ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕ್ರೀನ್ ಮುಂದೆ ಮಕ್ಕಳು ಕಳೆಯುವ ಸಮಯವೆಷ್ಟು ಗೊತ್ತಾ..?

|
Google Oneindia Kannada News

ಮಕ್ಕಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಾಗೂ ತಮಗೆ ಬೇಕಾದ ಅಂಶವನ್ನು ಅವರು ಪಡೆಯಲು ತಂತ್ರಜ್ಞಾನ ನೆರವು ಅತ್ಯಾಗತ್ಯ. ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಗಮನ, ಪುನರಾವರ್ತನೆ, ಕಲಿಕೆ ಮತ್ತು ಸ್ಮರಣೆ ಮುಂತಾದ ಸಾಮರ್ಥ್ಯ‌ ಇರುತ್ತದೆ. ತಂತ್ರಜ್ಞಾನ ಮೇಲುಗೈ ಸಾಧಿಸಿರುವ ಈಗಿನ ಯುಗದಲ್ಲಿ ಮಕ್ಕಳು ಸುಲಭವಾಗಿ ಹಲವಾರು ತಂತ್ರಜ್ಞಾನ ಉಪಕರಣಗಳ ಕಡೆಗೆ ಆಕರ್ಷಿತರಾಗುತ್ತಾರೆ. ಇದು ಅವರ ಕಲಿಕೆಗೆ ನೆರವಾಗುತ್ತದೆ. ಆದ್ದರಿಂದ ಈ ದಿನಗಳಲ್ಲಿ ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಅಳವಡಿಕೆಯಲ್ಲಿ ಪೋಷಕರು ಮತ್ತು ಶಿಕ್ಷಕರಿಗಿಂತ ಮಕ್ಕಳು ಒಂದು ಹೆಜ್ಜೆ ಮುಂದಿರುವುದು ಕಂಡು ಬರುತ್ತಿರುವ ವಾಸ್ತವವಾಗಿದೆ. ಹಾಗಾದರೆ ಟಿವಿ, ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್‌ ನಂತಹ ಪರದೆಯ ಮುಂದೆ ಮಕ್ಕಳು ಎಷ್ಟು ಸಮಯ ಕಳೆಯುತ್ತಾರೆ? ಮಕ್ಕಳು ಡಿಜಿಟಲ್ ಬಳಕೆಯಿಂದ ಪೋಷಕರಿಗೆ ಎದುರಾಗುವ ಸವಾಲುಗಳು ಯಾವುವು? ಚಿಕ್ಕ ಮಕ್ಕಳು ತಮ್ಮ ಪರದೆಯ ಬಳಕೆಯಿಂದ ಪ್ರಯೋಜನ ಪಡೆಯಲು ಸರಳ ಸಲಹೆಗಳೇನು ಎನ್ನುವುದನ್ನು ತಿಳಿಯೋಣ.

ತಜ್ಞರ ಪ್ರಕಾರ ಮೂರನೇ ಎರಡರಷ್ಟು (67%) ಜನರು ಪರದೆಯ ಸಮಯ ಮತ್ತು ಇತರ ಕೆಲಸಗಳ ನಡುವೆ ಉತ್ತಮ ಸಮತೋಲನವನ್ನು ಹೊಂದಿದ್ದಾರೆಂದು ಒಪ್ಪುತ್ತಾರೆ. ಅರ್ಧಕ್ಕಿಂತ ಹೆಚ್ಚು (53%) ಜನರು ತಮ್ಮ ಪರದೆಯ ಸಮಯವನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ ಎನ್ನುತ್ತಾರೆ. ಹಾಗಾದರೆ ಮಕ್ಕಳು ಸ್ಕ್ರೀನಿಂಗ್ ಟೈಮ್‌ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ?

ಮಕ್ಕಳ ಡಿಜಿಟಲ್ ಬಳಕೆಯ ಬಗ್ಗೆ ಆತಂಕವೇ? ಇದಕ್ಕೆ ತಜ್ಞರ ಸಲಹೆ ಏನು?ಮಕ್ಕಳ ಡಿಜಿಟಲ್ ಬಳಕೆಯ ಬಗ್ಗೆ ಆತಂಕವೇ? ಇದಕ್ಕೆ ತಜ್ಞರ ಸಲಹೆ ಏನು?

ಪರದೆಯ ಮುಂದೆ ಮಕ್ಕಳು ಎಷ್ಟು ಸಮಯ ಕಳೆಯುತ್ತಾರೆಂದು ಆಫ್‌ಕಾಮ್ ಅಂಕಿಅಂಶಗಳನ್ನು ನೀಡಿದೆ:

Screen Time for Kids : How much screen time is healthy for children?

*100%ರಲ್ಲಿ 96%ರಷ್ಟು ಮಕ್ಕಳು ವಾರಕ್ಕೆ 15 ಗಂಟೆಗಳ ಕಾಲ ಟಿವಿ ವೀಕ್ಷಿಸುತ್ತಾರೆ

*100%ರಲ್ಲಿ 40%ರಷ್ಟು ಮಕ್ಕಳು ವಾರಕ್ಕೆ 6 ಗಂಟೆಗಳ ಕಾಲ ಪರದೆಯ ಮೇಲೆ ಆಟಗಳನ್ನು ಆಡುತ್ತಾರೆ

ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?

*53%ರಷ್ಟು ಮಕ್ಕಳು ವಾರಕ್ಕೆ 8 ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ತೊಡಗಿಸಿಕೊಂಡಿರುತ್ತಾರೆ.

*48%ರಷ್ಟು ಮಕ್ಕಳು YouTube ವೀಕ್ಷಿಸುತ್ತಾರೆ

ಮಕ್ಕಳು ಡಿಜಿಟಲ್ ಬಳಕೆಯಿಂದ ಪೋಷಕರಿಗೆ ಎದುರಾಗುವ ಸವಾಲುಗಳು ಯಾವುವು?

Screen Time for Kids : How much screen time is healthy for children?

*ಮಕ್ಕಳು ಹೆಚ್ಚು ಅಂತರ್ಜಾಲದಲ್ಲಿ ನಿರತರಾಗಬಹುದು

*ಯಾವಾಗಲೂ ಕಂಪ್ಯೂಟರ್,ಟಿವಿ, ಮೊಬೈಲ್‌ಗಾಗಿ ಬೇಡಿಕೆ ಇಡುವುದು

*ಆಟ-ಪಾಠದ ಕಡೆಗೆ ಗಮನ ಕಳೆದುಕೊಳ್ಳಬಹುದು

ಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆ

*ಮಕ್ಕಳು ಮಾತು ಕೇಳದಂತಾಗಬಹುದು

ಚಿಕ್ಕ ಮಕ್ಕಳು ತಮ್ಮ ಪರದೆಯ ಬಳಕೆಯಿಂದ ಪ್ರಯೋಜನ ಪಡೆಯಲು ಸರಳ ಸಲಹೆಗಳನ್ನು ತಿಳಿಯಿರಿ

Screen Time for Kids : How much screen time is healthy for children?

ಸಲಹೆ 1 - ಮನೆಯ ಒಳಗೆ ಮತ್ತು ಹೊರಗೆ ಪರದೆಯ ಬಳಕೆಗೆ ನಿಯಮಗಳನ್ನು ಹೊಂದಿಸಿ

ಸಲಹೆ 2 - ಕುಟುಂಬದೊಂದಿಗೆ ಸಮಯ ಮೀಸಲಿಡಿ ಮತ್ತು ನಿದ್ರೆಗೆ ಆದ್ಯತೆ ನೀಡಿ

ಸಲಹೆ 3 - ಒಟ್ಟಿಗೆ ಪ್ಲೇ ಮಾಡಿ, ವೀಕ್ಷಿಸಿ ಮತ್ತು ಅನ್ವೇಷಿಸಿ

ಸಲಹೆ 4 - ಅವರು ಪರದೆಯ ಮೇಲೆ ಏನು ನೋಡುತ್ತಾರೆ ಮತ್ತು ಏನನ್ನು ಮಾಡುತ್ತಾರೆ ಎಂಬುದನ್ನು ಆಯ್ಕೆಮಾಡುವಾಗ ಮುಂದಾಳತ್ವ ವಹಿಸಿ

ಸಲಹೆ 5 - ಅವರು ನೋಡುವ ಪರದೆಯ ಬಳಕೆಯ ಲಾಭ ಮತ್ತು ನಷ್ಟದ ಬಗ್ಗೆ ಉದಾಹರಣೆಯನ್ನು ನೀಡಿ

English summary
Studies show teenagers spend up to 9 hours a day watching or using screens, know How much screen time is healthy for children?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X