• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೊಲ್ಲಾಪುರ ಲೋಕಸಭಾ ಕ್ಷೇತ್ರದ ಪರಿಚಯ

|

ಕರ್ನಾಟಕದ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಜಿಲ್ಲೆ ಸೊಲ್ಲಾಪುರ. ಶ್ರೀ ಸಿದ್ದರಾಮೇಶ್ವರರ ಕರ್ಮಭೂಮಿ. ಮರಾಠಿಯಲ್ಲಿ ಸೊಲ್ಹಾಪುರ ಎಂದೂ ಇದನ್ನು ಕರೆಯಲಾಗುತ್ತದೆ.

ಉತ್ತರ-ದಕ್ಷಿಣ ರೈಲು ಹಾದಿಯಲ್ಲಿ ಇದೊಂದು ಪ್ರಮುಖವಾದ ಜಂಕ್ಷನ್.

ಅನೇಕ ಸಣ್ಣ ಕೈಗಾರಿಕೆಗಳು, ವಿದ್ಯುತ್ ಮಗ್ಗಗಳು, ಹತ್ತಿ ಗಿರಣಿಗಳು ಇಲ್ಲಿವೆ. ಸೊಲ್ಲಾಪುರದ ಚಾದರ ಅಥವ ಬೆಡ್‌ಶೀಟ್ ತಮ್ಮ ವಿನ್ಯಾಸಗಳಿಂದಾಗಿ ಜನರನ್ನು ಸೆಳೆಯುತ್ತವೆ. ರಾಜ್ಯದ ಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರದ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ.

ಲಾಥೂರ್ ಲೋಕಸಭಾ ಕ್ಷೇತ್ರದ ಪರಿಚಯ

ಉರದೈವ ಶ್ರೀ ಸಿದ್ದೇಶ್ವರ ಜಾತ್ರೆ, ಮಕರ ಸಂಕ್ರಾಂತಿಯಂದು ನಡೆಯುವ ನಂದಿಧ್ವಜ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಅಕ್ಕಲಕೋಟೆ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಾರೆ.

ಸೊಲ್ಲಾಪುರ ಕ್ಷೇತ್ರದ ಒಟ್ಟು ಜನಸಂಖ್ಯೆ 20, 18, 949. ಇವರಲ್ಲಿ ಶೇ 60.85ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ಶೇ 39.15ರಷ್ಟು ನಗರವಾಸಿಗಳಾಗಿದ್ದಾರೆ. ಶೇ 14.58ರಷ್ಟು ಎಸ್‌ಸಿ, ಶೇ 2.43ರಷ್ಟು ಎಸ್‌ಸಿ ಸಮುದಾಯದವರಿದ್ದಾರೆ.

ಕರ್ನಾಟಕದ ಗಡಿ ಭಾಗದಲ್ಲಿರುವ ಲೋಕಸಭಾ ಕ್ಷೇತ್ರ ಸೊಲ್ಲಾಪುರ. ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ಇದೂ ಒಂದು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶರದ್ ಬನಸೋಡೆ ಅವರು ಕಾಂಗ್ರೆಸ್‌ನ ಸುಶೀಲ್ ಕುಮಾರ್ ಶಿಂಧೆ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ.

2009ರ ಚುನಾವಣೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರನ್ನು ಬನಸೋಡೆ ಅವರನ್ನು ಸೋಲಿಸಿದ್ದರು. ಮುಂದಿನ ಚುನಾವಣೆಯಲ್ಲಿ ಫಲಿತಾಂದ ಅದಲು ಬದಲಾಯಿತು. ಈ ಬಾರಿ ಬನಸೋಡೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ.

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

ಸೊಲ್ಲಾಪುರ ಕ್ಷೇತ್ರವನ್ನು ಕಾಂಗ್ರೆಸ್ 11 ಬಾರಿಗೆ ಗೆದ್ದು ಬೀಗಿದೆ. ಕ್ಷೇತ್ರದಲ್ಲಿ ಬಿಜೆಪಿ ಬಲವಾಗುತ್ತಿದ್ದು, 1996ರ ಬಳಿಕ ನಾಲ್ಕು ಬಾರಿ ಕ್ಷೇತ್ರದಲ್ಲಿ ಜಯಸಾಧಿಸಿದೆ. ಈ ಬಾರಿ ಮಹಾರಾಷ್ಟ್ರದ ಬಿಜೆಪಿ ಆಡಳಿತ, ನರೇಂದ್ರ ಮೋದಿ ಅವರ ಅಲೆ ಮೇಲೆ ಗೆದ್ದು ಬರುವ ಉತ್ಸಾಹದಲ್ಲಿದ್ದಾರೆ. ಬನಸೋಡೆ.

ಸೊಲ್ಲಾಪುರ ಕ್ಷೇತ್ರದ ಜನಸಂಖ್ಯೆ 1594138. 825811 ಪುರುಷರು, 768327 ಮಹಿಳೆಯರು. ಕರ್ನಾಟಕದ ಗಡಿ ಭಾಗದಲ್ಲಿರುವ ಸೊಲ್ಲಾಪುರ ನಗರ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ.

ರಾಯಲಸೀಮೆಯ ಹೆಬ್ಬಾಗಿಲು ಕಡಪ ಲೋಕಸಭಾ ಕ್ಷೇತ್ರದ ಪರಿಚಯ

51 ವರ್ಷದ ಶರದ್ ಬನಸೋಡೆ ಅವರು ಲೋಕಸಭೆಯಲ್ಲಿ ಶೇ 93ರಷ್ಟು ಹಾಜರಾತಿ ಹೊಂದಿದ್ದಾರೆ. 7 ಚರ್ಚೆಗಳಲ್ಲಿ ಪಾಲ್ಗೊಂಡ ಅವರು 42 ಪ್ರಶ್ನೆಗಳನ್ನು ಕೇಳಿದ್ದಾರೆ.

ಕ್ಷೇತ್ರದ ಒಟ್ಟು ಮತದಾರರು 17,02, 755. ಇವರಲ್ಲಿ ಪುರುಷರು 8,93,736 ಮತ್ತು ಮಹಿಳೆಯರು 8,09,019. 2014ರ ಲೋಕಸಭಾ ಚುನಾವಣೆಯಲ್ಲಿ ಶೇ 56ರಷ್ಟು ಮತದಾನವಾಗಿತ್ತು. 9,51,201 ಜನರು ಮತದಾನ ಮಾಡಿದ್ದರು.

ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ

ಶರದ್ ಬನಸೋಡೆ ಅವರ ಬದಲು ಸ್ವಾಮೀಜಿಯೊಬ್ಬರಿಗೆ ಈ ಬಾರಿಯ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅಕ್ಕಲಕೋಟೆ ತಾಲೂಕಿನ ಗೌಡಗಾಂವ ಮಠದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭ್ಯರ್ಥಿಯಾಗಬಹುದು ಎಂಬ ಮಾತುಗಳು ಇವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Solapur Lok Sabha constituency profile. Solapur is one of the 48 Lok Sabha constituencies in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more