ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 14 ರಂದು ವರ್ಷದ ಅಂತಿಮ ಸೂರ್ಯಗ್ರಹಣ: ಸಮಯ ಮತ್ತು ಪರಿಣಾಮ

By ಒನ್ ಇಂಡಿಯಾ ಡೆಸ್ಕ್‌
|
Google Oneindia Kannada News

ಭಾರತೀಯ ಪಂಚಾಂಗದ ಪ್ರಕಾರ ಡಿಸೆಂಬರ್ 14 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿರಲಿದೆ.

ಜ್ಯೋತಿಷ್ಯ ಲೆಕ್ಕಾಚಾರ ಮತ್ತು ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ, ಈ ಸೂರ್ಯಗ್ರಹಣವು ಡಿಸೆಂಬರ್ 14 ರಂದು ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭಗೊಂಡು ಡಿಸೆಂಬರ್ 15 ರ ರಾತ್ರಿ ಅಂದರೆ 12.23 ಕ್ಕೆ ಮುಕ್ತಾಯಗೊಳ್ಳಲಿದೆ.

ಇಂದು ಚಂದ್ರಗ್ರಹಣ: ಯಾವುದನ್ನು ಮಾಡಬಾರದು? ಏನು ಮಾಡಬೇಕು?ಇಂದು ಚಂದ್ರಗ್ರಹಣ: ಯಾವುದನ್ನು ಮಾಡಬಾರದು? ಏನು ಮಾಡಬೇಕು?

ನವೆಂಬರ್ 30 ರಂದು ಈ ವರ್ಷದ ಅಂತಿಮ ಚಂದ್ರಗ್ರಹಣ ಸಂಭವಿಸಿತ್ತು. ಈ ಚಂದ್ರಗ್ರಹಣದ 15 ದಿನಗಳ ಒಳಗೆಯೇ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಒಟ್ಟು 15 ದಿನಗಳ ಒಳಗೆಯೇ ಎರಡು ಗ್ರಹಣಗಳು ಸಂಭವಿಸುತ್ತಿರುವ ಕಾರಣ ಭಾರಿ ಮಹತ್ವ ಪಡೆದುಕೊಂಡಿದೆ.

Solar Eclipse December 2020: Date,Time,Significance,When And Where To Watch

ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ಈ ಗ್ರಹಣದ ಸೂತಕ ಕಾಲಕ್ಕೆ ಹೆಚ್ಚು ಮಹತ್ವವಿರುವುದಿಲ್ಲ. ಈ ಗ್ರಹಣ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ ಅಟ್ಲಾಂಟಿಕ್, ಹಿಂದೂ ಮಹಾಸಾಗರ ಹಾಗೂ ಪ್ರಶಾಂತ್ ಮಹಾಸಾಗರದ ಹಲವು ಪ್ರಾಂತ್ಯಗಳಲ್ಲಿ ಗೋಚರಿಸಲಿದೆ.

ವೃಶ್ಚಿಕ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿರುವುದರಿಂದ ವೃಶ್ಚಿಕ ಜಾತಕ ಹೊಂದಿದ ಜನರ ಸಮಸ್ಯೆಗಳು ಹೆಚ್ಚಾಗಬಹುದು. ಸೂರ್ಯ ದುರ್ಬಲನಾಗುವ ಕಾರಣ ಗೌರವ ಕಡಿಮೆಯಾಗಬಹುದು. ಕಾಯಿಲೆ ಬರಬಹುದು.

ಸ್ವಲ್ಪ ಕಣ್ಣಿನ ಸಮಸ್ಯೆ ಇರಬಹುದು. ವಿಷ್ಣುವನ್ನು ಸೂರ್ಯಗ್ರಹಣ ಸಮಯದಲ್ಲಿ ಪೂಜಿಸಬೇಕು. ಗ್ರಹಣ ಕಾಲದಲ್ಲಿ ನೀರನ್ನು ಕುಡಿಯಬಾರದು, ಆಹಾರ ನಿಷೇಧವಿದೆ. ಆಹಾರದ ಮೇಲೆ ದೂರ್ವೆ ಅಥವಾ ತುಳಸಿಯನ್ನು ಇರಿಸಬೇಕು, ಹಲವು ಮಂದಿ ಗ್ರಹಣ ಕಳೆದ ಬಳಿಕ ಸ್ನಾನಮಾಡಿ, ಶುಭ್ರ ವಸ್ತ್ರವನ್ನು ಧರಿಸುತ್ತಾರೆ. ಸೂರ್ಯಾರಾಧನೆ ಮಾಡುತ್ತಾರೆ.

ಗರ್ಭಿಣಿಯನ್ನು ಮನೆಯಿಂದ ಹೊರಬರಕೂಡದು ಮನೆಯಲ್ಲಿಯೇ ಸಂತಾನ ಗೋಪಾಲ ಮಂತ್ರ ಪಠಿಸಬೇಕು.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

English summary
The year 2020 is all set to witness to its last Solar Eclipse or Surya Grahan on December 14. It is going to be a total solar eclipse which will be visible from Chile and parts of Argentina. The Sun will be totally covered by the shadow of the Moon during the eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X