• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2044ರ ವೇಳೆಗೆ ಭೂಮಿ ಮುಳುಗಿ ಹೋಗುತ್ತಾ..? ವಿಜ್ಞಾನಿಗಳು ಕೊಟ್ಟಿದ್ದಾರೆ ವಾರ್ನಿಂಗ್..!

|

ಅಬ್ಬಬ್ಬಾ ಏನ್ ಸೆಖೆ.. ತಡೆಯೋಕೆ ಆಗ್ತಿಲ್ಲ.. ಫ್ಯಾನ್ ಹಾಕುದ್ರು ನೆಮ್ಮದಿ ಇಲ್ಲ.. ಹೀಗೆ ಬೇಸಿಗೆ ಕಾರಣಕ್ಕೆ ಜನ ಗೊಣಗುವುದು ಮಾಮೂಲಾಗಿದೆ. ಆದರೆ ಮಾನವರು ಬೆಚ್ಚಿಬೀಳುವ ಮತ್ತೊಂದು ಸಂಗತಿಯನ್ನ ವಿಜ್ಞಾನಿಗಳು ರಿವೀಲ್ ಮಾಡಿದ್ದಾರೆ.

ಅದೇನು ಅಂದ್ರೆ 2044ರ ವೇಳೆಗೆ ಧ್ರುವ ಪ್ರದೇಶದ ತಾಪಮಾನ ಸುಮಾರು 1.5 ಡಿಗ್ರಿ ಏರಿಕೆ ಕಾಣಲಿದೆಯಂತೆ. ಅಕಸ್ಮಾತ್ ಇಷ್ಟು ಪ್ರಮಾಣದಲ್ಲಿ ತಾಪಮಾನ ಏರಿಕೆಯಾದರೆ ಧ್ರುವ ಪ್ರದೇಶದಲ್ಲಿನ ಹಿಮ ಕರಗಿಬಿಡುವ ಆತಂಕವಿದೆ. ಹೀಗೆ ಭಾರಿ ಪ್ರಮಾಣದಲ್ಲಿ ಹಿಮ ಕರಗಿದರೆ ಆ ನೀರೆಲ್ಲಾ ಸಮುದ್ರಕ್ಕೆ ಸೇರಿ ಭೂಪ್ರದೇಶ ಮುಳುಗಡೆಯಾಗುವ ಸಾಧ್ಯತೆ ಹೆಚ್ಚು.

ಜಗತ್ತಿನಾದ್ಯಂತ ಮತ್ತೆ ತುರ್ತು ಪರಿಸ್ಥಿತಿ, ಕಾರಣ ಆಘಾತಕಾರಿ!ಜಗತ್ತಿನಾದ್ಯಂತ ಮತ್ತೆ ತುರ್ತು ಪರಿಸ್ಥಿತಿ, ಕಾರಣ ಆಘಾತಕಾರಿ!

ಈಗಾಗಲೇ ನೂರಾರು ಸಮಸ್ಯೆ ಎದುರಿಸುತ್ತಿರುವ ಭೂಮಿ ತಾಯಿಗೆ ಇದು ಮತ್ತೊಂದು ಮಹಾಘಾತ ನೀಡಲಿದೆ. ಮಾನವರ ಬುಡಕ್ಕೆ ಸಂಚಕಾರ ಎದುರಾದಂತೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಇದೆಲ್ಲದರ ಪರಿಣಾಮ ಭೂ ವಾತಾವರಣದ ಮೇಲಾಗುತ್ತಿದೆ. 2044ರ ವೇಳೆಗೆ ತಾಪಮಾನ ಏರಿಕೆ ಕೈಮೀರಿ ಹೋಗುವ ಭೀತಿ ಇದೀಗ ಆವರಿಸಿದೆ.

ಹಿಮ ಪದರ ಕರಗುವ ಆತಂಕ

ಹಿಮ ಪದರ ಕರಗುವ ಆತಂಕ

2020ರ ಬಗ್ಗೆ ಬೆಚ್ಚಿಬೀಳುವ ಸಂಗತಿಯೊಂದನ್ನ ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ. ಮಾನವ ಬದುಕಿನ ಇತಿಹಾಸದಲ್ಲಿ 2020 3ನೇ ಅತಿಹೆಚ್ಚು ತಾಪಮಾನ ತೋರಿದ ವರ್ಷವಾಗಿದೆ. 2016, 2019ರ ನಂತರ 2020 ಅತಿ ಹೆಚ್ಚಾದ ತಾಪಮಾನ ಹೊಂದಿರುವ ವರ್ಷವಾಗಿದೆ. ತಾಪಮಾನ ಏರಿಕೆ ಕಡಿವಾಣಕ್ಕೆ ಎಷ್ಟೇ ಮುತುವರ್ಜಿ ವಹಿಸಿದರೂ ಪ್ರಯೋಜನವಾಗುತ್ತಿಲ್ಲ. ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಂತಹ ಪ್ರಯತ್ನ ವಿಫಲವಾಗಿದೆ.

2020ರಲ್ಲಿ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ರೆ ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅತಿಹೆಚ್ಚು ತಾಪಮಾನ ಏರಿಕೆಯಾಗಿದೆ. ಸೈಬೀರಿಯಾ ಪ್ರಾಂತ್ಯದಲ್ಲಿ 2020ರಲ್ಲಿ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ. ಇದು ರಷ್ಯಾದ ಇತಿಹಾಸದಲ್ಲೇ ಭಯಾನಕ ವರ್ಷವಾಗಿದೆ. ಸೈಬೀರಿಯಾದಲ್ಲಿ ಈ ರೀತಿ ತಾಪಮಾನ ಏರಿಕೆಯಾಗುತ್ತಿದ್ದರೆ ಉತ್ತರ ಧ್ರುವ ಪ್ರದೇಶದ ಹಿಮ ಪದರ ಪೂರ್ತಿ ಕರಗುವ ಆತಂಕ ಎದುರಾಗಿದೆ.

 ಸೈಬೀರಿಯಾ ಪ್ರಾಂತ್ಯದಲ್ಲಿ ಏನಾಗುತ್ತಿದೆ..?

ಸೈಬೀರಿಯಾ ಪ್ರಾಂತ್ಯದಲ್ಲಿ ಏನಾಗುತ್ತಿದೆ..?

ಜಗತ್ತಿಗೆ ಶೇಕಡ 10ರಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿರುವುದು ರಷ್ಯಾದ ಕಾಡುಗಳಿಂದ. ಅದರಲ್ಲೂ ರಷ್ಯಾದ ಅರಣ್ಯ ಸಂಪತ್ತು ಬಹುಪಾಲು ಅವಲಂಬಿಸಿರುವುದು ಸೈಬೀರಿಯಾ ಮೇಲೆ. ಆದರೆ ಗ್ಲೋಬಲ್ ವಾರ್ಮಿಂಗ್‌ನ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ. ಸೈಬೀರಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮಾನವನ ವಿನಾಶಕ್ಕೆ ನಾಂದಿ ಹಾಡಿದಂತಿದೆ. ಏಕೆಂದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಹಬ್ಬಿರುವ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಮಣ್ಣು ಭಾರಿ ಪ್ರಮಾಣದಲ್ಲಿ ಕಾರ್ಬನ್ ಸಂಯುಕ್ತಗಳನ್ನು ಒಳಗೊಂಡಿರುತ್ತದೆ.

ಇದೀಗ ಹೊತ್ತಿರುವ ಕಾಡ್ಗಿಚ್ಚಿನ ಪರಿಣಾಮ ಊಹೆಗೂ ನಿಲುಕದಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ವಾತಾವರಣ ಸೇರುತ್ತಿದೆ. ಈಗಾಗಲೇ 250 ಮೆಗಾಟನ್ ಕಾರ್ಬನ್ ಸೈಬೀರಿಯಾ ಕಾಡ್ಗಿಚ್ಚಿನಿಂದ ವಾತಾವರಣ ಸೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 35ರಷ್ಟು ಹೆಚ್ಚಾಗಿದೆ.

ದ್ವೀಪರಾಷ್ಟ್ರಗಳ ಜನರ ಪರದಾಟ..!

ದ್ವೀಪರಾಷ್ಟ್ರಗಳ ಜನರ ಪರದಾಟ..!

ದ್ವೀಪ ರಾಷ್ಟ್ರಗಳು ರಜಾ ದಿನಗಳನ್ನು ಕಳೆಯಲು ಮಾತ್ರ ಸುಂದರ ತಾಣಗಳು. ಆದರೆ ಅಲ್ಲಿಯೇ ಜೀವಿಸಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಕೃತಿಕವಾಗಿ ಸೌಂದರ್ಯ ಹೊಂದಿದ್ದರೂ, ಪ್ರಾಕೃತಿಕ ವಿಕೋಪಗಳಿಗೂ ದ್ವೀಪ ರಾಷ್ಟ್ರಗಳು ತುತ್ತಾಗುತ್ತವೆ. ಉದಾಹರಣೆಗೆ ಪದೇ ಪದೇ ಜ್ವಾಲಾಮುಖಿಗಳ ಸ್ಫೋಟ. ಭೂಕಂಪನ ಸೇರಿದಂತೆ ಸುನಾಮಿಯ ಭಯ. ಹೀಗೆ ಸುತ್ತಲೂ ನೀರಿದ್ದು, ನಡುವೆ ರೊಟ್ಟಿಯ ತುಂಡಿನಷ್ಟು ಭೂಮಿ ಹೊಂದಿರುವ ದ್ವೀಪ ರಾಷ್ಟ್ರಗಳು ನಿತ್ಯ ಜೀವ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿ ಇದೆ. ಆದರೆ ಅಲ್ಲಿನ ಜನರಿಗೆ ಇದು ಅನಿವಾರ್ಯ ಕೂಡ. ಬಾಯಲ್ಲಿ ಬಿದ್ದ ಬಿಸಿ ತುಪ್ಪದಂತೆ ಜೀವನ ಸವೆಸುತ್ತಾರೆ.

ಸಂಕಷ್ಟಕ್ಕೆ ಕೊನೆಯೇ ಇಲ್ವಾ..?

ಸಂಕಷ್ಟಕ್ಕೆ ಕೊನೆಯೇ ಇಲ್ವಾ..?

ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.

English summary
Scientists warned nearly 1.5 Degree Celsius temperature can be rise at polar region by 2044.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X