ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪುಟ್ನಿಕ್-ವಿ ಸೂಪರ್: ಕೊರೊನಾವೈರಸ್ ಡೆಲ್ಟಾ ರೂಪಾಂತರಕ್ಕೆ ರಷ್ಯಾ ಲಸಿಕೆಯೇ ಮದ್ದು!?

|
Google Oneindia Kannada News

ನವದೆಹಲಿ, ಜುಲೈ 11: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರದ ವಿರುದ್ಧ ಯಾವ ಲಸಿಕೆಯು ಹೆಚ್ಚು ಪರಿಣಾಮಕಾರಿ ಎಂಬುದು ಇದೀಗ ಸ್ಪಷ್ಟವಾಗಿದೆ.

ಸ್ಪುಟ್ನಿಕ್-ವಿ ಲಸಿಕೆ ಸೇರಿ ಎಲ್ಲಾ ರೀತಿಯ ಎಂಆರ್‌ಎನ್‌ಎ ಲಸಿಕೆಗಳು ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನೊವೊಸಿಬಿರ್ಸ್ಕ್ ರಾಜ್ಯ ವಿಶ್ವವಿದ್ಯಾಲಯ ಹಾಗೂ ಪ್ರಯೋಗಾಲಯದ ಮುಖ್ಯಸ್ಥ ಮತ್ತು ರಷ್ಯಾದ ಅಕಾಡೆಮಿ ಆಫ್ ಸೈನ್ಸಸ್ (ಆರ್ಎಎಸ್)ನ ಸದಸ್ಯ ಸೆರ್ಗೆ ನೆಟೆಸೋವ್ ತಿಳಿಸಿದ್ದಾರೆ.

ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ ಸಿಗುವುದು ಯಾವಾಗ?ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ ಸಿಗುವುದು ಯಾವಾಗ?

ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಟುಟ್ನಿಕ್-ವಿ ಲಸಿಕೆಯು ಕೊವಿಡ್-19ನ ಡೆಲ್ಟಾ ರೂಪಾಂತರ ರೋಗಾಣು ವಿರುದ್ಧ ಶೇ.90ರಷ್ಟು ಸುರಕ್ಷಿತವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಸಲಿಗೆ ಸ್ಪುಟ್ನಿಕ್-ವಿ ಶೇ.90 ರಕ್ಷಣಾತ್ಮಕವಾಗಿರಲು ಕಾರಣವೇನು. ಈ ಲಸಿಕೆಯ ವಿಶೇಷತೆ ಏನು. ವಿವಿಧ ರಾಷ್ಟ್ರಗಳು ಸ್ಪುಟ್ನಿಕ್-ವಿ ರೀತಿಯ ಲಸಿಕೆಗಳ ಬಗ್ಗೆ ನಡೆಸಿದ ಪ್ರಯೋಗಗಳಲ್ಲಿ ಗೊತ್ತಾಗಿರುವ ಅಂಶಗಳೇನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಶೇ.90ರಷ್ಟು ರಕ್ಷಣೆ ನೀಡುವ ಸ್ಪುಟ್ನಿಕ್- ವಿ ಲಸಿಕೆ

ಶೇ.90ರಷ್ಟು ರಕ್ಷಣೆ ನೀಡುವ ಸ್ಪುಟ್ನಿಕ್- ವಿ ಲಸಿಕೆ

ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. "ರೋಗಾಣುಗಳನ್ನು ಮಾರ್ಪಡಿಸುವ ಹಾಗೂ ರೋಗಾಣು ವಿರುದ್ಧ ಹೋರಾಟಲು ಅಗತ್ಯವಾದ ಪ್ರೋಟೀನ್ ಉತ್ಪಾದಿಸುವ ಸ್ಪುಟ್ನಿಕ್-ವಿ ಹಾಗೂ ಅದೇ ಮಾದರಿಯ ಲಸಿಕೆಗಳು ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಶೇ.90ರಷ್ಟು ರಕ್ಷಣಾತ್ಮಕವಾಗಿವೆ. ರೂಪಾಂತರ ತಳಿಯ ಆರಂಭಿಕ ಹಂತದಲ್ಲಿ ಈ ಲಸಿಕೆಯು ಶೇ.95ರಷ್ಟು ಸುರಕ್ಷಿತವಾಗಿದ್ದು, ಪ್ರಸ್ತುತ ಡೆಲ್ಟಾ ರೂಪಾಂತರ ವಿರುದ್ಧ ಶೇ.90ರಷ್ಟು ಸುರಕ್ಷಿತ ಲಸಿಕೆ ಎನಿಸಿದೆ. ಹೀಗಾಗಿ ಈಗಾಗಲೇ ಅಭಿವೃದ್ಧಿಪಡಿಸಿರುವ ಕೊವಿಡ್-19 ಲಸಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿವೆ," ಎಂದು ನೆಟೆಸೋವ್ ಹೇಳಿದ್ದಾರೆ.

ಡೆಲ್ಟಾ ಸೋಂಕಿತರಿಗೆ ಸಾವಿನ ಅಪಾಯದಿಂದ ಸ್ಪುಟ್ನಿಕ್ ರಕ್ಷಣೆ

ಡೆಲ್ಟಾ ಸೋಂಕಿತರಿಗೆ ಸಾವಿನ ಅಪಾಯದಿಂದ ಸ್ಪುಟ್ನಿಕ್ ರಕ್ಷಣೆ

ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಮುಖ್ಯಸ್ಥ ವ್ಲಾಡಿಮಿರ್ ಗುಶ್ಚಿನ್ ಜೂನ್ ತಿಂಗಳಿನಲ್ಲಿ ತಮ್ಮ ಕಂಪನಿ ಸಂಶೋಧಿಸಿ ಉತ್ಪಾದಿಸುತ್ತಿರುವ ಸ್ಪುಟ್ನಿಕ್-ವಿ ಲಸಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೊರೊನಾವೈರಸ್ ಸೋಂಕಿನ ಡೆಲ್ಟಾ ರೂಪಾಂತರದಿಂದ ಶೇ.100ರಷ್ಟು ಸಾವಿನ ಅಪಾಯ ತಪ್ಪಲಿದೆ ಎಂದು ಹೇಳಿದ್ದಾರೆ.

ಸ್ಪುಟ್ನಿಕ್-ವಿ ಜಗತ್ತಿನಲ್ಲೇ ಮೊದಲು ಅನುಮೋದನೆ ಪಡೆದ ಲಸಿಕೆ

ಸ್ಪುಟ್ನಿಕ್-ವಿ ಜಗತ್ತಿನಲ್ಲೇ ಮೊದಲು ಅನುಮೋದನೆ ಪಡೆದ ಲಸಿಕೆ

ಕೊರೊನಾವೈರಸ್ ವಿರುದ್ಧ ಜಗತ್ತಿನಲ್ಲೇ ಮೊದಲ ಲಸಿಕೆಗೆ ರಷ್ಯಾ ಅನುಮೋದನೆ ನೀಡಿತು. 2020ರ ಆಗಸ್ಟ್ ತಿಂಗಳಿನಲ್ಲಿ ಸ್ಪುಟ್ನಿಕ್-ವಿ ಕೊವಿಡ್-19 ಸೋಂಕಿನ ವಿರುದ್ಧ ತುರ್ತು ಬಳಕೆ ಮಾಡಬಹುದು ಎಂದು ಅಧಿಕೃತವಾಗಿ ಆದೇಶ ಹೊರಡಿಸಲಾಗಿತ್ತು. ಜಗತ್ತಿನ 60 ರಾಷ್ಟ್ರಗಳಲ್ಲಿಇದೀಗ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ.

ರಷ್ಯಾದ ಸ್ಪುಟ್ನಿಕ್-ವಿ ಏಕೆ ಹೆಚ್ಚು ಪರಿಣಾಮಕಾರಿ?

ರಷ್ಯಾದ ಸ್ಪುಟ್ನಿಕ್-ವಿ ಏಕೆ ಹೆಚ್ಚು ಪರಿಣಾಮಕಾರಿ?

ಸ್ಪುಟ್ನಿಕ್-ವಿ ಲಸಿಕೆಯನ್ನು ಗಾಮ್-ಕೊವಿಡ್-ವ್ಯಾಕ್ಸಿನ್ ಎಂದೂ ಕರೆಯಲಾಗುತ್ತದೆ. ಸ್ಪುಟ್ನಿಕ್-ವಿ ಲಸಿಕೆ ವಿತರಣೆ ವೇಳೆ rAd26 ಮತ್ತು rAd5 ಎಂಬ ಎರಡು ವಿಭಿನ್ನ ಮಾದರಿಯ ಅಡೆನೋವೈರಸ್ ಅನ್ನು ನೀಡಲಾಗುತ್ತದೆ. ಈ ಲಸಿಕೆಯಿಂದ ಮಾನವನ ದೇಹದಲ್ಲಿ ಕೊರೊನಾವೈರಸ್ ಸೋಂಕಿನ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಮತ್ತು ಪ್ರತಿಕಾಯ ವ್ಯವಸ್ಥೆ ಹೆಚ್ಚುತ್ತದೆ. ಸಾಮಾನ್ಯವಾಗಿ ಆಡೆನೋವೈರಸ್ ಸಣ್ಣ ಪ್ರಮಾಣದ ಜ್ವರ ಹಾಗೂ ರೋಗಗಳಿಗೆ ನೀಡುವ ಲಸಿಕೆ ಆಗಿರುತ್ತದೆ. ಆಕ್ಸ್ ಫರ್ಡ್ ಮತ್ತು ಆಸ್ಟ್ರಾಜೆನಿಕಾ ವಿಶ್ವವಿದ್ಯಾಲಯ ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಯಲ್ಲಿ ಕೇವಲ ಆಡೆನೋವೈರಸ್ ಅಂಶವನ್ನು ಮಾತ್ರ ಬಳಸಲಾಗಿದೆ. ಆದರೆ ರಷ್ಯಾ ಕಂಪನಿಯು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಪರಿಣಾಮಕಾರತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಸ್ಪುಟ್ನಿಕ್-ವಿ ಲಸಿಕೆಯಲ್ಲಿ ಹೆಚ್ಚುವರಿ ಅಂಶವನ್ನು ಸೇರಿಸಿದೆ ಎಂದು ತಿಳಿದು ಬಂದಿದೆ.

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಪರಿಣಾಮದ ಕುರಿತು ಮಾಹಿತಿ

ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಪರಿಣಾಮದ ಕುರಿತು ಮಾಹಿತಿ

ಲ್ಯಾನ್ಸೆಂಟ್ ಮೆಡಿಕಲ್ ಜರ್ನಲ್ ನೀಡಿರುವ ಆಂತರಿಕ ವಿಶ್ಲೇಷಣಾ ವರದಿಯ ಪ್ರಕಾರ, ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯು ಶೇ.91.60ರಷ್ಟು ಪರಿಣಾಮಕಾರಿಯಾಗಿದೆ. ಗಮಲೇಯಾ ಸಾಂಕ್ರಾಮಿಕ ರೋಗಶಾಸ್ತ್ರ ಹಾಗೂ ಸೂಕ್ಷ್ಮಾಣುರೋಗಶಾಸ್ತ್ರದ ರಾಷ್ಟ್ರೀಯ ಸಂಶೋಧನಾ ಕೇಂದ್ರದ ಹಾಗೂ ರಷ್ಯಾದ ನೇರ ಹೂಡಿಕೆ ನಿಧಿಯು ಸ್ಪುಟ್ನಿಕ್-ವಿ ಲಸಿಕೆ ಶೇ.97.60ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.

Recommended Video

ಕ್ರಿಕೆಟ್ ಇತಿಹಾಸದ ಕಡಿಮೆ ಅವಧಿಯ ಪಂದ್ಯ:ಕೇವಲ 7 ರನ್ ಗಳಿಸಿ All out ಆದ ಟೀಮ್ | Oneindia Kannada
ದೇಶದಲ್ಲಿ ಅನುಮೋದನೆ ಪಡೆದ ಕೊರೊನಾ ಲಸಿಕೆಗಳು

ದೇಶದಲ್ಲಿ ಅನುಮೋದನೆ ಪಡೆದ ಕೊರೊನಾ ಲಸಿಕೆಗಳು

ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ.

English summary
Russia's Sputnik V Gives 90 Percent Protection Against Delta Strain Of Coronavirus: Read How Its Possible Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X