ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ: ಹಿಂಸೆಗೆ ದೂಡಿದವರಿಂದ ಇಂದು ಅನುಕಂಪದ ನಾಟಕ!

By ಡಾ.ಹೆಚ್ ಸಿ ಮಹದೇವಪ್ಪ
|
Google Oneindia Kannada News

ಈಗಾಗಲೇ ಹೇಳಿದಂತೆ ಚುನಾವಣಾ ವರ್ಷದಲ್ಲಿ ನಡೆಯುವಂತಹ ಹಿಂಸಾಚಾರಗಳು ಮೊದಲಾಗಿದ್ದು ಈ ಸಾಲಿಗೆ ಶಿವಮೊಗ್ಗದ ಅಮಾಯಕ ಹುಡುಗನೊಬ್ಬನ ಬಲಿಯಾಗಿದೆ. ಈತನ ಹಿನ್ನಲೆಯ ಜಾಡು ಹಿಡಿದು ಹೊರಟಾಗ ಈತನೂ ಕೂಡಾ ಬಿಜೆಪಿ ಮತ್ತು ನಕಲಿ ಹಿಂದುತ್ವ ಸಂಘಟನೆಗಳ ಬಲಿಪಶು ಎಂಬ ಸಂಗತಿಯೇ ಮತ್ತೆ ಬಯಲಾಗಿದೆ.

ಹರ್ಷ ಎಂಬ ಈ ಹುಡುಗ ಸಿರಿವಂತರ ಕುಟುಂಬದ ಹುಡುಗನಲ್ಲ. SSLC ಮಟ್ಟದ ವರೆಗೆ ಬಂದು ಓದು ಸಾಧ್ಯವಾಗದೇ ಶಾಲೆ ಬಿಟ್ಟಿದ್ದ ಈ ಹುಡುಗ ದರ್ಜಿಯಾಗಿದ್ದ ತಂದೆ ತಾಯಿಗಳ ಪರಿಶ್ರಮ ಮತ್ತು ಆರೈಕೆಯಲ್ಲಿ ಬೆಳೆದ. SSLC ಮಟ್ಟದವರೆಗೂ ಕೋಮು ಸಂಘಟನೆಗಳ ಸೋಂಕು ತಗುಲಿಸಿಕೊಳ್ಳದೇ ಸಹಜವಾಗಿದ್ದ.

Breaking: ಶಿವಮೊಗ್ಗದ ಹರ್ಷ ಹತ್ಯೆ ಆರೋಪಿಗಳ ಸುಳಿವು ಲಭ್ಯ Breaking: ಶಿವಮೊಗ್ಗದ ಹರ್ಷ ಹತ್ಯೆ ಆರೋಪಿಗಳ ಸುಳಿವು ಲಭ್ಯ

ಈತ ಕ್ರಮೇಣ ದೊಡ್ಡವನಾದಂತೆ ಒಂದೊಳ್ಳೆ ಕೆಲಸ ಹುಡುವಾಗಲೇ ಕೈಗೆ ಕೆಲಸ ಸಿಗಬೇಕಿದ್ದ ಕಾಲದಲ್ಲಿ ಕೋಮುದ್ವೇಷ ಹರಡುವ ನಕಲಿ ಹಿಂದುತ್ವ ಸಂಘಟನೆಗಳು ಈತನನ್ನು ತಮ್ಮೆಡೆ ಸೆಳೆದುಕೊಂಡು ತಮ್ಮ ಎಂದಿನ ಕೋಮುದ್ವೇಷ ಹರಡುವ ಕೆಲಸಕ್ಕೆ ಆ ಹುಡುಗನನ್ನು ತೊಡಗಿಸಿವೆ.

ಅವರ ಈ ಕೋಮುದ್ವೇಷ ಹರಡುವ ಪ್ರಕ್ರಿಯೆಯಲ್ಲಿ ಕೆಲಸಕ್ಕೆ ಹೋಗಿ ಬದುಕು ನಡೆಸಬೇಕಿದ್ದ ಆ ಅಮಾಯಕ ಹುಡುಗನ ಮೇಲೆ ಪೊಲೀಸ್ ಕೇಸುಗಳು ದಾಖಲಾಗಿ ಆತ ರೌಡಿ ಶೀಟರ್ ಆಗಿ ಬಿಟ್ಟಿದ್ದಾನೆ. ದುಡಿಯುವ ಜವಾಬ್ದಾರಿ ಹೊರಬೇಕಾದ ಒಬ್ಬನೇ ಮಗನಿಗೆ ತಂದೆ ತಾಯಿಗಳೂ ಸಹ ಹೇಳುವಷ್ಟು ಹೇಳಿ ಅಸಹಾಯಕರಾಗಿ ದುಡಿಯುತ್ತಲೇ ಇದ್ದಾರೆ.

 ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ: ಗೃಹ ಸಚಿವ ರಾಜೀನಾಮೆ ನೀಡಲಿ; ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ: ಗೃಹ ಸಚಿವ ರಾಜೀನಾಮೆ ನೀಡಲಿ; ಸಿದ್ದರಾಮಯ್ಯ

 ಹಿಂಸಾಚಾರದ ಸೂಚನೆ ಸಿಕ್ಕ ಕೂಡಲೇ ಬಂಧನಕ್ಕೆ ಒಳಗಾಗುತ್ತಿದ್ದ

ಹಿಂಸಾಚಾರದ ಸೂಚನೆ ಸಿಕ್ಕ ಕೂಡಲೇ ಬಂಧನಕ್ಕೆ ಒಳಗಾಗುತ್ತಿದ್ದ

ಇನ್ನು ಆತನ ಗೆಳೆಯರು ಕಂಡಂತೆ ನಗರದಲ್ಲಿ ಏನಾದರೂ ಹಿಂಸಾಚಾರದ ಸೂಚನೆ ಸಿಕ್ಕ ಕೂಡಲೇ ಬಂಧನಕ್ಕೆ ಒಳಗಾಗುತ್ತಿದ್ದ ಹಲವರ ಪೈಕಿ ಈ ಹುಡುಗನೂ ಒಬ್ಬನಾಗಿದ್ದ. ದುಡಿದು ಬದುಕಿನ ದಾರಿ ಹಿಡಿಯಬೇಕಾದ ಈತ ಹೀಗೆ ಅಡ್ಡದಾರಿ ಹಿಡಿಯುವಲ್ಲಿ ನಕಲಿ ಹಿಂದುತ್ವವಾದಿಗಳ ಪಾತ್ರ ದೊಡ್ಡದಿದೆ. ನಾಗರೀಕ ಸಮಾಜ ಮತ್ತು ಯುವಕರ ಶಕ್ತಿಯ ದೃಷ್ಟಿಯಿಂದ ಇದೊಂದು ತಲೆ ತಗ್ಗಿಸಬೇಕಾದ ಸಂಗತಿ. ಇಷ್ಟೇ ಅಲ್ಲದೇ ಇತ್ತೀಚೆಗೆ ಅಂದರೆ ವಾರದ ಕೆಳಗೆ ಶಿವಮೊಗ್ಗದ ಸ್ಮಾರ್ಟ್ ಸಿಟಿಯ ಸಾಧನೆಯ ಬೋರ್ಡುಗಳನ್ನು ಅಲ್ಲಲ್ಲಿ ನೇತು ಹಾಕುವ ಕೆಲಸ ಮಾಡುತ್ತಿದ್ದ.

 ತಂದೆ ತಾಯಿಗೆ ಆಸರೆಯಾಗಬೇಕಿದ್ದ ಒಬ್ಬನೇ ಮಗನ ಜೀವ ಹೋಗಿದೆ

ತಂದೆ ತಾಯಿಗೆ ಆಸರೆಯಾಗಬೇಕಿದ್ದ ಒಬ್ಬನೇ ಮಗನ ಜೀವ ಹೋಗಿದೆ

ಈ ಹುಡುಗನಿಗೆ ಈಗಲೂ ಉತ್ತಮ ಕೆಲಸ ಸಿಕ್ಕಿರಲಿಲ್ಲ ಎಂಬುದು ಆತನ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದ ಗೆಳೆಯರು ಹೇಳುವ ವಾಸ್ತವ. ಒಟ್ಟಿನಲ್ಲಿ ಬಡತನದ ಹಿನ್ನಲೆಯಲ್ಲಿ ಬಂದ ಮತ್ತು ತಂದೆ ತಾಯಿಗೆ ಆಸರೆಯಾಗಬೇಕಿದ್ದ ಒಬ್ಬನೇ ಮಗನ ಜೀವ ಹೋಗಿದೆ. ಆತನ ಕುಟುಂಬ ಅಕ್ಷರಶಃ ಅಘಾತಕ್ಕೆ ಸಿಲುಕಿದೆ. ಅವರ ಕಣ್ಣೀರಿನಲ್ಲಿ ಮಗ ಮರಳಿ ಬೇಕೆಂಬ ಅಸಹಾಯಕತೆ ಬಿಟ್ಟರೆ ಬಿಜೆಪಿಗರ ಹಿಂದುತ್ವವಾಗಲೀ ಅವರ ನಕಲಿ ಬೋಧನೆಗಳಾಗಲೀ ಬೇಕಿಲ್ಲ. ನನ್ನ ಪ್ರಕಾರ ಇದೇ ಈ ಹೊತ್ತಿನ ದೊಡ್ಡ ವಾಸ್ತವ.

 ಆತನನ್ನು ಹಿಂಸೆಗೆ ದೂಡಿದವರೇ ಇಂದು ಅನುಕಂಪದ ನಾಟಕವಾಡುತ್ತಿದ್ದಾರೆ

ಆತನನ್ನು ಹಿಂಸೆಗೆ ದೂಡಿದವರೇ ಇಂದು ಅನುಕಂಪದ ನಾಟಕವಾಡುತ್ತಿದ್ದಾರೆ

ಅಂದು ಆತನ ಕೈಗೆ ಉದ್ಯೋಗ ಕೊಡದೇ ಆತನನ್ನು ಹಿಂಸೆಗೆ ದೂಡಿದವರೇ ಇಂದು ಅನುಕಂಪದ ನಾಟಕವಾಡುತ್ತಿದ್ದಾರೆ ಎನ್ನುವುದು ಆತನ ಕುಟುಂಬ ಮಾತ್ರ ಅರ್ಥ ಮಾಡಿಕೊಂಡ ಸಂಗತಿಯಾಗಿದೆ. ಇನ್ನೊಂದೆಡೆ ರಾಷ್ಟ್ರಧ್ವಜ ವನ್ನು ಅವಮಾನಿಸಿ ತೀವ್ರ ಪ್ರತಿರೋಧ ಎದುರಿಸುತ್ತಿರುವ ಸಚಿವ ಈಶ್ವರಪ್ಪ ಮತ್ತು ಬಿಜೆಪಿಗರ ವೈಫಲ್ಯಮಯ ಆಡಳಿತದ ಚರ್ಚೆಗಳು ಬಿಸಿಯಾಗಿರುವ ಈ ಸಂದರ್ಭದಲ್ಲಿ ಈ ಹುಡುಗನ ಸಾವು ತೀರಾ ವಿಚಿತ್ರ ಎನ್ನುವಂತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ. ಬಡ ಕುಟುಂಬದ ಬಂದು ರೌಡಿ ಶೀಟರ್ ಆಗಿ ಬದಲಾಗಿರುವ ಆ ಹುಡುಗನ ಮೇಲೆ ಹತ್ಯಾ ದಾಳಿ ಮಾಡಿದ್ದು ಯಾರೆಂದು ಪೊಲೀಸರ ತನಿಖೆಯಿಂದ ಮಾತ್ರ ಗೊತ್ತಾಗಬೇಕಾಗಿದೆ.

 ಈಶ್ವರಪ್ಪ ಅವರಿಂದ ಘಟನೆಯನ್ನು ಒಂದು ಕೋಮಿನ ಮೇಲೆ ಹೊರಿಸುವ ಕೆಟ್ಟತನ

ಈಶ್ವರಪ್ಪ ಅವರಿಂದ ಘಟನೆಯನ್ನು ಒಂದು ಕೋಮಿನ ಮೇಲೆ ಹೊರಿಸುವ ಕೆಟ್ಟತನ

ಹೀಗಿದ್ದರೂ ಬೇಜವಾಬ್ದಾರಿ ಸಚಿವ ಈಶ್ವರಪ್ಪ ಈ ಘಟನೆಯನ್ನು ಒಂದು ಕೋಮಿನ ಮೇಲೆ ಹೊರಿಸುವ ಕೆಟ್ಟತನ ತೋರಿದ್ದು ಈ ಸಾವನ್ನೂ ಸಹ ಸಮಾಜದ ಶಾಂತಿ ಕದಡಲು ಬಳಸಿಕೊಳ್ಳುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ. ಈ ಹಿನ್ನಲೆಯಲ್ಲಿ ಜನ ಸಾಮಾನ್ಯರು ಅದರಲ್ಲೂ ಬಡವರು, ಕೆಳವರ್ಗದ ಜನರು ಇಂತಹ ಅಪಾಯಕಾರಿ ಉದಾಹರಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಮಕ್ಕಳು ಸರಿಯಾದ ಶಿಕ್ಷಣ ಪಡೆದುಕೊಂಡು, ಯಾರದ್ದೋ ದಾಳಗಳಾಗದಂತೆ ರಕ್ಷಣೆ ಮಾಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. ಕೋಮು ಹಿಂಸಾಚಾರ ತೊಲಗಲಿ, ಬಡವರ ಮನೆಯ ಮಕ್ಕಳ ಜೀವ ಉಳಿಯಲಿ!

Recommended Video

Rohit Sharma Lifestyle: 200 ಕೋಟಿ ರೂ. ಒಡೆಯ ರೋಹಿತ್ ಶರ್ಮಾ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? | Oneindia Kannada

English summary
Shivamogga Bajrandal Activist Murder: Article By Former Minister Dr. H C Mahadevappa. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X