ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವವೈವಿಧ್ಯ ವನ ಭಾಗ 9; ಸಲೀಂ ಅಲಿ ಅವರಿಗೊಂದು ಸಲಾಂ…

|
Google Oneindia Kannada News

ಜ್ಞಾನಭಾರತಿ ಆವರಣದ ಜೀವವೈವಿಧ್ಯ ವನ ಹಲವು ಪಕ್ಷಿಗಳಿಗೆ ಆಸರೆಯಾಗಿದೆ. ಪಕ್ಷಿ ಪ್ರಿಯರು ಇಲ್ಲಿ ಬಂದು ಪಕ್ಷಿ ವೀಕ್ಷಣೆಯಲ್ಲಿ ತೊಡಗುತ್ತಾರೆ. ಪಕ್ಷಿಗಳ ಫೋಟೊ ಕ್ಲಿಕ್ಕಿಸುತ್ತಾರೆ. ಅವರು ಕಾಣುವ ವಿಶೇಷಣಗಳನ್ನು ದಾಖಲಿಸುತ್ತಾರೆ. ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದು 'ವನಸಿರಿ'ಯನ್ನು ಕಣ್ತುಂಬಿಕೊಂಡು ಹೋಗುತ್ತಾರೆ, ಕಲಿಯುತ್ತಾರೆ, ಕಲಿಸುತ್ತಾರೆ.

ಈಗಾಗಲೇ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಹೋಗಿರುವುದನ್ನು ಸ್ಮರಿಸಬಹುದು. ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿಯಿದೆ, ಮುಂದೆ ಓದಿ...

 ಇದೆಲ್ಲಾ ಆದದ್ದಾದರೂ ಹೇಗೆ?

ಇದೆಲ್ಲಾ ಆದದ್ದಾದರೂ ಹೇಗೆ?

ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಜ್ಞಾನಭಾರತಿ ಆವರಣದಲ್ಲಿ ಜೀವವೈವಿಧ್ಯ ವನ ನಿರ್ಮಾಣ ಕಾರ್ಯ ಆರಂಭವಾಯಿತು. ಹಲವು ಜಾತಿಯ ಗಿಡ ಮರಗಳನ್ನು ಬೆಳೆಸುವ ಕೆಲಸ ನಡೆಯಿತು. ಕಲ್ಯಾಣಿ, ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಇದರಿಂದ ಒಂದು ಸಹಜ ಕಾಡಿನಲ್ಲಿ ಇರಬಹುದಾದ ವಾತಾವರಣ ಜ್ಞಾನಭಾರತಿ ಆವರಣಕ್ಕೆ ಪ್ರಾಪ್ತವಾಯಿತು. ಹಲವು ಜಾತಿಯ ಪಕ್ಷಿಗಳು ಇಲ್ಲಿ ನೆಲೆ ಕಂಡುಕೊಂಡವು.

ಜೀವವೈವಿಧ್ಯ ವನ ಭಾಗ 7: ಜ್ಞಾನಭಾರತಿಯ ಜೈವಿಕ ವನ ಏಕೆ ಉಳಿಯಬೇಕು?: ಹೆಬ್ಳೀಕರ್ insights...ಜೀವವೈವಿಧ್ಯ ವನ ಭಾಗ 7: ಜ್ಞಾನಭಾರತಿಯ ಜೈವಿಕ ವನ ಏಕೆ ಉಳಿಯಬೇಕು?: ಹೆಬ್ಳೀಕರ್ insights...

 ಸಲೀಂ ಅಲಿ ಹೇಳಿರುವ ಮಾತು...

ಸಲೀಂ ಅಲಿ ಹೇಳಿರುವ ಮಾತು...

Bird Man of Inida ಸಲೀಂ ಅಲಿ ಹೇಳುವಂತೆ "ಜನರು ಪಕ್ಷಿಧಾಮವೆಂದರೆ ಅದೊಂದು glorified zoo ಎಂದು ಭಾವಿಸಿದ್ದಾರೆ. ಆದರೆ ಅವರಿಗೆ ಅರ್ಥವಾಗದ ವಿಷಯವೇನೆಂದರೆ, ಒಂದು ಸಂರಕ್ಷಿತ ಪರಿಸರವಿದ್ದಾಗ ಹಕ್ಕಿ ಪಕ್ಷಿಗಳು ತಂತಾನೆ ಬರುತ್ತವೆ. ಅಲ್ಲಿ ಅವುಗಳಿಗೆ ಆಹಾರ ನೀರು ಸಿಕ್ಕರೆ, ಆ ಪ್ರದೇಶ ಗೂಡು ಕಟ್ಟಲು ಸುರಕ್ಷಿತ ಸ್ಥಳವೆನಿಸಿದರೆ ಅಲ್ಲಿಯೇ ಬದುಕುತ್ತವೆ"...

ಇದೀಗ ಜ್ಞಾನ ಭಾರತಿ ಆವರಣದಲ್ಲಿ ಆಗಿರುವುದು ಇದೇ. ಇಲ್ಲಿ ಕಾಡು ನಿರ್ಮಾಣಗೊಂಡಿದೆ. ಹಕ್ಕಿ ಪಕ್ಷಿಗಳಿಗೆ ತಂಗಲು ಸುರಕ್ಷಿತ ಪ್ರದೇಶವಾಗಿದೆ. ಅವುಗಳಿಗೆ ಆಹಾರವಿದೆ, ನೀರಿದೆ. So ಸಲೀಂ ಅಲಿ ಹೇಳಿದಂತೆ ನೈಸರ್ಗಿಕವಾದ ಪಕ್ಷಿಧಾಮವಾಗಿ ರೂಪುಗೊಂಡಿದೆ.

 ಪಕ್ಷಿತಜ್ಞರಿಗೆ ಪ್ರಿಯವಾದ ತಾಣ

ಪಕ್ಷಿತಜ್ಞರಿಗೆ ಪ್ರಿಯವಾದ ತಾಣ

ಇಲ್ಲಿಗೆ ಬಂದು ಹೋಗುವ ಅನೇಕ ಪಕ್ಷಿ ತಜ್ಞರು ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನೂ ಗುರುತಿಸಿ ಸಂಭ್ರಮಿಸಿದ್ದಾರೆ. ಡಾ.ಗಿರೀಶ್ ಮತ್ತು ಡಾ. ಕುಮಾರ್ ಜ್ಞಾನಭಾರತಿ ಆವರಣದ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಕಂಡದ್ದು, ನೋಡಿದ್ದು ತಿಳಿದದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಪಕ್ಷಿಗಳ ಫೋಟೊಗಳನ್ನೂ ಕೂಡ.

ಪ್ರೇಮ ಪಕ್ಷಿಗಳ ಪಾಲಿನ ಹನಿಮೂನ್ ಸ್ಪಾಟ್ ರಂಗನತಿಟ್ಟು!ಪ್ರೇಮ ಪಕ್ಷಿಗಳ ಪಾಲಿನ ಹನಿಮೂನ್ ಸ್ಪಾಟ್ ರಂಗನತಿಟ್ಟು!

ನಿತ್ಯ ಬೆಳಿಗ್ಗೆ ಇಲ್ಲಿ ಸೇರುವ ವಾಕರ್ಸ್ ಜಾಗರ್ಸ್ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ತಮ್ಮ ದಿನ ಆರಂಭಿಸುತ್ತೀರಲ್ಲವೇ?.

Recommended Video

Donald Trump ನಾನೇ ಅಮೆರಿಕ ಅಧ್ಯಕ್ಷ!! | Oneindia Kannada
 ನ.12 ಸಲೀಂ ಅಲಿ 125ನೇ ಜನ್ಮದಿನ

ನ.12 ಸಲೀಂ ಅಲಿ 125ನೇ ಜನ್ಮದಿನ

ನಾಳೆ ದಿನಾಂಕ 12 ನವೆಂಬರ್. ಹಕ್ಕಿಗಳ ಚಿಲಿಪಿಲಿಯನ್ನು ಧ್ಯಾನವಿಟ್ಟು ಕೇಳಿಸಿಕೊಳ್ಳಿ. ಅವೆಲ್ಲವೂ BIRD MAN OF INDIA ಸಲೀಂ ಅಲಿ ಅವರಿಗೆ 125ನೇ ಜನ್ಮದಿನದ ಶುಭಾಶಗಳನ್ನು ಕೋರಬಹುದು. ಇಂಥದೊಂದು ಮಾನವ ನಿರ್ಮಿತ ವನ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾದ್ದು ಎಲ್ಲಾ ಜವಾಬ್ದಾರಿಯುತ ನಾಗರೀಕರ, ಸಂಸ್ಥೆಗಳ, ಸರ್ಕಾರಗಳ ಕರ್ತವ್ಯವಾಗಬೇಕು. ಅದು ಬಿಟ್ಟು ಈ ವನಕ್ಕೆ ಕೊಡಲಿ ಹಾಕುವುದೆಂದರೆ ಮುಂದಿನ ಪೀಳಿಗೆಯ ಕತ್ತು ಹಿಚುಕಿದಂತೆ.

ಬೆಂಗಳೂರಿನಂಥ ಬರಗೆಟ್ಟ ನಾಡಿನಲ್ಲಿ ಜೀವ ತುಂಬಿಕೊಂಡಿರುವ ಜೀವವೈವಿಧ್ಯ ವನ ಉಳಿಸಿಕೊಳ್ಳುತ್ತೇವೆಂದು ಪ್ರತಿಜ್ಞೆಗೈಯುತ್ತಾ ಮತ್ತೊಮ್ಮೆ ಸಲೀಂ ಅಲಿ ಅವರ 125ನೇ ಜನ್ಮದಿನದಂದು ಅವರಿಗೆ BIRDS SALAM... NATURE SALAAM... ಹೇಳೋಣ.

English summary
The forest is built in the premises of Jnana Bharati bangalore university. The place has became a safe area for birds to stay. So, as bird expert Salim Ali says, it has became a natural bird sanctuary. Here is a small article on his 125th birth anniversary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X