ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ವರ್ಷಗಳ ‘ಮಹಾ ಸೇಡು’! ‘ದೊಡ್ಡಣ್ಣ’ನಿಗೆ ಪುಟಿನ್ ಕೊಡ್ತಾರಾ ಗುನ್ನಾ?

|
Google Oneindia Kannada News

ಅದು 90ರ ದಶಕ, ಸೋವಿಯತ್ ರಷ್ಯಾ v/s ಅಮೆರಿಕ ನಡುವಿನ ತಿಕ್ಕಾಟ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಕಾಲಘಟ್ಟ. ಆಗಲೇ ಇಬ್ಬರ ನಡುವಿನ ರಣಾಂಗಣಕ್ಕೆ ಅಫ್ಘಾನಿಸ್ತಾನ ರಣವೇದಿಕೆ ಒದಗಿಸಿತ್ತು. ಸೋವಿಯತ್‌ಗೆ ಅಫ್ಘಾನ್ ಆಕ್ರಮಿಸುವ ಹವಣಿಕೆ, ಆದರೆ ಇದೇ ಸಮಯ ಬಳಸಿಕೊಂಡಿದ್ದ ಅಮೆರಿಕ ಪರೋಕ್ಷವಾಗಿ ರಷ್ಯಾದ ಪಡೆಗಳಿಗೆ ಸೋಲು ಕರುಣಿಸಿತ್ತು. ಅಫ್ಘಾನಿಸ್ತಾನದ ಬುಡಕಟ್ಟು ಜನರ ಕೈಗೆ ಎಕೆ-47 ಸೇರಿದಂತೆ ಆಗಿನ ಕಾಲದ ಅತ್ಯಾಧುನಿಕ ವೆಪನ್ಸ್‌ಗಳನ್ನು ಕೊಟ್ಟಿತ್ತು.

ಹೀಗೆ ಒಂದೆರಡು ತಿಂಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ಲ್ಯಾನ್ ರೂಪಿಸಿ ಎಂಟ್ರಿಕೊಟ್ಟಿದ್ದ ಸೋವಿಯತ್ ಪಡೆಗೆ, ಬರೋಬ್ಬರಿ 9 ವರ್ಷ ಅಫ್ಘಾನ್‌ನ ಗೆಲ್ಲಲು ಆಗಲೇ ಇಲ್ಲ. ಸತತ 9 ವರ್ಷಕ್ಕೂ ಹೆಚ್ಚು ಕಾಲ ಹೋರಾಡಿ ಅಫ್ಘಾನ್ ಬಿಟ್ಟು ಓಡಿತ್ತು ಸೋವಿಯತ್ ಸೇನೆ. ಅಂದಹಾಗೆ ಈ ಮಹಾ ಸೋಲಿನ ಹಿಂದೆ ಇದ್ದಿದ್ದು ಅಮೆರಿಕ ಹಾಗೂ ಸಿಐಎ ಕುತಂತ್ರ ಎಂಬ ಆರೋಪ ರಷ್ಯಾದ್ದು.

ತಾಲಿಬಾನ್‌ಗಳ ಕೈಯಲ್ಲಿ ಅಫ್ಘಾನಿಸ್ತಾನ ಸುರಕ್ಷಿತವಾಗಿದೆ ಎಂದ ರಷ್ಯಾ!ತಾಲಿಬಾನ್‌ಗಳ ಕೈಯಲ್ಲಿ ಅಫ್ಘಾನಿಸ್ತಾನ ಸುರಕ್ಷಿತವಾಗಿದೆ ಎಂದ ರಷ್ಯಾ!

ಆದರೆ ಹೀಗೆ ರಷ್ಯಾ ತನ್ನ ಸೋಲು ಒಪ್ಪಿಕೊಂಡು 30 ವರ್ಷಕ್ಕೂ ಹೆಚ್ಚು ಕಾಲವೇ ಘಟಿಸಿದೆ. ಆದರೆ ಸರಿಯಾಗಿ 30 ವರ್ಷಗಳ ಬಳಿಕ ಆ ಮಹಾ ಸೋಲಿಗೆ ಸೇಡು ತೀರಿಸಿಕೊಳ್ಳೋದಕ್ಕೆ ರಷ್ಯಾಗೆ ಅವಕಾಶ ಸಿಕ್ಕಿದೆ. ಇತಿಹಾಸ ಕೆದಕಿ ನೋಡುವುದಾದ್ರೆ, ಸದ್ಯ ತಾಲಿಬಾನ್ ಆಡಳಿತದಲ್ಲಿ ರಷ್ಯಾ ಯಾವ ಪಾತ್ರವನ್ನು ವಹಿಸುತ್ತೆ..? ಎಂಬ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.

ತಾಲಿಬಾನ್‌ಗೆ ಪರೋಕ್ಷ ಬೆಂಬಲ..!

ತಾಲಿಬಾನ್‌ಗೆ ಪರೋಕ್ಷ ಬೆಂಬಲ..!

ಒಂದು ಕಡೆ ಅಮೆರಿಕ ಮತ್ತದರ ಮಿತ್ರ ಪಡೆಗಳು ತಾಲಿಬಾನ್ ಆಡಳಿತವನ್ನು ತೀವ್ರವಾಗಿ ವಿರೋಧಿಸಿವೆ. ಆದ್ರೆ ಅಟ್ ದಿ ಸೇಮ್ ಟೈಂ, ರಷ್ಯಾ ಮತ್ತು ಚೀನಾ ಬೆಂಬಲಿತ ದೇಶಗಳು ಈ ವಿಚಾರದಲ್ಲಿ ತಾಲಿಬಾನ್‌ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿವೆ. ಈ ಎಲ್ಲಾ ದೇಶಗಳನ್ನ ಪಕ್ಕಕ್ಕಿಟ್ಟು ರಷ್ಯಾ ಆ್ಯಂಗಲ್‌ನಲ್ಲಿ ತಾಲಿಬಾನ್ ಆಡಳಿತ ನೋಡುವುದಾದರೆ, ರಷ್ಯಾ ಇಲ್ಲಿ ತಾಲಿಬಾನ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಪಕ್ಕಾ. ಇದಕ್ಕೆ ಹಲವು ಕಾರಣಗಳಿವೆ. ಆದ್ರೆ ಪ್ರಮುಖ ಕಾರಣವೆಂದರೆ ಅಮೆರಿಕ ವಿರುದ್ಧದ 30 ವರ್ಷಗಳ ಮಹಾ ಸೇಡು.! ಶತ್ರುವಿನ ಶತ್ರು ಮಿತ್ರ ಎಂಬ ಮಾತು ಇಲ್ಲಿ ಅನ್ವಯಿಸುತ್ತದೆ. ಹೀಗಾಗಿ ತಾಲಿಬಾನ್‌ಗೆ ನೇರ ಬೆಂಬಲ ನೀಡದಿದ್ರೂ ರಷ್ಯಾ ಪರದೆಯ ಹಿಂದೆಯೇ ನಿಂತು ಆಟ ನೋಡಲಿದೆ.

ಸೇಡಿಗೆ ಸೇಡು ಪಕ್ಕಾ..!

ಸೇಡಿಗೆ ಸೇಡು ಪಕ್ಕಾ..!

40 ವರ್ಷಗಳ ಹಿಂದೆ ರಷ್ಯಾ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಾಗ ಅಮೆರಿಕ ಏನು ಮಾಡಿತ್ತೋ ಅದನ್ನೇ ಈಗ ರಷ್ಯಾದ ನಾಯಕರು ಮಾಡುವ ನಿರೀಕ್ಷೆ ಇದೆ. ತಾಲಿಬಾನ್ ಆಡಳಿತಗಾರರು ಅಲ್ಲಿನ ಸ್ಥಳೀಯರು. ಅವರ ದೇಶ ಅವರ ಕೈಯಲ್ಲೇ ಇರಬೇಕು ಎಂಬುದು ರಷ್ಯಾ-ಚೀನಾ ವಾದವಾಗಿದೆ. ಇದರ ಅರ್ಥ ಅಮೆರಿಕ ಇತರ ದೇಶದೊಳಗೆ ನುಗ್ಗಿ ಆಡಳಿತ ನಡೆಸುವುದು ಸರಿಯಲ್ಲ ಎಂಬ ನೀತಿ ರಷ್ಯಾ-ಚೀನಾದ್ದು. ಆದ್ರೆ ಇಲ್ಲಿ ರಾಜಕೀಯ ಕಾರಣಗಳು ಹಲವು. ಅಮೆರಿಕ ಇತರ ದೇಶಗಳ ಮೇಲೆ ಹಿಡಿತ ಸಾಧಿಸುವುದನ್ನು ತಪ್ಪಿಸುವುದೇ ಮೂಲ ಉದ್ದೇಶ. ತನಗೆ 30 ವರ್ಷಗಳ ಹಿಂದೆ ಅಮೆರಿಕ ಕೊಟ್ಟಿದ್ದ ಏಟನ್ನೇ ತಿರುಗಿಸಿ ಕೊಡಲು ಈ ಮೂಲಕ ರಷ್ಯಾ ಸಿದ್ಧವಾಗಿದೆ.

ಪುಟಿನ್ ರಣತಂತ್ರವೇ ಡಿಫರೆಂಟ್..!

ಪುಟಿನ್ ರಣತಂತ್ರವೇ ಡಿಫರೆಂಟ್..!

ಈಗಿನ ಕಾಲಘಟ್ಟದಲ್ಲಿ ಅಮೆರಿಕದ ತಂತ್ರಗಳಿಗೆ ರಣತಂತ್ರ ಎಣೆಯುವ ತಾಕತ್ತು ಇರುವುದು ಪುಟಿನ್ ಹಾಗೂ ಜಿನ್‌ಪಿಂಗ್‌ಗೆ ಮಾತ್ರ. ಆ ಪೈಕಿ ಪುಟಿನ್ ರಣತಂತ್ರವೇ ಡಿಫರೆಂಟ್..! ಅಮೆರಿಕ ವಿರುದ್ಧ ಪುಟಿನ್ ಮತ್ತೊಮ್ಮೆ ಇಂತಹದ್ದೇ ರಣತಂತ್ರ ರಚಿಸಿದಂತೆ ಕಾಣುತ್ತಿದೆ. ತಾಲಿಬಾನ್‌ನ ನೇರವಾಗಿ ಬೆಂಬಲಿಸಿದರೆ ಜಗತ್ತು ರಷ್ಯಾವನ್ನೇ ವಿಲನ್ ರೀತಿ ನೋಡಲಿದೆ. ಅಕಸ್ಮಾತ್ ತಾಲಿಬಾನ್ ಬೆಂಬಲಕ್ಕೆ ನಿಲ್ಲದೆ ಹೋದರೆ ಅಲ್ಲಿ ಮತ್ತೊಮ್ಮೆ ಅಮೆರಿಕ ಹಿಡಿತ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ತಾಲಿಬಾನ್‌ಗೆ ಪರೋಕ್ಷ ಬೆಂಬಲ ನೀಡಿ, 30 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಕೊಳ್ಳಲು ಮಾಸ್ಕೋ ರಣತಂತ್ರ ರೂಪಿಸಿದೆ ಎನ್ನುತ್ತಾರೆ ತಜ್ಞರು.

 ಭಯೋತ್ಪಾದನೆ ಭಯವೂ ಇದೆ..!

ಭಯೋತ್ಪಾದನೆ ಭಯವೂ ಇದೆ..!

ತಾಲಿಬಾನ್‌ಗೆ ಬೆಂಬಲ ನೀಡಿದ್ದರ ಹಿಂದೆ ರಷ್ಯಾದ ಮತ್ತೊಂದು ರಣತಂತ್ರವು ಅಡಗಿದೆ. ಅಫ್ಘಾನ್ ಗಡಿಯಿಂದ ರಷ್ಯಾ ಏನು ದೂರವಿಲ್ಲ. ಅಕಸ್ಮಾತ್ ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿ, ಉಗ್ರ ಪಡೆಗಳು ಅಲ್ಲೇ ನೆಲೆಯೂರದಿರಲಿ. ಹೊಸ ತಲೆನೋವು ಸೃಷ್ಟಿಯಾಗದಿರಲಿ ಎಂಬುದು ರಷ್ಯಾದ ಮತ್ತೊಂದು ಪ್ಲ್ಯಾನ್. ಈಗಾಗಲೇ ರಷ್ಯಾ ತಾಲಿಬಾನ್‌ಗೆ ಈ ಬಗ್ಗೆ ಖಡಕ್ ಸಂದೇಶ ರವಾನಿಸಿದೆ. ನೆರೆ ದೇಶಗಳಲ್ಲಿ ಉಗ್ರರು ಉಪಟಳ ನೀಡದಂತೆ, ಅಫ್ಘಾನ್ ಉಗ್ರರಿಗೆ ನೆಲೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಿದ್ದಾರೆ. ಚೀನಾ ಕೂಡ ಇದೇ ಮಾತನ್ನು ತಾಲಿಬಾನ್ ಮುಖಂಡರಿಗೆ ಹೇಳಿ ಎಚ್ಚರಿಕೆಯನ್ನ ನೀಡಿಯೇ ಕಳಿಸಿದೆ. ಇದೇ ಕಾರಣಕ್ಕೆ ಈ ಬಾರಿ ತಾಲಿಬಾನ್ ಪಡೆ ಹೊಸ ಹುಮ್ಮಸ್ಸಿನಿಂದ ಆಡಳಿತ ನೀಡಲು ಮುಂದಾಗಿದೆ.

 9 ವರ್ಷಗಳ ಭೀಕರ ಕಾಳಗ

9 ವರ್ಷಗಳ ಭೀಕರ ಕಾಳಗ

ಮೊದಲಿಗೆ ಗೆಲುವಿನ ನಗೆ ಬೀರಿದ್ದ ಸೋವಿಯತ್ ರಷ್ಯಾ ನಿಧಾನಕ್ಕೆ ಸೋಲುತ್ತಾ ಬಂತು. ರಷ್ಯಾ ಸೇನೆಯನ್ನು ಹೇಗಾದ್ರೂ ಮಾಡಿ ಅಫ್ಘಾನ್ ನೆಲದಿಂದ ಹೊರಹಾಕಲು ಅಮೆರಿಕ ಮತ್ತು ಅದರ ಮಿತ್ರರು ಸ್ಕೆಚ್ ಹಾಕಿದ್ದರು. ಹೀಗೆ ಕೆಲವೇ ದಿನಗಳಲ್ಲಿ ಯುದ್ಧ ಮುಗಿದು ಹೋಗಬಹುದು ಎಂಬ ಆಸೆಯಲ್ಲಿ ಅಫ್ಘಾನ್ ನೆಲಕ್ಕೆ ಬಂದಿಳಿದಿದ್ದ ಸೋವಿಯತ್ ರಷ್ಯಾ, ಬರೋಬ್ಬರಿ 9 ವರ್ಷಗಳಿಗೂ ಹೆಚ್ಚು ಕಾಲ ಅಫ್ಘಾನ್‌ ನೆಲದಲ್ಲಿ ಪರದಾಡುವ ಪರಿಸ್ಥಿತಿ ಎದುರಾಯಿತು. ಕಡೆಗೆ 1989ರ ಫೆಬ್ರವರಿ 15ರಂದು ಅಫ್ಘಾನ್ ನೆಲದಲ್ಲಿನ ಈ ಘೋರ ಕಾಳಗ ಮುಗಿಯಿತು. ಸೋವಿಯತ್ ರಷ್ಯಾ ಪಡೆಗಳು ಸೋತು ಹಿಂದೆ ಸರಿದಿದ್ದವು.

English summary
Experts says that Russia will be indirectly support the Taliban’s new govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X