ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ: ಮೆಕೆಫಿ ಸಮೀಕ್ಷೆ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಕಳೆದ ವರ್ಷದಲ್ಲಿ ನಾವು ಕಲಿಯುವ ವಿಧಾನವು ಗಮನಾರ್ಹವಾದ ರೀತಿಯಲ್ಲಿ ಬದಲಾಗಿದೆ. ಏಕೆಂದರೆ, ಸಾಂಕ್ರಾಮಿಕವು ಏಕಾಏಕಿ ಅನೇಕ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಭೌತಿಕ ತರಗತಿಗಳಿಗೆ ಪರ್ಯಾಯಗಳನ್ನು ಹುಡುಕುವಂತೆ ಮಾಡಿತು. ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಹೆಚ್ಚು ಸಮಯ ಕಳೆಯಲು ಆರಂಭಿಸಿದಂತೆ ವರ್ಚುವಲ್ ತರಗತಿಯಲ್ಲಿ ಏರಿಕೆಗೆ ಕಾರಣವಾಗಿದೆ. ಹೀಗಾಗಿ ವೆಬ್‍ನಲ್ಲಿ ಹೆಚ್ಚಿನ ಅಪಾಯಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಆನ್‍ಲೈನ್ ಹಗರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ ಹಗರಣಗಳು ಜನರ ನಡವಳಿಕೆ ಮತ್ತು ಭಾವನಾತ್ಮಕತೆಯ ದುರ್ಬಲತೆಗಳ ಮೇಲೆ ಸವಾರಿ ಮಾಡುತ್ತವೆ. ಆದ್ದರಿಂದ ಅವುಗಳನ್ನು ಮೂಲ ಆನ್‍ಲೈನ್ ಸುರಕ್ಷತಾ ಶಿಷ್ಠಾಚಾರಗಳಲ್ಲಿ ಜಾಗೃತಗೊಳಿಸುವುದು ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಉನ್ನತ ಕಲಿಕಾ ಫಲಿತಾಂಶಗಳನ್ನು ಖಾತ್ರಿಪಡಿಸಿಕೊಳ್ಳಲು ಗಮನಾರ್ಹವಾದ ಕೊಡುಗೆ ನೀಡುತ್ತದೆ.

ಇತ್ತೀಚೆಗೆ ಮೆಕೆಫಿ ಕಾರ್ಪ್ ಅಧ್ಯಯನದ ಪ್ರಕಾರ ಶೇ.89 ರಷ್ಟು ಭಾರತೀಯರು ಶಾಲೆಗಳು ಆನ್‍ಲೈನ್ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನಂಬಿದ್ದಾರೆಂದು ತಿಳಿಸುತ್ತದೆ. ಈ ಪೈಕಿ ಶೇ.62 ರಷ್ಟು ಜನರು ಡಿಜಿಟಲ್ ಕ್ಷೇಮ ಮತ್ತು ರಕ್ಷಣೆಯು ತನ್ನದೇ ಆದ ಪ್ರತ್ಯೇಕ ಪಠ್ಯಕ್ರಮವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ಆದರೆ, ಗ್ರೇಡ್ ಶಾಲೆಯಲ್ಲಿ ಈ ವಿಷಯವನ್ನು ಕಲಿಸಲಾಗುತ್ತದೆ. ಆದರೆ, ಶೇ.27 ರಷ್ಟು ಜನರು ಇದನ್ನು ಐಟಿಯಂತಹ ತಂತ್ರಜ್ಞಾನ ವಿಷಯಗಳಲ್ಲಿ ಸಂಯೋಜಿಸಬೇಕೆಂದು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ

ಕಳೆದ ವರ್ಷದಿಂದೀಚೆಗೆ ಭಾರತದಲ್ಲಿ ಶೇ.81 ರಷ್ಟು ಜನರು ವರ್ಚುವಲ್ ಪ್ಲಾಟ್‍ಫಾರ್ಮ್ ಮೂಲಕ ತಮ್ಮ ಕುಟುಂಬದಲ್ಲಿ ಕನಿಷ್ಠ ಓರ್ವ ಸದಸ್ಯನಾದರೂ ಪೂರ್ಣಪ್ರಮಾಣದಲ್ಲಿ ಅಥವಾ ಅರೆಕಾಲಿಕವಾಗಿ ಆನ್‍ಲೈನ್ ಕಲಿಕೆಯನ್ನು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ. ಇವರಲ್ಲಿ ಶೇ.34 ರಷ್ಟು ಜನರ ಪ್ರಕಾರ 18-24 ರ ವಯೋಮಾನದವರು, 13-18 ರ ವಯೋಮಾನದ ಶೇ.29, 5-12 ರ ವಯೋಮಾನದ ಶೇ.24 ರಷ್ಟು ಜನರು, 25-35 ರ ವಯೋಮಾನದ ಶೇ.21, 35 ವರ್ಷಕ್ಕಿಂತ ಮೇಲ್ಪಟ್ಟವರು ಶೇ.16 ಹಾಗೂ 5 ವರ್ಷದೊಳಗಿನ ಶೇ.9 ರಷ್ಟು ಜನರು ಈ ಆನ್‍ಲೈನ್ ಕಲಿಕೆಯಲ್ಲಿ ತೊಡಗಿದ್ದಾರೆ. ಯುವ ಸಮುದಾಯವು ಅತ್ಯಧಿಕ ಸಂಖ್ಯೆಯಲ್ಲಿ ವರ್ಚುವಲ್ ಕಲಿಕೆಯನ್ನು ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಆನ್‍ಲೈನ್ ಸುರಕ್ಷತೆಯನ್ನು ಖಾತರಿಪಡಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದಲ್ಲಿ ದೂರ ಶಿಕ್ಷಣದಲ್ಲಿ ತೊಡಗಿಕೊಂಡಿರುವ ಶೇ.36 ರಷ್ಟು ಜನರು ಹೊಸ ಭದ್ರತೆ/ರಕ್ಷಣೆ ತಂತ್ರಜ್ಞಾನವನ್ನು ಖರೀದಿಸಿದ್ದಾರೆ ಎಂದು ಅಧ್ಯಯನದ ವರದಿ ತಿಳಿಸಿದೆ.

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ

ಮೆಕೆಫೀಯ ಕನ್ಸೂಮರ್‌ನ ಹಿರಿಯ ಉಪಾಧ್ಯಕ್ಷ ಜುಡಿತ್ ಬಿಟ್ಟೆರ್ಲಿ ಅವರು ಮಾತನಾಡಿ,''ಜನರು ರಿಮೋಟ್ ಮತ್ತು ಇ-ಲರ್ನಿಂಗ್‍ನತ್ತ ಗಮನಹರಿಸಿದಾಗ ವಿದ್ಯಾರ್ಥಿಗಳು ಇಂದು ಆನ್‍ಲೈನ್ ಬೆದರಿಕೆಗಳ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ, ಅವರು ಆನ್‍ಲೈನ್‍ನಲ್ಲಿ ಕಳೆಯುವ ಸಮಯವು ಹೆಚ್ಚಾಗುತ್ತಿದೆ ಮತ್ತು ಅವರು ಹೊಸ ಹೊಸ ಸಾಧನಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈಗ ಕಡಿಮೆ ನಿಯಂತ್ರಿತ ವಾತಾವರಣದಿಂದ ಕಾರ್ಯ ನಿರ್ವಹಣೆ ಮಾಡುತ್ತಿರುವುದರಿಂದ ಅವರಿಗೆ ಫಿಶಿಂಗ್, ಸೈಬರ್ ಬುಲ್ಲಿಂಗ್ ಮತ್ತು ಒಟ್ಟಾರೆ ಸೈಬರ್ ಸುರಕ್ಷತೆಯ ನೈರ್ಮಲ್ಯವನ್ನು ಅಳವಡಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಸಮಗ್ರವಾಗಿ ಸೈಬರ್ ಭದ್ರತೆಯ ಮೊರೆ ಹೋಗಬೇಕಾಗುತ್ತದೆ. ವಿಶೇಷವಾಗಿ ಈಗ ಮಗುವಿನ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ ತಂತ್ರಜ್ಞಾನ ವ್ಯಾಪಿಸಿದೆ'' ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ

ಮಕ್ಕಳಿಗೆ ಆನ್‍ಲೈನ್ ಸುರಕ್ಷತೆಯ ಶಿಕ್ಷಣ ಅಗತ್ಯ

ಕಳೆದ ವರ್ಷ ಮೇ ತಿಂಗಳಲ್ಲಿ ಮೆಕೆಫೀ ಬಿಡುಗಡೆ ಮಾಡಿದ ಕ್ಲೌಡ್ ಅಡಾಪ್ಶನ್ ಅಂಡ್ ರಿಸ್ಕ್ ರಿಪೋರ್ಟ್- ವರ್ಕ್ ಫ್ರಂ ಹೋಂ ಎಡಿಶನ್ ಪ್ರಕಾರ, ಶಿಕ್ಷಣ ವಲಯವು ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಗೆ ತಮ್ಮ ಕ್ಲೌಡ್ ಖಾತೆಗಳಲ್ಲಿನ ಬೆದರಿಕೆ ಘಟನಗಳ ಮೊತ್ತದಲ್ಲಿ ಎರಡನೇ ಅತಿ ಹೆಚ್ಚಿನ ಏರಿಕೆಯನ್ನು ಕಂಡಿದೆ. ಜಾಗೃತಿಯ ಕೊರತೆ ಮತ್ತು ಜಾಗವನ್ನು ನಿಯಂತ್ರಿಸುವ ದುರ್ಬಲ ನೀತಿಗಳು ಈ ವಲಯವನ್ನು ಸೈಬರ್ ಬೆದರಿಕೆಗಳಿಗೆ ಗುರಿಯಾಗುವಂತೆ ಮಾಡುತ್ತವೆ. ಪೋಷಕರಿಗೆ, ಅವರ ಮಕ್ಕಳ ಹೆಚ್ಚಿನ ಸಂಪರ್ಕಕ್ಕೆ ಬಂದಾಗ ಕಾಳಜಿಯ ಕೆಲವು ಕ್ಷೇತ್ರಗಳು ಕಾನೂನುಬಾಹಿತ ವಿಷಯ(ಶೇ.55), ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು (ಶೇ.53), ಹಗರಣಗಳಿಗೆ ಒಡ್ಡಿಕೊಳ್ಳುವುದು (ಶೇ.53), ಸೈಬರ್ ಬೆದರಿಸುವಿಕೆ (ಶೇ.52) ಮತ್ತು ತಪ್ಪು ಮಾಹಿತಿ (ಶೇ.49) ಆಗಿರುವುದರಿಂದ ಅವರ ಸೂಕ್ಷ್ಮ ಡೇಟಾವನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಮತ್ತು ವರ್ಚುವಲ್ ತರಗತಿಯ ಒಳಗೆ ಮತ್ತು ಹೊರಗೆ ಹೇಗೆ ಹಂಚಿಕೊಳ್ಳಲಾಗುತ್ತದೆ ಎಂಬುದರ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ.

ಸುರಕ್ಷಿತವಾಗಿರಲು ಇಲ್ಲಿ ಕೆಲವು ಸಲಹೆಗಳು

ಸುರಕ್ಷಿತವಾಗಿರಲು ಇಲ್ಲಿ ಕೆಲವು ಸಲಹೆಗಳು

•ನೀವು ನೋಡಿದ ಎಲ್ಲವನ್ನೂ ಕ್ಲಿಕ್ ಮಾಡಬೇಡಿ- ಕಳುಹಿಸಿದವರ ಬಗ್ಗೆ ಮಾಹಿತಿ ಗೊತ್ತಿಲ್ಲದಿದ್ದರೆ ಯಾವುದೇ ಕಾರಣಕ್ಕೂ ಇಮೇಲ್, ಸಂದೇಶಗಳು ಅಥವಾ ಸ್ಕ್ರೀನ್ ಪಾಪ್-ಅಪ್‍ಗಳನ್ನು ಕ್ಲಿಕ್ ಮಾಡಬೇಡಿ. ನೀವು ಪ್ರತಿಕ್ರಿಯೆ ನೀಡುವ ಮುನ್ನ ಇಮೇಲ್/ಸಂದೇಶ/ಪಠ್ಯವನ್ನು ಪರಿಶೀಲಿಸಿ.

•ಮಿತಿ ಮೀರಿ ಮಾಹಿತಿ ಹಂಚಿಕೊಳ್ಳಬೇಡಿ- ಎಲ್ಲಾ ಸಾಮಾಜಿಕ ಪ್ರೊಫೈಲ್‍ಗಳಲ್ಲಿ ಗೌಪ್ಯತೆ ಸೆಟ್ಟಿಂಗ್‍ಗಳನ್ನು ಗರಿಷ್ಠಗೊಳಿಸಿಕೊಳ್ಳಿ ಮತ್ತು ಸುರಕ್ಷಿತ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಳ್ಳಿ. ವೈಯಕ್ತಿಕ ಡೇಟಾವನ್ನು ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸುವ ಯಾವುದೇ ಪೋಸ್ಟ್ ಅನ್ನು ಅಳಿಸುವ ಮೂಲಕ ಹೆಚ್ಚು ವೈಯಕ್ತಿಕ ಮಾಹಿತಿಯನ್ನು ನೀಡುವುದನ್ನು ತಪ್ಪಿಸಿ. ನಿಮ್ಮ ಕುಟುಂಬದ ಸದಸ್ಯರು, ಶಾಲೆ, ಊರು ಮತ್ತು ಹುಟ್ಟುಹಬ್ಬದ ಹೆಸರುಗಳನ್ನು ತೆಗೆದುಹಾಕುವುದು ಉತ್ತಮ.

•ಸುರಕ್ಷಿತವಾಗಿ ಪ್ರವೇಶ- ಪಾಸ್‍ವರ್ಡ್‍ಗಳು ಅಥವಾ ಡೇಟಾದಂತಹ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್‌ಗಳು ಕದಿಯುವುದನ್ನು ನಿಲ್ಲಿಸಲು ಬ್ಯಾಂಕ್ ಮಟ್ಟದ ಲಿಪೀಕರಣದೊಂದಿಗೆ ಇಂಟರ್ನೆಟ್ ಸಂಪರ್ಕದ ಗೌಪ್ಯತೆಯನ್ನು ರಕ್ಷಿಸಲು ಮಕ್ಕಳು ಮನೆಯಿಂದ ಆನ್‍ಲೈನ್ ಕಲಿಕಾ ಸೇವೆಗಳನ್ನು ಪ್ರವೇಶಿಸುವಾಗ ವಿಪಿಎನ್ ಬಳಸಿ.

English summary
A survey by McAfee found that 89% of Indians believe that schools should educate children on online safety. Here are a few quick tips to ensure kids are protected online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X