ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ತೀರ್ಥಯಾತ್ರೆ: ವರ್ಚುವಲ್ ಕ್ಯೂ ಬುಕ್ಕಿಂಗ್ ಮಾಡುವುದು ಹೇಗೆ?

|
Google Oneindia Kannada News

ತಿರುವನಂತಪುರಂ, ನವೆಂಬರ್‌ 24: ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸ್ತುತ ವಾರ್ಷಿಕ ತೀರ್ಥಯಾತ್ರೆ ನಡೆಯುತ್ತಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ನವೆಂಬರ್‌ 15 ರಿಂದ ಆರಂಭ ಆಗಿರುವ ಈ ತೀರ್ಥಯಾತ್ರೆಯಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ವರ್ಚುವಲ್ ಕ್ಯೂ ಬುಕ್ಕಿಂಗ್‌ ವ್ಯವಸ್ಥೆಯನ್ನು ಆರಂಭ ಮಾಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಜನಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇರಳ ಸರ್ಕಾರ ಕೈಗೊಂಡಿರುವ ಈ ವರ್ಚುವಲ್‌ ಕ್ಯೂ ವ್ಯವಸ್ಥೆಯಲ್ಲಿ ಶಬರಿಮಲೆ ಯತ್ರಾರ್ಥಿಗಳಿಗೆ ನಿರ್ದಿಷ್ಟ ಸಮಯವನ್ನು ಗೊತ್ತು ಮಾಡುವ ವ್ಯವಸ್ಥೆಯಾಗಿದೆ. ಈ ಮೂಲಕ ದೇವಾಲಯದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲಾಗುತ್ತದೆ. ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಅನ್ನು ಆನ್‌ಲೈನ್‌ ಮೂಲಕ ಮಾಡಲಾಗು‌‌ತ್ತದೆ.

ಶಬರಿಮಲೆಯಲ್ಲಿ ನ.18 ರಿಂದ ಸ್ಪಾಟ್ ಬುಕ್ಕಿಂಗ್ ಆರಂಭ: ಈ ದಾಖಲೆ ಅತ್ಯಗತ್ಯಶಬರಿಮಲೆಯಲ್ಲಿ ನ.18 ರಿಂದ ಸ್ಪಾಟ್ ಬುಕ್ಕಿಂಗ್ ಆರಂಭ: ಈ ದಾಖಲೆ ಅತ್ಯಗತ್ಯ

ಇನ್ನು ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯಲು ಆನ್‌ಲೈನ್‌ ಮೂಲಕ ಅವಕಾಶ ದೊರೆಯದವರಿಗೆ, ನೀಲಕಲ್ಲಿನಲ್ಲಿ ಸ್ಥಳದಲ್ಲೇ ಬುಕ್ಕಿಂಗ್‌ ಮಾಡಲು ಪೊಲೀಸರು ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಹಾಗಾದರೆ ವರ್ಚುವಲ್ ಕ್ಯೂ ಬುಕ್ಕಿಂಗ್‌ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..

Sabarimala Pilgrimage: How to Do Virtual Q Booking?, Here Explained in Kannada

ವರ್ಚುವಲ್ ಕ್ಯೂ ಬುಕ್ಕಿಂಗ್‌ ಮಾಡುವುದು ಹೇಗೆ?

* sabarimalaonline.org ವೆಬ್‌ಸೈಟ್‌ಗೆ ಭೇಟಿ ನೀಡಿ
* ಆ ಬಳಿಕ ರಿಜಿಸ್ಟರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ
* ಆ ನಂತರ ಕಾಣಿಸುವ ಪುಟದಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನು ಉಲ್ಲೇಖ ಮಾಡಬೇಕು
* ಹೆಸರು, ಹುಟ್ಟಿದ ದಿನಾಂಕ, ವಿಳಾಸ, ದೇಶ, ಪಿನ್‌ ಕೋಡ್‌ ಹಾಕಿ
* ಗುರುತಿನ ಪುರಾವೆ, ಸ್ಕ್ಯಾನ್‌ ಮಾಡಿದ ಫೋಟೋ, ಫೋನ್‌ ನಂಬರ್‌ ಹಾಕಿ
* ಆ ಬಳಿಕ ಇಮೇಲ್‌ ಸಂಖ್ಯೆ ನಮೂದಿಸಿ
* ಪಾಸ್‌ವರ್ಡ್ ರಚನೆ ಮಾಡಿ, ಅದನ್ನು ದೃಢೀಕರಣ ಮಾಡಿ
* ನಿಯಮಗಳು/ಷರತ್ತನ್ನು ಒಪ್ಪುತ್ತೀರಿ ಎಂಬ ಬಾಕ್ಸ್‌ ಮೇಲೆ ಕ್ಲಿಕ್‌ ಮಾಡಿ
* ನಂತರ Continue ಮೇಲೆ ಕ್ಲಿಕ್‌ ಮಾಡಿ
* ಆ ಬಳಿಕ ನಿಮ್ಮ ನೋಂದಾಯಿತ ಸಂಖ್ಯೆಗೆ OTP ಬರಲಿದೆ
* OTP ಅನ್ನು ನಮೂದಿಸಿ, ಖಾತೆಯನ್ನು ಪರಿಶೀಲಿಸಿದರೆ ನೋಂದಣಿ ಪ್ರಕ್ರಿಯೆ ಕೊನೆಯಾಗುತ್ತದೆ

ಸಮಯ ನಿಗದಿ ಮಾಡುವುದು ಹೇಗೆ?

* ಅದಕ್ಕಾಗಿ ಮೊದಲು ನೀವು ಲಾಗಿನ್ ಬಟನ್ ಕ್ಲಿಕ್ ಮಾಡಿ
* ನಿಮ್ಮ ಇಮೇಲ್‌ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಹಾಕಿ ಲಾಗಿನ್‌ ಆಗಿ
* ವರ್ಚುವಲ್ ಕ್ಯೂ ಬಟನ್ ಕ್ಲಿಕ್ ಮಾಡಿ
* ಅದರಲ್ಲಿನ ಗ್ರೂಪ್ ಐಕಾನ್ ಮೇಲೆ ಕ್ಲಿಕ್ ಮಾಡಿ ಎಷ್ಟು ಮಂದಿ ಭಕ್ತರು ದರ್ಶನಕ್ಕೆ ಬರಲಿದ್ದಾರೆ ಎಂದು ನಮೂದಿಸಬೇಕು.
* ಆಡ್ ಪಿಲಿಗ್ರಿಮ್ ಐಕಾನ್ ಮೇಲೆ ಕ್ಲಿಕ್ ಮಾಡಿ ಉಳಿದ ಭಕ್ತರ ವಿವರಗಳನ್ನು ನಮೂದಿಸಬೇಕು.
* ಹೀಗೆ ಸೇರಿಸಿದವರ ವೈಯಕ್ತಿಕ ವಿವರಗಳನ್ನು ನಿಖರವಾಗಿ ದಾಖಲಿಸಬೇಕು
* ನೀವು ಸೇರಿಸುವ ವ್ಯಕ್ತಿಯ ಫೋಟೋ, ಐಡಿ ಪುರಾವೆ, ಜನ್ಮ ದಿನಾಂಕ ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಬೇಕು
* ಪೋರ್ಟಲ್‌ನಲ್ಲಿ ಒದಗಿಸಲಾದ ಕ್ಯಾಲೆಂಡರ್‌ನಲ್ಲಿ ಭೇಟಿಯ ನಿಖರವಾದ ದಿನಾಂಕ ಮತ್ತು ಸಮಯವನ್ನು ನಮೂದಿಸಿ

ಬುಕಿಂಗ್ ಸಮಯದಲ್ಲಿ 'ವಿಶ್‌ಲಿಸ್ಟ್' ಐಕಾನ್ ಇರುತ್ತದೆ. ಅಂದರೆ ಅಪ್ಪಂ, ಅರವಣ, ಅಭಿಷೇಕ ತುಪ್ಪ,ವಿಭೂತಿ ಮುಂತಾದ ಹೆಚ್ಚುವರಿ ದೇವಸ್ವಂ ಸೇವೆಗಳಿಗೆ ಪಾವತಿ ಮಾಡಲು ಅವಕಾಶವಿದೆ. ನಂತರ ಬುಕ್ ನೌ ಕ್ಲಿಕ್ ಮಾಡಿದರೆ ಪ್ರತಿ ಭಕ್ತರ ಹೆಸರು ಮತ್ತು ವಿವರಗಳು ಅದರಲ್ಲಿ ದಾಖಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಖಾತರಿ ಸಂದೇಶ ಬರುತ್ತದೆ.

ವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿ

ಮೈ ಪ್ರೊಫೈಲ್ ಮೆನುವಿನಿಂದ ಕೂಪನ್‌ಅನ್ನು ಪ್ರಿಂಟ್ ತೆಗೆಯಬಹುದು. ಅಲ್ಲಿ ವ್ಯವಹಾರದ ಇತಿಹಾಸ, ಭಕ್ತರ ಪಟ್ಟಿಯನ್ನು ವೀಕ್ಷಿಸಬಹುದು. ಯಾವುದೇ ಅನುಮಾನಗಳಿದ್ದರೆ ಸಹಾಯವಾಣಿ 702800100 ಸಂಖ್ಯೆಗೆ ಕರೆ ಮಾಡಬಹುದು. ಯಾತ್ರೆ ಸಮಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಅಡಚಣೆ ಉಂಟಾದರೆ ಕೇರಳ ಪೊಲೀಸರ 7025800100 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು

ಇನ್ನು ನೀವು ಸ್ಪಾಟ್‌ ಬುಕ್ಕಿಂಗ್‌ ಕೂಡ ಮಾಡಿಕೊಳ್ಳುವ ವ್ಯವಸ್ಥೆ ಇದೆ. ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿದವರು ಬರದಿದ್ದರೆ ಸ್ಪಾಟ್‌ ಬುಕ್ಕಿಂಗ್‌ ಮಾಡಿಕೊಂಡವರಿಗೆ ಅವಕಾಶವನ್ನು ನೀಡಲಾಗುತ್ತದೆ. ಅದಕ್ಕಾಗಿ ನೀವು ಆಧಾರ್‌ ಕಾರ್ಡ್ ಅಥವಾ ವೋಟರ್‌ ಐಡಿ ಅಥವಾ ಪಾಸ್‌ಪೋರ್ಟ್ ಅನ್ನು ಹೊಂದಿದ್ದರೆ ಸಾಕಾಗುತ್ತದೆ. ಇನ್ನು ಈ ಹಿಂದೆಯೇ ಆನ್‌ಲೈನ್ ಬುಕಿಂಗ್‌ಗಾಗಿ ಪ್ಲಾಟ್‌ಫಾರ್ಮ್ ಅನ್ನು ಸಹ ನವೀಕರಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಲು ಪಾಸ್‌ಪೋರ್ಟ್‌ಗಳನ್ನು ಕೂಡಾ ಬಳಸಬಹುದಾಗಿದೆ ಎಂದು ಹೇಳಿತ್ತು.

ಅಯ್ಯಪ್ಪನ ದರ್ಶನಕ್ಕಾಗಿ ವರ್ಚುವಲ್‌ (ಆನ್‌ಲೈನ್‌) ಮೂಲಕ ನೋಂದಣಿ ಮಾಡಿಕೊಂಡ ಭಕ್ತರ ದಾಖಲೆಗಳನ್ನು ಪರಿಶೀಲನೆ ಮಾಡಲು ಹತ್ತಕ್ಕೂ ಅಧಿಕ ಕೌಂಟರ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಭಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವಾಗಲೇ ಅವರಿಗೆ ನೀಲಕಲ್ಲಿನಲ್ಲಿ ಯಾವ ಸಮಯಕ್ಕೆ, ಯಾವ ದಿನದಂದು ತಮ್ಮ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಇನ್ನು ವರ್ಚುವಲ್‌ ಮೂಲಕ ನೋಂದಣಿ ಮಾಡಿಕೊಂಡು ಬಳಿಕ ಸಮಯಕ್ಕೆ ಸರಿಯಾಗಿ ನೀಲಕಲ್ಲಿನಲ್ಲಿ ಹಾಜರು ಆಗದ ಭಕ್ತರ ಬದಲಿಗೆ ವರ್ಚುವಲ್‌ ಬುಕ್ಕಿಂಗ್‌ಗೆ ಅವಕಾಶ ದೊರೆಯದ ಭಕ್ತರಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಈ ಭಕ್ತರು ದರ್ಶನ ಅವಕಾಶಕ್ಕಾಗಿ ಕಾಯಬೇಕಾಗಿ ಬರುತ್ತದೆ.

(ಒನ್‌ಇಂಡಿಯಾ ಸುದ್ದಿ)

Recommended Video

ACB ದಾಳಿ ವೇಳೆ ನೀರಿನ ಪೈಪ್ ನಿಂದ ಹಣ ತೆಗೆದಿದ್ದು ಹೇಗೆ ನೋಡಿ | Oneindia Kannada

English summary
Sabarimala Pilgrimage: How to Do Virtual Q Booking?, Here Explained in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X