ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಪ್ರಕರಣ, 15 ಅಪರಾಧಿಗಳಿಗೆ ಏಕಕಾಲಕ್ಕೆ ಮರಣದಂಡನೆ; ಏನಿದು ಪ್ರಕರಣ?

|
Google Oneindia Kannada News

ಜಮ್ಶೆಡ್‌ಪುರ ನ್ಯಾಯಾಲಯವು ಒಂದೇ ಜೈಲಿನ ಒಂದೇ ಒಂದು ಪ್ರಕರಣದಲ್ಲಿ ಒಟ್ಟು 15 ಅಪರಾಧಿಗಳಿಗೆ ಏಕಕಾಲದಲ್ಲಿ ಮರಣದಂಡನೆ ವಿಧಿಸಿದೆ! ಇವರೆಲ್ಲರೂ ಥಳಿಸಿ ಜೈಲಿನೊಳಗೆ ವ್ಯಕ್ತಿಯೊಬ್ಬರ ಪ್ರಾಣವನ್ನೆ ತೆಗೆದಿದ್ದರು. ಈ ಕೈದಿಗಳು ಜೈಲಿನೊಳಗೆ ಅಧಿಕಾರ ಪಡೆಯುವ ಉದ್ದೇಶಕ್ಕಾಗಿ ವ್ಯಕ್ತಿಯನ್ನು ಕೊಂದಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ 7 ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಜಾರ್ಖಂಡ್‌ನ ಜಮ್ಶೆಡ್‌ಪುರ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ 15 ಅಪರಾಧಿಗಳಿಗೆ ಒಟ್ಟಿಗೆ ಮರಣದಂಡನೆ ವಿಧಿಸಿದೆ. ಜೆಮ್‌ಶೆಡ್‌ಪುರದ ಪರ್ಸುದಿಹ್‌ನಲ್ಲಿರುವ ಘಗಿಡಿಹ್ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಅದೇ ಜೈಲಿನಲ್ಲಿದ್ದ ಮನೋಜ್ ಸಿಂಗ್ ಎಂಬಾತನನ್ನು ಹೊಡೆದು ಕೊಂದಿದ್ದರು. ಎಡಿಜೆ-4ರ ನ್ಯಾಯಾಲಯವು ಖೈದಿ ಮನೋಜ್ ಸಿಂಗ್ ಹತ್ಯೆಗೆ ಈ 15 ಕೈದಿಗಳಿಗೆ ಮರಣದಂಡನೆ ವಿಧಿಸಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ 7 ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆಯು 25ಜೂನ್ 2019ರಂದು ಜೈಲಿನಲ್ಲಿಯೇ ಮನೋಜ್ ಸಿಂಗ್ ಹತ್ಯೆಯಾಯಿತು. ಮೃತ ಮನೋಜ್ ಸಿಂಗ್ ದರೋಡೆಕೋರ ಅಖಿಲೇಶ್ ಸಿಂಗ್ ತಂಡದ ಸದಸ್ಯನಾಗಿದ್ದ.

ಜೈಲಿನಲ್ಲೇ ಮನೋಜ್ ಸಿಂಗ್ ಕೊಲೆ ಯಾಕೆ?

ಜೈಲಿನಲ್ಲೇ ಮನೋಜ್ ಸಿಂಗ್ ಕೊಲೆ ಯಾಕೆ?

ಅಂದು ಜೂನ್ 25, 2019ರಂದು ಅಖಿಲೇಶ್ ಸಿಂಗ್ ಗ್ಯಾಂಗ್‌ನ ಹರೀಶ್ ಸಿಂಗ್ ಮತ್ತು ಖೈದಿ ಪಂಕಜ್ ದುಬೆ ನಡುವೆ ಜೈಲಿನ ಟೆಲಿಫೋನ್ ಬೂತ್‌ನಲ್ಲಿ ಮಾತನಾಡುವ ವಿಚಾರದಲ್ಲಿ ಜಗಳವಾಗಿತ್ತು ಎಂದು ಹೇಳಲಾಗುತ್ತಿದೆ. ಇದರಲ್ಲಿ ಹರೀಶ್ ಸಿಂಗ್ ಗ್ಯಾಂಗ್‌ನ ಸದಸ್ಯರಾದ ಸುಮಿತ್ ಸಿಂಗ್, ಮನೋಜ್ ಕುಮಾರ್ ಸಿಂಗ್, ಅವಿನಾಶ್ ಶ್ರೀವಾಸ್ತವ ಮತ್ತಿತರರು ಇದ್ದರು. ಪಂಕಜ್ ದುಬೆ ಅವರನ್ನು ಥಳಿಸಿದ್ದರು. ಈ ದಾಳಿಯನ್ನು ಪ್ರತಿಭಟಿಸಿ ಕೈದಿಗಳು ಹರೀಶ್ ಸಿಂಗ್ ಬಣದ ಮೇಲೆ ಹಲ್ಲೆ ನಡೆಸಿ ಕೋಲಾಹಲ ಸೃಷ್ಟಿಸಿದ್ದರು.

ಜೈಲಿನಲ್ಲಿ 15 ಜನ ಕೈದಿಗಳು ಮನೋಜ್‌ನ್ನು ಕೊಂದರು

ಜೈಲಿನಲ್ಲಿ 15 ಜನ ಕೈದಿಗಳು ಮನೋಜ್‌ನ್ನು ಕೊಂದರು

ದಾಳಿಯ ವೇಳೆ ಮನೋಜ್ ಸಿಂಗ್ ತಪ್ಪಿಸಿಕೊಂಡು ಜೈಲಿನ ಅರುಣಿ ಸೆಲ್ ನ ಮೇಲಿನ ಮಹಡಿಯಲ್ಲಿ ತಲೆಮರೆಸಿಕೊಂಡಿದ್ದ. ಇದಾದ ನಂತರ ಈ 15 ಕೈದಿಗಳು ಮನೋಜ್ ಸಿಂಗ್ ಅವರನ್ನು ಕಂಡು ತೀವ್ರವಾಗಿ ಥಳಿಸಿದ್ದಾರೆ. ಇದಾದ ನಂತರ ಮನೋಜ್ ಸಿಂಗ್ ಅವರನ್ನು ಜೈಲಿನಿಂದ ಎಂಜಿಎಂ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಜೈಲಿನಲ್ಲೆ ಹೊಡದಾಡಿಕೊಂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನ್ಯಾಯಾಧೀಶರು 15 ಖೈದಿಗಳಗೆ ಮರಣದಂಡನೆ ವಿಧಿಸಿರುವ ಈ ಘಟನೆಯು ಅಚ್ಚರಿ ಮೂಡಿಸಿದೆ.

ಏಕಕಾಲಕ್ಕೆ 15 ಕೈದಿಗಳಿಗೆ ಮರಣದಂಡನೆ

ಏಕಕಾಲಕ್ಕೆ 15 ಕೈದಿಗಳಿಗೆ ಮರಣದಂಡನೆ

ಈ ಕೊಲೆ ಪ್ರಕರಣವನ್ನು ಜೈಲಿನೊಳಗೆ ಅಧಿಕಾರ ಪಡೆಯುವ ಸಂಚು ಎಂದು ವಿಚಾರಣೆ ನಡೆಸಿದಾಗ, ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಸಿನ್ಹಾ ಅವರಿಗೆ ಮರಣದಂಡನೆ ವಿಧಿಸಿದರು. ಜಮ್ಶೆಡ್‌ಪುರ ನ್ಯಾಯಾಲಯದ ಮೊದಲ ಪ್ರಕರಣ ಇದಾಗಿದ್ದು, ದೊಡ್ಡ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೆ ಶಿಕ್ಷೆಯಾಗಿದೆ.

ಜೂನ್ 25, 2019 ರಂದು ಜೈಲಿನಲ್ಲಿ ಎರಡು ಗುಂಪುಗಳ ಕೈದಿಗಳು ಘರ್ಷಣೆ ನಡೆಸಿದರು. ಹಿಂಸಾಚಾರದಲ್ಲಿ ಇಬ್ಬರು ಕೈದಿಗಳು ತೀವ್ರವಾಗಿ ಗಾಯಗೊಂಡರು ಮತ್ತು ಅವರಲ್ಲಿ ಒಬ್ಬರಾದ ಮನೋಜ್ ಕುಮಾರ್ ಸಿಂಗ್ ಅವರು ಆಸ್ಪತ್ರೆಯ ದಾರಿಯಲ್ಲಿ ಸಾವನ್ನಪ್ಪಿದರು.

ಮರಣದಂಡನೆಗೆ ಗುರಿಯಾದ ಕೈದಿಗಳು

ಮರಣದಂಡನೆಗೆ ಗುರಿಯಾದ ಕೈದಿಗಳು

ಬಸುದೇವ್ ಮಹತೋ, ರಾಮೇಶ್ವರ ಅಂಗರಿಯಾ, ಗಂಗಾ ಖಂಡೈತ್, ಅರೂಪ್ ಕುಮಾರ್ ಬೋಸ್, ರಾಮಯ್ ಕರುವ, ಜಾನಿ ಅನ್ಸಾರಿ, ಅಜಯ್ ಮಲ್ಲಾಹ್, ಪಂಚಾನಂದ್ ಪಾತ್ರೋ, ಗೋಪಾಲ್ ತಿರಿಯಾ, ಪಿಂಕು ಪೂರ್ಣಿ, ಶ್ಯಾಮು ಜೊಜೊ, ಸಂಜಯ್ ಡಿಗ್ಗಿ, ರಾಮ್ ರೈ ಸೂರಿನ್, ಶಿವಶಂಕರ್ ಪಾಸ್ವಾನ್ ಮರಣದಂಡನೆಗೆ ಗುರಿಯಾದ ಕೈದಿಗಳು. ಇನ್ನು ಇದೇ ಪ್ರಕರಣದಲ್ಲಿ ಆರೋಪಿಗಳಾದ ರಿಷಿ ಲೋಹರ್, ಸುಮಿತ್ ಸಿಂಗ್, ಸಂಜಿತ್ ದಾಸ್, ತೌಕೀರ್, ಸೌರಭ್ ಸಿಂಗ್, ಸೋನು ಲಾಲ್ ಮತ್ತು ಶೋಯೆಬ್ ಅಖ್ತರ್ ಅಲಿಯಾಸ್ ಶಿವ ಅವರಿಗೂ ಸಹ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

English summary
The court sentenced the 15 people to death by hanging after convicting them under IPC sections 302 (murder) and 120B (criminal conspiracy).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X