ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Solar Eclipse 2021: ಭಾರತದಲ್ಲಿ ಯಾಕೆ ಸೂರ್ಯಗ್ರಹಣ ಗೋಚರಿಸಲ್ಲ?

|
Google Oneindia Kannada News

ನವದೆಹಲಿ, ಡಿಸೆಂಬರ್‌ 03: ಈ ವರ್ಷದ ಎರಡನೇ ಸೂರ್ಯ ಗ್ರಹಣ ಹಾಗೂ ವರ್ಷದ ಕೊನೆಯ ಸೂರ್ಯ ಗ್ರಹಣವು ಶನಿವಾರ, ಡಿಸೆಂಬರ್‌ 4 ರಂದು ಸಂಭವಿಸಲಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸೂರ್ಯಗ್ರಹಣವು ಇರಲಿದೆ. ಇದು ಈ ವರ್ಷದ ನಾಲ್ಕನೇ ಗ್ರಹಣವಾಗಿದೆ. ಈ ಕೊನೆಯ ಸೂರ್ಯ ಗ್ರಹಣವು ಸಂಪೂರ್ಣ ಸೂರ್ಯ ಗ್ರಹಣ ಆಗಿದೆ.

ಈ ಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಗೋಚರ ಆಗಲಿದೆ. ಸಂಪೂರ್ಣವಾಗಿ ಸೂರ್ಯಗ್ರಹಣವು ಆದ ಸಂದರ್ಭದಲ್ಲಿ ಸೂರ್ಯನ ಮೇಲ್ಮೈ ಸಂಪೂರ್ಣವಾಗಿ ಚಂದ್ರನಿಂದ ಮುಚ್ಚಲ್ಪಡುತ್ತದೆ. ಆದರೂ ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗ ಮಾತ್ರ ಅಸ್ಪಷ್ಟಗೊಳ್ಳಲಿದೆ. ಈ ಹಿಂದಿನ 2021 ರ ಕೊನೆಯ ಸೂರ್ಯಗ್ರಹಣವು ಈ ಮೊದಲು ಅಂದರೆ ಇದೇ ವರ್ಷ ಜೂನ್​ 10 ರಂದು ಸಂಭವಿಸಿದ ಮಾದರಿಯಲ್ಲಿಯೇ ಇರಲಿದೆ.

ಇನ್ನು ಈ ಬಾರಿಯ ಸೂರ್ಯ ಗ್ರಹಣವು ದಕ್ಷಿಣ ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾದಲ್ಲಿ ಕಾಣಿಸಿಕೊಳ್ಳಲಿದ್ದರೂ ಭಾರತದಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ತಿಳಿಯಲು, ಈ ಸೂರ್ಯ ಗ್ರಹಣದ ಸಮಯ ಮೊದಲಾದ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ವಿಶ್ವದಾದ್ಯಂತ ಸೂರ್ಯ ಗ್ರಹಣ ಸಮಯ

ವಿಶ್ವದಾದ್ಯಂತ ಸೂರ್ಯ ಗ್ರಹಣ ಸಮಯ

ಪ್ಲಾನೆಟರಿ ಸೊಸೈಟಿ ಪ್ರಕಾರ ಭಾರತೀಯ ಸಮಯದ ಪ್ರಕಾರ ಪ್ರಪಂಚದಾದ್ಯಂತ ಗ್ರಹಣವು 10:59 ಕ್ಕೆ ಪ್ರಾರಂಭವಾಗುತ್ತದೆ. ಸಂಪೂರ್ಣ ಗ್ರಹಣವು ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ಗ್ರಹಣವು ಮಧ್ಯಾಹ್ನ 1:03 ಕ್ಕೆ ಸಂಭವಿಸುತ್ತದೆ. ಅಂತಿಮವಾಗಿ 3.07ಕ್ಕೆ ಮುಕ್ತಾಯವಾಗುತ್ತದೆ. ಗ್ರಹಣದ ಅವಧಿ 4 ತಾಸು 8 ನಿಮಿಷಗಳವರೆಗೆ ಇರುತ್ತದೆ.

ಒಟ್ಟು ಎಷ್ಟು ಹಂತಗಳು?

ಒಟ್ಟು ಎಷ್ಟು ಹಂತಗಳು?

ಇದು ಸಂಪೂರ್ಣ ಸೂರ್ಯ ಗ್ರಹಣವಾಗಿರುವ ಕಾರಣದಿಂದಾಗಿ ಅಂಟಾರ್ಕ್ಟಿಕಾದ ವೀಕ್ಷಕರು ಸೂರ್ಯನ ಸಂಪೂರ್ಣ ಗ್ರಹಣವನ್ನು ವೀಕ್ಷಣೆ ಮಾಡಲಿದ್ದಾರೆ. 1 ನಿಮಿಷ 57 ಸೆಕೆಂಡ್‌ಗಳ ಕಾಲ ಸೂರ್ಯನು ಅಸ್ಪಷ್ಟಗೊಳ್ಳಲಿದೆ. ಅಂದರೆ ಮಧ್ಯಾಹ್ನ 1:04 ಗಂಟೆಗೆ ಸೂರ್ಯನು ಅಸ್ಪಷ್ಟಗೊಳ್ಳಲಿದೆ. ಆದರೆ ಭೂಮಿಯ ಮೇಲಿನ ದಕ್ಷಿಣ ಗೋಳಾರ್ಧದ ಕೆಲವು ಸ್ಥಳಗಳಲ್ಲಿ ಜನರು ಈ ಗ್ರಹಣವನ್ನು ಭಾಗಶಃ ವೀಕ್ಷಿಸುತ್ತಾರೆ. ಇದು ಸೂರ್ಯ ಗ್ರಹಣ ಆರಂಭದಲ್ಲಿ ಅಥವಾ ಅಂತ್ಯದಲ್ಲಿ ಭಾಗಶಃ ವೀಕ್ಷಿಸುತ್ತಾರೆ.

ಭಾರತದಲ್ಲಿ ಏಕೆ ಸೂರ್ಯಗ್ರಹಣ ಗೋಚರಿಸಲ್ಲ?

ಭಾರತದಲ್ಲಿ ಏಕೆ ಸೂರ್ಯಗ್ರಹಣ ಗೋಚರಿಸಲ್ಲ?

ಗ್ರಹಣದ ಸಮಯ ಮತ್ತು ಗೋಚರತೆ, ಚಂದ್ರನಿಂದ ಅಸ್ಪಷ್ಟವಾಗಿರುವ ಸೂರ್ಯನ ಶೇಕಡಾವಾರು ಪ್ರಮಾಣವು ಗ್ರಹಣದ ವೀಕ್ಷಕನ ಸ್ಥಳವನ್ನು ಅವಲಂಬಿಸಿರುತ್ತದೆ. 4ನೇ ಡಿಸೆಂಬರ್ 2021 ರಂದು ಚಂದ್ರನ ನೆರಳಿನ ಮಾರ್ಗವು ದಕ್ಷಿಣ ಸಾಗರದಲ್ಲಿ ಫಾಕ್ಲ್ಯಾಂಡ್ ದ್ವೀಪಗಳ ಆಗ್ನೇಯಕ್ಕೆ ಸುಮಾರು 500 ಕಿಮೀ ದೂರದಲ್ಲಿ ಪ್ರಯಾಣವನ್ನು ಪ್ರಾರಂಭಿಸುತ್ತದೆ. ದಕ್ಷಿಣ ಆಸ್ಟ್ರೇಲಿಯಾದ ಅಂಟಾರ್ಕ್ಟಿಕ್ ಖಂಡವನ್ನು ದಾಟುತ್ತದೆ ಮತ್ತು ದಕ್ಷಿಣ ಸಾಗರದಲ್ಲಿ ಸೂರ್ಯಾಸ್ತದ ಸಮಯದಲ್ಲಿ ಕೊನೆಗೊಳ್ಳುತ್ತದೆ. ಈ ಗ್ರಹಣದ ನೆರಳಿನ ಹಾದಿಯಲ್ಲಿ ಭಾರತ ಎಲ್ಲಿಯೂ ಇಲ್ಲ. ಆದ್ದರಿಂದ ಭಾರತದಲ್ಲಿ ಗ್ರಹಣವು ಗೋಚರಿಸುವುದಿಲ್ಲ.

ಭಾರತದಲ್ಲಿ ಮುಂದೆ ಯಾವಾಗ ಸೂರ್ಯ ಗ್ರಹಣ?

ಭಾರತದಲ್ಲಿ ಮುಂದೆ ಯಾವಾಗ ಸೂರ್ಯ ಗ್ರಹಣ?

ಭಾರತದಲ್ಲಿ ಕೊನೆಯ ಬಾರಿಗೆ 21 ಜೂನ್ 2020 ರಂದು ಸೂರ್ಯ ಗ್ರಹಣವು ಸಂಭವಿಸಿದೆ. ಅದು "ಆನ್ಯುಲರ್ ಸೌರ ಗ್ರಹಣ" ಆಗಿತ್ತು. ಇದು ಗ್ರಹಣದ ಭಾಗಶಃ ಹಂತಗಳಲ್ಲಿ ಗೋಚರಿಸಿದ್ದವು. ಭಾರತದಲ್ಲಿ ಮುಂದಿನ ಸೂರ್ಯಗ್ರಹಣವು 25 ಅಕ್ಟೋಬರ್ 2022 ರಂದು ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರಲಿದೆ.

Recommended Video

Mirage 2000 Fighter Jet : ಇನ್ನೂ ಏನ್ ಏನ್ ಕಳ್ಳತನ ಮಾಡ್ತಾರೋ! | Oneindia Kannada
ಆನ್‌ಲೈನ್‌ ಮೂಲಕ ಸೂರ್ಯ ಗ್ರಹಣ ನೋಡಿ

ಆನ್‌ಲೈನ್‌ ಮೂಲಕ ಸೂರ್ಯ ಗ್ರಹಣ ನೋಡಿ

ಭಾರತದಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣವು ಕಾಣಸಿಗುವುದಿಲ್ಲ. ಆದರೆ ಆನ್‌ಲೈನ್‌ ಮೂಲಕ ಸೂರ್ಯ ಗ್ರಹಣವನ್ನು ವೀಕ್ಷಣೆ ಮಾಡಬಹುದು. ಗ್ರಹಣಗಳು ಭೂಮಿಯಿಂದ ಗೋಚರಿಸುವ ಆಸಕ್ತಿದಾಯಕ ಘಟನೆಗಳಲ್ಲಿ ಒಂದಾಗಿದೆ. ಅಂಟಾರ್ಕ್ಟಿಕಾದ ಯೂನಿಯನ್ ಗ್ಲೇಸಿಯರ್‌ನಿಂದ ಸಂಪೂರ್ಣ ಸೂರ್ಯಗ್ರಹಣದ ವೀಕ್ಷಣೆಯನ್ನು NASA YouTube ಚಾನಲ್‌ನಲ್ಲಿ ಮತ್ತು https://www.nasa.gov/nasalive ನಲ್ಲಿ ನೋಡಬಹುದಾಗಿದೆ. 4ನೇ ಡಿಸೆಂಬರ್ 2021 ರಂದು 12:00pm IST ನಿಂದ 2:07p.m IST ವರೆಗೆ ಸ್ಟ್ರೀಮ್ ಪ್ರಾರಂಭವಾಗುತ್ತದೆ.

English summary
Solar Eclipse 2021: Why not visible in India?. Explained in Kannada. Read on
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X