ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಡ್ಲಘಟ್ಟ ಮೇಲೂರಿನ ಕಾಮಧೇನು ಸ್ವೀಟ್ಸ್ ಚೌಚೌ ಅಮೆರಿಕದವರೆಗೆ ಫೇಮಸ್

By ಡಿ.ಜಿ.ಮಲ್ಲಿಕಾರ್ಜುನ, ಶಿಡ್ಲಘಟ್ಟ
|
Google Oneindia Kannada News

ಅರವತ್ನಾಲ್ಕು ವಿದ್ಯೆಗಳಲ್ಲಿ ಅಡುಗೆಯೂ ಒಂದು. ನಾವು ಕೇಳಿದ ನಳಪಾಕ, ಭೀಮಪಾಕಗಳು ಭಾರತದಲ್ಲೇ ಬಹಳ ಪ್ರಚಲಿತದಲ್ಲಿರುವಂಥದ್ದು. ಊರಿನ ಹೆಸರೊಂದಿಗೆ ಅಲ್ಲಿನ ಹೆಸರುವಾಸಿಯಾದ ಹೋಟೆಲ್, ಮೆಸ್, ಸಿಹಿ- ಖಾರ ತಿನಿಸಿನ ಅಂಗಡಿಗಳೂ ಸೇರಿಕೊಂಡಿರುತ್ತವೆ. ಈ ದಿನ ಶಿಡ್ಲಘಟ್ಟದ ಮೇಲೂರಿನಲ್ಲಿರುವ ಕಾಮಧೇನು ಸ್ವೀಟ್ಸ್ ಬಗ್ಗೆ ತಿಳಿಸಬೇಕು ಅಂತಲೇ ಈ ಲೇಖನ.

ಕೆಲವರ ಕೈರುಚಿಯಂತೂ ದೇಶ, ಭಾಷೆಯ ಗಡಿ ಮೀರಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಸಣ್ಣ ಗ್ರಾಮದಲ್ಲಿದ್ದರೂ ಕಲಿತ ವಿದ್ಯೆಯಿಂದಲೇ ದೇಶದ ರಾಯಭಾರಿಗಳಾಗಿರುತ್ತಾರೆ. ಕಾಮಧೇನು ಸ್ವೀಟ್ಸ್ ನ ಮಾಲೀಕ ಶ್ರೀಧರ್ ಅಂಥಹವರಲ್ಲಿ ಒಬ್ಬರು.

Shidlaghatta Melur Kamadhenu sweets stall mixture famous in America

ಮೇಲೂರಿನ ಮಿಕ್ಸ್ ಚರ್ ಎಂದೇ ಪ್ರಸಿದ್ಧವಾದದ್ದು ಇವರು ತಯಾರಿಸುವ ಚೌಚೌ. ಮೇಲೂರು ಗ್ರಾಮದ ಖಾರದ ತಿನಿಸು ತಾಲ್ಲೂಕು, ಜಿಲ್ಲೆಯನ್ನೂ ಮೀರಿ ಅಮೆರಿಕವನ್ನೂ ತಲುಪಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇವರ ಗ್ರಾಹಕರು ಅಮೆರಿಕದಲ್ಲಿನ ತಮ್ಮ ಸಂಬಂಧಿಕರು ಬಂದು ವಾಪಸ್ ಹೋಗುವಾಗ ಮೇಲೂರಿನ ಮಿಕ್ಸ್ಚರ್ ಕೊಂಡು ಹೋಗುತ್ತಾರೆ.

ಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತುಬಾಯಿ ರುಚಿ ತಣಿಸುವ ವಿಜಯಪುರದ ನಾಣಿ ಹೋಟೆಲ್ ನ ತಿಂಡಿ ಮಜಬೂತು

18 ವರ್ಷಗಳಿಂದ ಖಾರ- ಸಿಹಿ ತಿಂಡಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಜಿಲೇಬಿ, ಜಹಾಂಗೀರ್, ಲಾಡು, ಸೋನ್ ಪಾಪಡಿ ಮುಂತಾದ ತಿಂಡಿಗಳನ್ನೂ ತಯಾರಿಸುತ್ತಾರೆ. ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮುಂತಾದ ಯಾವುದೇ ಸಂಭ್ರಮಾಚರಣೆಗಳಿಗೆ ಇವರ ಸಿಹಿ ಇರಲೇಬೇಕು.

Shidlaghatta Melur Kamadhenu sweets stall mixture famous in America

"ಈ ವಿದ್ಯೆಯನ್ನು ಬಂಗಾರಪೇಟೆಯಲ್ಲಿನ ನನ್ನ ಚಿಕ್ಕಪ್ಪನವರ ಬಳಿ ಕಲಿತೆ. ಗುಣಮಟ್ಟವನ್ನು ಕಮ್ಮಿಯಾಗದಂತೆ ಸದಾ ನೋಡಿಕೊಳ್ಳುತ್ತೇನೆ. ಉತ್ತಮವಾದ ಎಣ್ಣೆ ಬಳಸುತ್ತೇನೆ. ಒಳ್ಳೆಯ ನಾಟಿ ಕಡಲೆ ಬೇಳೆಯನ್ನು ನೋಡಿ ಕೊಂಡು ತಂದು ಆರಿಸಿ, ಒಣಗಿಸಿ, ಪುಡಿ ಮಾಡಿಸಿ ಬಳಸುತ್ತೇನೆ. ಈ ಕೆಲಸಕ್ಕೆ ನಾನು ಕೆಲಸದವರನ್ನು ಇಟ್ಟುಕೊಂಡಿಲ್ಲ. ತಿಂಡಿ ತಯಾರಿಕೆ ಹಾಗೂ ಮಾರಾಟಕ್ಕೆ ನನ್ನ ಪತ್ನಿ ಹಾಗೂ ತಮ್ಮ ಸಹಕರಿಸುತ್ತಾರೆ. ಕೆಲಸದವರನ್ನು ನೇಮಿಸಿಕೊಂಡರೆ ಗುಣಮಟ್ಟ ಕೆಡಬಹುದೆಂಬ ಭಯವಿದೆ" ಎನ್ನುತ್ತಾರೆ ಶ್ರೀಧರ್.

ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ ವರ್ಲ್ಡ್ ಫೇಮಸ್!ಕನಕಪುರದ ವಾಸು ಹೋಟೆಲ್ ಮಸಾಲೆ ದೋಸೆ ವರ್ಲ್ಡ್ ಫೇಮಸ್!

"ಕೆಲ ಗ್ರಾಹಕರು ಅಮೆರಿಕಕ್ಕೆ ನಮ್ಮ ಮಿಕ್ಸ್ಚರ್ ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ಬೇಕಾದ ರೀತಿಯಲ್ಲಿ ಖಾರ ಮಾಡಿಕೊಡುತ್ತೇನೆ. ವಿಮಾನದಲ್ಲಿ ಹೆಚ್ಚು ತೆಗೆದುಕೊಂಡು ಹೋಗಲಾಗದೆಂದು ಒಮ್ಮೆಗೆ ನಾಲ್ಕರಿಂದ ಐದು ಕೆ.ಜಿ ತೆಗೆದುಕೊಂಡು ಹೋಗುತ್ತಾರೆ. ತಾಲೂಕಿನ ಹಲವಾರು ಮಂದಿ ಗ್ರಾಹಕರು ತಮ್ಮ ಸಂಬಂಧಿಕರ ಮನೆಗಳಿಗೆ ಮತ್ತು ಸ್ನೇಹಿತರಿಗೆ ನೀಡಲು ನನ್ನ ಬಳಿ ಸಿಹಿ ಹಾಗೂ ಖಾರ ಖರೀದಿಸುತ್ತಾರೆ. ಜನರು ಮೆಚ್ಚುವುದು ಗುಣಮಟ್ಟವನ್ನು ಎಂಬ ಎಚ್ಚರಿಕೆ ಸದಾ ನನ್ನದು" ಎನ್ನುತ್ತಾರೆ ಕಾಮಧೇನು ಸ್ವೀಟ್ಸ್ ನ ಎನ್.ಶ್ರೀಧರ್.

English summary
Shidlaghatta taluk, Melur Kaadhenu sweets stall mixture is very tasty and famous. People who are basically from Chikkaballapur district buy mixture and sweets here and take it with them to USA and other country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X