ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಬಜಾರಿನಲ್ಲಿ ಕೊನೆ ಸುತ್ತು, ಯಾರ ಗಮ್ಮತ್ತು, ಯಾರಿಗೆ ಆಪತ್ತು

|
Google Oneindia Kannada News

ಕಳೆದ ಬಾರಿ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬೆಟ್ಟಿಂಗ್ ಬಜಾರಿನ ಮೌಲ್ಯ ದುಪ್ಪಟ್ಟಾಗಿದೆ. ಸರಿ ಸುಮಾರು 12,000 ಕೋಟಿ ರು ಮೌಲ್ಯದ ಈ ದಂಧೆಯಲ್ಲಿ ದೇಶದ ಪ್ರಮುಖ ರಾಜಕೀಯ ನಾಯಕರ ಭವಿಷ್ಯ ಕುರಿತಂತೆ ಬಾಜಿಕಟ್ಟಲಾಗುತ್ತದೆ.

ಒಂದೆಡೆ ವಿವಿಧ ಸಂಸ್ಥೆಗಳು ಸಮೀಕ್ಷೆಗಳು, ಜನಾಭಿಪ್ರಾಯಗಳನ್ನು ಸಂಗ್ರಹಿಸಿ ನೀಡುತ್ತಿವೆ. ಇನ್ನೊಂದೆಡೆ ಚುನಾವಣೆ ಸಂದರ್ಭದಲ್ಲೇ ಬೆಟ್ಟಿಂಗ್ ಬಜಾರಿನಲ್ಲಿ ಈ ಬಾರಿ ಯಾರ ಅಲೆ ಇದೆ ಎನ್ನುವುದರ ಬಗ್ಗೆ ಹಂತ ಹಂತವಾಗಿ ವರದಿ ಬರುತ್ತಿದೆ. ಲೋಕಸಭೆ ಚುನಾವಣೆ 6ನೇ ಹಂತದ ಮತದಾನದ ಬಳಿಕ ಬಂದ ಇತ್ತೀಚಿನ ವರದಿ ಇಲ್ಲಿದೆ.

ಬಾಲಕೋಟ್ ವೈಮಾನಿಕ ದಾಳಿಯಿಂದ ಬಿಜೆಪಿಗೆ ಲಾಭವಾಗಲಿದೆ. ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರೇ ಸೂಕ್ತ ಎಂಬ ಅಭಿಪ್ರಾಯಪಟ್ಟಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ನಿರುದ್ಯೋಗ, ರಾಷ್ಟ್ರೀಯತೆ, ಕಾಂಗ್ರೆಸ್ಸಿನ ನ್ಯಾಯ್ ಸೇರಿದಂತೆ ಅಭಿವೃದ್ಧಿ ಯೋಜನೆ,ರಫೇಲ್ ಹಾಗೂ ಬೋಫೋರ್ಸ್ ಹಗರಣ ಮುಂತಾದ ವಿಷಯಗಳು ಚುನಾವಣೆ ಫಲಿತಾಂಶ ನಿರ್ಧರಿಸುವ ಅಂಶಗಳೆನಿಸಿವೆ.

ಬೆಟ್ಟಿಂಗ್ ಬಜಾರ್ ಭವಿಷ್ಯ: ಮ್ಯಾಜಿಕ್ ನಂಬರ್ ಎನ್ಡಿಎಗೂ ಮರೀಚಿಕೆ!ಬೆಟ್ಟಿಂಗ್ ಬಜಾರ್ ಭವಿಷ್ಯ: ಮ್ಯಾಜಿಕ್ ನಂಬರ್ ಎನ್ಡಿಎಗೂ ಮರೀಚಿಕೆ!

ಚುನಾವಣೆ ಕೊನೆ ಹಂತ ತಲುಪುತ್ತಿದ್ದಂತೆ ಅನೇಕರ ಪ್ರಶ್ನೆ ಒಂದೇ ಆಗಿದೆ, ಬಿಜೆಪಿಗೆ ಬಹುಮತ ಬರುತ್ತದೆಯೇ? ಎನ್ಡಿಎ ಮೈತ್ರಿಕೂಟ ಎಷ್ಟು ಸೀಟು ಪಡೆಯಬಹುದು? ಬೆಟ್ಟಿಂಗ್ ಬಜಾರಿನ ಸಮಗ್ರ ವರದಿ ಇಲ್ಲಿದೆ.

ಬಿಡ್ಡಿಂಗ್ ರೇಟ್ ಎಷ್ಟಿದೆ?

ಬಿಡ್ಡಿಂಗ್ ರೇಟ್ ಎಷ್ಟಿದೆ?

ಬಿಜೆಪಿ ನೇತೃತ್ವದ ಎನ್ಡಿಎ ಪರ 11 ರು ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎಗೆ 33ರು ನಂತೆ ಬಾಜಿ ಕಟ್ಟಲಾಗುತ್ತಿದೆ. ಪಂಟರ್ ಗಳ ಸರಾಸರಿಯಂತೆ ಎನ್ಡಿಎಗೆ 185-220 ಸ್ಥಾನ, ಯುಪಿಎಗೆ 160 ರಿಂದ 180 ಸ್ಥಾನ ಗಳಿಸಬಹುದು. ಚುನಾವಣೆ ಘೋಷಣೆಗೂ ಮುನ್ನ ಎನ್ಡಿಎ 225 ರಿಂದ 250 ಸೀಟು ಸಿಗಬಹುದು ಎಂದು ಅಂದಾಜಿಸಲಾಗಿತ್ತು.

ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್

ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್

ರಾಜಸ್ಥಾನದಲ್ಲಿ ಫಲೋಡಿ ಬೆಟ್ಟಿಂಗ್ ಬಜಾರಿನ ಮಾಹಿತಿಯಂತೆ ಎನ್ಡಿಎಗೆ 320 ರಿಂದ 325 ಸ್ಥಾನ ಸಿಗಲಿದೆ. ಬಿಜೆಪಿಗೆ 240 ರಿಂದ 245 ಸ್ಥಾನ ಸಿಗಲಿದೆ. ಯುಪಿಎಗೆ 145-150 ಅಸುಪಾಸಿನಲ್ಲಿ ಸೀಟುಗಳು ಲಭಿಸಲಿವೆ. ಬಿಜೆಪಿ ನೇತೃತ್ವದ ಎನ್ಡಿಎಗೆ 300ರಿಂದ 310 ಸ್ಥಾನಗಳು ಸುಲಭವಾಗಿ ಲಭಿಸಲಿವೆ. ಎಂದು ಬೆಟ್ಟಿಂಗ್ ಮಾರುಕಟ್ಟೆಯಿಂದ ಈ ಮುಂಚೆ ವರದಿ ಬಂದಿತ್ತು.

ದೆಹಲಿ ಹಾಗೂ ರಾಜಸ್ಥಾನದ ವರದಿ

ದೆಹಲಿ ಹಾಗೂ ರಾಜಸ್ಥಾನದ ವರದಿ

ಲಂಡನ್ನಿನ ವೆಬ್ ತಾಣ ಆಧಾರಿತ ಪ್ರತಿದಿನದ ಬೆಟ್ಟಿಂಗ್ ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಎಷ್ಟು ಸ್ಥಾನಸಿಗಲಿದೆ ಎಂಬ ಬಿಡ್ಡಿಂಗ್ ನಡೆಯುತ್ತದೆ.

ದೆಹಲಿಯಲ್ಲಿ ಬಿಜೆಪಿಗೆ 7ರ ಪೈಕಿ 5 ಸ್ಥಾನ ಸಿಗಲಿದೆ. ಶೀಲಾ ದೀಕ್ಷಿತ್ ಅವರು ಮರು ಆಯ್ಕೆಯಾಗಲಿದ್ದಾರೆ. 2014ರಲ್ಲಿ ಬಿಜೆಪಿ 7 ರಲ್ಲಿ 7 ಗೆದ್ದುಕೊಂಡಿತ್ತು.

ರಾಜಸ್ಥಾನದಲ್ಲಿ 25 ಸ್ಥಾನಗಳ ಪೈಕಿ ಬಿಜೆಪಿಗೆ 18 ರಿಂದ 20 ಸ್ಥಾನಗಳು ಸಿಗಲಿವೆ ಎಂದು ಈ ಮುಂಚೆ ಹೇಳಲಾಗಿತ್ತು ಈಗ 21 ರಿಂದ 22 ಸ್ಥಾನ ಸಿಗಲಿದೆ.

ಮಧ್ಯಪ್ರದೇಶದ ಬೆಟ್ಟಿಂಗ್ ಬಜಾರ್

ಮಧ್ಯಪ್ರದೇಶದ ಬೆಟ್ಟಿಂಗ್ ಬಜಾರ್

ಮಧ್ಯಪ್ರದೇಶದ ಬೆಟ್ಟಿಂಗ್ ಬಜಾರ್ ವರದಿಯಂತೆ, ಬಿಜೆಪಿಗೆ 247 ರಿಂದ 250 ಹಾಗೂ ಕಾಂಗ್ರೆಸ್ಸಿಗೆ 77 ರಿಂದ 79 ಸ್ಥಾನ ಸಿಗಲಿದೆ. ಸೂರತ್ ನ ಸಟ್ಟಾ ಬಜಾರಿನಲ್ಲಿ ಬಿಜೆಪಿಗೆ 246 ರಿಂದ 248 ಸ್ಥಾನ, ಕಾಂಗ್ರೆಸ್ಸಿಗೆ 78 ರಿಂದ 80 ಸ್ಥಾನ ಎಂದು ಅಂದಾಜಿಸಲಾಗಿದೆ.

ಮೋದಿಗೆ ಜಯ ಎಂದ ಇನ್ನಿತರ ಬಜಾರ್

ಮೋದಿಗೆ ಜಯ ಎಂದ ಇನ್ನಿತರ ಬಜಾರ್

ಹಾಪುರ್, ದೆಹಲಿ, ಫಲೋಡಿ(ರಾಜಸ್ಥಾನ), ಇಂದೋರ್, ಕೋಲ್ಕತ್ತಾ, ಆಗ್ರಾ, ಭಾವ್ನಗರ್, ಮುಂಬೈ ಹಾಗೂ ನಾಗ್ಪುರ್ ನ ಬೆಟ್ಟಿಂಗ್ ಬಜಾರಿನ ವರದಿಯಂತೆ ಮೋದಿ ಅವರು ಅಧಿಕಾರಕ್ಕೆ ಬರಲಿದ್ದಾರೆ. ಆದರೆ, 2014ರಲ್ಲಿದ್ದ ಮೋದಿ ಅಲೆ ಈ ಬಾರಿ ಇಲ್ಲ, ಸರಳ ಬಹುಮತ ಪಡೆಯಲು ಮಿತ್ರಪಕ್ಷಗಳ ನೆರವು ಬಿಜೆಪಿಗೆ ಅಗತ್ಯ ಎಂದು ಹೇಳಲಾಗಿದೆ.

English summary
With the Lok Sabha elections 2019 approaching the final stages, the impatience and anxiety among the people are soaring. More than who will the election, what people want to know is how many seats will the BJP get.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X