ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಹೊಸ ರಾಕೆಟ್ ವಿಫಲ; ತಪ್ಪು ಕಕ್ಷೆಗೆ ಸೇರಿದ ಸೆಟಿಲೈಟ್‌ಗಳು

|
Google Oneindia Kannada News

ನವದೆಹಲಿ, ಆಗಸ್ಟ್ 7: ಇಸ್ರೋ ಅಭಿವೃದ್ಧಿಪಡಿಸಿರುವ ಹೊಸ ರಾಕೆಟ್ ತನ್ನ ಮೊದಲ ಮಿಷನ್‌ನಲ್ಲಿ ವಿಫಲವಾಗಿದೆ. ಎಸ್‌ಎಸ್‌ಎಲ್‌ವಿ-ಡಿ1 ರಾಕೆಟ್ ಉಡಾವಣೆಯಲ್ಲಿ ಯಶಸ್ವಿಯಾದರೂ ತನ್ನೊಂದಿಗಿದ್ದ ಎರಡು ಸೆಟಿಲೈಟ್‌ಗಳನ್ನು ನಿಗದಿತ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ವಿಫಲವಾಗಿದೆ.

ಎರಡು ಸೆಟಿಲೈಟ್‌ಗಳು ಅಸ್ಥಿರ ಕಕ್ಷೆಗೆ ಸೇರಿದ್ದು, ಅದನ್ನು ಬಳಸಲು ಅಸಾಧ್ಯವಾಗಿದೆ. ಇವತ್ತಿನ ಮಿಷನ್‌ನ ಒಟ್ಟಾರೆ ಗುರಿ ಈಡೇರದಂತಾಗಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ.

"ಸಮಸ್ಯೆ ಏನೆಂದು ಗೊತ್ತಾಗಿದೆ. ಸೆನ್ಸಾರ್ ವೈಫಲ್ಯವನ್ನು ಗುರುತಿಸುವ ತರ್ಕದಲ್ಲಿ ಹಾಗು ಅದನ್ನು ಸರಿಪಡಿಸುವ ಕಾರ್ಯದಲ್ಲಿ ವಿಫಲತೆಯಾಗಿದ್ದರಿಂದ ನಿಗದಿತ ಕಕ್ಷೆಗೆ ಸೆಟಿಲೈಟ್‌ಗಳನ್ನು ಸೇರಿಸಲಾಗಲಿಲ್ಲ. ಈ ಸಂಗತಿಯನ್ನು ವಿಶ್ಲೇಷಿಸಿ ಮುಂದಿನ ಹೆಜ್ಜೆಗಳನ್ನು ಶಿಫಾರಸು ಮಾಡಲು ಒಂದು ಸಮಿತಿ ಮಾಡಿದ್ದೇವೆ. ಇದು ಮಾಡುವ ಶಿಫಾರಸುಗಳನ್ನು ಜಾರಿಗೊಳಿಸಿ ಇಸ್ರೋದಿಂದ ಮತ್ತೆ ಎಸ್‌ಎಸ್‌ಎಲ್-ಡಿ2 ರಾಕೆಟ್ ಸಿದ್ಧವಾಗುತ್ತದೆ," ಎಂದು ಇಸ್ರೋ ಹೇಳಿದೆ.

ಎರಡು ಸೆಟಿಲೈಟ್‌ಗಳನ್ನು 356 ಕಿಮೀ ವೃತ್ತೀಯ ಕಕ್ಷೆಗೆ (Circular Orbit) ಸೇರಿಸಬೇಕಿತ್ತು. ಆದರೆ, ತಾಂತ್ರಿಕ ವೈಫಲ್ಯದಿಂದಾಗಿ ಅವು 356 X 76 ಕಿಮೀ ಅಂಡಾಕಾರದ ಕಕ್ಷೆಗೆ (Elliptical Orbit) ಸೇರಿದವು ಎಂದು ಹೇಳಲಾಗಿದೆ.

ಎಸ್‌ಎಸ್‌ಎಲ್‌ವಿ ರಾಕೆಟ್‌ ಉಡಾವಣೆಯಲ್ಲಿ ತೊಂದರೆ: ಅಂತಿಮ ಹಂತದಲ್ಲಿ ಡೇಟಾ ನಷ್ಟಎಸ್‌ಎಸ್‌ಎಲ್‌ವಿ ರಾಕೆಟ್‌ ಉಡಾವಣೆಯಲ್ಲಿ ತೊಂದರೆ: ಅಂತಿಮ ಹಂತದಲ್ಲಿ ಡೇಟಾ ನಷ್ಟ

ಮಕ್ಕಳು ಅಭಿವೃದ್ಧಿಪಡಿಸಿದ್ದ ಸೆಟಿಲೈಟ್
ಇಸ್ರೋ ಸಂಸ್ಥೆ ಈವರೆಗೆ ಜಿಎಸ್‌ಎಲ್‌ವಿ ರಾಕೆಟ್ ಅನ್ನು ಎಲ್ಲಾ ಕಾರ್ಯಕ್ಕೂ ಉಪಯೋಗಿಸುತ್ತಿತ್ತು. ಸಣ್ಣ ಲೋಡ್‌ಗಳನ್ನು ಕಳುಹಿಸಲೆಂದು ಎಸ್‌ಎಸ್‌ಎಲ್‌ವಿ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದೇ ಮೊದಲ ಬಾರಿಗೆ ಭಾನುವಾರ ಅದರ ಉಡಾವಣೆ ಆಗಿದ್ದು. ರಾಕೆಟ್ ಹೊತ್ತೊಯ್ದಿದ್ದ ಎರಡು ಸೆಟಿಲೈಟ್‌ಗಳಲ್ಲಿ ಸರಕಾರಿ ಶಾಲೆಗಳ ಮಕ್ಕಳು ಸೇರಿ ಅಭಿವೃದ್ಧಿಪಡಿಸಿದ್ದ ಆಜಾದಿಸ್ಯಾಟ್ (AzaadiSAT) ಕೂಡ ಇದೆ. ಮತ್ತೊಂದು ಭೂ ವೀಕ್ಷಣಾ (Earth Observation Satellite-2) ಉಪಗ್ರಹವಾಗಿದೆ.

Satellite Developed by 750 School Students Lost After ISRO New Rocket Fails in Mission

ಆಜಾದಿಸ್ಯಾಟ್ ಉಪಗ್ರಹವನ್ನು 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ 750 ಸರಕಾರ ಶಾಲಾ ವಿದ್ಯಾರ್ಥಿಗಳು ನಿರ್ಮಿಸಿದ್ದರು. ಇದರಲ್ಲಿ 75 ಪೇಲೋಡ್‌ಗಳಿದ್ದವು. ಇವುಗಳನ್ನು ಅಭಿವೃದ್ಧಿಪಡಿಸಿದ್ದ ಮಕ್ಕಳು ಭಾನುವಾರ ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಯನ್ನು ಕಣ್ಣಾರೆ ಕಂಡು ಆನಂದ ತುಂದಿಲರಾಗಿದ್ದರು.

ಸಂಸದರಿಗಾಗಿ ನಂಬಿ ನಾರಾಯಣನ್ ಜೀವನಾಧಾರಿತ 'ರಾಕೆಟ್ರಿ' ಸಿನಿಮಾ ಪ್ರದರ್ಶನಸಂಸದರಿಗಾಗಿ ನಂಬಿ ನಾರಾಯಣನ್ ಜೀವನಾಧಾರಿತ 'ರಾಕೆಟ್ರಿ' ಸಿನಿಮಾ ಪ್ರದರ್ಶನ

ಮಾಧವನ್ ನಾಯರ್ ಪ್ರತಿಕ್ರಿಯೆ:
ಇಸ್ರೋ ಅಭಿವೃದ್ಧಿಪಡಿಸಿರುವ ಎಸ್‌ಎಸ್‌ಎಲ್‌ವಿ ತನ್ನ ಚೊಚ್ಚಲ ಮಿಷನ್‌ನಲ್ಲಿ ವಿಫಲವಾದರೂ ಇಸ್ರೋ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಸ್ರೋದ ಮಾಜಿ ಛೇರ್ಮನ್ ಡಾ. ಮಾಧವನ್ ನಾಯರ್ ಪ್ರತಿಕ್ರಿಯಿಸಿ, ಇಷ್ಟು ಕಿರು ಅವಧಿಯಲ್ಲಿ ರಾಕೆಟ್ ನಿರ್ಮಿಸುವುದು ಸಣ್ಣ ವಿಷಯವಲ್ಲ ಎಂದಿದ್ದಾರೆ.

"ಬಹಳ ಕಿರು ಅವಧಿಯಲ್ಲಿ ಇದರ ಪರಿಕಲ್ಪನೆ ಹುಟ್ಟಿ ಜಾರಿಯೂ ಆಗಿದೆ. ವೆಚ್ಚ, ತೂಕ, ವಾಣಿಜ್ಯಾತ್ಮಕತೆ ಈ ಮೂರನ್ನೂ ಕೂಡ ಕಡಿಮೆ ಅವಧಿಯಲ್ಲಿ ಗ್ರಹಿಸಿ ಜಾರಿ ಮಾಡಲಾಗಿದೆ. ಇದು ನಿಜಕ್ಕೂ ಒಳ್ಳೆಯ ಸಾಧನೆ" ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಈಗ ರಾಕೆಟ್‌ನ ಮಿಷನ್ ಬಹಳ ಸಂಕೀರ್ಣವಾಗಿತ್ತು ಎಂದು ಹೇಳಿದ ಅವರು, "ಸಾವಿರಾರು ಪುಟಗಳ ದತ್ತಾಂಶ ಹರಿದುಬರಲಿದೆ. ಹಲವು ತಜ್ಞರು ಈ ಡಾಟಾವನ್ನು ಪರಿಶೀಲಿಸಲಿದ್ದಾರೆ. ಮೂರನೇ ಹಂತದವರೆಗೂ ಎಲ್ಲವೂ ಸರಾಗವಾಗಿಸಾಗಿತ್ತು. ಅಂತಿಮ ಹಂತದಲ್ಲಿ ಮಾರ್ಗದಲ್ಲಿ ತುಸು ವ್ಯತ್ಯಾಸವಾಯಿತು. ಮಿಷನ್ ಫೇಲ್ ಆಗಲು ಅದು ಒಂದು ಕಾರಣ ಇರಬಹುದು. ಅಥವಾ ರಾಕೆಟ್‌ನಿಂದ ಸೆಟಿಲೈಟ್ ಪ್ರತ್ಯೇಕವಾಗಬೇಕಾದರೆ ಏನೋ ವ್ಯತ್ಯಾಸವಾಗಿರಬಹುದು" ಎಂದು ಮಾಧವನ್ ನಾಯರ್ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
SSLV D-2, the new rocket developed by ISRO, has failed in its mission of placing two satellites into the correct orbit. ISRO will come up with second small rocket after correcting mistakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X