ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚು

|
Google Oneindia Kannada News

ನವದೆಹಲಿ, ಜೂನ್ 24: ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದಾಗಿನಿಂದ ರಷ್ಯಾ ಮತ್ತು ಭಾರತದ ಮಧ್ಯೆ ತೈಲ ವ್ಯವಹಾರ ಸಾಕಷ್ಟು ವೃದ್ಧಿಸಿದೆ. ಏಪ್ರಿಲ್ ತಿಂಗಳಿನಿಂದೀಚೆ ರಷ್ಯಾದಿಂದ ಭಾರತ ಆಮದು ಮಾಡಿಕೊಂಡ ಕಚ್ಛಾ ತೈಲದ ಪ್ರಮಾಣ ಐವತ್ತು ಪಟ್ಟು ಹೆಚ್ಚಾಗಿದೆ.

ಉಕ್ರೇನ್ ಯುದ್ಧಕ್ಕೆ ಮುನ್ನ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಶೇ. 0.2 ಮಾತ್ರ. ಈಗ ವಿದೇಶಗಳಿಂದ ಭಾರತ ಆಮದು ಮಾಡಿಕೊಳ್ಳುವ ತೈಲದಲ್ಲಿ ರಷ್ಯಾದ ಪಾಲು ಶೇ. 10ಕ್ಕೆ ಹೆಚ್ಚಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

"ಭಾರತಕ್ಕೆ ಏಪ್ರಿಲ್ ತಿಂಗಳಲ್ಲಿ ಆಮದು ಮಾಡಿಕೊಂಡ ತೈಲದಲ್ಲಿ ರಷ್ಯಾದ ಪಾಲು ಶೇ. 10 ಇದೆ. ಭಾರತಕ್ಕೆ ತೈಲ ಸರಬರಾಜು ಮಾಡುವ ಅಗ್ರ-10 ದೇಶಗಳಲ್ಲಿ ರಷ್ಯಾವೂ ಒಂದಾಗಿದೆ" ಎಂದು ಈ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಭಾರತೀಯ ಖಾಸಗಿ ಕಂಪನಿಗಳಿಗೆ ಲಾಭ ಕೊಡುವುದು ಹೇಗೆ ರಷ್ಯಾದ ಕಚ್ಚಾತೈಲ!?ಭಾರತೀಯ ಖಾಸಗಿ ಕಂಪನಿಗಳಿಗೆ ಲಾಭ ಕೊಡುವುದು ಹೇಗೆ ರಷ್ಯಾದ ಕಚ್ಚಾತೈಲ!?

ಮೇ ತಿಂಗಳಲ್ಲಿ ಭಾರತೀಯ ಕಂಪನಿಗಳು ರಷ್ಯನ್ ತೈಲ ಕಂಪನಿಗಳಿಂದ 25 ಮಿಲಿಯನ್ ಬ್ಯಾರಲ್ ಕಚ್ಛಾ ತೈಲವನ್ನು ಖರೀದಿ ಮಾಡಿದ್ದರು. ಇದರೊಂದಿಗೆ ಭಾರತಕ್ಕೆ ತೈಲ ಸರಬರಾಜು ಮಾಡುವ ದೇಶಗಳ ಪೈಕಿ ರಷ್ಯಾ ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಇರಾಕ್ ಭಾರತಕ್ಕೆ ಈಗಲೂ ಅತಿದೊಡ್ಡ ತೈಲ ಸರಬರಾಜುದಾರ ದೇಶವಾಗಿ ಮುಂದುವರಿದಿದೆ.

 ಉಕ್ರೇನ್ ಯುದ್ಧದ ಪರಿಣಾಮ

ಉಕ್ರೇನ್ ಯುದ್ಧದ ಪರಿಣಾಮ

ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಷ್ಯಾ ಮೇಲೆ ವಿವಿಧ ರೀತಿಯ ಅಂತಾರಾಷ್ಟ್ರೀಯ ನಿಷೇಧಗಳನ್ನು ಹೇರಲಾಗಿದೆ. ತತ್‌ಪರಿಣಾಮವಾಗಿ ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ತೈಲ ಬಿಕರಿಯಾಗುತ್ತಿದೆ. ಭಾರತ ಈ ಅವಕಾಶವನ್ನು ಸದುಪಯೋಗಿಕೊಳ್ಳುತ್ತಿದ್ದು, ಭಾರತೀಯ ತೈಲ ಸಂಸ್ಕರಣ ಸಂಸ್ಥೆಗಳು ಕಡಿಮೆ ಬೆಲೆಗೆ ರಷ್ಯಾ ತೈಲವನ್ನು ಖರೀದಿ ಮಾಡುತ್ತಿವೆ. ಹೀಗಾಗಿ, ಏಪ್ರಿಲ್ ತಿಂಗಳ ಬಳಿಕ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುವ ತೈಲ ಐವತ್ತು ಪಟ್ಟು ಹೆಚ್ಚಾಗಿದೆ.

ರಷ್ಯಾದಿಂದ ಭಾರತದಿಂದ ಆಮದಾಗುವ ತೈಲದಲ್ಲಿ ಖಾಸಗಿ ಕಂಪನಿಗಳಾದ ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರ ಎನರ್ಜಿಯಿಂದೇ ಶೇ. 40ರಷ್ಟು ತೈಲ ಅಮದಾಗುತ್ತದೆ.

ರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣ

 ಭಾರತ ಸಮರ್ಥನೆ

ಭಾರತ ಸಮರ್ಥನೆ

ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ಮೇಲೆ ಅಮೆರಿಕ ಹಾಗೂ ಅನೇಕ ಯುರೋಪಿಯನ್ ದೇಶಗಳು ನಿರ್ಬಂಧಗಳನ್ನು ಹೇರಿವೆ. ರಷ್ಯಾ ಜೊತೆ ಯಾವುದೇ ವ್ಯವಹಾರ ಮಾಡದಂತೆ ಇತರ ಹಲವು ದೇಶಗಳಿಗೆ ತಾಕೀತು ಮಾಡುತ್ತಿವೆ. ಹೀಗಿದ್ದರೂ ಭಾರತ ರಷ್ಯಾ ಜೊತೆ ಮಿಲಿಟರಿ ಶಸ್ತ್ರಾಸ್ತ್ರ ಖರೀದಿ ಮುಂದುವರಿಸುತ್ತಿದೆ, ಈಗ ತೈಲ ಖರೀದಿ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ.

ರಷ್ಯಾದೊಂದಿಗಿನ ತಾನು ಹೊಂದಿರುವ ವ್ಯವಹಾರವನ್ನು ಭಾರತ ಸಮರ್ಥಿಸಿಕೊಳ್ಳುತ್ತಿರುವುದು ಗಮನಾರ್ಹ. ತನ್ನ ದೇಶದ ಹಿತಾಸಕ್ತಿಗೆ ತಕ್ಕಂತೆ ನಡೆ ಇಡುವುದಾಗಿ ಭಾರತ ಸ್ಪಷ್ಟಪಡಿಸಿರುವುದು ಹೌದು. ಈ ವಿಚಾರದಲ್ಲಿ ಪಾಕಿಸ್ತಾನ ಕೂಡ ಭಾರತದ ಧೋರಣೆಯನ್ನು ಪ್ರಶಂಸಿಸಿದ್ದಿದೆ.

 ಭಾರತ ಮೂರನೇ ಅತಿದೊಡ್ಡ ತೈಲ ಬಳಕೆದಾರ

ಭಾರತ ಮೂರನೇ ಅತಿದೊಡ್ಡ ತೈಲ ಬಳಕೆದಾರ

ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಮತ್ತು ಬಳಕೆ ಮಾಡುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತವೇ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವುದು.

ಭಾರತದಲ್ಲಿ ಬಳಕೆಯಾಗುವ ತೈಲದಲ್ಲಿ ಶೇ. 85ರಷ್ಟು ಪ್ರಮಾಣವು ಬೇರೆ ದೇಶಗಳಿಂದ ಆಮದಾಗಿರುವಂಥವೇ. ಇರಾಕ್ ಮತ್ತು ಸೌದಿ ಅರೇಬಿಯಾ ಸಾಂಪ್ರದಾಯಿಕವಾಗಿ ಭಾರತಕ್ಕೆ ಅತಿ ಹೆಚ್ಚು ತೈಲ ಸರಬರಾಜು ಮಾಡುತ್ತಿದ್ದ ದೇಶಗಳು. ಈಗ ರಷ್ಯಾ ಪ್ರವೇಶ ಮಾಡಿದೆ. ಇರಾಕ್ ಈಗಲೂ ಭಾರತಕ್ಕೆ ಅತಿ ಹೆಚ್ಚು ತೈಲ ಸರಬರಾಜು ಮಾಡುತ್ತಿದ್ದರೂ ಏಪ್ರಿಲ್ ತಿಂಗಳಿನಿಂದ ಭಾರತಕ್ಕೆ ಇರಾಕ್‌ನ ತೈಲ ರಫ್ತು ಗಣನೀಯವಾಗಿ ಇಳಿದಿದೆ.

 ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಭಾರತ

ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಭಾರತ

ಉಕ್ರೇನ್ ಮತ್ತು ರಷ್ಯಾ ಯುದ್ಧದ ಪರಿಣಾಮ ಬೇರೆ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಅಮೆರಿಕ ಮತ್ತಿತರ ದೇಶಗಳ ಒತ್ತಡದಿಂದಾಗಿ ರಷ್ಯಾದಿಂದ ತೈಲ ಖರೀದಿಸಲು ಹಲವು ದೇಶಗಳು ಹಿಂದೇಟು ಹಾಕಿವೆ. ಹೀಗಾಗಿ, ರಷ್ಯಾದ ಉರಲ್‌ನಲ್ಲಿರುವ ಕಚ್ಛಾ ತೈಲವನ್ನು ಖರೀದಿಸಲು ಮುಂದಾಗಿರುವ ದೇಶಗಳು ಕಡಿಮೆಯೇ. ಹೀಗಾಗಿ, ರಷ್ಯಾದ ತೈಲ ಕಡಿಮೆ ಬೆಲೆಗೆ ಸಿಗುತ್ತಿದೆ.

ಭಾರತದ ತೈಲ ಸಂಸ್ಕರಣ ಕಂಪನಿಗಳು ರಷ್ಯಾದಿಂದ ಒಂದು ಬ್ಯಾರಲ್‌ಗೆ 30 ಡಾಲರ್ ರಿಯಾಯಿತಿ ದರದಲ್ಲಿ ಕಚ್ಛಾ ತಲ ಖರೀದಿ ಮಾಡುತ್ತಿವೆ.

(ಒನ್ಇಂಡಿಯಾ ಸುದ್ದಿ)

English summary
India's crude oil imports from Russia have raise over 50 times since April. Russia has now overtaken Saudi Arabia to become top 2 oil exporter to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X