ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆವ್ವಗಳು ಇವೆಯೇ? ಸದ್ಗುರು ಹೇಳಿದ ಸ್ವ-ಅನುಭವ

|
Google Oneindia Kannada News

ಪ್ರಸ್ತುತ ಭಾರತದಲ್ಲಿರುವ ಆಧ್ಯಾತ್ಮಿಕ ಗುರುಗಳಲ್ಲಿ ಅಗ್ರಗಣ್ಯರು ಸದ್ಗುರು. ಮಾತುಗಾರಿಕೆಯ ಜೊತೆಗೆ ಅವರಿಗೆ ತಂತ್ರಜ್ಞಾನ, ಹೊಸ ಪೀಳಿಗೆ ನಾಡಿ ಮಿಡಿತ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಅವರು ಅತ್ಯಂತ ಖ್ಯಾತ ಆಧ್ಮಾತ್ಮಿಕ ಗುರು.

ಯಾವುದೇ ವಿಷಯವದ ಬಗ್ಗೆಯಾಗಲಿ ಸದ್ಗುರು ಎಂದೇ ಖ್ಯಾತರಾಗಿರುವ ಜಗ್ಗಿ ವಾಸುದೇವ್ ಅವರು ನಿರರ್ಗಳವಾಗಿ ಮಾತನಾಡಬಲ್ಲರು. ಇದೇ ಕಾರಣಕ್ಕೆ ಅವರ ಬಗ್ಗೆ ಟೀಕೆಯೂ ವ್ಯಕ್ತವಾಗುತ್ತಲೇ ಇರುತ್ತದೆ. ಸದ್ಗುರು ಮಾತುಗಳು ಕೆಲವೊಮ್ಮೆ ಟ್ರೋಲ್ ಭಾಷೆಯನ್ನು ಹೋಲುವಂತಿರುತ್ತವೆ ಎಂದು ಆರೋಪಿಸುವ ವರ್ಗವೂ ಸಣ್ಣದೇನೂ ಇಲ್ಲ. ಸದ್ಗುರುವನ್ನು ಒಪ್ಪುವರೇ ಆಗಲಿ ವಿರೋಧಿಸುವವರೇ ಆಗಲಿ, ಅವರ ಮಾತನ್ನು ನಿರ್ಲಕ್ಷಿಸುವುದಿಲ್ಲ.

ಸದ್ಗುರು ಜಗ್ಗಿ ವಾಸುದೇವ್‌ಗೆ ನರ್ತಿಸಲು ಬರುತ್ತದೆಯೇ?ಸದ್ಗುರು ಜಗ್ಗಿ ವಾಸುದೇವ್‌ಗೆ ನರ್ತಿಸಲು ಬರುತ್ತದೆಯೇ?

ಇಂಥಹಾ ಸದ್ಗುರುವನ್ನು ಕೆಲವು ದಿನಗಳ ಹಿಂದೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಒಬ್ಬರು ಕೇಳಿದರು, 'ಸದ್ಗುರು ದೆವ್ವಗಳು ಇವೆಯೇ?' ಎಂದು. ಪ್ರಶ್ನೆಯ ಹಿಂದಯೇ ಜೋರಾದ ಕರತಾಡನ ಕೇಳಿ ಬಂತು. ಆ ಕರತಾಡನೇ ಸೂಚಿಸಿತು, ಇದು ಬಹು ಕುತೂಹಲಕಾರಿ ಮತ್ತು ಎಲ್ಲರ ಮನದಲ್ಲಿರುವ ಪ್ರಶ್ನೆಯೆಂದು. ಸದ್ಗುರು ಸಹ ಒಮ್ಮೆ ನಕ್ಕು ಮಾತು ಮುಂದುವರೆಸಿದರು.

ಸದ್ಗುರು ತಮ್ಮದೇ ಜೀವನದಲ್ಲಿ ಬಹು ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ವಿವರಿಸುವುದಾಗಿ ಹೇಳಿ, 'ನಾನು ಮೈಸೂರಿನಲ್ಲಿದ್ದಾಗ ಅದೇ ನಗರದಲ್ಲಿ ವ್ಯಕ್ತಿಯೊಬ್ಬ ಇದ್ದ. ಆತ ಸರ್ಕಾರಿ ನೌಕರನಾಗಿದ್ದ. ಆತ ದೆವ್ವಗಳ ಜೊತೆ ಮಾತನಾಡುತ್ತಾನೆ, ವಶೀಕರಣ ಮಾಡುತ್ತಾನೆ, ದೆವ್ವ ಬಿಡಿಸುತ್ತಾನೆ, ದೆವ್ವಗಳನ್ನು ಬಾಟಲಿಯಲ್ಲಿ ಹಿಡಿದಿಟ್ಟಿದ್ದಾನೆ ಎಂದು ಹೇಳುತ್ತಿದ್ದರು, ಹಾಗಾಗಿ ನಾನು ಅವನನ್ನು ಭೇಟಿ ಆದೆ. ನನಗೆ ದೆವ್ವ ನೋಡುವ ಕುತೂಹಲ ಹುಟ್ಟಿಬಿಟ್ಟಿತ್ತು'.

ಆ ಮಾಂತ್ರಿಕನ ರಹಸ್ಯ ಕೋಣೆಗೆ ಹೋದ ಸದ್ಗುರು

ಆ ಮಾಂತ್ರಿಕನ ರಹಸ್ಯ ಕೋಣೆಗೆ ಹೋದ ಸದ್ಗುರು

'ನಾನು ಆತನನ್ನು ಹುಡುಕಿ ಹೋದೆ, ಆತ ನನ್ನನ್ನು ಅವನ ರಹಸ್ಯ ಕೋಣೆಗೆ ಕರೆದುಕೊಂಡು ಹೋದ ಅಲ್ಲಿ ಗಾಜಿನ ಬಾಟಲಿಗಳಿದ್ದವು. ಎಲ್ಲದಕ್ಕೂ ಮುಚ್ಚಳ ಹಾಕಲಾಗಿತ್ತು. ಆದರೆ ಅದರ ಒಳಗೆ ಏನೂ ಇರಲಿಲ್ಲ. ಆದರೆ ಆತ ''ಇದರೊಳಗೆ ದೆವ್ವಗಳಿವೆ'' ಎಂದು ನನಗೆ ಹೇಳಿದ. ಆದರೆ ನನಗೆ ಅದು ಕಾಣಲಿಲ್ಲ, ಆಗ ಒಂದು ಬಾಟಲಿಯನ್ನು ನಾನು ಕದ್ದುಬಿಟ್ಟೆ. ನನಗೆ ದೆವ್ವ ನೋಡುವ ತೀವ್ರ ಹಂಬಲ ಉಂಟಾಗಿಬಿಟ್ಟಿತ್ತು' ಎಂದು ಸದ್ಗುರು ಕತೆಯನ್ನು ಮುಂದುವರೆಸುತ್ತಾರೆ.

ಸದ್ಗುರು ಕಣ್ಣ ಮುಂದೆ ನಡೆಯಿತು ಪವಾಡದಂತಹಾ ಘಟನೆ

ಸದ್ಗುರು ಕಣ್ಣ ಮುಂದೆ ನಡೆಯಿತು ಪವಾಡದಂತಹಾ ಘಟನೆ

''ಆ ನಂತರ ಆ ದೆವ್ವ ಹಿಡಿಯುವ ನನ್ನ ಮುಂದೆಯೇ ನೆಲದ ಮೇಲೆ ಅಕ್ಕಿಯನ್ನು ಚೆಲ್ಲಿ ರಂಗೋಲಿಯಂತೆ ಮಾಡಿ ಅದರ ಐದು ಮೂಲೆಯಲ್ಲಿ ಆರು ಮೊಟ್ಟೆಯನ್ನು ಇಟ್ಟ. ನಂತರ ಏನೇನೋ ಹೇಳಿ ಒಮ್ಮೆ ಕೈ ಯನ್ನು ತಟ್ಟಿದ ಅಷ್ಟೆ ಆ ಐದೂ ಮೊಟ್ಟೆಗಳು ತನ್ನಂತಾನೆ ಪಟಾರನೆ ಒಡೆದು ಹೋದುವು'' ಕತೆ ಹೇಳುತ್ತಿದ್ದರೆ ಜನರೆಲ್ಲಾ ಸದ್ಗುರುವನ್ನೇ ತದೇಕಚಿತ್ತದಿಂದ ನೋಡುತ್ತಿದ್ದಾರೆ.

ಗಿಡ ನೆಡಲು ಕೋಟಿಗಟ್ಟಲೆ ಹಣ ಸಂಗ್ರಹ: ಸದ್ಗುರು ವಿರುದ್ಧ ದೂರುಗಿಡ ನೆಡಲು ಕೋಟಿಗಟ್ಟಲೆ ಹಣ ಸಂಗ್ರಹ: ಸದ್ಗುರು ವಿರುದ್ಧ ದೂರು

ಸದ್ಗುರುವನ್ನು ಚಿಂತೆಗೆ ಹಚ್ಚಿತು ಆ ಘಟನೆ

ಸದ್ಗುರುವನ್ನು ಚಿಂತೆಗೆ ಹಚ್ಚಿತು ಆ ಘಟನೆ

''ಮೊಟ್ಟೆ ಒಡೆದ ಕೂಡಲೇ ನನಗೆ ಆಶ್ಚರ್ಯವಾಗಿಬಿಟ್ಟತು, ಯಾವ ಬಾಹ್ಯ ಒತ್ತಡವೂ ಇಲ್ಲದೆ ಮೊಟ್ಟೆಗಳು ನನ್ನ ಎದುರಲ್ಲೇ ಕೇವಲ ಕೈ ಸನ್ನೆಯಿಂದ ಒಡೆದು ಹೋಗಿದ್ದವು. ಅದು ದೆವ್ವದ ಕಾರ್ಯವೋ ಮತ್ತಿನ್ನೇನೋ ನನಗೆ ತಿಳಿಯಲಿಲ್ಲ. ಆದರೆ ನನ್ನನ್ನು ಇದು ಯೋಚನೆಗೆ ಹಚ್ಚಿ ಬಿಟ್ಟಿತು'' ಸದ್ಗುರು ಕತೆ ಮುಂದುವರೆಸಿದರು.

ಸದ್ಗುರುವೂ ಪವಾಡದ ಯತ್ನ ಮಾಡಿದರು

ಸದ್ಗುರುವೂ ಪವಾಡದ ಯತ್ನ ಮಾಡಿದರು

''ಇದೇ ಯೋಚನೆಯಲ್ಲಿ ಮನೆಗೆ ಹೋದೆ ನನ್ನ ಮನೆಯ ಬಳಿ ಪೇರಲೇಹಣ್ಣಿನ ಮರವೊಂದಿತ್ತು, ಅದರ ಬಳಿ ಹೋಗಿ ನಾನು ಚಪ್ಪಾಳೆ ತಟ್ಟಿದೆ ಪೇರಲಕಾಯಿಯೊಂದು ಕೆಳಗೆ ಬಿದ್ದಿತು. ನನಗೆ ಆಶ್ಚರ್ಯವಾಗಿಬಿಟ್ಟಿತು, ನಂತರ ಮತ್ತೆ ಚಪ್ಪಾಳೆ ಹೊಡೆದೆ ಮತ್ತೆ ಕಾಯಿ ಕೆಳಗೆ ಬಿದ್ದಿತು. ಕೂಡಲೇ ನಾನು ನನ್ನ ಗೆಳೆಯರನ್ನು ಕರೆದೆ ನನ್ನ ಶಕ್ತಿ ನೋಡಿ ಎಂದು ಅವರ ಮುಂದೆ ಚಪ್ಪಾಳೆ ಹೊಡೆದೆ ಆಗಲೂ ಕಾಯಿ ಕೆಳಗೆ ಬಿತ್ತು, ಮತ್ತೆ ಮತ್ತೆ ಚಪ್ಪಾಳೆ ಹೊಡೆದೆ ಪ್ರತಿಬಾರಿಯೂ ಕಾಯಿ ಕೆಳಗೆ ಬಿತ್ತು.'' ಕತೆ ಕೇಳುತ್ತಿದ್ದ ಜನರಿಗೆಲ್ಲಾ ಆಶ್ಚರ್ಯ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರುಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರು

ಎಚ್ಚರಿಕಯ ಮಾತನ್ನಾಡಿದ ಸದ್ಗುರು

ಎಚ್ಚರಿಕಯ ಮಾತನ್ನಾಡಿದ ಸದ್ಗುರು

''ಆದರೆ ಇದಾದ ಕೆಲವೇ ದಿನಗಳಲ್ಲಿ ನನ್ನಲ್ಲಿ ಒಂದು ರೀತಿಯ ಋಣಾತ್ಮಕ ಶಕ್ತಿ ಹರಿದಾಡುತ್ತಿದೆ ಎಂಬ ಭಾವನೆ ಉಂಟಾಯಿತು. ನಾನು ಇಂತಹಾ (ಚಪ್ಪಾಳೆ ಹೊಡೆದು ಹಣ್ಣು ಬೀಳಿಸುವಂತಹಾ) ಕೆಲಸಕ್ಕೆ ಶಕ್ತಿಯನ್ನು ಬಳಸಲಾರದು ಎನಿಸಿತು. ನಾನು ಅಂತಹಾ (ಆ ಮಾಂತ್ರಿಕದ ರಹಸ್ಯ ಕೋಣೆ) ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಿಬಿಟ್ಟೆ. ಗೆಳೆಯರಿಗೆ ಹೇಳಿದೆ ಪೇರಲೆ ಹಣ್ಣು ಬೇಕೆಂದರೆ ನೀವು ಹೋಗಿ ಮರ ಹತ್ತಿ ಕಿತ್ತುಕೊಳ್ಳಿ, ಜೀವನದಲ್ಲಿ ಏನು ಬೇಕೆಂದರೂ ಶ್ರಮದಿಂದಲೇ ಸಂಪಾದಿಸಿ'' ಇಷ್ಟು ಹೇಳಿದ ಸದ್ಗುರು ಮುಂದಿನ ಮಾತುಗಳನ್ನು ಇನ್ನೂ ಎಚ್ಚರಿಕೆಯಿಂದ ಆಡುತ್ತಾರೆ. ಪೇರಲೆಕಾಯಿ ಬಿದ್ದಿದ್ದಕ್ಕೆ ಕಾರಣ ನೀಡುವುದಿಲ್ಲ, ಆ ಮಾಂತ್ರಿಕ ಕೈ ಸನ್ನೆಯಿಂದ ಮೊಟ್ಟೆ ಒಡೆದ ಬಗ್ಗೆಯೂ ಅವರು ಹೇಳುವುದಿಲ್ಲ. ಮೂಲ ಪ್ರಶ್ನೆಯಾಗಿದ್ದ ದೆವ್ವಗಳು ಇವೆಯೇ? ಎಂಬುದನ್ನೂ ಅವರು ಬದಿಗೆ ಸರಿಸುತ್ತಾರೆ.

ದೆವ್ವಗಳು ಇವೆಯೇ? ಕೊನೆಗೂ ಸದ್ಗುರು ಹೇಳಿದ್ದೇನು?

ದೆವ್ವಗಳು ಇವೆಯೇ? ಕೊನೆಗೂ ಸದ್ಗುರು ಹೇಳಿದ್ದೇನು?

''ಇಲ್ಲಿ ಕುಳಿತಿರುವ ನಾವೆಲ್ಲರೂ ದೆವ್ವಗಳೇ, ಯಾರಾದರೂ ತಮ್ಮ ದೇಹವನ್ನು ತ್ಯಜಿಸಿದರೆ ಅವರನ್ನು ಭಯಾತ್ಮಕವಾಗಿ ನೋಡುತ್ತಾರೆ ಅದು ಸರಿಯಲ್ಲ ಅವರು ದೇಹ ತ್ಯಜಿಸಿದ್ದಾರೆ ಅಷ್ಟೆ. ಯಾರೋ ಚೆನ್ನಾಗಿ ತಿಂದು ದಪ್ಪವಾಗಿರುತ್ತಾರೆ ಆ ನಂತರ ದೇಹದ ತೂಕ ಕಳೆದುಕೊಳ್ಳುತ್ತಾರೆ ಆಗ ಅವರನ್ನು ಅರ್ಧ ದೆವ್ವ ಅರ್ಧ ಮನುಷ್ಯ ಎನ್ನಲಾದೀತೆ? ಹಾಗೆಲ್ಲಾ ಏನೂ ಇಲ್ಲ, ನಾವೆಲ್ಲರೂ ದೆವ್ವಗಳೇ ಆದರೆ ದೇಹ ಇರುವ ದೆವ್ವಗಳು ಎಂದು ಸದ್ಗುರು ಮಾತು ಮುಗಿಸುತ್ತಾರೆ.

ಅತೀತ ಶಕ್ತಿಯೊಂದು ಎಲ್ಲರಿಗೂ ಇದೆ

ಅತೀತ ಶಕ್ತಿಯೊಂದು ಎಲ್ಲರಿಗೂ ಇದೆ

ಸದ್ಗುರು ಅವರ ಈ ಕತೆಯಲ್ಲಿ ಅವರೇ ಹೇಳಿದ ಪ್ರಕಾರ ವ್ಯಕ್ತಿಗಳಿಗೆ ಅತೀತ ಶಕ್ತಿಯೊಂದಿದೆ. ಅದನ್ನು ಯಾವ ಕಾರ್ಯಕ್ಕೆ ಬಳಸಬೇಕು ಎಂಬುದು ಅವರಿಗೆ ಬಿಟ್ಟಿದ್ದು, ಮೈಸೂರಿನ ಆ ವ್ಯಕ್ತಿ ಮೊಟ್ಟೆ ಹೊಡೆಯಲು ಆ ಶಕ್ತಿ ಬಳಸಿದ್ದಾನೆ, ಸದ್ಗುರು ಪೇರಲಕಾಯಿ ಬೀಳಿಸಲು ಆಗ ಬಳಸಿದ್ದರು, ಎಲ್ಲ ವ್ಯಕ್ತಿಗಳಿಗೂ ಶಕ್ತಿ ಇದೆ ಆದರೆ ಅದನ್ನು ಬಳಸುವ ಮಾರ್ಗವನ್ನು ಕಂಡುಕೊಳ್ಳಬೇಕು.

English summary
Jaggi Vasudev Sadhguru told a ghost story. He recall a situation where encounter a mysterious man in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X