ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್ ಕಳುಹಿಸುವುದನ್ನು ಪಾಲಕ್ ಗಿಡಗಳಿಗೆ ಹೇಳಿಕೊಟ್ಟ ವಿಜ್ಞಾನಿಗಳು!

|
Google Oneindia Kannada News

ವಿಚಿತ್ರ ಎನಿಸಬಹುದು. ವೈಜ್ಞಾನಿಕ ಪರಿಕಲ್ಪನೆಯ ಕಥೆಗಳುಳ್ಳ ಸಿನಿಮಾಗಳಲ್ಲಿ ಇಂತಹ ಪವಾಡಗಳು ನಡೆಯುತ್ತವೆ. ಅದು ಸಿನಿಮಾ, ಸತ್ಯವಲ್ಲ ಎಂಬುದು ಅರಿವಿದ್ದರೂ ಸಿನಿಮಾಗಳಲ್ಲಿ ತೋರಿಸುವ ಅಸಾಧಾರಣ ಕ್ರಿಯೆಗಳನ್ನು ಬೆರಗಿನಿಂದ ನೋಡುತ್ತೇವೆ. ಆದರೆ ಅದು ನಿಜವಾದರೆ? ರುಚಿಕಟ್ಟಾದ ಖಾದ್ಯಗಳಿಗೆ ಬಳಕೆಯಾಗುವ ಪಾಲಕ್ ಗಿಡಗಳು ಇ-ಮೇಲ್‌ಗಳನ್ನು ರವಾನಿಸುವ ಸಾಮರ್ಥ್ಯ ಪಡೆದುಕೊಳ್ಳುವಂತೆ ಮಾಡುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಅಮೆರಿಕದ ಮಸ್ಸಾಷುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಎಂಜಿನಿಯರ್‌ಗಳು ನ್ಯಾನೋ ತಂತ್ರಜ್ಞಾನದ ಮೂಲಕ ಸ್ಫೋಟಕ ಸಾಧನಗಳನ್ನು ಪತ್ತೆಹಚ್ಚುವಂತಹ ಸಾಮರ್ಥ್ಯದ ಸೆನ್ಸರ್‌ಗಳನ್ನು ಪಾಲಕ್ ಗಿಡಗಳಲ್ಲಿ ಅಳವಡಿಸಿದ್ದಾರೆ. ಈ ಪಾಲಕ್ ಗಿಡಗಳು ತಂತಿ ರಹಿತವಾಗಿ ವಿಜ್ಞಾನಿಗಳಿಗೆ ಮಾಹಿತಿಗಳನ್ನು ಮರಳಿ ಕಳುಹಿಸುವಷ್ಟು ಶಕ್ತವಾಗಿವೆ.

ಏಕಕಾಲಕ್ಕೆ 143 ಉಪಗ್ರಹ ಉಡಾವಣೆ: ಇಸ್ರೋದ ವಿಶ್ವದಾಖಲೆ ಮುರಿದ ಅಮೆರಿಕದ ಸ್ಪೇಸ್ ಎಕ್ಸ್ಏಕಕಾಲಕ್ಕೆ 143 ಉಪಗ್ರಹ ಉಡಾವಣೆ: ಇಸ್ರೋದ ವಿಶ್ವದಾಖಲೆ ಮುರಿದ ಅಮೆರಿಕದ ಸ್ಪೇಸ್ ಎಕ್ಸ್

ಪಾಲಕ್ ಗಿಡದಲ್ಲಿನ ಬೇರುಗಳು ಅಂತರ್ಜಲದಲ್ಲಿನ ನೈಟ್ರೋಅರೋಮ್ಯಾಟಿಕ್‌ಗಳ ಅಸ್ತಿತ್ವವನ್ನು ಪತ್ತೆಹಚ್ಚಬಲ್ಲವು. ನೈಟ್ರೋಅರೋಮ್ಯಾಟಿಕ್‌ಗಳನ್ನು ಲ್ಯಾಂಡ್‌ಮೈನ್‌ಗಳಂತಹ ಸ್ಫೋಟಕಗಳಲ್ಲಿ ಬಳಕೆಯಾಗುತ್ತವೆ. ಗಿಡದಲ್ಲಿನ ಕಾರ್ಬಲ್ ನ್ಯಾನೋಟ್ಯೂಬ್‌ಗಳು ಈ ಕುರಿತು ಸಂಕೇತವನ್ನು ಹೊಮ್ಮಿಸಬಲ್ಲದು. ಈ ಸಂಕೇತಗಳನ್ನು ಇನ್‌ಫ್ರಾರೆಡ್ ಕ್ಯಾಮೆರಾ ಓದಬಲ್ಲದು. ಈ ಮೂಲಕ ವಿಜ್ಞಾನಿಗಳಿಗೆ ಎಚ್ಚರಿಕೆಯ ಇ-ಮೇಲ್ ರವಾನಿಸಬಲ್ಲದು. ಮುಂದೆ ಓದಿ.

ಪ್ಲ್ಯಾಂಟ್ ನ್ಯಾನೋಬಿನಿಕ್ಸ್

ಪ್ಲ್ಯಾಂಟ್ ನ್ಯಾನೋಬಿನಿಕ್ಸ್

ಗಿಡಗಳಲ್ಲಿ ಎಲೆಕ್ಟ್ರಾನಿಕ್ ಅಂಶಗಳನ್ನು ಮತ್ತು ವ್ಯವಸ್ಥೆಗಳನ್ನು ಅಳವಡಿಸುವ ಸಂಶೋಧನೆಯ ವಿಸ್ತೃತ ಕ್ಷೇತ್ರದ ಭಾಗವಾಗಿ ಈ ಪ್ರಯೋಗ ನಡೆಸಲಾಗಿದೆ. 'ಪ್ಲ್ಯಾಂಟ್ ನ್ಯಾನೋಬಿನಿಕ್ಸ್' ಎಂದು ಕರೆಯಲಾಗುವ ತಂತ್ರಜ್ಞಾನವು ಗಿಡಗಳಿಗೆ ಹೊಸ ಸಾಮರ್ಥ್ಯವನ್ನು ನೀಡುವ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗುತ್ತಿದೆ.

ಗಿಡಗಳಿಗೆ ವಿಶೇಷ ಸಾಮರ್ಥ್ಯವಿದೆ

ಗಿಡಗಳಿಗೆ ವಿಶೇಷ ಸಾಮರ್ಥ್ಯವಿದೆ

'ಗಿಡಗಳು ಮೂಲತಃ ಅತ್ಯುತ್ತಮ ವಿಶ್ಲೇಷಕ ರಾಸಾಯನ ತಜ್ಞರಾಗಿವೆ' ಎನ್ನುತ್ತಾರೆ ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಮಿಖಾಯಲ್ ಸ್ಟ್ರಾನೊ. 'ಗಿಡಗಳು ಮಣ್ಣಿನ ಒಳಗೆ ತೀವ್ರಮಟ್ಟದ ಬೇರಿನ ಜಾಲವನ್ನು ಹೊಂದಿರುತ್ತವೆ. ಅವು ಅಂತರ್ಜಲವನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿರುತ್ತವೆ. ಹಾಗೆಯೇ ತಮ್ಮ ಎಲೆಗಳವರೆಗೂ ನೀರನ್ನು ವರ್ಗಾಯಿಸುವ ಸ್ವಯಂ ಶಕ್ತಿಯ ಸಾಮರ್ಥ್ಯ ಹೊಂದಿವೆ' ಎಂದು ಅವರು ವಿವರಿಸಿದ್ದಾರೆ.

ಏಲಿಯನ್‌ಗಳಿರುವುದು ನಿಜ, ಅದು ಡೊನಾಲ್ಡ್‌ ಟ್ರಂಪ್‌ಗೆ ಗೊತ್ತು!ಏಲಿಯನ್‌ಗಳಿರುವುದು ನಿಜ, ಅದು ಡೊನಾಲ್ಡ್‌ ಟ್ರಂಪ್‌ಗೆ ಗೊತ್ತು!

'ಗಿಡಗಳು ಮತ್ತು ಮನುಷ್ಯರ ಸಂವಹನ ಗೋಡೆಗಳನ್ನು ನಾವು ಹೇಗೆ ತಗ್ಗಿಸಬಹುದು ಎಂಬುದಕ್ಕೆ ಇದು ವಿನೂತನ ಪ್ರಯೋಗವಾಗಿದೆ' ಎಂದಿದ್ದಾರೆ.

ಹವಾಮಾನ ಸ್ಥಿತಿ ಬಗ್ಗೆ ಮಾಹಿತಿ

ಹವಾಮಾನ ಸ್ಥಿತಿ ಬಗ್ಗೆ ಮಾಹಿತಿ

ಈ ಪ್ರಯೋಗದ ಮೂಲ ಉದ್ದೇಶ ಸ್ಫೋಟಕಗಳನ್ನು ಪತ್ತೆ ಹಚ್ಚುವುದಾಗಿದೆ. ಆದರೆ ಇದರ ಜತೆಗೆ ಈ ತಂತ್ರಜ್ಞಾನವು ಮಾಲಿನ್ಯ ಮತ್ತು ಇತರೆ ಹವಾಮಾನ ಸನ್ನಿವೇಶಗಳ ಬಗ್ಗೆಯೂ ಸಂಶೋಧಕರಿಗೆ ಎಚ್ಚರಿಕೆ ನೀಡಲು ಸಹಾಯ ಮಾಡಲಿದೆ ಎಂದು ಸ್ಟ್ರಾನೋ ಮತ್ತು ಇತರೆ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ ಗಿಡಗಳು ತಮ್ಮ ಸುತ್ತಮುತ್ತಲಿನಿಂದ ಗ್ರಹಿಸುವ ಭಾರಿ ಪ್ರಮಾಣದ ದತ್ತಾಂಶಗಳು, ಅಲ್ಲಿನ ಪರಿಸರೀಯ ಬದಲಾವಣೆಗಳ ಮೇಲೆ ನಿಗಾ ವಹಿಸುವ ಸಲುವಾಗಿಯೇ ನಡೆಯುತ್ತದೆ.

ಮಾಲಿನ್ಯ ಗ್ರಹಿಗೆ ಹೇಗೆ?

ಮಾಲಿನ್ಯ ಗ್ರಹಿಗೆ ಹೇಗೆ?

ಪ್ಲ್ಯಾಂಟ್ ನ್ಯಾನೋಬಿಯಾನಿಕ್ ಸಂಶೋಧನೆಯ ಆರಂಭಿಕ ಹಂತಗಳಲ್ಲಿ ಗಿಡಗಳು ಮಾಲಿನ್ಯಕಾರಕಗಳನ್ನು ಕಂಡುಕೊಳ್ಳುವ ಸೆನ್ಸಾರ್‌ಗಳನ್ನು ಹೊಂದುವಂತೆ ನ್ಯಾನೋ ಕಣಗಳನ್ನು ಬಳಸಲಾಗಿತ್ತು. ಗಿಡಗಳು ದ್ಯುತಿಸಂಶ್ಲೇಷಣೆಯಲ್ಲಿ ಹೇಗೆ ಬದಲಾವಣೆ ಮಾಡಿಕೊಳ್ಳುತ್ತಿರುವಂತೆ, ಬೆಂಕಿಯ ಸುಡುವಿಕೆಯಿಂದ ಉಂಟಾಗುವ ನೈಟ್ರಿಕ್ ಆಕ್ಸೈಡ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುವಂತೆ ವಿಜ್ಞಾನಿಗಳು ಪರಿವರ್ತಿಸಿದರು.

ಮತ್ತೆ ಕಂಡಿತಾ ಹಾರುವ ತಟ್ಟೆ? ಪಾಕಿಸ್ತಾನಿ ಪೈಲಟ್ ಸೆರೆ ಹಿಡಿದ ದೃಶ್ಯ ವೈರಲ್ಮತ್ತೆ ಕಂಡಿತಾ ಹಾರುವ ತಟ್ಟೆ? ಪಾಕಿಸ್ತಾನಿ ಪೈಲಟ್ ಸೆರೆ ಹಿಡಿದ ದೃಶ್ಯ ವೈರಲ್

ಬರಗಾಲ ಬರುವುದು ಕೂಡ ಗೊತ್ತಾಗುತ್ತದೆ

ಬರಗಾಲ ಬರುವುದು ಕೂಡ ಗೊತ್ತಾಗುತ್ತದೆ

'ಗಿಡಗಳು ದೊಡ್ಡ ಮಟ್ಟಕ್ಕೆ ಪರಿಸರ ಪ್ರಕ್ರಿಯೆಗಳಿಗೆ ಸ್ಪಂದಿಸುತ್ತವೆ. ಮುಂದೆ ಬರಗಾಲ ಬರಲಿದೆ ಎನ್ನುವುದು ನಮಗಿಂತ ಬಹಳ ಹಿಂದೆಯೇ ಅವುಗಳಿಗೆ ಗೊತ್ತಾಗುತ್ತದೆ. ಮಣ್ಣು ಮತ್ತು ನೀರಿನ ಲಭ್ಯತೆಯಲ್ಲಿನ ಸಣ್ಣ ಮಟ್ಟದ ಬದಲಾವಣೆಗಳನ್ನು ಕೂಡ ಅವು ಗ್ರಹಿಸಬಲ್ಲವು. ನಾವು ಅವುಗಳ ಆ ರಾಸಾಯನಿಕ ಸಂಕೇತದ ಮಾರ್ಗವನ್ನು ಕಂಡುಕೊಂಡರೆ, ನಮಗೆ ಅದು ಬಹುದೊಡ್ಡ ಮಾಹಿತಿ ಸಂಪತ್ತಾಗಲಿದೆ' ಎಂದು ಸ್ಟ್ರಾನೋ ವಿವರಿಸಿದ್ದಾರೆ.

ಮೆಟರ್ ಏರ್ ಬ್ಯಾಟರಿಗಳು

ಮೆಟರ್ ಏರ್ ಬ್ಯಾಟರಿಗಳು

ಸಂಶೋಧಕರಿಗೆ ಇ-ಮೇಲ್ ಸಂದೇಶಗಳನ್ನು ರವಾನಿಸುವ ಕೆಲಸದ ಜತೆಗೆ ಪಾಲಕ್ ಗಿಡಗಳು ಫ್ಯುಯೆಲ್ ಕೋಶಗಳಿಗೂ ಪರಿಣಾಮಕಾರಿಯಾಗಿ ಶಕ್ತಿಯನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಪಾಲಕ್‌ಅನ್ನು ಕಾರ್ಬನ್ ನ್ಯಾನೋಶೀಟ್‌ಗಳನ್ನಾಗಿ ಪರಿವರ್ತಿಸಿದಾಗ ಅದು ಮೆಟಲ್-ಏರ್ ಬ್ಯಾಟರಿಗಳನ್ನು ರೂಪಿಸುವಲ್ಲಿ ರಾಸಾಯನಿಕ ವೇಗವರ್ಧಕಗಳಂತೆ ಮತ್ತು ಫ್ಯುಯೆಲ್ ಸೆಲ್‌ಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಂತೆ ಕೆಲಸ ನಿರ್ವಹಿಸಬಲ್ಲದು.

ಬ್ಯಾಟರಿಗಳಲ್ಲಿ ಬಳಕೆ

ಬ್ಯಾಟರಿಗಳಲ್ಲಿ ಬಳಕೆ

'ಸುಸ್ಥಿರ ರಾಸಾಯನಿಕ ಪ್ರತಿಕ್ರಿಯೆ ವೇಗವರ್ಧಕಗಳನ್ನು ನೈಸರ್ಗಿಕ ಸಂಪನ್ಮೂಲಗಳಿಂದ ಆಮ್ಲಜನಕ ಕಡಿತ ಪ್ರತಿಕ್ರಿಯೆಗಳನ್ನು ಸೃಷ್ಟಿಸಬಹುದು ಎಂಬುದನ್ನು ಈ ಪ್ರಯೋಗ ತೋರಿಸಿದೆ' ಎನ್ನುತ್ತಾರೆ ಸಂಶೋಧನೆಯಲ್ಲಿ ಭಾಗವಹಿಸಿದ್ದ ಪ್ರೊಫೆಸರ್ ಶೌಝೊಂಗ್ ಝೌ.

ಮೆಟರ್-ಏರ್ ಬ್ಯಾಟರಿಗಳು ಲೀಥಿಯಂ-ಇಯಾನ್ ಬ್ಯಾಟರಿಗಳಿಗೆ ಹೋಲಿಸಿದರೆ ಹೆಚ್ಚು ಇಂಧನ ಕಾರ್ಯಕ್ಷಮತೆ ಹೊಂದಿವೆ. ಇವುಗಳನ್ನು ಸ್ಮಾರ್ಟ್‌ಫೋನ್‌ನಂತಹ ವಾಣಿಜ್ಯ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.

ಪಾಲಕ್ ಗಿಡಗಳ ಆಯ್ಕೆ ಏಕೆ?

ಪಾಲಕ್ ಗಿಡಗಳ ಆಯ್ಕೆ ಏಕೆ?

ಈ ಪ್ರಯೋಗಕ್ಕೆ ಪಾಲಕ್‌ಅನ್ನು ಆಯ್ಕೆ ಮಾಡಿದ್ದಕ್ಕೆ ವಿಶೇಷ ಕಾರಣವಿದೆ. ಪಾಲಕ್ ಗಿಡಗಳು ಹೇರಳವಾಗಿ ಕಬ್ಬಿಣ ಮತ್ತು ನೈಟ್ರೋಜೆನ್ ಅಂಶಗಳನ್ನು ಹೊಂದಿರುತ್ತವೆ. ಇವು ರಾಸಾಯನಿಕ ಪ್ರತಿಕ್ರಿಯೆ ಚುರುಕುಗೊಳ್ಳುವ ಕಾರ್ಯಕ್ಕೆ ಮಹತ್ವದ ಅಂಶಗಳಾಗಿವೆ. ಸಂಶೋಧಕರು ಪಾಲಕ್‌ಅನ್ನು ತೊಳೆದು ರಸ ತೆಗೆದು ಹಿಂಡಿ ಅದನ್ನು ಪೌಡರ್ ಆಗ ಪರಿವರ್ತಿಸುತ್ತಾರೆ. ಬಳಿಕ ಈ ಪ್ರಕ್ರಿಯೆಗಾಗಿ ಸೂಕ್ತವಾದ ನ್ಯಾನೋಶೀಟ್‌ಗಳನ್ನು ತಯಾರಿಸುವ ಸ್ವರೂಪಕ್ಕೆ ಯೋಗ್ಯವಾಗಿಸುತ್ತಾರೆ.

English summary
American scientists at MIT have transformed Spinach plants into sensors capable of sending emails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X