• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Saudi Aramco ತೈಲ ಕಂಪೆನಿ: ಅರಬ್ಬರ ದೇಶದ ಕುಬೇರನ ಸಂಪತ್ತು

|

'ಸೌದಿ ಅರಾಮ್ಕೋ'- ಇದು ಜಗತ್ತಿನ ಸಿರಿವಂತ ತೈಲ ಕಂಪೆನಿ. ಈ ಕಂಪೆನಿಗೆ ಜಗತ್ತಿನಾದ್ಯಂತ ಹೆಸರು. ಯು. ಎ. ಇ. ಪಾಲಿಗಂತೂ ಎಂದಿಗೂ ಕರಗಲಾರದಂಥ ಬಿರಿಯಾನಿ ಬಟ್ಟಲು ಸೌದಿ ಅರಾಮ್ಕೋ. ರಿಲಯನ್ಸ್ ಇಂಡಸ್ಟ್ರಿಯಲ್ಲಿ ಕೆಮಿಕಲ್ಸ್ ನಿಂದ ಆಯಿಲ್ ತನಕ ಎಲ್ಲದರಲ್ಲೂ ಈ ಸೌದಿ ಅರಾಮ್ಕೋ ಶೇಕಡಾ 20ರಷ್ಟು ಷೇರನ್ನು ಖರೀದಿಸುತ್ತದೆ ಎಂದು ಈಚೆಗೆ ಮುಕೇಶ್ ಅಂಬಾನಿ ಘೋಷಣೆ ಮಾಡಿಕೊಂಡಿದ್ದಾರೆ.

ಯುನೈಟೆಡ್ ಅರಬ್ ಕಿಂಗ್ ಡಮ್ ನ ರಾಜ ಮೊಹ್ಮದ್ ಬಿನ್ ಸಲ್ಮಾನ್ ಗೆ ತಮ್ಮ ಬಳಿ ಏನಿದೆ, ಅದರಿಂದ ಏನು ಮಾಡಬಹುದು ಎಂಬುದರ ಬಗ್ಗೆ ಗೊತ್ತಿದೆ. ಅದರಿಂದಲೇ ಈಗ ಜಗತ್ತಿನ ಯಾವ ದೇಶದಲ್ಲಿ ಹೂಡಿಕೆ ಸಾಧ್ಯವೋ ಅಲ್ಲೆಲ್ಲ ಹಣ ಹೂಡುತ್ತಿದ್ದಾರೆ. ಮುಂದೆ ಒಂದು ದಿನ ತೈಲ- ಅನಿಲದ ಮೇಲೆ ಅವಲಂಬನೆ ಮುಗಿದ ಮೇಲೆ ಬಿರಿಯಾನಿ ಬಟ್ಟಲಿನಲ್ಲಿ ಅನ್ನದ ಕಾಳು ಸಹ ಇರುವುದಿಲ್ಲ ಎಂಬ ಆತಂಕ ಅವರದು.

ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ

ಅಂಥ ಸೌದಿ ಅರಾಮ್ಕೊ ಕಂಪೆನಿಯ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ಯೆಮೆನ್ ದೇಶದ ಹೌತಿ ಕ್ರಾಂತಿಕಾರಿಗಳು ಡ್ರೋಣ್ ದಾಳಿ ನಡೆಸಿ, ಭಾರೀ ಹಾನಿ ಮಾಡಿದರು. ಪೆಟ್ಟು ಬಿದ್ದದ್ದು ಯು. ಎ. ಇಗೆ ಆದರೂ 'ಅಯ್ಯೋ, ಅಮ್ಮಾ' ಎಂದು ಕೂಗುತ್ತಿರುವುದು ಭಾರತದಂಥ ದೇಶಗಳು. ಏಕೆಂದರೆ, ಸೌದಿ ಅರಾಮ್ಕೋದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡರೂ ಜಗತ್ತಿನ ನಾನಾ ದೇಶಗಳಲ್ಲಿ ಪೆಟ್ರೋಲ್- ಡೀಸೆಲ್- ಅನಿಲ ದರಕ್ಕೆ ಬೆಂಕಿ ಬೀಳುತ್ತದೆ.

ಏನಿದು ಸೌದಿ ಅರಾಮ್ಕೋ ಎಂದು ಸರಳವಾಗಿ ವಿವರಿಸುವ ಲೇಖನ ಇದು. ಇದಕ್ಕಾಗಿ 'ಅಲ್ ಜಝೀರಾ'ದಿಂದ ಮಾಹಿತಿ ಹೆಕ್ಕಿಕೊಳ್ಳಲಾಗಿದೆ.

ದಿನಕ್ಕೆ ಎಪ್ಪತ್ತು ಲಕ್ಷ ಬ್ಯಾರೆಲ್ ಕಚ್ಚಾ ತೈಲದ ಸಂಸ್ಕರಣೆ

ದಿನಕ್ಕೆ ಎಪ್ಪತ್ತು ಲಕ್ಷ ಬ್ಯಾರೆಲ್ ಕಚ್ಚಾ ತೈಲದ ಸಂಸ್ಕರಣೆ

ಜಗತ್ತಿನ ಟಾಪ್ ಕಚ್ಚಾ ತೈಲ ರಫ್ತುದಾರ ದೇಶ ಸೌದಿ ಅರೇಬಿಯಾ. ಅಲ್ಲಿನ ಸೌದಿ ಅರಾಮ್ಕೋ ಟಾಪ್ ತೈಲ ರಫ್ತುದಾರ ಕಂಪೆನಿ. ಯು. ಎ. ಇ.ಯ ಪೂರ್ವ ಪ್ರಾಂತ್ಯದಲ್ಲಿ ಈ ಕಂಪೆನಿಗೆ ಜಗತ್ತಿನಲ್ಲೇ ಅತಿ ದೊಡ್ದ ಕಚ್ಚಾ ತೈಲ ಘಟಕ ಅಬ್ ಕೈಕ್ ನಲ್ಲಿ ಇದೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ಒಂದು ದಿನಕ್ಕೆ ಎಪ್ಪತ್ತು ಲಕ್ಷ ಬ್ಯಾರೆಲ್ ಕಚ್ಚಾ ತೈಲದ ಸಂಸ್ಕರಣೆ ಮಾಡಲಾಗುತ್ತದೆ. ಒಂದು ಬ್ಯಾರೆಲ್ ಗೆ 159 ಲೀಟರ್ ಎಂಬುದು ಲೆಕ್ಕ. ಇನ್ನೊಂದು ಖುರೈಸ್ ಸಮುಚ್ಚಯ. ಇಲ್ಲಿ ಇಪ್ಪತ್ತು ಬಿಲಿಯನ್ ಬ್ಯಾರೆಲ್ ಗಿಂತ ಹೆಚ್ಚು ತೈಲ ಸಂಗ್ರಹ ಇದೆ. ಇಂಥ ಕಂಪೆನಿಯ ಷೇರುಗಳ ಮಾರಾಟಕ್ಕೆ ಪ್ರಕ್ರಿಯೆ ಶುರುವಾಗಿದೆ. ಮೊಹ್ಮದ್ ಬಿನ್ ಸಲ್ಮಾನ್ ಅವರು ಸೌದಿ ಅರಾಮ್ಕೋದ ಒಟ್ಟಾರೆ ಮೌಲ್ಯವನ್ನು $2 ಟ್ರಿಲಿಯನ್ ಎಂದಿದ್ದಾರೆ. ಅಂದರೆ ಎರಡು ಲಕ್ಷ ಕೋಟಿ ಅಮೆರಿಕನ್ ಡಾಲರ್. ಆದರೆ ತಜ್ಞರ ಪ್ರಕಾರ ಕಂಪೆನಿಯ ಮೌಲ್ಯ $ 1.5 ಟ್ರಿಲಿಯನ್ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ. ಇಷ್ಟೇ ಅಂದುಕೊಂಡರೂ ಭಾರತೀಯ ರುಪಾಯಿ ಮೌಲ್ಯದಲ್ಲಿ ಹೇಳುವುದಾದರೆ, ನೂರು ಲಕ್ಷ ಕೋಟಿ ರುಪಾಯಿಗೂ ಹೆಚ್ಚು. ಇಷ್ಟು ಮೊತ್ತದ ಐಪಿಒ ಅಂದುಕೊಂಡರೂ ಅದು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಐಪಿಒ (ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ).

ಅರವತ್ತೈದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು

ಅರವತ್ತೈದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು

ರಾಜ ಮೊಹ್ಮದ್ ಬಿನ್ ಸಲ್ಮಾನ್ ಗೆ ಈ ಐಪಿಒ ಮೂಲಕ ದೇಶದ ಆರ್ಥಿಕತೆಯನ್ನು ಸುಧಾರಣೆ ಮಾಡುವ ಆಲೋಚನೆ ಇದೆ. ಅರಾಮ್ಕೋ ಮೂಲಕ ಬರುವ ಹಣವನ್ನು ಸೌದಿ ಅರೇಬಿಯಾದಲ್ಲಿ ಹೊಸ ನಗರಗಳ ಅಭಿವೃದ್ಧಿಗೆ, ಆಕರ್ಷಕ ಯೋಜನೆಗಳಿಗೆ ಬಳಸಲಾಗುತ್ತದೆ. ಇಡೀ ಜಗತ್ತಿನಾದ್ಯಂತ ಅರಾಮ್ಕೋ ಕಂಪೆನಿಗೆ ಅರವತ್ತೈದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಕಂಪೆನಿಯು ತೈಲ ತೆಗೆಯುತ್ತದೆ, ಉತ್ಪಾದನೆ ಮಾಡುತ್ತದೆ. ಜತೆಗೆ ಅನಿಲವನ್ನೂ ಉತ್ಪಾದಿಸುತ್ತದೆ. ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಅಂತರರಾಷ್ಟ್ರೀಯ ಶಿಪ್ಪಿಂಗ್, ಮಾರ್ಕೆಟಿಂಗ್ ಹಾಗೂ ತೈಲ ಮತ್ತು ಅನಿಲದ ಮಾರ್ಕೆಟಿಂಗ್ ಹಾಗೂ ವಿತರಣೆಯನ್ನು ಈ ಕಂಪೆನಿ ಮಾಡುತ್ತದೆ. "ಇದು ಅಂಥಿಂಥ ಕಂಪೆನಿಯಲ್ಲ. ಒಂದು ದೇಶವನ್ನೇ ನಡೆಸುತ್ತಿರುವ ಕಂಪೆನಿ. ಮಧ್ಯ ಪ್ರಾಚ್ಯದಲ್ಲಿ ಆಗುವ ಸಣ್ಣ ಕದಲಿಕೆಯೂ ಈ ಕಂಪೆನಿ ಸುತ್ತ ಗಿರಕಿ ಹೊಡೆಯುತ್ತದೆ" ಎನ್ನುತ್ತಾರೆ ಸೌದಿ ಅರಾಮ್ಕೋ: ದಿ ಕಂಪೆನಿ ಅಂಡ್ ದಿ ಸ್ಟೇಟ್ ಎಂಬ ಸಾಕ್ಷ್ಯ ಚಿತ್ರವೊಂದನ್ನು ಮಾಡಿರುವ ಅಲ್ ಜಝೀರಾದ ಒಸಾಮಾ ಬಿನ್ ಜಾವೇದ್.

ಸೌದಿ ಅರಾಮ್ಕೋ ನಿವ್ವಳ ಲಾಭ $ 111 ಬಿಲಿಯನ್

ಸೌದಿ ಅರಾಮ್ಕೋ ನಿವ್ವಳ ಲಾಭ $ 111 ಬಿಲಿಯನ್

ಸೌದಿ ಅರಾಮ್ಕೋ ಎಂಬುದು ಕೇವಲ ರಾಜಕಾರಣದ ಹೃದಯ ಮಾತ್ರ ಅಲ್ಲ. ಇದು ಸೌದಿ ಅರೇಬಿಯಾದ ಆರ್ಥಿಕತೆ ಹಾಗೂ ಬದುಕು. ಸೌದಿ ಅರಾಮ್ಕೋ ನೀಡಿರುವ ಲೆಕ್ಕದ ಪ್ರಕಾರವೇ ಕಂಪೆನಿಯು 2018ರಲ್ಲಿ ಮಾಡಿದ ನಿವ್ವಳ ಲಾಭ $ 111 ಬಿಲಿಯನ್. ಒಂದು ಬಿಲಿಯನ್ ಅಂದರೆ ನೂರು ಕೋಟಿ. ಅಂಥ ನೂರು ಕೋಟಿಯನ್ನು 111ರಿಂದ ಗುಣಿಸಿದರೆ ಎಷ್ಟು ಸಂಖ್ಯೆ ಬರುತ್ತದೋ ಅಷ್ಟು ಅಮೆರಿಕನ್ ಡಾಲರ್ ಅದರ ಲಾಭ. ಇನ್ನು ಆದಾಯದ ವಿಚಾರಕ್ಕೆ ಬರುವುದಾದರೆ $ 356 ಬಿಲಿಯನ್. ಜಗತ್ತಿನ ಶ್ರೀಮಂತ ಕಂಪೆನಿಗಳು ಅನಿಸಿಕೊಂಡಿರುವ ಆಪಲ್ ನ ನಿವ್ವಳ ಲಾಭ $ 60 ಬಿಲಿಯನ್. ರಾಯಲ್ ಡಚ್ ಶೆಲ್ ಕಂಪೆನಿಯ ಲಾಭ $ 23 ಬಿಲಿಯನ್. ಇನ್ನು ಎಕ್ಸಾನ್ ಮೊಬಿಲ್ ನದು $ 21 ಬಿಲಿಯನ್. ಈ ಮೂರೂ ಕಂಪೆನಿಗಳ ಲಾಭ ಒಟ್ಟು ಹಾಕಿದರೂ ಒಂದು ಸೌದಿ ಅರಾಮ್ಕೋ ಕಂಪೆನಿಯ ನಿವ್ವಳ ಲಾಭಕ್ಕೆ ಸಮ ಅಲ್ಲ.

ಕಂಪೆನಿಯ ಐಪಿಒಗೆ ಸಕಲ ಸಿದ್ಧತೆ

ಕಂಪೆನಿಯ ಐಪಿಒಗೆ ಸಕಲ ಸಿದ್ಧತೆ

ಅಂದ ಹಾಗೆ, ಸೌದಿ ಅರೇಬಿಯಾದಲ್ಲಿ ಎಷ್ಟು ಪ್ರಮಾಣದ ತೈಲ ಸಂಗ್ರಹ ಇರಬಹುದು ಎಂದು ಸ್ವತಂತ್ರ ಆಡಿಟ್ ವೊಂದು ಮಾಡಲಾಗಿದೆ. ಅದರ ಪ್ರಕಾರ 268.5 ಬಿಲಿಯನ್ ಬ್ಯಾರೆಲ್ ಕಚ್ಚಾ ತೈ ಇದೆಯಂತೆ. ಇದು 2017ನೇ ಇಸವಿಯ ಕೊನೆಗೆ ಸಿಕ್ಕ ಸಂಖ್ಯೆ. ಸೌದಿ ಅರಾಮ್ಕೋ 2018ನೇ ಇಸವಿಯಲ್ಲಿ ದಿನಕ್ಕೆ 10.3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಉತ್ಪಾದನೆ ಮಾಡಿದೆ. ಈ ವರ್ಷದ ಏಪ್ರಿಲ್ ನಲ್ಲಿ ರೇಟಿಂಗ್ ಏಜೆನ್ಸಿ ಫಿಚ್ ಬಿಡುಗಡೆ ಮಾಡಿದ ಮಾಹಿತಿ ಆಧರಿಸಿ ಹೇಳುವುದಾದರೆ, ಅಳತೆಯ ಆಧಾರದಲ್ಲಿ ಜಗತ್ತಿನ ಅತಿ ದೊಡ್ಡ ತೈಲ ಉತ್ಪಾದಕ ಕಂಪೆನಿ ಸೌದಿ ಅರಾಮ್ಕೋ. ಇಂಥ ಸಿರಿವಂತ ಕಂಪೆನಿ ಎರಡು ಹಂತದ ಐಪಿಒಗೆ ಸಿದ್ಧತೆ ನಡೆಸಿದೆ. ಕಂಪೆನಿಯ ಒಟ್ಟು ಮೌಲ್ಯ $2 ಟ್ರಿಲಿಯನ್ ಅಂದುಕೊಂಡರೆ, ಅದರಲ್ಲಿ ಒಂದು ಪರ್ಸೆಂಟ್ ನಷ್ಟೇ ಆದರೂ $20 ಬಿಲಿಯನ್ ಆಗುತ್ತದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಒಂಬತ್ತು ಬ್ಯಾಂಕ್ ಗಳ ಜತೆ ಮಾತುಕತೆ ನಡೆಸಿ, ಐಪಿಒಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 2020ರ ಆರಂಭದಲ್ಲಿ ಷೇರು ಬಿಡುಗಡೆ ಆಗಬಹುದು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Saudi Aramco- The richest company in the world. How much UAE depends on this? Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more