ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್; ಕಂಪನಿಗಳ workstations ವಿನ್ಯಾಸಕ್ಕೂ ಸುರಕ್ಷಾ ನಿಯಮಗಳಿಗೆ ಒತ್ತಾಯ

By ನಾಗೇಶ್ ಕೆ.ಎನ್.
|
Google Oneindia Kannada News

ಲಾಕ್ ಡೌನ್ ಸಡಿಲವಾದಂತೆ ಜನಜೀವನ ಸುಗಮವಾಗುತ್ತಿದೆ. ಕಂಪನಿಗಳು ಕೆಲಸ ನಿರ್ವಹಿಸಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಗಳಿಗೆ ಇರುವ ಆರೋಗ್ಯ ಸುರಕ್ಷಾ ನಿಯಮಗಳನ್ನು ಕಂಪನಿಗಳಿಗೂ ತರಬೇಕು ಎಂಬ ಕೂಗು ಎದ್ದಿದೆ.

Recommended Video

ಗ್ಯಾಸ್ ಸೋರಿಕೆಯನ್ನು ನಿಲ್ಲಿಸಲಾಗಿದೆ ಎಂದ ಅಧಿಕಾರಿ | Vizag | Oneindia Kannada

ವಿಶ್ವವ್ಯಾಪಿ ಹಬ್ಬಿರುವ ಕೊರೊನಾ ವೈರಸ್ (ಕೋವಿಡ್-19) ಸೋಂಕು ಜನರ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ನಿಯಮ ಪಾಲಿಸಲಾಗಿಯೋ ಅಥವಾ ಸ್ವತಃ ಆರೋಗ್ಯ ಕಾಳಜಿಯಿಂದಲೋ ಜನರು ವೈಯಕ್ತಿಕ ಶುಚಿತ್ವಕ್ಕೆ ಮಹತ್ವ ಕೊಟ್ಟಿದ್ದಾರೆ. ಇದು ವ್ಯಕ್ತಿಗಳಿಂದ ಬಂದಿರುವ ಬದಲಾವಣೆ. ಅದೇ ರೀತಿ ಸಾಂಸ್ಥಿಕ ಮಟ್ಟದಲ್ಲಿ ಕೆಲವು ಬದಲಾವಣೆಗಳನ್ನು ತರಲು ಸರ್ಕಾರ ನೀತಿ ನಿಯಮಗಳನ್ನು ರೂಪಿಸಬೇಕೆಂದು ಸ್ಕೈ ಡೀಲ್ಸ್ ಕಂಪನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದೆ.

 ತಿಂಗಳಿಗಾಗುವಷ್ಟು ದಿನಸಿ ಕೊಟ್ಟು- ಕೈಗೊಂದಿಷ್ಟು ಕಾಸು ಕೊಡಿ... ತಿಂಗಳಿಗಾಗುವಷ್ಟು ದಿನಸಿ ಕೊಟ್ಟು- ಕೈಗೊಂದಿಷ್ಟು ಕಾಸು ಕೊಡಿ...

 ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದ ಸ್ಕೈಡೀಲ್ಸ್

ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದ ಸ್ಕೈಡೀಲ್ಸ್

ಭಾರತ, ಅಮೆರಿಕಾ, ಲಂಡನ್ ಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಸ್ಕೈ ಡೀಲ್ಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದೆ. ಜೊತೆಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೂ ಪತ್ರ ಬರೆಯಲಾಗಿದೆ.

 ಕೆಲಸದ ಸ್ಥಳ ವಿನ್ಯಾಸದ ನೀತಿ ನಿಯಮ ಜಾರಿಗೆ ಒತ್ತಾಯ

ಕೆಲಸದ ಸ್ಥಳ ವಿನ್ಯಾಸದ ನೀತಿ ನಿಯಮ ಜಾರಿಗೆ ಒತ್ತಾಯ

ಐ.ಟಿ. ಬಿ.ಟಿ. ರಿಯಲ್ ಎಸ್ಟೇಟ್ ಮತ್ತಿತರ ಖಾಸಗಿ ಕಂಪನಿಗಳು ತಮ್ಮ ನೌಕರರು ಕೆಲಸ ಮಾಡುವ ಸ್ಥಳ ವಿಶಾಲವಾಗಿರುವಂತೆ ನೋಡಿಕೊಳ್ಳಬೇಕು. ಪ್ರತಿ ನೌಕರರು ಕೂರುವ ಜಾಗ ಒಬ್ಬರಿಂದೊಬ್ಬರಿಗೆ ನಿರ್ದಿಷ್ಟ ಅಂತರವಿರಬೇಕು. ಆ ರೀತಿ ಕೆಲಸದ ಸ್ಥಳಗಳನ್ನು ವಿನ್ಯಾಸಗೊಳಿಸಬೇಕು. ಅದಕ್ಕಾಗಿ ಸರ್ಕಾರ ನೀತಿ ನಿಯಮಗಳನ್ನು ಈಗಿಂದೀಗಲೇ ಜಾರಿಗೆ ತರಬೇಕು ಎಂದು ಸ್ಕೈ ಡೀಲ್ಸ್ ಸರ್ಕಾರಕ್ಕೆ ಪತ್ರ ಬರೆದು ತಾಕೀತು ಮಾಡಿದೆ.

 ಸ್ಕೈಡೀಲ್ಸ್ ಸಂಸ್ಥೆಯ ಮುಖ್ಯಸ್ಥ ಸತೀಶ್ ಬಿ.ಎನ್. ಮಾತು...

ಸ್ಕೈಡೀಲ್ಸ್ ಸಂಸ್ಥೆಯ ಮುಖ್ಯಸ್ಥ ಸತೀಶ್ ಬಿ.ಎನ್. ಮಾತು...

ಒನ್ ಇಂಡಿಯಾ ದೊಂದಿಗೆ ಮಾತನಾಡಿದ ಸ್ಕೈಡೀಲ್ಸ್ ಸಂಸ್ಥೆಯ ಮುಖ್ಯಸ್ಥ ಸತೀಶ್ ಬಿ.ಎನ್., ‘ನೋಡಿ ಈಗ ಕೊರೊನಾ ವೈರಸ್ ಸೋಂಕಿನ ಕಾರಣ ನಾವೆಲ್ಲಾ ಎಲ್ಲೇ ಓಡಾಡಲಿ ಒಬ್ಬರಿಂದೊಬ್ಬರಿಗೆ ಅಂತರ ಕಾಪಾಡಿಕೊಳ್ಳುತ್ತೇವೆ. ಆಗಾಗ ಕೈ ತೊಳೆಯಲು ಸ್ಯಾನಿಟೈಜರ್ ಗಳನ್ನು ಬಳಸುತ್ತೇವೆ. ಮಾಸ್ಕ್ ಬಳಸುವುದು ಮಾಮೂಲಿಯಾಗಿದೆ. ಅದೇ ರೀತಿ ಪ್ರಸ್ತುತ ಕೊರೊನಾ ಸೋಂಕಿನ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪನಿಗಳು ಕೂಡ ತಮ್ಮ ಕಚೇರಿಗಳು, workstations (ಕೆಲಸದ ಸ್ಥಳಗಳು) ವಿಶಾಲವಾಗಿರುವಂತೆ ನೋಡಿಕೊಳ್ಳಬೇಕು. ನೈರ್ಮಲ್ಯೀಕರಣದ ಬಗ್ಗೆ ಮುತುವರ್ಜಿ ವಹಿಸಬೇಕು" ಎಂದಿದ್ದಾರೆ.

 workstation ಹೇಗಿರಬೇಕು?

workstation ಹೇಗಿರಬೇಕು?

"ನೌಕರರು ಒಬ್ಬರಿಂದೊಬ್ಬರು ಕನಿಷ್ಟ 6 ಅಡಿಗಳ ದೂರವಿರುವಂತೆ workstations ವಿನ್ಯಾಸ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸಂಸ್ಥೆಗಳು ತಮ್ಮ ನೌಕರರ ಆರೋಗ್ಯ ಕಾಳಜಿವಹಿಸಿದಂತಾಗುತ್ತದೆ. ಇದಕ್ಕೆ ಸರ್ಕಾರ ನೀತಿ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರ ಬಯಸಿದಲ್ಲಿ workstation interiors ಹೇಗಿರಬೇಕೆಂಬ model ಹಾಗೂ ನಿಯಮಗಳ ಕರಡನ್ನು ಸ್ಕೈಡೀಲ್ಸ್ ತಂಡ ಒದಗಿಸಲು ತಯಾರಿದೆ ಎಂಬುದಾಗಿಯೂ ಸತೀಶ್ ತಿಳಿಸಿದ್ದಾರೆ.

English summary
Sky Deals company of bengaluru insist government to introduce safety rules for designing companies workstations because of Coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X