ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಯಾ ಕೊಲೆಗಾರರಿಗೆ ಶಿಕ್ಷೆ ನೀಡಲು ಕಾರಣವಾದ ಸಾಕ್ಷಿಗಳೇನು?

|
Google Oneindia Kannada News

ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಡಿಸೆಂಬರ್ 23ರಂದು ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಪ್ರಮುಖ ಆರೋಪಿಗಳಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರೂ ತಪ್ಪಿತಸ್ಥರು ಎಂದು ಮಂಗಳವಾರದಂದು ತೀರ್ಪು ನೀಡಿದ್ದ ನ್ಯಾಯಾಲಯವು ಡಿ24ರಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. 229 ಪುಟಗಳ ಈ ಶಿಕ್ಷೆ ಆದೇಶ ಹೊರಡಿಸಲು ಕಾರಣವಾದ ಸಾಕ್ಷಿಗಳೇನು ಎಂಬುದರ ಬಗ್ಗೆ ವಿವರಣೆ ಇಲ್ಲಿದೆ...

1992ರ ಮಾರ್ಚ್ 27ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ 19 ವರ್ಷ ವಯಸ್ಸಿನ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.

ಸಿಸ್ಟರ್ ಅಭಯಾ ಸಾವು ಪ್ರಕರಣ: ಪಾದ್ರಿ ಥಾಮಸ್, ಸೆಫಿಗೆ ಜೀವಾವಧಿ ಶಿಕ್ಷೆ ಸಿಸ್ಟರ್ ಅಭಯಾ ಸಾವು ಪ್ರಕರಣ: ಪಾದ್ರಿ ಥಾಮಸ್, ಸೆಫಿಗೆ ಜೀವಾವಧಿ ಶಿಕ್ಷೆ

ಆದರೆ ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿಗೆ ಮನವಿ ಮಾಡಿದ್ದರು. ನಂತರ ಪ್ರಕರಣ ಕೈಗೆತ್ತಿಕೊಂಡ ಸಿಬಿಐ ಸುದೀರ್ಘ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.

ಅಭಯಾ ಸಾವಿಗೆ ಕಾರಣವಾದ ಗಾಯಗಳು

ಅಭಯಾ ಸಾವಿಗೆ ಕಾರಣವಾದ ಗಾಯಗಳು

ತಿರುವನಂತಪುರಂ ಸಿಬಿಐ ನ್ಯಾಯಾಲಯದ ನೀಡಿದ ತೀರ್ಪಿನ 228 ಪುಟಗಳಲ್ಲಿ 21 ವರ್ಷದ ಅಭಯಾ ಅವರ ಶವದ ಗಾಯದ ಗುರುತುಗಳನ್ನು ಪರಿಗಣಿಸಲಾಗಿದೆ. ಅಭಯಾ ಮೇಲೆ ಹಿಂಬದಿಯಿಂದ ದಾಳಿ ಮಾಡಲಾಗಿದ್ದು, ಕೊಡಲಿಯಿಂದ ನೆತ್ತಿ ಮೇಲೆ ಭಾರಿ ಪೆಟ್ಟು ಕೊಡಲಾಗಿದೆ. ಅಭಯಾ ಸಾವಿಗೆ ಇದೇ ಕಾರಣವಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆರೋಪಿಗಳಿಂದ ಸಾಕ್ಷ್ಯ ನಾಶ ಮಾಡಿದ್ದು ಸಾಬೀತು

ಆರೋಪಿಗಳಿಂದ ಸಾಕ್ಷ್ಯ ನಾಶ ಮಾಡಿದ್ದು ಸಾಬೀತು

ಅಭಯಾ ಕೊಂದ ಬಳಿಕ ಶವವನ್ನು ಬಾವಿಗೆ ಹಾಕಲಾಗಿದೆ. ಈ ಮೂಲಕ ಆತ್ಮಹತ್ಯೆ ಎಂದು ಕಥೆ ಕಟ್ಟಿ, ಸಾಕ್ಷಿ ನಾಶ ಮಾಡಲು ಯತ್ನಿಸಿದ್ದು ಸಾಬೀತಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

"ಆರೋಪಿಗಳಿಬ್ಬರಿಗೂ ಅಭಯಾ ಹತ್ಯೆಯೇ ಸಮಾನ ಉದ್ದೇಶವಾಗಿತ್ತು. ಇದನ್ನು ಮುಚ್ಚಿಹಾಕಲು ಸಾಕ್ಷ್ಯಗಳು ಕಣ್ಮರೆ ಮಾಡಲು ಉದ್ದೇಶದಿಂದಲೇ ಸಿಸ್ಟರ್ ಅಭಯ ಶವವನ್ನು ಬಾವಿಗೆ ಎಸೆದಿದ್ದಾರೆ. ಬಾವಿಗೆ ಬೀಳುವ ಸಂದರ್ಭದಲ್ಲಿ ಗಾಯಗಳು ಸಂಭವಿಸಿವೆ ಎಂದು ಕಥೆ ಕಟ್ಟಲು ಯತ್ನಿಸಿದ್ದಾರೆ ಎಂದು ಸಿಬಿಐ ಪರ ವಕೀಲರ ವಾದವನ್ನು ಸಿಬಿಐ ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ..

ಹತ್ಯೆ ನಡೆದ ಸ್ಥಳದ ಬಗ್ಗೆ ಕೋರ್ಟ್ ಗಮನ ಹರಿಸಿದ್ದೇನು?

ಹತ್ಯೆ ನಡೆದ ಸ್ಥಳದ ಬಗ್ಗೆ ಕೋರ್ಟ್ ಗಮನ ಹರಿಸಿದ್ದೇನು?

ಘಟನಾ ಸ್ಥಳವು ಈ ಪ್ರಕರಣದಲ್ಲಿ ಹೆಚ್ಚು ಮಹತ್ವದ್ದಾಗಿದೆ ಎಂದು ನ್ಯಾಯಾಲಯವು ಪರಿಗಣಿಸಿದೆ.

"ಇದು ಕಾನ್ವೆಂಟ್, ಪುರುಷ ಉಪಸ್ಥಿತಿಯನ್ನು ಸಂಪೂರ್ಣವಾಗಿ ಮತ್ತು ನಿಸ್ಸಂದಿಗ್ಧವಾಗಿ ನಿಷೇಧಿಸಿದ ಸ್ಥಳವಾಗಿದೆ. ಕೊಲೆಯಾದವರು ಸನ್ಯಾಸಿನಿ,ಯೇಸು ಕ್ರಿಸ್ತನ ವಧು" ಎಂದು ನ್ಯಾಯಾಲಯ ಹೇಳಿದೆ.

ಇದರರ್ಥ ಕೊಲೆಯ ಸಮಯದಲ್ಲಿ ಆರೋಪಿ ಫಾದರ್ ಥಾಮಸ್ ಕೊಟ್ಟೂರ್ ಕಾನ್ವೆಂಟ್‌ನಲ್ಲಿ ಇರುವುದು "ಕೆಟ್ಟ ವರ್ತನೆ" ಯನ್ನು ಸೂಚಿಸುತ್ತದೆ. ಕಾಲೇಜು ಹೊರಗೆ ಕಾನ್ವೆಂಟ್ ನಲ್ಲಿ ಪಾದ್ರಿ ಪ್ರವೇಶ ಹಾಗೂ ಅನುಚಿತ ವರ್ತನೆ ಸ್ಥಳದ ಪವಿತ್ರತೆಯನ್ನು ನಾಶ ಮಾಡಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಕೋರ್ಟ್ ಪರಿಗಣಿಸಿದ ಇನ್ನು ಕೆಲವು ಪ್ರಮುಖಾಂಶಗಳು

ಕೋರ್ಟ್ ಪರಿಗಣಿಸಿದ ಇನ್ನು ಕೆಲವು ಪ್ರಮುಖಾಂಶಗಳು

1. ಸಿಸ್ಟರ್ ಅಭಯಾ ಸಂತೋಷದಿಂದ ಜೀವನವನ್ನು ನಡೆಸುತ್ತಿದ್ದರು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಪರಿಸ್ಥಿತಿ ಎದುರಾಗಿರಲಿಲ್ಲ ಎಂದು ಕಾನ್ವೆಂಟ್ ಇತರೆ ನಿವಾಸಿಗಳು ಹೇಳಿಕೆ ನೀಡಿದ್ದಾರೆ.

2. ಪಾದ್ರಿ ಥಾಮಸ್ ಅವರು ನಿರಂತರವಾಗಿ ನಿರ್ಬಂಧಿತ ಪ್ರದೇಶವಾದರೂ ಕಾನ್ವೆಂಟ್ ಗೆ ಬರುತ್ತಿದ್ದರು ಎಂದು ಅಡುಗೆಯವರು ಸಾಕ್ಷಿ ಹೇಳಿದ್ದಾರೆ. ನಾಯಿಗಳಿಗೆ ಪಾದ್ರಿ ಪರಿಚಯ ಚೆನ್ನಾಗಿ ಇತ್ತು. ಹೀಗಾಗಿ, ಘಟನೆ ನಡೆದ ದಿನದಂದು ಪಾದ್ರಿ ಪ್ರವೇಶಿಸಿದರೂ ಕಾನ್ವೆಂಟ್ ನಾಯಿಗಳು ಕೂಡಾ ಯಾವುದೇ ಎಚ್ಚರಿಕೆ ನೀಡಲಿಲ್ಲ.

3. ಅಡಕ್ಕಾ ರಾಜು ಎಂಬ ಕಳ್ಳನೊಬ್ಬನ ಪ್ರತ್ಯಕ್ಷ್ಯ ಸಾಕ್ಷಿಯಾಗಿ ಪರಿಶೀಲಿಸಲಾಗಿದೆ. ಘಟನೆ ನಡೆದ ಹಿಂದಿನ ದಿನದಂದು ಇಬ್ಬರು ಪುರುಷರು ಕಾನ್ವೆಂಟ್ ಬಳಿ ಕಂಡಿದ್ದಾಗಿ ಹೇಳಿದ್ದು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.

4. ಫಾದರ್ ಕೊಟ್ಟೂರ್ ಅವರು ಸಿಸ್ಟರ್ ಸೆಫಿ ಜೊತೆಗೆ ಅನೈತಿಕ ಸಂಬಂಧ ಇದ್ದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಸೆಫಿ ಕೂಡಾ ತನ್ನ ಲೈಂಗಿಕ ಸಂಪರ್ಕದ ಬಗ್ಗೆ ನೀಡಿದ ಹೇಳಿಕೆ ಪ್ರಮುಖವಾಗಿದೆ.

5. ಆದರೆ, ಸೆಫಿ ಅವರು ತಮ್ಮನ್ನು ತಾವು ಕನ್ಯೆ ಎಂದು ರೂಪಿಸಲು ಹೈಮನೊಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಸಾಬೀತಾಗಿದೆ.

ಪಾದ್ರಿ ಹಾಗೂ ನನ್ ಮೇಲೆ ವಿಧಿಸಿದ ಶಿಕ್ಷೆ ಹಾಗೂ ದಂಡ

ಪಾದ್ರಿ ಹಾಗೂ ನನ್ ಮೇಲೆ ವಿಧಿಸಿದ ಶಿಕ್ಷೆ ಹಾಗೂ ದಂಡ

ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರಿಗೂ ಐಪಿಸಿ ಸೆಕ್ಷನ್ 302 ಅಡಿಯಲ್ಲಿ 5 ಲಕ್ಷ ರು ವಿಧಿಸಲಾಗಿದೆ ಹಾಗೂ ಸೆಕ್ಷನ್ 449 ಐಪಿಸಿಯಡಿಯಲ್ಲಿ ಹೆಚ್ಚುವರಿ 1 ಲಕ್ಷ ರು ದಂಡ ಹಾಕಲಾಗಿದೆ.

ಐಪಿಸಿ ಸೆಕ್ಷನ್ 201 ಯಡಿಯಲ್ಲಿ 7 ವರ್ಷ ಶಿಕ್ಷೆ, 50,000ರು ದಂಡ ಹಾಕಲಾಗಿದೆ.

ಸಿಸ್ಟರ್ ಅಭಯಾ ಪಾಲಕರಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪಾದ್ರಿ ಥಾಮಸ್ ಹಾಗೂ ಸೆಫಿ ಅವರು ಐಪಿಸಿ ಸೆಕ್ಷನ್ 302, 449, 201 ಅಡಿಯಲ್ಲಿ ಎದುರಿಸುತ್ತಿರುವ ದೋಷಾರೋಪಣ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಜಡ್ಜ್ ಕೆ ಸನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ರಕರಣ?:

ಏನಿದು ಪ್ರಕರಣ?:

1993 ಮಾರ್ಚ್ 29ಕ್ಕೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು.
ಫಾದರ್ ಥಾಮಸ್ ಎಂ.ಕೊಟ್ಟೂರ್( ಆರೋಪಿ 1), ಫಾದರ್ ಜೋಸ್ ಪೂತೃಕ್ಕಯಿಲ್, ಸಿಸ್ಟರ್ ಸೆಫಿ ಬಂಧಿಸಲಾಯಿತು. ಆದರೆ, ಎಲ್ಲರಿಗೂ ಜಾಮೀನು ಸಿಕ್ಕಿತ್ತು. 2018ರಲ್ಲಿ ಫಾದರ್ ಜೋಸ್ ಪೂತೃಕ್ಕಯಿಲ್ ಪ್ರಕರಣದಿಂದ ಖುಲಾಸೆಗೊಂಡಿದ್ದರು.

1992ರ ಮಾರ್ಚ್ 27ರಂದು ಕಾನ್ವೆಂಟ್ ರೂಮೊಂದರಲ್ಲಿ ಸಿಸ್ಟರ್ ಸೆಫಿ ಹಾಗೂ ಥಾಮಸ್ ಎಂ.ಕೊಟ್ಟೂರ್ ಇಬ್ಬರು ಅಪ್ಪಿಕೊಂಡು ಮುದ್ದಾಡುತ್ತಿದ್ದನ್ನು ಸಿಸ್ಟರ್ ಅಭಯಾ ಅಕಸ್ಮಾತ್ ನೋಡಿದ್ದಾರೆ. ನಂತರ ಕೊಟ್ಟೂರ್, ಜೋಸ್ ಹಾಗೂ ಸೆಫಿ ಸೇರಿಕೊಂಡು ಅಭಯಾರನ್ನು ಕೊಚ್ಚಿ ಕೊಂದು, ಬಾವಿಗೆ ಎಸೆಯಲಾಗಿತ್ತು ಎಂದು ಸಿಬಿಐ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿತ್ತು.

English summary
After 28 Years of Sister Abhaya’s Murder CBI Special Court sentences priest, nun to life imprisonment Know Which evidence that helped the court convict Sister Abhaya's killers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X