸೋಂಕು ತಡೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡವು.
ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಸಂಪೂರ್ಣ ಕೊರೊನಾ ಲಸಿಕೆ ನೀಡಲಾಗಿದೆ, ಆದರೆ ಡೆಲ್ಟಾ ವೇಗವಾಗಿ ಹರಡುತ್ತಿದೆ. ಅವರ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತಿದೆ.

ಸಿಡಿಸಿ ವರದಿ ಪ್ರಕಾರ ಕೊರೊನಾ ಲಸಿಕೆ ಪಡೆದಿದ್ದವರಿಗೆ ಕೊರೊನಾ ಸೋಂಕು ತಗುಲಿದರೆ, ಲಸಿಕೆ ಪಡೆಯದವರು ಸೋಂಕು ಹರಡುವಷ್ಟೇ ಪ್ರಮಾಣದಲ್ಲಿ ಸೋಂಕು ಹರಡುತ್ತಾರೆ. ಯಾರು ಕೊರೊನಾ ಲಸಿಕೆ ಪಡೆದಿದ್ದಾರೋ ಅವರಿಗೆ ಸೋಂಕು ಹರಡಿದ್ರೂ.. ಗಂಭೀರ ಪರಿಣಾಮಗಳು ಎದುರಾಗಲ್ಲ ಅಂತಾ ಗೊತ್ತಾಗಿದೆ. ಅಲ್ದೆ, ಲಸಿಕೆ ಶೇಕಡ90 ರಷ್ಟು ಜನರಿಗೆ ಸೋಂಕು ತಡೆದುಕೊಳ್ಳವ ಶಕ್ತಿ ಇದೆ ಅಂತಾ ವರದಿ ಹೇಳಿದೆ.

 ರೂಪಾಂತರಿಗಳ ದರ್ಬಾರು ಶುರು

ರೂಪಾಂತರಿಗಳ ದರ್ಬಾರು ಶುರು

ಮುಂದಿನ ದಿನಗಳಲ್ಲಿ ಮೂಲ ಸೋಂಕು ಕಣ್ಮರೆಯಾಗಿ ರೂಪಾಂತರಿಗಳ ದರ್ಬಾರು ಹೆಚ್ಚಾಗುತ್ತದೆ. ಸಾಂಕ್ರಾಮಿಕ ವಿಸ್ತಾರಗೊಳ್ಳುತ್ತಿದ್ದಂತೆ ರೂಪಾಂತರಿಯೂ ಹೆಚ್ಚೆಚ್ಚು ಹುಟ್ಟಿಕೊಳ್ಳುತ್ತವೆ. ಒಂದೊಮ್ಮೆ ರೂಪಾಂತರಿಗಳ ಪ್ರಮಾಣ ಹೆಚ್ಚಾದರೆ ಲಸಿಕೆ ಹಾಕಿದ ಜನರಿಗೆ ಬೂಸ್ಟರ್ ಶಾಟ್‌ಗಳನ್ನು ನೀಡಬೇಕಾಗಿ ಬರಬಹುದು. ಮಾಡೆರ್ನಾ ಹಾಗೂ ಫೈಜರ್ ತಯಾರಿಸಿರುವ ಎಂಆರ್‌ಎನ್‌ಎ ಲಸಿಕೆಗಳು ವಿಶೇಷವಾಗಿ ರೂಪಾಂತರಿಗಳ ವಿರುದ್ಧ ಹೋರಾಡುತ್ತವೆ ಎಂದು ಹೇಳಲಾಗಿದೆ.
ಕೊರೊನಾ ಡೆಲ್ಟಾ ವೈರಸ್ ಮೊದಲು ಪತ್ತೆಯಾಗಿದ್ದು ಭಾರತದಲ್ಲಿ. ಡೆಲ್ಟಾ ಪ್ರಭೇದದ ವೈರಸ್ ವಿಜ್ಞಾನಿಗಳಲ್ಲಿ ಎಚ್ಚರಿಕೆಯ ಭಾವನೆ ಮೂಡಿಸಿದೆ. ಡೆಲ್ಟಾ ಪ್ರಭೇದದ ವೈರಸ್ ಜಗತ್ತಿನಾದ್ಯಂತ ಹರಡಿದೆ. ಡೆಲ್ಟಾ ವೈರಸ್ ಗಂಭೀರ ಅಪಾಯ ಒಡ್ಡುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಅಂತಾ ಸಿಡಿಸಿ ಕಳವಳ ವ್ಯಕ್ತಪಡಿಸಿದೆ. ಅಮೆರಿಕದಲ್ಲಿ ಶೇಕಡ 50ರಷ್ಟು ಜನರಿಗೆ 2 ಡೋಸ್ ಲಸಿಕೆ ನೀಡಿದರೂ ಪ್ರತಿ ವಾರ ಹೊಸದಾಗಿ 35 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದು ಅಮೆರಿಕ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಅಂತಾ ಸಿಡಿಸಿ ಹೇಳಿದೆ.

English summary
Fifteen months after the novel coronavirus shut down much of the world, the pandemic is still raging. Few experts guessed that by this point, the world would have not one vaccine but many, with 3 billion doses already delivered. At the same time, the coronavirus has evolved into super-transmissible variants that spread more easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X