• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಕರಿ ನೆರಳಿನಲ್ಲಿ ಸೂರ್ಯಗ್ರಹಣ ದರ್ಶನ ಮಾಡಿ

|

ಬೆಂಗಳೂರು, ಜೂನ್ 16: ಸೌರವ್ಯೂಹ ಅಪರೂಪದ ವಿದ್ಯಮಾನಕ್ಕಾಗಿ ವಿಶ್ವದೆಲ್ಲೆಡೆ ವಿಜ್ಞಾನಿಗಳು, ಖಗೋಳವಿಜ್ಞಾನ ಆಸಕ್ತರು ಕಾದಿದ್ದಾರೆ. ಜೂನ್ 21ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ಬಾರಿ ಪೂರ್ಣ ಗ್ರಹಣ ಸಂಭವಿಸಲಿದ್ದು ರಿಂಗ್ ಆಫ್ ಫೈರ್ ನೋಡಲು ಎಲ್ಲರೂ ಕುತೂಹಲಿಗಳಾಗಿದ್ದಾರೆ.

   India to witness solar eclipse on June 21 | Solar Eclipse | Oneindia Kannada

   ಭಾರತದಲ್ಲಿ ಕೆಲ ಭಾಗಗಳಲ್ಲಿಉಂಗುರಾಕಾರದ ಗ್ರಹಣ ನೋಡಲು ಸಾಧ್ಯವಾಗಲಿದ್ದು, ಅಧ್ಯಯನಕ್ಕಾಗಿ ಸಕಲ ಸಿದ್ಧತೆ ಜಾರಿಯಲ್ಲಿದೆ, ಬರಿಗಣ್ಣಿನಿಂದ ಸೂರ್ಯಗ್ರಹಣ ನೋಡಲು ದಯವಿಟ್ಟು ಯತ್ನಿಸಬೇಡಿ ಎಂದು ಬೆಂಗಳೂರಿನ ನೆಹರೂ ತಾರಾಲಯದ ವಕ್ತಾರರು ಹೇಳಿದ್ದಾರೆ. ಕೊರೊನಾವೈರಸ್ ಸೋಂಕು ಭೀತಿ ಇರುವುದರಿಂದ ಈ ಬಾರಿ ಸೂರ್ಯಗ್ರಹಣ ವೀಕ್ಷಣೆಗೆ ಬರುವವರಿಗೆ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿ ಪಾಲಿಸುವುದು ಕಡ್ಡಾಯವಾಗಲಿದೆ.

   ಜೂನ್ 21ಕ್ಕೆ ಸೂರ್ಯ ಗ್ರಹಣದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮಗಳೇನು?

   ಗ್ರಹಣ ಆರಂಭ ಎಲ್ಲಿ? ಯಾವ ಪ್ರದೇಶದಲ್ಲಿ ಗೋಚರ: ರಾಜಸ್ಥಾನದ ಘರ್ಸಾನಾ ಬಳಿ ಬೆಳಗ್ಗೆ 10.12ರ ಸಮಯದಲ್ಲಿ ಮೊದಲು ಗ್ರಹಣ ಗೋಚರವಾಗಲಿದೆ. ಬೆಳಗ್ಗೆ 11.49ರ ಸಮಯದಲ್ಲಿ ಉಂಗುರಾಕಾರದ ಗ್ರಹಣ ಗೋಚರಿಸಲಿದೆ ಎಂದು ಎಂ.ಪಿ. ಬಿರ್ಲಾ ಪ್ಲಾನಿಟೋರಿಯಂ ನಿರ್ದೇಶಕ ದೇಬಿ ಪ್ರಸಾದ್ ದುವಾರಿ ತಿಳಿಸಿದ್ದಾರೆ.

    ಸೂರ್ಯಗ್ರಹಣ, ರಿಂಗ್ ಆಫ್ ಫೈರ್'

   ಸೂರ್ಯಗ್ರಹಣ, ರಿಂಗ್ ಆಫ್ ಫೈರ್'

   ಸೂರ್ಯಗ್ರಹಣದಲ್ಲಿ ಖಗ್ರಾಸಗ್ರಹಣ (ಪೂರ್ಣ ಪ್ರಮಾಣದ ಗ್ರಹಣ) ಹಾಗೂ ಕಂಕಣಗ್ರಹಣ (ಭಾಗಶಃ ಗ್ರಹಣ) ಎಂಬ ಎರಡು ಬಗೆ ಇವೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ ಪೂರ್ಣ ಆವರಿಸಿದ ಬಳಿಕ ರಿಂಗ್ ಆಫ್ ಫೈರ್ ಕಾಣಿಸುತ್ತದೆ. ಪ್ರಖರಿಸುವ ಗುಂಡನೆಯ ಸೂರ್ಯ, ಗ್ರಹಣ ಆವರಿಸಿದ ಸಂದರ್ಭದಲ್ಲಿ ಚಿನ್ನದ ಹೊಳಪಿನ ಉಂಗುರದಂತೆ ಗೋಚರಿಸುತ್ತಾನೆ. ಈ ಬಾರಿ ಪೂರ್ಣ ಪ್ರಮಾಣದ ಉಂಗುರಾಕಾರದ(annulus) ಗ್ರಹಣ ಗೋಚರಿಸಲಿದೆ.

    ಉಂಗುರಾಕಾರದಲ್ಲಿ ಸೂರ್ಯನನ್ನು ನೋಡಿ

   ಉಂಗುರಾಕಾರದಲ್ಲಿ ಸೂರ್ಯನನ್ನು ನೋಡಿ

   ಉಂಗುರಾಕಾರದಲ್ಲಿ ಸೂರ್ಯನನ್ನು ಗೋಚರಿಸುವಂತೆ ಮಾಡುವ ಗ್ರಹಣವನ್ನು 'ರಿಂಗ್ ಆಫ್ ಫೈರ್' ಎಂದೂ ಕರೆಯಲಾಗುತ್ತದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ. ಆಗ ಸೂರ್ಯನ ಸುತ್ತಲೂ ಉಂಗುರಾಕಾರದ ಬೆಳಕು ಕಾಣಿಸುತ್ತದೆ. ಸೂರ್ಯಗ್ರಹಣ ಆಗಾಗ್ಗೆ ಸಂಭವಿಸುತ್ತಿದ್ದರೂ, ಸೂರ್ಯನಿಗಿಂತ ತುಸು ಸಣ್ಣನೆ ಎದುರಾಗುವ ಚಂದ್ರನ ಸುತ್ತಲಿನಿಂದ ಬರುವ ಬೆಳಕು ಉಂಗುರವನ್ನು ಸೃಷ್ಟಿಸುತ್ತದೆ. ಈ ವಿದ್ಯಮಾನವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ.

   2020ರ ಸ್ಟ್ರಾಬೆರಿ ಚಂದ್ರಗ್ರಹಣ ನೋಡಲು ಏನಿದೆ ಕಾರಣ?

    ವಿಶ್ವದೆಲ್ಲೆಡೆ ಸೂರ್ಯಗ್ರಹಣ ಗೋಚಾರ

   ವಿಶ್ವದೆಲ್ಲೆಡೆ ಸೂರ್ಯಗ್ರಹಣ ಗೋಚಾರ

   ಟೈಮ್ ಅಂಡ್ ಡೇಟ್ ಡಾಟ್ ಕಾಂ ಮಾಹಿತಿಯಂತೆ ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ, ಪೆಸಿಫಿಕ್, ಹಿಂದೂ ಮಹಾಸಾಗರ, ಯುರೋಪಿನ ಕೆಲ ಭಾಗ ಹಾಗೂ ಆಸ್ಟ್ರೇಲಿಯಾದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಜೂನ್ 21ರಂದು 9.51 IST ಗೆ ಶುರುವಾದರೂ ಪೂರ್ಣ ಗ್ರಹಣ ದರ್ಶನ 10.17 PM ಕಾಣಬಹುದು. ಒಟ್ಟು 6 ಗಂಟೆಗಳಿಗೂ ಅಧಿಕ ಕಾಲ ಗ್ರಹಣದ ಅವಧಿಯಿದೆ.

   ರಾಜಸ್ಥಾನದ ಸೂರತ್ ಗಢ, ಅನೂಪ್ ಗಢ, ಹರ್ಯಾಣದ ಸಿರ್ಸಾ, ರತಿಯಾ ಹಾಗೂ ಕುರುಕ್ಷೇತ್ರ ಹಾಗೂ ಉತ್ತರಖಾಂಡದ ಡೆಹ್ರಾಡೂನ್, ಚಂಬ, ಚಮೋಲಿ ಹಾಗೂ ಜೋಶಿ ಮಠಗಳಲ್ಲಿ ಉಂಗುರಾಕಾರದ(annulus) ಗ್ರಹಣ ಗೋಚರಿಸಲಿದೆ.

    2020ರ ಡಿಸೆಂಬರ್ ನಲ್ಲಿ ಮತ್ತೆ ಸೂರ್ಯಗ್ರಹಣ

   2020ರ ಡಿಸೆಂಬರ್ ನಲ್ಲಿ ಮತ್ತೆ ಸೂರ್ಯಗ್ರಹಣ

   2020ರ ಡಿಸೆಂಬರ್ 15ರಂದು ಮತ್ತೆ ಸೂರ್ಯಗ್ರಹಣ ಸಂಭವಿಸಲಿದ್ದು, ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಹಾಗೂ ಆಫ್ರಿಕಾದಲ್ಲಿ ನೋಡಬಹುದು. ಅಂದು 7:03 AM IST ಗೆ ಶುರುವಾಗಿ 11:24 ಕ್ಕೆ ಪೂರ್ಣಗ್ರಹಣ ನೋಡಬಹುದು.

   English summary
   Solar Eclipse 2020 Date, Timings: When and Where to watch. The Annular solar eclipse will be visible from India and will also be visible in Africa. will last for six hours.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more