ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗರೇಟ್ ಸೇದುವವರಿಗೆ ಸೋಂಕು ಬರೋದಿಲ್ವಾ? ಹೀಗನ್ನುತ್ತಿದೆ ಅಧ್ಯಯನ...

|
Google Oneindia Kannada News

ನವಜಾತ ಶಿಶುಗಳಿಂದ ಹಿಡಿದು ವಯೋವೃದ್ಧರನ್ನೂ ಕೊರೊನಾ ಸೋಂಕು ಬಿಟ್ಟಿಲ್ಲ. ಜೊತೆಗೆ ಕೊರೊನಾ ಸೋಂಕು ಪತ್ತೆಯಾದ ಆರಂಭದ ದಿನಗಳಲ್ಲಿ, ಸಿಗರೇಟ್ ಸೇದುವವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಯೂ ಹೆಚ್ಚು ಎಂದು ತಿಳಿಸಿ ತಂಬಾಕು ಸೇವನೆ ಕುರಿತಂತೆ ಕೆಲವು ದಿನಗಳು ಕಟ್ಟುನಿಟ್ಟಿನ ಕ್ರಮವನ್ನೂ ತೆಗೆದುಕೊಳ್ಳಲಾಗಿತ್ತು.

ಆದರೆ ಇದಕ್ಕೆ ತದ್ವಿರುದ್ಧವಾದ ಅಂಶವನ್ನು ಈಚೆಗೆ ನಡೆದ ಹೊಸ ಅಧ್ಯಯನ ಮುಂದಿಟ್ಟಿದೆ. ಧೂಮಪಾನ ಮಾಡುವವರಲ್ಲಿ ಕೊರೊನಾ ಸೋಂಕಿನ ಸಾಧ್ಯತೆ ಕಡಿಮೆ ಎಂದು ಈ ಅಧ್ಯಯನ ತಿಳಿಸಿದೆ. ಮುಂದೆ ಓದಿ...

ಮಹಿಳೆಯರಿಗೆ ಬೇಗ ಕೊರೊನಾ ಸೋಂಕು ತಗುಲುವುದಿಲ್ಲ, ಏಕೆ?ಮಹಿಳೆಯರಿಗೆ ಬೇಗ ಕೊರೊನಾ ಸೋಂಕು ತಗುಲುವುದಿಲ್ಲ, ಏಕೆ?

"ಧೂಮಪಾನಿ, ಸಸ್ಯಾಹಾರಿಗಳಿಗೆ ಸೋಂಕಿನ ಸಾಧ್ಯತೆ ಕಡಿಮೆ"

ಸಿಗರೇಟ್ ಸೇದುವವರಿಗೆ ಹಾಗೂ ಸಸ್ಯಾಹಾರಿಗಳಿಗೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇದೆ ಎಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಹಾಗೂ ಇಂಡಸ್ಟ್ರಿಯಲ್ ರಿಸರ್ಚ್ ತಿಳಿಸಿದೆ. ಕೊರೊನಾ ಸೋಂಕಿನ ಕುರಿತು ದೇಶಾದ್ಯಂತ ತನ್ನ ಸುಮಾರು 40 ಸಂಸ್ಥೆಗಳಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ.

"ಒ" ರಕ್ತದ ಗುಂಪಿನವರಿಗೆ ಸೋಂಕು ತಗುಲುವುದಿಲ್ಲವಾ?

ಇಷ್ಟಲ್ಲದೇ ರಕ್ತದ ಗುಂಪಿನ ಮಾದರಿಯಲ್ಲಿಯೂ ಸೋಂಕಿನ ಸಾಧ್ಯತೆಯನ್ನು ತೆರೆದಿಟ್ಟಿದೆ. "ಒ" ರಕ್ತದ ಗುಂಪು ಹೊಂದಿರುವವರಿಗೂ ಕೊರೊನಾ ತಗುಲುವ ಸಾಧ್ಯತೆ ಕಡಿಮೆ ಇರುವುದಾಗಿ ತಿಳಿಸಿದೆ. ಬಿ ಹಾಗೂ ಎಬಿ ರಕ್ತದ ಗುಂಪು ಇರುವ ಮಂದಿಗೆ ಸೋಂಕು ಹೆಚ್ಚು ಅಪಾಯಕಾರಿ ಎಂದು ತಿಳಿಸಿದೆ. ಆದರೆ ಇದಕ್ಕೆ ಮೂಲ ಕಾರಣಗಳನ್ನು ಅಧ್ಯಯನ ನೀಡಿಲ್ಲ.

 10,427 ಜನರ ಮಾದರಿಯಲ್ಲಿ ಪರೀಕ್ಷೆ

10,427 ಜನರ ಮಾದರಿಯಲ್ಲಿ ಪರೀಕ್ಷೆ

ಅಧ್ಯಯನಕ್ಕೆಂದು ಸಿಎಸ್ ಐ ಆರ್ ತನ್ನ ಲ್ಯಾಬೊರೇಟರಿಯಲ್ಲಿ ಕೆಲಸ ನಿರ್ವಹಿಸುವ 10,427 ಜನರ ಮಾದರಿಗಳನ್ನು ತೆಗೆದುಕೊಂಡಿತ್ತು. ಈ 10,427 ಮಂದಿಯಲ್ಲಿ 1,058 ಮಂದಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರತಿರೋಧಕ ಅಂಶಗಳನ್ನು ಹೊಂದಿದ್ದಾರೆ ಎಂದು ತಿಳಿಸಿತ್ತು.

 ಹಲವು ದೇಶಗಳಲ್ಲಿ ನಡೆದಿರುವ ಅಧ್ಯಯನ

ಹಲವು ದೇಶಗಳಲ್ಲಿ ನಡೆದಿರುವ ಅಧ್ಯಯನ

ಕೊರೊನಾ ಸೋಂಕು ಶ್ವಾಸಕೋಶಗಳ ಮೇಲೇ ಮೊದಲು ಪರಿಣಾಮ ಬೀರುವುದಾಗಿದ್ದು, ಧೂಮಪಾನ ಸೇವನೆ ದೇಹವನ್ನು ವೈರಸ್ ನಿಂದ ಕಾಪಾಡಬಲ್ಲದು ಎಂದು ಅಧ್ಯಯನ ತಿಳಿಸಿದೆ. ಫ್ರಾನ್ಸ್, ಇಟಲಿ, ನ್ಯೂಯಾರ್ಕ್ ಹಾಗೂ ಚೀನಾದಲ್ಲಿ ನಡೆದ ಅಧ್ಯಯನದಲ್ಲಿಯೂ ಇದೇ ಫಲಿತಾಂಶ ದೊರೆತಿದ್ದು, ಧೂಮಪಾನಿಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆ ಎಂದು ತಿಳಿಸಿವೆ.

"ಸಾರ್ವಜನಿಕ ಸಾರಿಗೆ ಬಳಸುವವರಲ್ಲಿ ಸೋಂಕು ಹೆಚ್ಚು"

ರಕ್ತದ ಗುಂಪಿಗೂ, ಸೋಂಕಿಗೂ ಇರುವ ಸಂಬಂಧದ ಕುರಿತು ಜನರಿಂದ ಆನ್ ಲೈನ್ ಸರ್ವೇ ಮೂಲಕ ಮಾಹಿತಿ ಪಡೆದಿದ್ದು, ಒ ರಕ್ತದ ಗುಂಪಿನವರಿಗೆ ಸೋಂಕು ತಗುಲಿರುವುದು ಕಡಿಮೆ ಎಂದು ಇದರಿಂದ ಕಂಡುಕೊಂಡಿದೆ. ರಕ್ತದ ಗುಂಪು, ವೃತ್ತಿ, ಹವ್ಯಾಸ, ಆಹಾರ ಕ್ರಮ, ವೈದ್ಯಕೀಯ ಹಿನ್ನೆಲೆ, ಪ್ರಯಾಣ ಹಿನ್ನೆಲೆ ಇವುಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸಾರ್ವಜನಿಕ ಸಾರಿಗೆ ಬಳಸುವ ಹೆಚ್ಚಿನ ಜನರಿಗೆ ಸೋಂಕು ತಗುಲಿದೆ ಎಂದು ಅಧ್ಯಯನ ತಿಳಿಸಿದೆ. ಭದ್ರತೆ, ಮನೆಗೆಲಸ, ಧೂಮಪಾನ ಮಾಡದ ಹಾಗೂ ಮಾಂಸಾಹಾರ ಸೇವನೆ ಮಾಡುವವರಲ್ಲಿ ಸೋಂಕಿನ ಸಾಧ್ಯತೆ ಹೆಚ್ಚು ಎಂದು ತಿಳಿಸಿದೆ.

 ಧೂಮಪಾನದ ಬಗ್ಗೆ ಎಚ್ಚರಿಕೆ ನೀಡಿದ್ದ ಸರ್ಕಾರ

ಧೂಮಪಾನದ ಬಗ್ಗೆ ಎಚ್ಚರಿಕೆ ನೀಡಿದ್ದ ಸರ್ಕಾರ

ಕಳೆದ ಜುಲೈನಲ್ಲಿ, ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದ್ದು, ಸಿಗರೇಟ್ ಸೇದುವಾಗ ಕೈಯಿಂದ ಬಾಯಿಗೆ ವೈರಸ್ ಹರಡಬಹುದು ಎಂಬ ದೃಷ್ಟಿಯಲ್ಲಿ ತಂಬಾಕು ಬಳಸದಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿತ್ತು. ಧೂಮಪಾನದಿಂದ ಶ್ವಾಸಕೋಶದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿ ಸಾವಿನಂಥ ಗಂಭೀರ ಪರಿಣಾಮವನ್ನೂ ಉಂಟು ಮಾಡುತ್ತದೆ ಎನ್ನಲಾಗಿತ್ತು. ಇದೀಗ ಇದಕ್ಕೆ ತದ್ವಿರುದ್ಧ ಮಾಹಿತಿಯನ್ನು ಅಧ್ಯಯನ ನೀಡಿದೆ.

English summary
Council of Scientific and Industrial Research analysed that smokers and vegetarians are lesser risk of affecting by coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X