ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತೀಯ ಸೇನಾ ಪಡೆ ನಿಯೋಜನೆ

ಪಾಕಿಸ್ತಾನಕ್ಕಿಂತ ಚೀನಾದಿಂದ ಭಾರತಕ್ಕೆ ಗಡಿಭಾಗದಲ್ಲಿ ಅಪಾಯ ಹೆಚ್ಚಿದೆ. ಕಳೆದ ಎರಡು ವರ್ಷಗಳಿಂದ ಇದು ಇನ್ನಷ್ಟು ಸ್ಪಷ್ಟವಾಗಿದೆ. ಚೀನಾದ ದುಸ್ಸಾಹಸಕ್ಕೆ ಪ್ರತಿಯಾಗಿ ಭಾರತ ಹೆಚ್ಚೆಚ್ಚು ಸೇನಾ ನಿಯೋಜನೆ ಮಾಡುತ್ತಿದೆ.

|
Google Oneindia Kannada News

ನವದೆಹಲಿ, ಮೇ 15: ಪಾಕಿಸ್ತಾನಕ್ಕಿಂತ ಚೀನಾದಿಂದ ಭಾರತಕ್ಕೆ ಗಡಿಭಾಗದಲ್ಲಿ ಅಪಾಯ ಹೆಚ್ಚಿದೆ. ಕಳೆದ ಎರಡು ವರ್ಷಗಳಿಂದ ಇದು ಇನ್ನಷ್ಟು ಸ್ಪಷ್ಟವಾಗಿದೆ. ಚೀನಾದ ದುಸ್ಸಾಹಸಕ್ಕೆ ಪ್ರತಿಯಾಗಿ ಭಾರತ ಹೆಚ್ಚೆಚ್ಚು ಸೇನಾ ನಿಯೋಜನೆ ಮಾಡುತ್ತಿದೆ. ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಇಂದು ಭಾನುವಾರ ಚೀನಾದೊಂದಿಗಿನ ವಾಸ್ತವ ಗಡಿನಿಯಂತ್ರಣ ರೇಖೆಯ ಭದ್ರಾ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪಾಕಿಸ್ತಾನವನ್ನು ಎದುರಿಸುವತ್ತ ಗಮನ ಕೊಟ್ಟಿದ್ದ ಸೇನಾ ಪಡೆಯ ಆರು ಡಿವಿಶನ್‌ಗಳನ್ನು ಈಗ ಚೀನಾದತ್ತ ನಿಯೋಜನೆ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ಲಡಾಖ್ ಗಡಿಭಾಗದಲ್ಲಿ ಚೀನಾ ಗಡಿ ಅತಿಕ್ರಮಣ ಮಾಡಲು ಯತ್ನಿಸಿದ್ದಲ್ಲೇ ಭಾರತೀಯ ಸೈನಿಕರ ಮೇಲೆ ಹಲ್ಲೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ತನ್ನ ಸೇನಾ ರಚನೆ ಮತ್ತು ನಿಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಪಾಕಿಸ್ತಾನದ ಮೇಲಿದ್ದ ಹೆಚ್ಚಿನ ಗಮನ ಈಗ ಚೀನಾದತ್ತ ನೆಡಲಾಗಿದೆ.

ಭಯೋತ್ಪಾದನೆ ನಿಗ್ರಹ ಕಾರ್ಯಕ್ಕೆ ನಿಯೋಜನೆಯಾಗಿದ್ದ ಆರು ಸೇನಾ ವಿಭಾಗಗಳು ಈಗ ಚೀನಾವನ್ನು ಎದುರಿಸಲು ತಯಾರಾಗಿವೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಇರುವ ವಿವಿಧ ಡಿವಿಶನ್‌ಗಳಲ್ಲಿ ಎರಡನ್ನು ಚೀನಾ ಗಡಿಭಾಗಕ್ಕೆ ನಿಯೋಜಿಸಲಾಗಿದೆ. ಈ ಎರಡು ಡಿವಿಶನ್‌ಗಳಲ್ಲಿ 35 ಸಾವಿರ ಯೋಧರಿದ್ದಾರೆ.

ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಪತ್ತೆಗೆ 12 ರಡಾರ್‌ ಖರೀದಿಸಿದ ಭಾರತೀಯ ಸೇನೆಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಪತ್ತೆಗೆ 12 ರಡಾರ್‌ ಖರೀದಿಸಿದ ಭಾರತೀಯ ಸೇನೆ

ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕೆ ನಿಯೋಜನೆಯಾಗಿರುವ ರಾಷ್ಟ್ರೀಯ ರೈಫಲ್ಸ್‌ನ ಒಂದು ಡಿವಿಶನ್ ಅವನ್ನು ಪೂರ್ವ ಲಡಾಖ್ ಸೆಕ್ಟರ್‌ಗೆ ಕಳುಹಿಸಲಾಗಿದೆ. ಈ ಸೆಕ್ಟರ್‌ನಲ್ಲಿ ಈಗಾಗಲೇ ಮೂರು ಡಿವಿಶನ್‌ಗಳು ನೆಲೆ ನಿಂತಿವೆ.

ಅಸ್ಸಾಮ್ ನೆಲೆಯ ಗಜರಾಜ್ ಕಾರ್ಪ್ಸ್ ವಿಭಾಗದ ಒಂದು ಡಿವಿಶಿನ್ ಅನ್ನು ಅಸ್ಸಾಮ್‌ನಿಂದ ಈಶಾನ್ಯ ಭಾಗದಲ್ಲಿರುವ ಚೀನಾ ಗಡಿಗೆ ನಿಯೋಜನೆ ಮಾಡಲಾಗಿದೆ. ಉತ್ತರಪ್ರದೇಶದಲ್ಲಿರುವ ಎರಡು ಆರ್ಮಿ ಡಿವಿಶನ್‌ಗಳನ್ನು ಲಡಾಖ್‌ನ ನಾರ್ತರ್ನ್ ಕಮಾಂಡ್‌ಗೆ ಹಾಕಲಾಗಿದೆ. ಈ ಎರಡು ಡಿವಿಶನ್‌ಗಳು ಈ ಮುಂಚೆ ಪಾಕಿಸ್ತಾನದ ಗಡಿಭಾಗದಲ್ಲಿ ಕಣ್ಗಾವಲು ಇಟ್ಟಿದ್ದವು.

India China border

ಹಾಗೆಯೇ, ಉತ್ತರಾಖಂಡ್ ಮೂಲದ ಒಂದು ಡಿವಿಶನ್ ಅನ್ನು ಸೆಂಟ್ರಲ್ ಕಮಾಂಡ್‌ಗೆ ನಿಯೋಜಿಸಲಾಗಿದೆ. ಭಾರತಕ್ಕೆ ಬಹಳ ಮುಖ್ಯವಾದ ಸೆಂಟ್ರಲ್ ಸೆಕ್ಟರ್‌ನಲ್ಲಿ ಈ ವಿಭಾಗದವರು ಹೈ ಅಲರ್ಟ್‌ನಲ್ಲಿರಲಿದ್ದಾರೆ. ಈ ಸೆಕ್ಟರ್‌ನಲ್ಲಿ ಚೀನೀಯರು ಹಲವು ಬಾರಿ ದುಸ್ಸಾಹಸ ಮಾಡಿರುವುದುಂಟು. ಹೀಗಾಗಿ, ಇಲ್ಲಿ ಉತ್ತರಾಖಂಡ್‌ನ ಈ ಪ್ರಹಾರ ಪಡೆಯ ಉಪಸ್ಥಿತಿ ಬಹಳ ಮುಖ್ಯ ಎನ್ನಲಾಗಿದೆ.

ಆರ್ಮಿ ಡಿವಿಶನ್ ಎಂದರೇನು?
ಇದು ವಿವಿಧ ಸೇನಾ ತಂಡಗಳ ರಚನೆಯಾಗಿದೆ. ಭಾರತೀಯ ಸೇನೆಯಲ್ಲಿ ಒಟ್ಟು 40 ಡಿವಿಶನ್‌ಗಳಿವೆ ಎಂಬ ಮಾಹಿತಿ ಇದೆ. ಪ್ರತಿಯೊಂದು ಡಿವಿಶನ್ ಅನ್ನು ಮೇಜರ್ ಜನರಲ್ ಸ್ತರದ ಸೇನಾಧಿಕಾರಿಯೊಬ್ಬರು ಮುನ್ನಡೆಸುತ್ತಾರೆ. ಒಂದು ಡಿವಿಶನ್‌ನಲ್ಲಿ 15 ಸಾವಿರ ಪಡೆಗಳು ಮತ್ತು 8 ಸಾವಿರ ಬೆಂಗಾವಲು ಪಡೆಗಳು ಇರುತ್ತವೆ.

ಭಾರತ ಈತ ತನ್ನ ಹೆಚ್ಚಿನ ಸೇನಾ ಶಕ್ತಿಯನ್ನು ಚೀನಾದ ಎದುರು ಇಟ್ಟಿರುವುದು ನೆರೆಯ ದೇಶಕ್ಕೆ ಒಂದು ಸ್ಪಷ್ಟ ಸೂಚನೆ ಎನಿಸಿದೆ. ಎಲ್‌ಎಸಿಯಲ್ಲಿ ಗಡಿಕ್ಯಾತೆಗೆ ಬಂದರೆ ನೋಡಿಕೊಂಡು ಸುಮ್ಮನಿರಲ್ಲ ಎಂಬ ಸಂದೇಶವನ್ನು ಚೀನಾಗೆ ಭಾರತ ಈ ಮೂಲಕ ಇತ್ತಂತಿದೆ. ಕಳೆದ ಕೆಲ ವರ್ಷಗಳಲ್ಲಿ ಚೀನಾದ ದುಸ್ಸಾಹಸವನ್ನು ಭಾರತ ಪ್ರಬಲವಾಗಿಯೇ ಹಿಮ್ಮೆಟ್ಟಿಸಿದೆ ಎಂದು ಹೇಳಲಾಗುತ್ತಿದೆ. ಭಾರತದ ಗಡಿಭಾಗದತ್ತ ಚೀನಾ ದೊಡ್ಡ ಸಂಖ್ಯೆಯಯಲ್ಲಿ ತುಕಡಿಗಳನ್ನು ನಿಯೋಜಿಸಿದ ಬೆನ್ನಲ್ಲೇ ಭಾರತ ಕೂಡ ಅಷ್ಟೇ ಸಂಖ್ಯೆಯ ಸೈನಿಕರನ್ನು ಚೀನಾ ಗಡಿಗೆ ಕಳುಹಿಸಿತ್ತು.

(ಒನ್ಇಂಡಿಯಾ ಸುದ್ದಿ)

English summary
Indian Army is recalibrating its forces to tackle China threat. Its six divisions are shifted from western border to northern areas facing China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X