ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಮಾಸ್ತ, ಶಿಕ್ಷಕ, ಪತ್ರಕರ್ತ ದಯಾನಂದ್ ಈಗ ಶಿವಮೊಗ್ಗ ಜಿಲ್ಲಾಧಿಕಾರಿ

By Mahesh
|
Google Oneindia Kannada News

ಕೆಎಎಸ್ ಅಧಿಕಾರಿಗಳು ಐಎಎಸ್ ಅಧಿಕಾರಿಗಳಾಗಿ ಬಡ್ತಿ ಪಡೆದು ಸೇವೆ ಸಲ್ಲಿಸಿದ ಅನೇಕ ಸಮರ್ಥ ಆಡಳಿತಗಾರರನ್ನು ಕರ್ನಾಟಕದಲ್ಲಿ ಕಾಣಬಹುದು. ಕೆಳ ಹಂತದಿಂದ ತಮ್ಮ ಪರಿಶ್ರಮ, ಪ್ರತಿಭೆ ಮೂಲಕ ಮೇಲಕ್ಕೆ ಬಂದು ಜಿಲ್ಲಾಧಿಕಾರಿಯಂಥ ದೊಡ್ಡ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಪಡೆದವರು ಅಪರೂಪ. ಚಿಕ್ಕಮಗಳೂರಿನ ಡಿಸಿಯಾಗಿ ವರ್ಗಾವಣೆಗೊಂಡು ನಂತರ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದಿರುವ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರ ವೃತ್ತಿ ಬದುಕಿನ ಸ್ಥೂಲ ಚಿತ್ರಣ ಇಲ್ಲಿದೆ

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲುವಿನ ಬಡ ಕುಟುಂಬವೊಂದರಲ್ಲಿ ಹುಟ್ಟಿದ ದಯಾನಂದ್ ಅವರ ವಿದ್ಯೆಗೆ ಯಾವ ಬಡತನವೂ ಇರಲಿಲ್ಲ. ಮೈಸೂರಿನಲ್ಲಿ ಹೈಸ್ಕೂಲ್ ತನಕ ಶಿಕ್ಷಣ ಪಡೆದ ಬಳಿಕ ಬೆಂಗಳೂರಿನಲ್ಲಿ ಕಾಲೇಜು ಸೇರಿ ಬಿಎಡ್ ಗಳಿಸಿದರು.

ಕೂಲಿ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡಿದೆ: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದಕೂಲಿ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡಿದೆ: ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಯಲ್ಲಿ ಎಂ.ಎ ಎಕನಾಮಿಕ್ಸ್ ಮಾಸ್ಟರ್ ಪದವಿ ಪಡೆದರು. ವ್ಯಾಸಂಗದ ಸಮಯದಲ್ಲೇ ಪಾರ್ಟ್ ಟೈಮ್ ಉದ್ಯೋಗಗಳಲ್ಲಿ ತೊಡಗಿಕೊಂಡು ಖರ್ಚು ವೆಚ್ಚ ನಿಭಾಯಿಸಿಕೊಂಡರು.

ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ದಯಾನಂದ್ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿಯ ಜನ್ನಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ದುಡಿದಿದ್ದಾರೆ. ಪತ್ರಿಕೆಯೊಂದರಲ್ಲಿ ಅಂಕಣಗಾರರಾಗಿ ಪತ್ರಕರ್ತ ಎನಿಸಿಕೊಂಡವರು.

ಆಗ ಸಾಫ್ಟ್ ವೇರ್ ಇಂಜಿನಿಯರ್, ಈಗ ಕೊಪ್ಪಳದ ಜಿಲ್ಲಾಧಿಕಾರಿಆಗ ಸಾಫ್ಟ್ ವೇರ್ ಇಂಜಿನಿಯರ್, ಈಗ ಕೊಪ್ಪಳದ ಜಿಲ್ಲಾಧಿಕಾರಿ

ಸರಳ ವ್ಯಕ್ತಿತ್ವದ ದಯಾನಂದ್ ಅವರ ಪ್ರಮಾಣಿಕ ಹಾಗೂ ಸಾರ್ವಜನಿಕ ಸ್ನೇಹಿ ನಿರ್ಧಾರಗಳಿಂದ ಸೇವೆ ಸಲ್ಲಿಸಿರುವ ಕ್ಷೇತ್ರಗಳಲ್ಲಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿರುವುದು ವಿಶೇಷ.

ಮಾಹಿತಿ ಕೃಪೆ: ಶಿವಮೊಗ್ಗ ವಾರ್ತಾ ಇಲಾಖೆ, ನಂದೀಶ್ ಹಾಗೂ ರಾಧಾಕೃಷ್ಣ, ಬೆಂಗಳೂರು, ಚಿತ್ರಕೃಪೆ: ದಯಾನಂದ್ ಅವರ ಫೇಸ್ ಬುಕ್ ಪುಟ.

ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ

ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ

* 2007ರಲ್ಲಿ ಜುಲೈನಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ.
* 2009ರಿಂದ ಬೆಂಗಳೂರಿನ ಬಿಡಿಎ ಕಚೇರಿಯಲ್ಲಿ ಕೆಲಸ
* 2011ರಲ್ಲಿ ಪುನಃ ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿ ನಂತರ ಮಂಗಳೂರಿನಲ್ಲಿ ಎಡಿಸಿಯಾಗಿ ಕಾರ್ಯ ನಿರ್ವಹಿಸಿದರು.
* 2014ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಐಎಎಸ್‍ಗೆ ಉನ್ನತೀಕರಣವಾಯಿತು.
* ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ, ಬೆಂಗಳೂರು ಗ್ರಾಮಾಂತರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಈಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ.

ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿದ್ದ ಕಾಲ

ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿದ್ದ ಕಾಲ

1.ದತ್ತಪೀಠ ಸಮಸ್ಯೆ ಆಗಿ ಕಾಡದಂತೆ ಸಾಮರಸ್ಯ ನಿರ್ವಹಣೆ
2 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯವಾಗಿ ಕಿರು ವಿದ್ಯುತ್, ಮೂಲ ಸೌಕರ್ಯ ಅಭಿವೃದ್ಧಿ
3. ಚಿಕ್ಕಮಗಳೂರು ವಿಜ್ಞಾನ ಕೇಂದ್ರದ ಕ್ರಿಯಾತ್ಮಕ ಕೆಲಸಗಳ ಪ್ರೇರಕ ಶಕ್ತಿ
4. ಪಹಣಿ ಭೂದಾಖಲೆಗಳ ಸರಿಪಡಿಸುವ ಅಭಿಯಾನದ ಮೂಲಕ ಶೇ 95ರಷ್ಟು ಸಮಸ್ಯೆ ನಿವಾರಣೆ.
5. ನಕ್ಸಲ್ ಸಮಸ್ಯೆ ನಿವಾರಣೆ, ಎನ್ ಕೌಂಟರ್ ಸಮಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿ

1. ಸಂಪೂರ್ಣ ಪಾರದರ್ಶಕ ಗ್ರಾಹಕಸ್ನೇಹಿ ಇ ಆಡಳಿತ ಅನುಷ್ಠಾನ ಮಾಡಿದ ಮೊದಲ ಇಲಾಖೆ
2. ಕಣಜ ಜ್ಞಾನ ಕೋಶದ ಸಮರ್ಥ ನಿರ್ವಹಣೆ
3. ಇಲಾಖೆಯ ಹಲವು ಫಲಾನುಭವಿ ಯೋಜನೆಗಳ ಆನ್ ಲೈನ್ ವ್ಯವಸ್ಥೆ ನಿರೂಪಣೆ
4. ಇಲಾಖೆಯ ದಾಖಲೆಗಳ ಡಿಜಿಟಲ್ ಮಾದರಿ ಸಂರಕ್ಷಣೆ
5. ಇಲಾಖೆಯ ಚಟುವಟಿಕೆ ಮತ್ತು ಯೋಜನೆಗಳಿಗೆ ಮಾರ್ಗಸೂಚಿ ರಚನೆ.

ಪತ್ರಾಗಾರ ಇಲಾಖೆ ನಿರ್ದೇಶಕರಾಗಿ

ಪತ್ರಾಗಾರ ಇಲಾಖೆ ನಿರ್ದೇಶಕರಾಗಿ

1. ಇಲಾಖೆಯ ಸಾರ್ವಜನಿಕ ಮಾಹಿತಿ ದಾಖಲೆಗಳು ರಾಷ್ಟ್ರದಲ್ಲೇ ಮೊದಲ ಬಾರಿಗೆ ಅಂತರ್ಜಾಲ ಮೂಲಕ ಲಭ್ಯ.
2. ಇಲಾಖೆಯಲ್ಲಿ ಇ ಆಡಳಿತ ಮೂಲಕ ಕಾಲಬದ್ಧ ಆಡಳಿತ ವ್ಯವಸ್ಥೆ ಜಾರಿ
3. ಸರ್ಕಾರದ ಸಚಿವಾಲಯ ಕಡತಗಳ ನಿರ್ವಹಣಾ ವ್ಯವಸ್ಥೆ ಗೆ ಚುರುಕು.
4. ಇಲಾಖೆಯ ಭಂಡಾರದಲ್ಲಿ ಇದ್ದ ಮೋಡಿ ಲಿಪಿ ಹಸ್ತಪ್ರತಿ ಸಂಪಾದನೆ & ಪ್ರಕಟಣೆ
5. ಇಲಾಖೆಯ ಐತಿಹಾಸಿಕ ದಾಖಲೆ ಡಿಜಿಟೈಸೇಷನ್ ಕಾರ್ಯಕ್ಕೆ ಚಾಲನೆ
6. ಕಲಬುರ್ಗಿ ವಿಭಾಗ ಕಚೇರಿ ಸ್ಥಾಪನೆಗೆ ಶ್ರಮ
7. ಬೇರೆ ರಾಜ್ಯದ ಮತ್ತು ರಾಷ್ಟ್ರೀಯ ಪತ್ರಾಗಾರದಲ್ಲಿ ಲಭ್ಯವಿರುವ ರಾಜ್ಯಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹಕ್ಕೆ ಶ್ರಮ.

ಬೆಂಗಳೂರು ಗ್ರಾಮಾಂತರ ಜಿ.ಪಂ ಸಿಇಒ/ ನಗರ ಡಿಸಿ

ಬೆಂಗಳೂರು ಗ್ರಾಮಾಂತರ ಜಿ.ಪಂ ಸಿಇಒ/ ನಗರ ಡಿಸಿ

1. ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ
2. ರಾಜ್ಯದಲ್ಲಿ ಪ್ರಗತಿ/ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದುಳಿದಿದ್ದ ಜಿಲ್ಲೆಯನ್ನು ಪ್ರಥಮ ಸ್ಥಾನದ ಕಡೆಗೆ ಮುನ್ನಡೆಸುವಲ್ಲಿ ವಿಶೇಷ ಶ್ರಮ.
3. ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿಗಳ ಆಯೋಜನೆ
4. ಯೋಜನೆಗಳ ಅನುಷ್ಠಾನಕ್ಕೆ ಚುರುಕು.

#ಬೆಂಗಳೂರು_ನಗರ_ಜಿಲ್ಲಾಧಿಕಾರಿ ಆಗಿ
1. ವಿಧಾನಸಭೆ, ಪರಿಷತ್ ಚುನಾವಣೆ ವಿವಾದರಹಿತವಾಗಿ ನಿರ್ವಹಣೆ.
2. ಚುನಾವಣಾ ಸಂಧರ್ಭದಲ್ಲಿ ಜಿಲ್ಲಾಧಿಕಾರಿಗಳು ಕೋರ್ಟ್ ನಡೆಸುವುದೆ ಕನಸು. ಆದರೆ 109 ದಿನದಲ್ಲಿ ಚುನಾವಣಾ ಕಾರ್ಯದ ಜೊತೆಗೆ 120 ಕ್ಕೂ ಹೆಚ್ಚು ಆದೇಶಗಳನ್ನು ತಾನೆ ಬರೆದು ಟೈಪ್ ಮಾಡಿ ಆದೇಶ ಹೊರಡಿಸಿದ್ದು ವಿಶೇಷ.
3. ಅನಧಿಕೃತವಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸುವ ದಂಧೆ ಗುರುತಿಸಿ 8272 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ನಾಲ್ಕೈದು ಜನ ಕಂಬಿ ಎಣಿಸುತ್ತಿದ್ದಾರೆ.

English summary
Profile: Shivamogga Deputy Commissioner K.A Dayanand journey from FDC to DC is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X