ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೂಮಪಾನಿಗಳಲ್ಲೇ ಹೆಚ್ಚಾಗುವ ಕೊರೊನಾವೈರಸ್ ತೀವ್ರತೆ ಮತ್ತು ಸಾವು!

|
Google Oneindia Kannada News

ನವದೆಹಲಿ, ಸಪ್ಟೆಂಬರ್ 28: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಅದೇ ಧೂಮಪಾನದಿಂದ ಕೊರೊನಾವೈರಸ್ ಸೋಂಕಿನ ತೀವ್ರತೆ ಮತ್ತು ಸಾವಿನ ಅಪಾಯ ಹೆಚ್ಚಾಗುತ್ತದೆ ಎಂಬ ಆಘಾತಕಾರಿ ಸುದ್ದಿ ಅಧ್ಯಯನವೊಂದರಿಂದ ಹೊರ ಬಿದ್ದಿದೆ.

ಸಾಂಕ್ರಾಮಿಕ ರೋಗದ ಆರಂಭದಲ್ಲಿ ನಡೆಸಿದ ಅಧ್ಯಯನಗಳಲ್ಲಿ ಆಸ್ಪತ್ರೆಗೆ ದಾಖಲಾದ ಸೋಂಕಿತರ ಬಗ್ಗೆ ಪರಾಮರ್ಶೆ ನಡೆಸಲಾಗಿತ್ತು. ಈ ವೇಳೆ ಸಾಮಾನ್ಯ ಸೋಂಕಿತರಿಗಿಂತ ಸಕ್ರಿಯ ಧೂಮಪಾನಿಗಳಲ್ಲಿ ಕೋವಿಡ್ -19 ತೀವ್ರತೆ ಹೆಚ್ಚಾಗಿರುವುದು ಗೊತ್ತಾಗಿದೆ.

ಕೊರೊನಾ ಸೋಂಕು ತಗುಲಿದ ಮೊದಲ 2 ವಾರ ಈ ಅಪಾಯ ಹೆಚ್ಚುಕೊರೊನಾ ಸೋಂಕು ತಗುಲಿದ ಮೊದಲ 2 ವಾರ ಈ ಅಪಾಯ ಹೆಚ್ಚು

ಥೋರಾಕ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು, ಧೂಮಪಾನಿಗಳಲ್ಲಿ ಕೊವಿಡ್-19 ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಖಾತ್ರಿಪಡಿಸುತ್ತಿದೆ. "ಧೂಮಪಾನವು ನಿಮ್ಮಲ್ಲಿ ಕೊರೊನಾವೈರಸ್ ಸೋಂಕಿನ ತೀವ್ರತೆ ಮತ್ತು ಅಪಾಯದ ಬಗ್ಗೆ ಗೊತ್ತಾಗಿದೆ. ಅಲ್ಲದೇ ಧೂಮಪಾನವು ಹೃದ್ರೋಗ, ವಿವಿಧ ಕ್ಯಾನ್ಸರ್‌ಗಳ ಅಪಾಯದ ಮೇಲೆ ಪರಿಣಾಮ ಬೀರುವಂತೆಯೇ, ಧೂಮಪಾನಕ್ಕೆ ಸಂಬಂಧಿಸಿದ ಇತರ ಎಲ್ಲ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುವಂತೆಯೇ, ಇದು ಕೋವಿಡ್‌ಗೆ ಪ್ರಭಾವ ಬೀರುತ್ತದೆ "ಎಂದು ಪ್ರಮುಖ ಸಂಶೋಧಕ ಆಶ್ಲೇ ಕ್ಲಿಫ್ಟ್ ಹೇಳಿದ್ದಾರೆ. "ಹಾಗಾಗಿ ಈಗ ಸಿಗರೇಟ್ ಬಿಡಲು ಮತ್ತು ಧೂಮಪಾನವನ್ನು ತೊರೆಯಲು ಉತ್ತಮ ಸಮಯ" ಎಂದು ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕ್ಲಿಫ್ಟ್ ಹೇಳಿದ್ದಾರೆ.

ದತ್ತಾಂಶಗಳ ಪರಾಮರ್ಶೆ ನಡೆಸಿದ ತಂಡ

ದತ್ತಾಂಶಗಳ ಪರಾಮರ್ಶೆ ನಡೆಸಿದ ತಂಡ

ಪ್ರಾಥಮಿಕ ಆರೈಕೆ ದಾಖಲೆಗಳು, ಕೋವಿಡ್ -19 ಪರೀಕ್ಷಾ ಫಲಿತಾಂಶಗಳು, ಆಸ್ಪತ್ರೆಯ ದಾಖಲಾತಿ ಡೇಟಾ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆದುಕೊಂಡ ಆಕ್ಸ್‌ಫರ್ಡ್, ಬ್ರಿಸ್ಟಲ್ ವಿಶ್ವವಿದ್ಯಾಲಯ ಮತ್ತು ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಪರಾಮರ್ಶೆ ನಡೆಸಿದೆ. ಕಳೆದ 2020ರ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ ಕೊವಿಡ್-19 ಮತ್ತು ಧೂಮಪಾನಿಗಳಲ್ಲಿನ ತೀವ್ರತೆಯನ್ನು ಅಳೆಯಲು ಯುಕೆ ಬಯೋಬ್ಯಾಂಕ್‌ನ 421,469 ಜನರ ಮೇಲೆ ಪರೀಕ್ಷೆ ನಡೆಸಲಾಯಿತು.

ಸಾಮಾನ್ಯರಿಗಿಂತ ಧೂಮಪಾನಿಗಳಲ್ಲಿ ಅಪಾಯ

ಸಾಮಾನ್ಯರಿಗಿಂತ ಧೂಮಪಾನಿಗಳಲ್ಲಿ ಅಪಾಯ

ಧೂಮಪಾನ ಮಾಡುವವರು ಮತ್ತು ಧೂಮಪಾನ ಮಾಡದವರ ನಡುವೆ ಹೋಲಿಕೆ ಮಾಡಿ ನೋಡಿದಾಗ ಶೇ.80ರಷ್ಟು ಧೂಮಪಾನಿಗಳಲ್ಲಿ ಕೊವಿಡ್-19 ಸೋಂಕಿನ ತೀವ್ರತೆ ಹಾಗೂ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯು ಹೆಚ್ಚಾಗಿದೆ. ಅಲ್ಲದೇ ಧೂಮಪಾನ ಮಾಡುವ ಕೊವಿಡ್-19 ಸೋಂಕಿತರಿಗೆ ಸಾವಿನ ಅಪಾಯ ಹೆಚ್ಚಾಗಿರುವುದು ಸಂಶೋಧನೆಯಲ್ಲಿ ಕಂಡು ಬಂದಿದೆ. ಧೂಮಪಾನ ಮತ್ತು ಭಾರೀ ಧೂಮಪಾನದ ಆನುವಂಶಿಕ ಪ್ರವೃತ್ತಿಯು ಇಂಗ್ಲೆಂಡಿನಲ್ಲಿ ವಾಸಿಸುವ 281,105 ಮೂಲ ಭಾಗವಹಿಸುವವರಲ್ಲಿ COVID-19 ತೀವ್ರತೆ ಪಾತ್ರ ಹೊಂದಿರಬಹುದೆಂದು ನಿರ್ಣಯಿಸಲು ಅವರು ಮೆಂಡೆಲಿಯನ್ ಯಾದೃಚ್ಛಿಕತೆಯನ್ನು ಬಳಸಿದರು.

ಮೆಂಡೆಲಿಯನ್ ಯಾದೃಚ್ಛಿಕತೆಯು ಒಂದು ನಿರ್ದಿಷ್ಟ ಅಪಾಯದ ಅಂಶಕ್ಕೆ ಆನುವಂಶಿಕ ರೂಪಾಂತರಗಳನ್ನು ಬಳಸುವ ಒಂದು ತಂತ್ರವಾಗಿದೆ. ಈ ಸಂದರ್ಭದಲ್ಲಿ ಆನುವಂಶಿಕ ರೂಪಾಂತರಗಳು ಯಾರನ್ನಾದರೂ ಹೆಚ್ಚು ಧೂಮಪಾನ ಮಾಡುವ ಅಥವಾ ಹೆಚ್ಚು ಧೂಮಪಾನಿಗಳನ್ನು ಪತ್ತೆ ಮಾಡುತ್ತವೆ. ಧೂಮಪಾನದ ಒಂದು ಆನುವಂಶಿಕ ಪ್ರವೃತ್ತಿಯು ಸೋಂಕಿನ ಶೇ.45ರಷ್ಟು ಹೆಚ್ಚಿನ ಅಪಾಯ ಮತ್ತು ಕೋವಿಡ್ -19ಗೆ ಆಸ್ಪತ್ರೆಯ ಪ್ರವೇಶದ ಶೇ.60ರಷ್ಟು ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ಈ ತಂತ್ರವು ಬಹಿರಂಗಪಡಿಸಿದೆ.

ಧೂಮಪಾನಿಗಳಲ್ಲಿ ಸಾವಿನ ಅಪಾಯ 10 ಪಟ್ಟು ಹೆಚ್ಚಳ

ಧೂಮಪಾನಿಗಳಲ್ಲಿ ಸಾವಿನ ಅಪಾಯ 10 ಪಟ್ಟು ಹೆಚ್ಚಳ

ಹೆಚ್ಚು ತಂಬಾಕು ಉತ್ಪನ್ನವನ್ನು ಬಳಸುವ ಹಾಗೂ ಧೂಮಪಾನ ಮಾಡುವುದು ಸೋಂಕಿನ ಅಪಾಯವನ್ನು ಎರಡು ಪಟ್ಟು ಹೆಚ್ಚಾಗಿಸುತ್ತದೆ. ಕೊವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಐದು ಪಟ್ಟು ಹೆಚ್ಚಾಗುತ್ತದೆ. ವೈರಸ್‌ನಿಂದ ಸಾವಿನ ಅಪಾಯದಲ್ಲಿ 10 ಪಟ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆಸ್ಪತ್ರೆಯ ಕೋವಿಡ್ -19 ಪರೀಕ್ಷಾ ದತ್ತಾಂಶವನ್ನು ಹೆಚ್ಚು ಪ್ರಾತಿನಿಧಿಕ ಸಮುದಾಯ ದತ್ತಾಂಶಗಳ ಮೇಲೆ ಅವಲಂಬಿಸಿದ್ದೇವೆ ಎಂದು ಒಪ್ಪಿಕೊಂಡರೂ, ಸಂಶೋಧಕರು ಎರಡೂ ವಿಶ್ಲೇಷಣೆಗಳಲ್ಲಿನ ಸಂಶೋಧನೆಗಳ ಸಾಮ್ಯತೆ ಸೂಚಿಸುತ್ತಾರೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,795 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 179 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, 26,030 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,36,97,581ಕ್ಕೆ ಏರಿಕೆಯಾಗಿದೆ. ಇದುವರೆಗೂ 32,9,58,002 ಸೋಂಕಿತರು ಗುಣಮುಖರಾಗಿದ್ದು, 4,47,373 ಜನರು ಸೋಂಕಿನಿಂದ ಸಾವಿನ ಮನೆ ಸೇರಿದ್ದಾರೆ. ಇದರ ಹೊರತಾಗಿ ದೇಶದಲ್ಲಿ 2,92,206 ಸಕ್ರಿಯ ಪ್ರಕರಣಗಳಿವೆ.

English summary
Smoking may increase risk of Coronavirus death and severity, study finds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X