ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಸಲಿಂಗಿ ವಿವಾಹ ಮಸೂದೆ- ಇದು ಸರಕಾರ ವರ್ಸಸ್ ಕೋರ್ಟ್

|
Google Oneindia Kannada News

ವಾಷಿಂಗ್ಟನ್, ಜುಲೈ 20: ಅಮೆರಿಕ ಸಂಸತ್ತಿನ ಕೆಳಮನೆಯಲ್ಲಿ ಸಲಿಂಗಿಗಳ ಮದುವೆ ಮಸೂದೆಗೆ ಅನುಮೋದನೆ ಸಿಕ್ಕಿದೆ. ಮಸೂದೆಗೆ 267-157 ಮತಗಳ ಬೆಂಬಲ ಸಿಕ್ಕಿದೆ.

ಇದೀಗ ಸಂಸತ್ತಿನ ಮೇಲ್ಮನೆ ಎನಿಸಿದ ಸೆನೇಟ್‌ನಲ್ಲಿ ಮಸೂದೆಗೆ ಅನುಮೋದನೆ ಸಿಗಬೇಕಿದೆ. ಆಡಳಿತಾರೂಢ ಡೆಮಾಕ್ರಾಟ್ ಪಕ್ಷದ ಬಹುಮತ ಇರುವ ಕೆಳಮನೆಯಲ್ಲಿ ಮಸೂದೆಗೆ ಅನುಮೋದನೆ ಸಿಗುವುದು ನಿರೀಕ್ಷಿತವೇ ಆಗಿತ್ತು. ಆದರೆ ಮೇಲ್ಮನೆಯಲ್ಲಿ ಎರಡೂ ಪಕ್ಷದವರ ಸಂಖ್ಯೆ ಸಮಾನವಿದೆ. ಅನುಮೋದನೆ ಸಿಗಬೇಕಾದರೆ ರಿಪಬ್ಲಿಕನ್ ಪಕ್ಷದ 10 ಸದಸ್ಯರ ಬೆಂಬಲವಾದರೂ ಸಿಗಬೇಕು.

ಸಲಿಂಗ ವಿವಾಹ ರಕ್ಷಿಸುವ ಮಸೂದೆ ಅಂಗೀಕರಿಸಿದ ಅಮೆರಿಕಸಲಿಂಗ ವಿವಾಹ ರಕ್ಷಿಸುವ ಮಸೂದೆ ಅಂಗೀಕರಿಸಿದ ಅಮೆರಿಕ

ನಮ್ಮ ಲೋಕಸಭೆಯ ರೀತಿ ಅಮೆರಿಕದಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸಂಸತ್ತಿನ ಕೆಳಮನೆಯಾಗಿದೆ. ಸಲಿಂಗಿಗಳ ಮದುವೆ ಮಸೂದೆಗೆ ಡೆಮಾಕ್ರಾಟ್ ಪಕ್ಷದ ಜೊತೆಗೆ ವಿಪಕ್ಷವಾಗಿರುವ ರಿಪಬ್ಲಿಕನ್‌ನ 47 ಸಂಸದರು ಮತ ಚಲಾಯಿಸಿದ್ದಾರೆ. ಸೆನಟ್‌ನಲ್ಲಿ ಈ ಮಸೂದೆಗೆ ಅನುಮೋದನೆ ಸಿಗಬೇಕಾದರೆ ಡೆಮಾಕ್ರಾಟ್ ಪಕ್ಷದ ಸದಸ್ಯರ ಜೊತೆಗೆ ರಿಪಬ್ಲಿಕನ್ ಪಕ್ಷದ ಕನಿಷ್ಠ 10 ಸದಸ್ಯರಾದರೂ ಬೆಂಬಲ ನೀಡಬೇಕಾಗುತ್ತದೆ.

ಈ ಸಲಿಂಗಿ ಮದುವೆ ಮಸೂದೆಯನ್ನು ರೂಪಿಸಿರುವುದು ಸರಕಾರ ಅಮೆರಿಕದ ನ್ಯಾಯಾಲಯಕ್ಕೆ ಎಸೆದಿರುವ ಸವಾಲಿನ ನಡೆ ಎಂದೂ ಬಣ್ಣಿಸಲಾಗುತ್ತಿದೆ.

ಏನಿದು ಸಲಿಂಗಿ ಮದುವೆ ಕಾನೂನು?

ಏನಿದು ಸಲಿಂಗಿ ಮದುವೆ ಕಾನೂನು?

1996ರಲ್ಲಿ ಅಮೆರಿಕದಲ್ಲಿ ಡಿಫೆನ್ಸ್ ಆಫ್ ಮ್ಯಾರಿಯೇಜ್ ಆ್ಯಕ್ಟ್ ಜಾರಿಗೆ ತರಲಾಗಿತ್ತು. ಆ ವಿವಾಹ ರಕ್ಷಣಾ ಕಾಯ್ದೆಯ ಪ್ರಕಾರ ಮದವೆ ಎಂಬುದು ಗಂಡು ಮತ್ತು ಹೆಣ್ಣಿನ ಸಮಾಗಮವಾಗಿದೆ. ಅಂದರೆ, ಗಂಡು ಮತ್ತು ಹೆಣ್ಣಿನ ಮಧ್ಯೆ ನಡೆಯುವ ಮದುವೆ ಮಾತ್ರ ಸಿಂಧುವಾಗಿರುತ್ತದೆ. ಸಲಿಂಗಿಗಳ ಮದುವೆ ಅಕ್ರಮ ಎಂದು ಪರೋಕ್ಷವಾಗಿ ಅದು ಸೂಚಿಸುತ್ತಿದೆ.

ಈಗ ರೂಪಿಸಲಾಗಿರುವುದು ರೆಸ್ಪೆಕ್ಟ್ ಫಾರ್ ಮ್ಯಾರಿಯೇಜ್ ಆ್ಯಕ್ಟ್ (ವಿವಾಹ ಗೌರವ ಕಾಯ್ದೆ). ಯಾವುದೇ ಲಿಂಗ, ಜನಾಂಗ ಅಥವಾ ರಾಷ್ಟ್ರೀಯತೆ ಹೀಗೆ ಯಾರ ನಡುವೆಯಾದರೂ ಆಗುವ ಮದುವೆಯನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ಈ ಮಸೂದೆ ಸ್ಪಷ್ಟಪಡಿಸುತ್ತದೆ.

ಅಂದರೆ, ಇದು ಸಲಿಂಗಿಗಳ ಮದುವೆ ಮಾತ್ರವಲ್ಲ, ಅಂತರ ಜನಾಂಗೀಯ, ಅಂತರ್ ರಾಷ್ಟ್ರೀಯ ಮದುವೆಗಳನ್ನೂ ಕಾನೂನುಬದ್ಧಗೊಳಿಸುತ್ತದೆ.

ನ್ಯಾಯಾಲಯ ವಿರುದ್ಧ ಯಾಕೆ?

ನ್ಯಾಯಾಲಯ ವಿರುದ್ಧ ಯಾಕೆ?

ಅಮೆರಿಕದ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದಲ್ಲಿ ಗರ್ಭಪಾತ ಹಕ್ಕನ್ನು ರದ್ದು ಮಾಡಿತ್ತು. ಅಂದರೆ, ಅಮೆರಿಕದಲ್ಲಿ ಗರ್ಭಪಾತ ನಿಷೇಧಕ್ಕೆ ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದೆ. ಈ ಮುಂಚೆ ಅಮೆರಿಕದಲ್ಲಿ ಯಾರು ಬೇಕಾದರೂ ಗರ್ಭಪಾತ ಮಾಡಿಕೊಳ್ಳಬಹುದಿತ್ತು. ಈಗ ಗರ್ಭಪಾತ ನಿಷೇಧ ಮಾಡಬೇಕೋ ಬೇಡವೋ ಎಂಬ ನಿರ್ಧಾರವನ್ನು ಆಯಾ ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ.

ಡೆಮಾಕ್ರಾಟ್ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಗರ್ಭಪಾತ ಹಕ್ಕು ಇದೆ. ಕೆಲ ರಿಪಬ್ಲಿಕನ್ ಆಡಳಿತದ ರಾಜ್ಯಗಳಲ್ಲಿ ಗರ್ಭಪಾತ ನಿಷೇಧ ಕಾನೂನು ಇದೆ.

ಅಮೆರಿಕ ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ವಿರುದ್ಧ ಜೋ ಬೈಡನ್ ಸರಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವ್ಯಕ್ತಿ ಸ್ವಾತಂತ್ರ್ಯ ವಿಚಾರದಲ್ಲಿ ಅಮೆರಿಕ ಇಡೀ ಜಗತ್ತಿಗೆ ಮಾದರಿಯಾಗಿದೆ. ಹೀಗಿದ್ದರೂ ನ್ಯಾಯಾಲಯ ದಶಕಗಳ ಹಿಂದಿನ ಮಾನಸಿಕತೆಗೆ ತೆರಳಿದೆ ಎಂದು ಟೀಕಿಸಿದೆ. ಅಮೆರಿಕ ಮಾತ್ರವಲ್ಲ ವಿಶ್ವದ ಅನೇಕ ದೇಶಗಳೂ ಕೂಡ ನ್ಯಾಯಾಲಯದ ತೀರ್ಪಿಗೆ ಅಚ್ಚರಿ ವ್ಯಕ್ತಪಡಿಸಿದ್ದವು.

ಅಮೆರಿಕದ ನ್ಯಾಯಾಲಯಕ್ಕೇನಾಗಿದೆ?

ಅಮೆರಿಕದ ನ್ಯಾಯಾಲಯಕ್ಕೇನಾಗಿದೆ?

ನಮ್ಮ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಾಜಿಯಂ ವ್ಯವಸ್ಥೆ ಇರುವಂತೆ ಅಮೆರಿಕದಲ್ಲಿ ಇಲ್ಲ. ಅಲ್ಲಿ ನೇರವಾಗಿ ಅಧ್ಯಕ್ಷರೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುತ್ತಾರೆ. ಅಧ್ಯಕ್ಷರು ನಾಮನಿರ್ದೇಶನ ಮಾಡಿದವರಿಗೆ ಸೆನೇಟ್ ಅನುಮೋದನೆ ಕೊಟ್ಟರೆ ನೇಮಕವಾದಂತೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಕಟ್ಟರ್ ಸಂಪ್ರದಾಯವಾದಿಗಳೆನಿಸಿದ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಸದ್ಯ ಇವರ ಸಂಖ್ಯೆಯೇ ಹೆಚ್ಚಿದೆ. ಗರ್ಭಪಾತ ಹಕ್ಕನ್ನು ರದ್ದುಗೊಳಿಸುವ ಐತಿಹಾಸಿಕ ತೀರ್ಪನ್ನು ನೀಡಿದ ನ್ಯಾಯಪೀಠದಲ್ಲಿ ಇವರದ್ದೇ ಬಹುಮತ ಇದ್ದದ್ದು.

ಗರ್ಭಪಾತ ವಿಚಾರದಲ್ಲಷ್ಟೇ ಅಲ್ಲ ಇನ್ನೂ ಅನೇಕ ವಿಚಾರದಲ್ಲಿ ಸಂಪ್ರದಾಯವಾದಕ್ಕೆ ಪೂರಕವಾಗಿ ಕಾನೂನು ರೂಪಿಸುವ ಸ್ಪಷ್ಟ ಗುರಿಯನ್ನು ಟ್ರಂಪ್ ಸರಕಾರ ಹೊಂದಿತ್ತು. ಹೀಗಾಗಿಯೇ ಅದಕ್ಕೆ ಪೂರಕವಾಗುವ ರೀತಿಯಲ್ಲಿ ಸಂಪ್ರದಾಯವಾದಿಗಳೆನಿಸಿದವರನ್ನೇ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿದೆ ಎಂಬ ಅಭಿಪ್ರಾಯವಿದೆ.

ಸರಕಾರ ವರ್ಸಸ್ ಕೋರ್ಟ್ ಇದೇ ಮೊದಲಾ?

ಸರಕಾರ ವರ್ಸಸ್ ಕೋರ್ಟ್ ಇದೇ ಮೊದಲಾ?

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯನ್ನು ಸರಕಾರವೇ ಮಾಡುವುದರಿಂದ ಅದು ಸ್ವಾಯತ್ತ ಸಂಸ್ಥೆಯಾಗಿ ಉಳಿದಿಲ್ಲ. ಹಿಂದೆ ಇದೇ ಸುಪ್ರೀಂಕೋರ್ಟ್ ಯಾವುದೋ ಪ್ರಕರಣದ ವಿಚಾರಣೆಯೊಂದರಲ್ಲಿ ಸಲಿಂಗಿಗಳ ಮದುವೆಯನ್ನು ಕಾನೂನುಬದ್ಧಗೊಳಿಸಿ ತೀರ್ಪು ನೀಡಿತ್ತು. ಬಳಿಕ ಸರಕಾರವು ಡಿಫೆನ್ಸ್ ಅಫ್ ಮ್ಯಾರಿಯೇಜ್ ಕಾಯ್ದೆ ತರುವ ಮೂಲಕ ಆ ಆದೇಶವನ್ನು ಧಿಕ್ಕರಿಸಿತು.

ಈಗ ಬೈಡನ್ ಸರಕಾರ ಕೂಡ ಅಂಥದ್ದೇ ವರಸೆಗೆ ಮುಂದಾಗಿದೆ. ಸುಪ್ರೀಂ ಕೋರ್ಟ್ ಕೂಡ ವಿವಿಧ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುವ ನಿರೀಕ್ಷೆ ಇದೆ.

(ಒನ್ಇಂಡಿಯಾ ಸುದ್ದಿ)

Recommended Video

ದಿನೇಶ್ ಕಾರ್ತಿಕ್ ಇಂದು ವಿರಾಟ್ ಕೊಹ್ಲಿ ಮುಂದಿನ ಶತಕದ ಬಗ್ಗೆ ಭವಿಷ್ಯ ನುಡಿದಿದ್ದಾರೆ | *Cricket | OneIndia

English summary
Respect for Marriage Act easily passed the House with a Democratic majority, it is likely to stall in the evenly split Senate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X