‘ಅಫ್ಘಾನಿಸ್ತಾನ ವಿಚಾರದಲ್ಲಿ ಜಗತ್ತು ಒಗ್ಗೂಡಲಿ’ ಇದಪ್ಪಾ ಪುಟಿನ್ ಮಾತು ಅಂದ್ರೆ..!
ರಷ್ಯಾ ಅಧ್ಯಕ್ಷ ಪುಟಿನ್ ಮಾತಂದ್ರೆ ಕಡ್ಡಿ ಮುರಿದಂತೆ. ಅದರಲ್ಲೂ ಉಗ್ರರ ವಿಚಾರದಲ್ಲಿ ವ್ಲಾದಿಮಿರ್ ಪುಟಿನ್ ತುಂಬಾ ಅಂದ್ರೆ ತುಂಬಾನೆ ಖಡಕ್. ಯಾವುದೇ ಒತ್ತಡಕ್ಕೂ ಜಗ್ಗದೆ, ಯಾರ ಮಾತಿಗೂ ಬಗ್ಗದೆ ಪಾಪಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಮಿಸ್ಟರ್ ಪುಟಿನ್. ಇಂತಹ ಖಡಕ್ ನಾಯಕ ಈಗ ಅಫ್ಘಾನಿಸ್ತಾನ ವಿಚಾರದಲ್ಲಿ ತುಂಬಾ ಗಟ್ಟಿ ನಿಲುವು ತಳೆದಿದ್ದಾರೆ.
ಇಡೀ ಜಗತ್ತು ಅಫ್ಘಾನಿಸ್ತಾನ ಮತ್ತು ತಾಲಿಬಾನ್ ವಿಡಿಯೋಗಳನ್ನ ಶೇರ್ ಮಾಡುವಲ್ಲಿ ಬ್ಯೂಸಿ ಆಗಿದ್ರೆ ಪುಟಿನ್ ರಣತಂತ್ರ ಒಂದನ್ನು ಹೆಣೆದಿದ್ದಾರೆ. ಉಗ್ರರಿಗೆ ಖೆಡ್ಡಾ ತೋಡುವ ಕುರಿತು ಪುಟಿನ್ ಮಹತ್ವದ ಸಂದೇಶ ನೀಡಿದ್ದಾರೆ. ನಾವು ಈಗ ಬೇರೆ ವಿಚಾರಗಳನ್ನ ಚರ್ಚಿಸುವುದು ಬಿಟ್ಟು, ಅಫ್ಘಾನ್ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸಬೇಕಿದೆ.
ಅಫ್ಘಾನಿಸ್ತಾನ ವಿಚಾರದಲ್ಲಿ ಜಗತ್ತು ಒಗ್ಗೂಡಲಿ, ಉಗ್ರರ ಬಗ್ಗೆ ನಾವು ಖಡಕ್ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ ಪುಟಿನ್. ಅಲ್ಲದೆ ಭವಿಷ್ಯದಲ್ಲಿ ಉಗ್ರರು ನಡೆಸುವ ಸಾಧ್ಯತೆ ಇರುವ ಡ್ರಗ್ಸ್ ದಂಧೆ, ಜನಾಂಗೀಯ ಹಲ್ಲೆಗಳು, ಉಗ್ರ ದಾಳಿಗಳನ್ನ ಹಿಮ್ಮೆಟ್ಟಿಸಲು ಇಡೀ ಜಗತ್ತು ಒಂದಾಗಲಿ ಎಂದಿದ್ದಾರೆ ಪುಟಿನ್. ಅದರಲ್ಲೂ ಅಮೆರಿಕವನ್ನೇ ಗುರಿಯಾಗಿಸಿಕೊಂಡು ಪುಟಿನ್ ಬಿಸಿ ಮುಟ್ಟಿಸಿದ್ದಾರೆ.
ಅಮೆರಿಕದಿಂದ ಟೈಂ ವೇಸ್ಟ್..!
ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ಪರದಾಡಿದ ಅಮೆರಿಕ ಸೋತು ಸುಣ್ಣವಾಗಿದೆ. ಹೀಗಾಗಿ ತನ್ನ ಸೇನೆ ಹಿಂದೆ ಕರೆಸಿಕೊಂಡಿದೆ ಎಂಬ ಆರೋಪವಿದೆ. ಈ ಆರೋಪಗಳ ನಡುವೆ ಪುಟಿನ್ ಕೂಡ ಅಮೆರಿಕದ ಮೈತ್ರಿ ಪಡೆಗಳಿಗೆ ಬಿಸಿ ಮುಟ್ಟಿಸಿದ್ದಾರೆ. 20 ವರ್ಷಗಳ ಕಾಲ ಅಮೆರಿಕ ಅಫ್ಘಾನಿಸ್ತಾನದಲ್ಲಿ ಸಾಧಿಸಿದ್ದು ಏನೇನು ಇಲ್ಲ. ಅಮೆರಿಕ 20 ವರ್ಷಗಳ ಕಾಲ ಸಂಪತ್ತು ಹಾಗೂ ಸಮಯವನ್ನ ಮಾತ್ರ ಕಳೆದುಕೊಂಡಿದೆ ಎಂದಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್. ಈ ಮೂಲಕ ರಷ್ಯಾದ ಬದ್ಧ ಶತ್ರುವಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.
ತಾಲಿಬಾನ್ಗೆ ಪರೋಕ್ಷ ಬೆಂಬಲ..?
ಒಂದು ಕಡೆ ಅಮೆರಿಕ ಮತ್ತದರ ಮಿತ್ರ ಪಡೆಗಳು ತಾಲಿಬಾನ್ ಆಡಳಿತವನ್ನು ತೀವ್ರವಾಗಿ ವಿರೋಧಿಸಿವೆ. ಆದ್ರೆ ಅಟ್ ದಿ ಸೇಮ್ ಟೈಂ, ರಷ್ಯಾ ಮತ್ತು ಚೀನಾ ಬೆಂಬಲಿತ ದೇಶಗಳು ಈ ವಿಚಾರದಲ್ಲಿ ತಾಲಿಬಾನ್ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿವೆ. ಈ ಎಲ್ಲಾ ದೇಶಗಳನ್ನ ಪಕ್ಕಕ್ಕಿಟ್ಟು ರಷ್ಯಾ ಆ್ಯಂಗಲ್ನಲ್ಲಿ ತಾಲಿಬಾನ್ ಆಡಳಿತ ನೋಡುವುದಾದರೆ, ರಷ್ಯಾ ಇಲ್ಲಿ ತಾಲಿಬಾನ್ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಪಕ್ಕಾ. ಇದಕ್ಕೆ ಹಲವು ಕಾರಣಗಳಿವೆ. ಆದ್ರೆ ಪ್ರಮುಖ ಕಾರಣವೆಂದರೆ ಅಮೆರಿಕ ವಿರುದ್ಧದ 30 ವರ್ಷಗಳ ಮಹಾ ಸೇಡು.! ಶತ್ರುವಿನ ಶತ್ರು ಮಿತ್ರ ಎಂಬ ಮಾತು ಇಲ್ಲಿ ಅನ್ವಯಿಸುತ್ತದೆ. ಹೀಗಾಗಿ ತಾಲಿಬಾನ್ಗೆ ನೇರ ಬೆಂಬಲ ನೀಡದಿದ್ರೂ ರಷ್ಯಾ ಪರದೆಯ ಹಿಂದೆಯೇ ನಿಂತು ಆಟ ನೋಡಲಿದೆ.
ಸೇಡಿಗೆ ಸೇಡು ಪಕ್ಕಾ..!
40 ವರ್ಷಗಳ ಹಿಂದೆ ರಷ್ಯಾ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಾಗ ಅಮೆರಿಕ ಏನು ಮಾಡಿತ್ತೋ ಅದನ್ನೇ ಈಗ ರಷ್ಯಾದ ನಾಯಕರು ಮಾಡುವ ನಿರೀಕ್ಷೆ ಇದೆ. ತಾಲಿಬಾನ್ ಆಡಳಿತಗಾರರು ಅಲ್ಲಿನ ಸ್ಥಳೀಯರು. ಅವರ ದೇಶ ಅವರ ಕೈಯಲ್ಲೇ ಇರಬೇಕು ಎಂಬುದು ರಷ್ಯಾ-ಚೀನಾ ವಾದವಾಗಿದೆ. ಇದರ ಅರ್ಥ ಅಮೆರಿಕ ಇತರ ದೇಶದೊಳಗೆ ನುಗ್ಗಿ ಆಡಳಿತ ನಡೆಸುವುದು ಸರಿಯಲ್ಲ ಎಂಬ ನೀತಿ ರಷ್ಯಾ-ಚೀನಾದ್ದು. ಆದ್ರೆ ಇಲ್ಲಿ ರಾಜಕೀಯ ಕಾರಣಗಳು ಹಲವು. ಅಮೆರಿಕ ಇತರ ದೇಶಗಳ ಮೇಲೆ ಹಿಡಿತ ಸಾಧಿಸುವುದನ್ನು ತಪ್ಪಿಸುವುದೇ ಮೂಲ ಉದ್ದೇಶ. ತನಗೆ 30 ವರ್ಷಗಳ ಹಿಂದೆ ಅಮೆರಿಕ ಕೊಟ್ಟಿದ್ದ ಏಟನ್ನೇ ತಿರುಗಿಸಿ ಕೊಡಲು ಈ ಮೂಲಕ ರಷ್ಯಾ ಸಿದ್ಧವಾಗಿದೆ.
ಪುಟಿನ್ ರಣತಂತ್ರವೇ ಡಿಫರೆಂಟ್..!
ಈಗಿನ ಕಾಲಘಟ್ಟದಲ್ಲಿ ಅಮೆರಿಕದ ತಂತ್ರಗಳಿಗೆ ರಣತಂತ್ರ ಹೆಣೆಯುವ ತಾಕತ್ತು ಇರುವುದು ಪುಟಿನ್ ಹಾಗೂ ಜಿನ್ಪಿಂಗ್ಗೆ ಮಾತ್ರ. ಆ ಪೈಕಿ ಪುಟಿನ್ ರಣತಂತ್ರವೇ ಡಿಫರೆಂಟ್..! ಅಮೆರಿಕ ವಿರುದ್ಧ ಪುಟಿನ್ ಮತ್ತೊಮ್ಮೆ ಇಂತಹದ್ದೇ ರಣತಂತ್ರ ರಚಿಸಿದಂತೆ ಕಾಣುತ್ತಿದೆ. ತಾಲಿಬಾನ್ನ ನೇರವಾಗಿ ಬೆಂಬಲಿಸಿದರೆ ಜಗತ್ತು ರಷ್ಯಾವನ್ನೇ ವಿಲನ್ ರೀತಿ ನೋಡಲಿದೆ. ಅಕಸ್ಮಾತ್ ತಾಲಿಬಾನ್ ಬೆಂಬಲಕ್ಕೆ ನಿಲ್ಲದೆ ಹೋದರೆ ಅಲ್ಲಿ ಮತ್ತೊಮ್ಮೆ ಅಮೆರಿಕ ಹಿಡಿತ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ತಾಲಿಬಾನ್ಗೆ ಪರೋಕ್ಷ ಬೆಂಬಲ ನೀಡಿ, 30 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಕೊಳ್ಳಲು ಮಾಸ್ಕೋ ರಣತಂತ್ರ ರೂಪಿಸಿದೆ ಎನ್ನುತ್ತಾರೆ ತಜ್ಞರು.
ಭಯೋತ್ಪಾದನೆ ಭಯವೂ ಇದೆ..!
ತಾಲಿಬಾನ್ಗೆ ಬೆಂಬಲ ನೀಡಿದ್ದರ ಹಿಂದೆ ರಷ್ಯಾದ ಮತ್ತೊಂದು ರಣತಂತ್ರವು ಅಡಗಿದೆ. ಅಫ್ಘಾನ್ ಗಡಿಯಿಂದ ರಷ್ಯಾ ಏನು ದೂರವಿಲ್ಲ. ಅಕಸ್ಮಾತ್ ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿ, ಉಗ್ರ ಪಡೆಗಳು ಅಲ್ಲೇ ನೆಲೆಯೂರದಿರಲಿ. ಹೊಸ ತಲೆನೋವು ಸೃಷ್ಟಿಯಾಗದಿರಲಿ ಎಂಬುದು ರಷ್ಯಾದ ಮತ್ತೊಂದು ಪ್ಲ್ಯಾನ್. ಈಗಾಗಲೇ ರಷ್ಯಾ ತಾಲಿಬಾನ್ಗೆ ಈ ಬಗ್ಗೆ ಖಡಕ್ ಸಂದೇಶ ರವಾನಿಸಿದೆ. ನೆರೆ ದೇಶಗಳಲ್ಲಿ ಉಗ್ರರು ಉಪಟಳ ನೀಡದಂತೆ, ಅಫ್ಘಾನ್ ಉಗ್ರರಿಗೆ ನೆಲೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಿದ್ದಾರೆ. ಚೀನಾ ಕೂಡ ಇದೇ ಮಾತನ್ನು ತಾಲಿಬಾನ್ ಮುಖಂಡರಿಗೆ ಹೇಳಿ ಎಚ್ಚರಿಕೆಯನ್ನ ನೀಡಿಯೇ ಕಳಿಸಿದೆ. ಇದೇ ಕಾರಣಕ್ಕೆ ಈ ಬಾರಿ ತಾಲಿಬಾನ್ ಪಡೆ ಹೊಸ ಹುಮ್ಮಸ್ಸಿನಿಂದ ಆಡಳಿತ ನೀಡಲು ಮುಂದಾಗಿದೆ.
Recommended Video
9 ವರ್ಷಗಳ ಭೀಕರ ಕಾಳಗ
ಮೊದಲಿಗೆ ಗೆಲುವಿನ ನಗೆ ಬೀರಿದ್ದ ಸೋವಿಯತ್ ರಷ್ಯಾ ನಿಧಾನಕ್ಕೆ ಸೋಲುತ್ತಾ ಬಂತು. ರಷ್ಯಾ ಸೇನೆಯನ್ನು ಹೇಗಾದ್ರೂ ಮಾಡಿ ಅಫ್ಘಾನ್ ನೆಲದಿಂದ ಹೊರಹಾಕಲು ಅಮೆರಿಕ ಮತ್ತು ಅದರ ಮಿತ್ರರು ಸ್ಕೆಚ್ ಹಾಕಿದ್ದರು. ಹೀಗೆ ಕೆಲವೇ ದಿನಗಳಲ್ಲಿ ಯುದ್ಧ ಮುಗಿದು ಹೋಗಬಹುದು ಎಂಬ ಆಸೆಯಲ್ಲಿ ಅಫ್ಘಾನ್ ನೆಲಕ್ಕೆ ಬಂದಿಳಿದಿದ್ದ ಸೋವಿಯತ್ ರಷ್ಯಾ, ಬರೋಬ್ಬರಿ 9 ವರ್ಷಗಳಿಗೂ ಹೆಚ್ಚು ಕಾಲ ಅಫ್ಘಾನ್ ನೆಲದಲ್ಲಿ ಪರದಾಡುವ ಪರಿಸ್ಥಿತಿ ಎದುರಾಯಿತು. ಕಡೆಗೆ 1989ರ ಫೆಬ್ರವರಿ 15ರಂದು ಅಫ್ಘಾನ್ ನೆಲದಲ್ಲಿನ ಈ ಘೋರ ಕಾಳಗ ಮುಗಿಯಿತು. ಸೋವಿಯತ್ ರಷ್ಯಾ ಪಡೆಗಳು ಸೋತು ಹಿಂದೆ ಸರಿದಿದ್ದವು.