ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಬ್ಬಿದ ಕಣ್ಣು, ಭಯಾನಕ ಹಲ್ಲು: ಅಬ್ಬಾ.. ಈ ಶಾರ್ಕ್ ಎಷ್ಟು ವಿಚಿತ್ರ

|
Google Oneindia Kannada News

ಸಮುದ್ರದ ಆಳ ಹೆಚ್ಚಿದ್ದಷ್ಟು ಅದರಲ್ಲಿ ಹೆಚ್ಚು ರಹಸ್ಯಗಳು ಅಡಗಿರುತ್ತವೆ. ನೀರೊಳಗಿನ ಪ್ರಪಂಚವು ನಿಜವಾಗಿಯೂ ತುಂಬಾ ನಿಗೂಢವಾಗಿದೆ. ಕೆಲವೊಮ್ಮೆ ಅಂತಹ ಜೀವಿಗಳು ಸಮುದ್ರದಿಂದ ಮಾನವರ ಕೈಗೆ ಬರುತ್ತವೆ. ಅದರ ಬಗ್ಗೆ ಮಾನವರು ಕೇಳಿರುವುದಿಲ್ಲ, ಅವುಗಳನ್ನು ಎಂದಿಗೂ ನೋಡಿರುವುದಿಲ್ಲ ಅಥವಾ ಅವುಗಳ ಬಗ್ಗೆ ಊಹಿಸಿರುವುದಿಲ್ಲ. ಈಗ ಅಂತಹ ಭಯಾನಕ ಮತ್ತು ದೈತ್ಯ ಮೀನು ಮೀನುಗಾರರ ಬಲೆಗೆ ಸಿಕ್ಕಿಬಿದ್ದಿದ್ದು, ಅದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಶಾರ್ಕ್ ಆಸ್ಟ್ರೇಲಿಯಾದ ಆಳ ಸಮುದ್ರದಲ್ಲಿ ಕಂಡುಬಂದಿದೆ.

ಕಾರ್ಟೂನ್ ಫಿಶ್, ಡ್ರ್ಯಾಗನ್ ಫಿಶ್, ಗೋಲ್ಡನ್ ಫಿಶ್ ಹೊರತುಪಡಿಸಿ ಹಲವು ಅಪರೂಪದ ಮೀನುಗಳಿದ್ದು, ಅವುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆದರೀಗ ಅದೆಲ್ಲದಕ್ಕಿಂತ ಭಿನ್ನವಾದ ಶಾರ್ಕ್ ಪತ್ತೆಯಾಗಿದ್ದು ನೋಡುಗರನ್ನು ಬೆರಗುಗೊಳಿಸಿದೆ. ಅಂತಹ ಒಂದು ದುಃಸ್ವಪ್ನವಾಗಿ ಕಾಣುವ ಉಬ್ಬು ಕಣ್ಣುಗಳಿರುವ ಹಾಗೂ ಭಯಾನಕ ಹಲ್ಲುಗಳನ್ನು ಹೊಂದಿರುವ ಆಳವಾದ ಸಮುದ್ರದ ಶಾರ್ಕ್ ಆಸ್ಟ್ರೇಲಿಯಾದಲ್ಲಿ ಕಂಡುಬಂದಿದೆ. ಇದು ನೋಡುಗರನ್ನು ಭಯದಿಂದ ನಡುಗಿಸುವಂತಿದೆ.

ನಮೀಬಿಯಾದಿಂದ ಚೀತಾಗಳೇನೋ ಬಂದವು, ಮುಂದೆ ಅವು ದೇಶದಲ್ಲಿ ಉಳಿಯಬಲ್ಲವೇ?ನಮೀಬಿಯಾದಿಂದ ಚೀತಾಗಳೇನೋ ಬಂದವು, ಮುಂದೆ ಅವು ದೇಶದಲ್ಲಿ ಉಳಿಯಬಲ್ಲವೇ?

ಆಸ್ಟ್ರೇಲಿಯಾ ಮೀನುಗಾರರಿಗೆ ಸಿಕ್ಕ ನಿರ್ಜೀವ ಶಾರ್ಕ್

ಆಸ್ಟ್ರೇಲಿಯಾ ಮೀನುಗಾರರಿಗೆ ಸಿಕ್ಕ ನಿರ್ಜೀವ ಶಾರ್ಕ್

ವಾಸ್ತವವಾಗಿ ಆಸ್ಟ್ರೇಲಿಯಾದ ಮೀನುಗಾರರಿಗೆ ಈ ಶಾರ್ಕ್ ಸಿಕ್ಕಿದೆ. ನಿರ್ಜೀವವಾದ ಈ ಶಾರ್ಕ್‌ನ ಫೋಟೋಗಳು ವೈರಲ್ ಆಗಿವೆ. ಈ ಆಘಾತಕಾರಿ ಆವಿಷ್ಕಾರವನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಇದನ್ನು ದುಃಸ್ವಪ್ನ ಎಂದು ವಿವರಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಸಮುದ್ರದಲ್ಲಿ ಸಿಕ್ಕ ಶಾರ್ಕ್‌ನ ಹಲ್ಲುಗಳು ನಿಜಕ್ಕೂ ಭಯ ಹುಟ್ಟಿಸುವಂತಿವೆ. ಅದರ ಉಬ್ಬಿರುವ ಕಣ್ಣುಗಳು ಮತ್ತು ಮೊನಚಾದ ಮೂಗು ಹಿಂದೆ ಕಂಡ ಶಾರ್ಕ್‌ಗಳಿಗಿಂತಲೂ ವಿಚಿತ್ರ ಹಾಗೂ ವಿಶ್ಮಯ. ಮೀನಿನ ಮುಖವು ಸಾಕಷ್ಟು ವಿಭಿನ್ನವಾಗಿದೆ.

ಅಪರೂಪದ ವಿಡಿಯೋ ಶೇರ್ ಮಾಡಿದ್ದಕ್ಕಾಗಿ ಕಿರಣ್ ಬೇಡಿ ಟ್ರೋಲ್ಅಪರೂಪದ ವಿಡಿಯೋ ಶೇರ್ ಮಾಡಿದ್ದಕ್ಕಾಗಿ ಕಿರಣ್ ಬೇಡಿ ಟ್ರೋಲ್

ಭಯಾನಕ ಶಾರ್ಕ್‌ ಕಂಡು ಬೆರಗಾದ ಜನ

ಭಯಾನಕ ಶಾರ್ಕ್‌ ಕಂಡು ಬೆರಗಾದ ಜನ

ಸಿಡ್ನಿ ಮೀನುಗಾರ ಟ್ರ್ಯಾಪ್‌ಮ್ಯಾನ್ ಬರ್ಮಗುಯಿ ಈ ಶಾರ್ಕ್‌ನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 2,133 ಅಡಿ ನೀರಿನ ಅಡಿಯಲ್ಲಿ ಈ ಶಾರ್ಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಪೋಸ್ಟ್‌ನಲ್ಲಿ ಅವರು "ಸಮುದ್ರದಲ್ಲಿ 650 ಮೀಟರ್ ಆಳದಲ್ಲಿ ವಿಚಿತ್ರ ಶಾರ್ಕ್ ಪತ್ತೆಯಾಗಿದೆ" ಎಂದು ಬರೆದಿದ್ದಾರೆ. ಈ ಶಾರ್ಕ್‌ನ ಚರ್ಮವು ಒರಟಾಗಿ ಕಾಣುತ್ತದೆ. ಅವರ ಮೂಗು ಮೊನಚಾಗಿದ್ದು, ದೊಡ್ಡ ಮತ್ತು ದಪ್ಪ ಕಣ್ಣುಗಳನ್ನು ಇದು ಹೊಂದಿದೆ. ಚೂಪಾದ ಹಲ್ಲುಗಳನ್ನೊಳಗೊಂಡ ಶಾರ್ಕ್ ನೋಡುಗರನ್ನು ದಿಗ್ಬ್ರಮೆಗೊಳಿಸುವಂತಿದೆ.

ವೈರಲ್ ಆದ ಶಾರ್ಕ್ ಫೋಟೋಗಳು

ವೈರಲ್ ಆದ ಶಾರ್ಕ್ ಫೋಟೋಗಳು

ಈ ಶಾರ್ಕ್ ಅನ್ನು ಎಂಡೀವರ್ ಡಾಗ್ ಶಾರ್ಕ್ ಜಾತಿ ಎಂದೂ ಕರೆಯುತ್ತಾರೆ. ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಲಾಂಗ್ ಬೀಚ್ ಶಾರ್ಕ್ ಲ್ಯಾಬ್‌ನ ಪ್ರಾಧ್ಯಾಪಕ ಮತ್ತು ನಿರ್ದೇಶಕ ಕ್ರಿಸ್ಟೋಫರ್ ಲೋವ್ ಪ್ರಕಾರ, ಇದು ಆಸ್ಟ್ರೇಲಿಯಾದ ನೀರಿನಲ್ಲಿ ಕಂಡುಬರುವ ಆಳವಾದ ನೀರಿನ ಶಾರ್ಕ್‌ನಂತೆ ಕಾಣುತ್ತದೆ. ಡೀಪ್ ಸೀ ಶಾರ್ಕ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಈ ಚಿತ್ರಕ್ಕೆ ಇಲ್ಲಿಯವರೆಗೆ 1500 ಕ್ಕೂ ಹೆಚ್ಚು ಕಾಮೆಂಟ್‌ಗಳು ಮತ್ತು 300 ಲೈಕ್ಸ್‌ಗಳು ಬಂದಿವೆ.

ಭಯಾನಕ ಶಾರ್ಕ್ ಜಾತಿಗಳ ಪತ್ತೆ

ಭಯಾನಕ ಶಾರ್ಕ್ ಜಾತಿಗಳ ಪತ್ತೆ

ವಿಜ್ಞಾನಿಗಳಿಂದ ಈ ಭಯಾನಕ ಶಾರ್ಕ್‌ನ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಈ ಶಾರ್ಕ್‌ನ ಜಾತಿಗಳು ಹಾಗೂ ಇದರ ಸಂತತಿ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಜೊತೆಗೆ ಈ ಶಾರ್ಕ್‌ನ ಸಾವಿಗೆ ಕಾರಣ ಪತ್ತೆ ಹಚ್ಚಲಾಗುತ್ತಿದೆ. ದಾಳಿಕೋರ ಶಾರ್ಕ್‌ ದಾಳಿಯ ತೀವ್ರತೆಯನ್ನು ಅದರ ಚೂಪಾದ ಹಲ್ಲುಗಳನ್ನು ತಿಳಿಯಬಹುದು ಎಂದು ಹೇಳುತ್ತಾರೆ ಸಂಶೋದಕರು. ಆದರೂ ಈ ಶಾರ್ಕ್‌ಗಳು ಇನ್ನೂ ಆಳದಲ್ಲಿ ನೋಡಲು ಸಿಗುತ್ತವೆಯೇ? ಅಥವಾ ಅಳಿವಿನಂಚಿನಲ್ಲಿವೆಯೇ ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.

English summary
A giant and scary shark was found in the deep sea of Australia and the photos went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X