ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಇಲಾಖೆಯಿಂದ ರೈತರಿಗೆ ಯಾವ-ಯಾವ ಸೌಲಭ್ಯಗಳು ಸಿಗುತ್ತವೆ ನೋಡಿ

|
Google Oneindia Kannada News

ಕರ್ನಾಟಕದ ಕೃಷಿ ಇಲಾಖೆಯ ಸಂಕಲ್ಪವು ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕವಾಗಿದೆ. ಈ ಸಂಕಲ್ಪಕ್ಕೆ ಸಾಕ್ಷಿಯಾಗಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೇತೃತ್ವದ ಸರ್ಕಾರಕ್ಕೆ ಇಂದು ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸರ್ಕಾರವು ಕೃಷಿ ಇಲಾಖೆ ಒಂದು ವರ್ಷದ ಇಲಾಖಾವಾರು ಪ್ರಗತಿಗಳನ್ನು ಹಂಚಿಕೊಂಡಿದೆ. ರೈತರು ಬೆನ್ನೆಲುಬು ಕೃಷಿಯಾದರೆ ರೈತರಿಗೆ ಕೇಂದ್ರಬಿಂದು ಆಗಿರುವ ಕೃಷಿ ಇಲಾಖೆಗಳ ಕೇಂದ್ರಗಳು.

ಕೃಷಿ ಇಲಾಖೆ ರೈತರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಏಕೆಂದರೆ ರಾಜ್ಯ ಹಾಗೂ ರಾಷ್ಟ್ರೀಯ ಕೃಷಿಯೋಜನೆಗಳು, ಕಾರ್ಯಕ್ರಮಗಳು ಮತ್ತು ಅನೇಕ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಸೇತುವೆಯಾಗಿ ಕೃಷಿ ಇಲಾಖೆ ರೈತರ ಬೆಳವಣಿಗೆ ಕಾಪಾಡುವುದು ಬೆಳೆಸುವುದು ಕೃಷಿ ಇಲಾಖೆಯ ಧ್ಯೇಯವಾಗಿದೆ.

ಗಮನಿಸಿ: ಐಐಟಿ ಕಾನ್ಪುರದಿಂದ ಕೃಷಿ ಸ್ಟಾರ್ಟ್ಅಪ್‌ಗಳಿಗೆ 50 ಲಕ್ಷದವರೆಗೆ ನೆರವು ಗಮನಿಸಿ: ಐಐಟಿ ಕಾನ್ಪುರದಿಂದ ಕೃಷಿ ಸ್ಟಾರ್ಟ್ಅಪ್‌ಗಳಿಗೆ 50 ಲಕ್ಷದವರೆಗೆ ನೆರವು

ಸರ್ವರ ವಿಕಾಸಕ್ಕಾಗಿ ಕೃಷಿ ಇಲಾಖೆಯ ಯೋಜನೆಯ ಕಾರ್ಯಕ್ರಮಗಳನ್ನು ಚುರುಕುಗೊಳಿಸಿರುವ ಕೃಷಿ ಇಲಾಖೆಯು ರೈತರಿಗೆ ಯಾವ-ಯಾವ ಕಾರ್ಯಕ್ರಮ ಹಾಗೂ ಯೋಜನೆಗಳ ಮೂಲಕ ರೈತರಿಗೆ ಜಿವಾಳವಾಗಿದೆ ಎಂದು ಈ ಕೆಳಗೆ ಕೃಷಿ ಇಲಾಖೆಯಿಮದ ರೈತರಿಗೆ ಸಿಗುವ ಯೋಜನೆಗಳು ಮತ್ತು ಕಾರ್ಯಕ್ರಗಳ ಸಂಪೂರ್ಣ ಮಾಹಿತಿಯನ್ನುಈ ಮೂಲಕ ವಿವರಿಸಲಾಗಿದೆ. ಕೃಷಿ ಇಲಾಖೆಯು ಹಂಚಿಕೊಂಡಿರುವ ರೈತರಿಗಾಗಿ ಇರುವ ಯೋಜನೆಗಳ ಕುರಿತಾಗಿ ಇಲ್ಲಿ ಅಗತ್ಯವಾದ ಮಾಹಿತಿಯನ್ನು ನೀಡಲಾಗಿದೆ.

ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ, ರೈತ ಶಕ್ತಿ ಯೋಜನೆ

ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ, ರೈತ ಶಕ್ತಿ ಯೋಜನೆ

ರೈತರ ಆದಾಯ ಹೆಚ್ಚಿಸಲು ದೇಶದಲ್ಲಿಯೇ ಮೊದಲ ಬಾರಿ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಕೃಷಿ ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳ ರೈತರಿಗೆ ಆದಾಯ ತರಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜನಗೆ ಆದ್ಯತೆ ನೀಡಲಾಗುತ್ತಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ 500 ಕೋಟಿ ಅನುಧಾನವನ್ನು ಒದಗಿಸಲಾಗಿದ್ದು ಮೊದಲನೆಯ ಕಂತಿನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರೈತ ಶಕ್ತಿ ಯೋಜನೆ; ಕೃಷಿ ಯಾಂತ್ರಿಕರಣವನ್ನು ಪ್ರೋತ್ಸಾಹಿಸಲು ಡಿಸೇಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ.
ಪ್ರತಿ ಎಕರೆಗೆ 250 ರೂ.ಗಳಂತೆ ಐದು ಎಕರೆಗೆ ಸಹಾಯಧನ ನೀಡಿದೆ.
ಈ ಯೋಜನೆಗೆ 4 ಕೋಟಿ ರೂ. ಅನುಧಾನ ನೀಡಲಾಗಿದೆ.

ರೈತ ಮಕ್ಕಳಿಗೆ ಮುಖ್ಯಮಂತ್ರಿ

ರೈತ ಮಕ್ಕಳಿಗೆ ಮುಖ್ಯಮಂತ್ರಿ "ರೈತ ವಿಧ್ಯಾನಿಧಿ"

ರೈತರ ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಮುಖ್ಯಮಂತ್ರಿ ವಿಧ್ಯಾನಿಧಿ ಕಾರ್ಯಕ್ರಮ ಯೋಜನೆಯಡಿಯಲ್ಲಿ 9.48 ಲಕ್ಷ ವಿದ್ಯಾರ್ಥಿಗಳಿಗೆ 397.213 ಕೋಟಿ ರೊ. ವಿಧ್ಯಾರ್ಥಿ ವೇತನ ವಿತರಣೆ ಒಂದು ಈ ಯೋಜನೆಯಿಂದ ವಿಧ್ಯಾರ್ಥಿಗಳು ವಂಚಿತರಾಗಿದ್ದರೆ ಹತ್ತಿರದ ಕೃಷಿ ಕೇಂದ್ರವನ್ನು ಸಂಪರ್ಕಿಸಿ. ಈ ಯೋಜನೆಯನ್ನು ಅರ್ಜಿ ಸಲ್ಲಿಸದೆಯೇ ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ ಡಿಬಿಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗುತ್ತಿದೆ.

ರೈತರ ಮಕ್ಕಳು ಓದುತ್ತಿರುವ ಕೋರ್ಸ್ ಅನುಗುಣವಾಗಿ 2000 ರೂ.ಯಿಂದ 11,000 ರೂಪಾಯಿವರಿಗೆ ವಿಧ್ಯಾರ್ಥಿ ವೇತನ ಸೌಲಭ್ಯ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2.Oರಡಿ 57 ತಾಲ್ಲೂಕುಗಳ 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿ ಚಟುವಟಿಕೆಗಳಿಗೆ 62.2.26 ಕೋಟಿ ರೂ. ಮಂಜೂರು. ಪ್ರಧಾನಮಂತ್ರಿ ಕೃಪಿ ಸಿಂಚಾಯಿ ಯೋಜನೆಯಡಿ 19.14 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಗಳನ್ನು ಉಪಚಾರ ಮಾಡಲಾಗಿದೆ.

ಇನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಡಿಯ ನಿಧಿಯಲ್ಲಿ 2021-22 ಸಾಲಿನಲ್ಲಿ 50.35 ಲಕ್ಷ ರಾಜ್ಯದ ರೈತರಿಗೆ 1,0007,13 ಕೋಟಿಗಳ ಹಣ ಜಮಾ ಆಗಿದೆ ಇನ್ನು ಈ ವರ್ಷದಲ್ಲಿ 47.83 ಲಕ್ಷ ರೈತರಿಗೆ 956,71 ಕೋಟಿ ಹಣವನ್ನು ಡಿಬಿಟಿ ಮೂಲಕ ಹಣ ವರ್ಗಾವಣೆ ಆಗಿದೆ

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಪಿ ಮಹಾವಿದ್ಯಾಲ

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಪಿ ಮಹಾವಿದ್ಯಾಲ

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಪಿ ಮಹಾವಿದ್ಯಾಲಯವನ್ನು ಸ್ಥಾಪನೆ ಮಾಡಲು ಈಗಾಗಲೇ ರಾಜ್ಯ ಸರ್ಕಾರರವು ಆದೇಶ ಹೊರಡಿಸಿದೆ.

ಪ್ರಧಾನಮಂತ್ರಿ ಕಿರು-ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮಬದ್ಧಗೊಳಿಸುವಿಕೆ (PMFME)ಯೋಜನಯಡಿ ರಾಜ್ಯ ಸರ್ಕಾರವು ಶೇ.15ರಷ್ಟು ಹೆಚ್ಚುವರಿ ಸಹಾಯಧನವನ್ನು ಕೇಂದ್ರದಿಂದ 17.46 ಕೋಟಿ ಹಾಗೂ ರಾಜ್ಯದಿಂದ 4.21 ಕೋಟಿ ರೂ.ಯನ್ನು ಸಹಾಯಧನ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣ ಕ್ಷೇತ್ರದಲ್ಲಿ ಒಟ್ಟು 93.25 ಕೋಟಿ ಹೊಡಿಕೆ ಮಾಡಲಾಗಿದೆ. ಇನ್ನು ರಾಜ್ಯದಲ್ಲಿ13 ಇನಕ್ಯುಬೇಸನ್ ಪ್ರಾರಂಭ ಇದು ದೇಶದಲ್ಲಿಯೇ ಅತಿ ಹೆಚ್ಚು ರಾಜ್ಯವೇ ಹೊಂದಿದೆ.

English summary
The agriculture department has accelerated the programs of the agriculture department's scheme for the development of all, and the agriculture department has been helpful to the farmers through various programs and projects,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X