ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

RR ನಗರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆಸ್ತಿ, ಸಾಲ ವಿವರ

|
Google Oneindia Kannada News

ಬೆಂಗಳೂರು, ಅ.13: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಇಂದು ಜ್ಯೋತಿಷಿಗಳ ಸಲಹೆಯಂತೆ ನಾಮಪತ್ರ ಸಲ್ಲಿಸಿ, ಆಸ್ತಿ ವಿವರಗಳುಳ್ಳ ಅಫಿಡವಿಟ್ ನೀಡಿದ್ದಾರೆ.

ಅಕ್ಟೋಬರ್ 14 ರಂದು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕುಸುಮಾ ಹನುಮಂತಪ್ಪ ಅವರು ನಾಮಪತ್ರ ಸಲ್ಲಿಸುತ್ತಾರೆ ಎನ್ನಲಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ ಆರಾಧ್ಯ ಅವರ ಸಲಹೆಯಂತೆ ಇಂದೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರೀತಿಯ ಅಕ್ಕ ಶೋಭಾ ಕರಂದ್ಲಾಜೆ ಹೇಳಿಕೆಗೆ ಕುಸುಮಾ ಪ್ರತಿಕ್ರಿಯೆಪ್ರೀತಿಯ ಅಕ್ಕ ಶೋಭಾ ಕರಂದ್ಲಾಜೆ ಹೇಳಿಕೆಗೆ ಕುಸುಮಾ ಪ್ರತಿಕ್ರಿಯೆ

ಜೊತೆಗೆ ಬುಧವಾರ(ಅ.14)ದಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಎರಡನೇ ಬಾರಿ ಕುಸುಮಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಸುಪ್ರೀಂಕೋರ್ಟ್ ಮಂಗಳವಾರ ಉಪ ಚುನಾವಣೆ ನಡೆಸಲು ಒಪ್ಪಿಗೆ ನೀಡಿದ ಬಳಿಕ ಬಿಜೆಪಿಯಿಂದ ಮುನಿರತ್ನ ನಾಯ್ಡು ಸ್ಪರ್ಧೆಗಿಳಿದಿದ್ದಾರೆ. ಜ್ಞಾನ ಭಾರತಿ ಕೃಷ್ಣಮೂರ್ತಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಜ್ಯೋತಿಷಿ ಸಲಹೆಯಂತೆ ಕೈ ಅಭ್ಯರ್ಥಿ ಕುಸುಮಾ ಇಂದೇ ನಾಮಪತ್ರ ಸಲ್ಲಿಸಿದ್ಯಾಕೆ?ಜ್ಯೋತಿಷಿ ಸಲಹೆಯಂತೆ ಕೈ ಅಭ್ಯರ್ಥಿ ಕುಸುಮಾ ಇಂದೇ ನಾಮಪತ್ರ ಸಲ್ಲಿಸಿದ್ಯಾಕೆ?

ಅಕ್ಟೋಬರ್ 16ರ ತನಕ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, 10ರಂದು ಮತ ಎಣಿಕೆ ನಡೆಯಲಿದೆ.

ಎಚ್ ಕುಸುಮಾ ಕುಟುಂಬ, ವಿದ್ಯಾಭ್ಯಾಸ, ವೃತ್ತಿ ವಿವರ

ಎಚ್ ಕುಸುಮಾ ಕುಟುಂಬ, ವಿದ್ಯಾಭ್ಯಾಸ, ವೃತ್ತಿ ವಿವರ

ಬೆಂಗಳೂರಿನಲ್ಲಿ 1989ರ ಜೂನ್ 6 ರಂದು ಜನಿಸಿದ ಕುಸುಮಾ ಅವರು ಜಾತ್ಯಾತೀತ ಜನತಾದಳ ಮುಖಂಡರಾದ ಹನುಮಂತರಾಯಪ್ಪ ಅವರ ಪುತ್ರಿ. 2010ರಲ್ಲಿ ಡಾ.ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ಕುಸುಮಾ ಅವರು, 2018ರಲ್ಲಿ ಯೂನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎಸ್) ಪದವಿ ಪಡೆದಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ ಅವರು 2016ರಿಂದ 'ನಿರಾಂತಕ' ಸ್ವಯಂ ಸೇವಾ ಸಂಸ್ಥೆಯಲ್ಲಿ ಪ್ರವರ್ತಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಸೇವೆಯ ಜತೆಗೆ ಓದು, ಬರವಣಿಗೆಯಂತಹ ಹವ್ಯಾಸಗಳು ಕುಸುಮಾ ಅವರದ್ದಾಗಿದೆ. ನಿರಾತಂಕ ಸ್ವಯಂ ಸೇವಾ ಸಂಘದಲ್ಲಿ ನೊಂದ ವೃದ್ಧರಿಗೆ ಮತ್ತು ಮಹಿಳೆಯರ ಪರವಾಗಿ ಕಾರ್ಯ ನಿರ್ವಹಿಸಿರುವ ಕುಸುಮಾ ಅವರು ಈಗ ರಾಜಕೀಯ ಪ್ರವೇಶಿಸಿ ಜನ ಸೇವೆಗೆ ಮುಂದಾಗಿದ್ದಾರೆ.

ಪತಿ ಹೆಸರು ಉಲ್ಲೇಖಿಸಿಲ್ಲ

ಪತಿ ಹೆಸರು ಉಲ್ಲೇಖಿಸಿಲ್ಲ

ಕುಸಮಾ ಅವರು ಅಫಿಡವಿಟ್ ನಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರಾಗಿದ್ದೇನೆ ಎಂದು ನಮೂದಿಸಿದ್ದಾರೆ. ತಮ್ಮ ಇಮೇಲ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಅಧಿಕೃತ ಖಾತೆಗಳನ್ನು ನೀಡಿದ್ದು, ಈ ಖಾತೆಗಳನ್ನು ಬಿಟ್ಟು ಮಿಕ್ಕ ಖಾತೆಗಳ ಪೋಸ್ಟ್ ಗಳಿಗೆ ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ. ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ, ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದ್ದಾರೆ.

2019-20ನೇ ಆರ್ಥಿಕ ವರ್ಷದಲ್ಲಿ 3,673,870 ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ. 2018-19ರಲ್ಲಿ 48,00,000 ರು ಹಾಗೂ 2017-18ರಲ್ಲಿ 6,00,000 ರು ಐಟಿ ರಿಟರ್ನ್ಸ್ ತೋರಿಸಿದ್ದಾರೆ. ಪತಿ ಹಾಗೂ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿಲ್ಲ.

ನಗದು, ಬ್ಯಾಂಕ್ ಠೇವಣಿ-ಚರಾಸ್ತಿ ವಿವರ

ನಗದು, ಬ್ಯಾಂಕ್ ಠೇವಣಿ-ಚರಾಸ್ತಿ ವಿವರ

ನಗದು: 1,41.050 ರು
*ಕೆನರಾ ಬ್ಯಾಂಕ್, ನಾಗರಭಾವಿ ಬ್ರ್ಯಾಂಚ್- 1,76,670.85 ರು
* ಆಕ್ಸಿಸ್ ಬ್ಯಾಂಕ್ ಐಟಿಐ ಲೇಔಟ್-5,7775ರು
* ಬ್ಯಾಂಕ್ ಆಫ್ ಬರೋಡಾ, ಕುಮಾರಸ್ವಾಮಿ ಲೇ ಔಟ್_ 3,27,765.29 ರು
* ಬ್ಯಾಂಕ್ ಆಫ್ ಬರೋಡಾ ಸೌತ್ ಎಂಡ್ ರಸ್ತೆ- 1,000ರು
* ಎಸ್ ಬಿಐ ನಾಗರಭಾವಿ ಬ್ಯಾಂಕ್ - 41,620. 24 ರು
* ಉಳಿತಾಯ ಖಾತೆ, ನಿಶ್ಚಿತ ಠೇವಣಿ ಮುಂತಾದ ಹೂಡಿಕೆ ಹೊಂದಿದ್ದಾರೆ.

* ಸುಮಾರು 2,45, 000 ರು ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.
* ಯಾವುದೇ ಸ್ವಂತ ವಾಹನ ಹೊಂದಿಲ್ಲ.
* ವೈಯಕ್ತಿಕ ಸಾಲ 2,05,000 ರು (ಅನಿಲ್ ಗೌಡ ಎಚ್) ಹಾಗೂ 56, 58, 316 ರು (ಎ ಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್)

ಚಿನ್ನ ಬೆಳ್ಳಿ: 1,100 ಗ್ರಾಂ 45,00,000 ರು ಮೌಲ್ಯ (ಗಿಫ್ಟ್)

ಒಟ್ಟು ಚರಾಸ್ತಿ: 1,13,02,197. 38 ರು

ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ

ಕೃಷಿ, ವಾಣಿಜ್ಯ ಭೂಮಿ, ಸ್ಥಿರಾಸ್ತಿ ವಿವರ

* ತಮ್ಮ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಹೊಂದಿಲ್ಲ.
* ಬಿಬಿಎಂಪಿ ವಾರ್ಡ್ 40ರಲ್ಲಿ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನ ಒಟ್ಟು ಮೌಲ್ಯ: 17, 84, 575 ರುಗೆ ಖರೀದಿ
* ಎರಡು ಆಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ: 1,37, 10,000

ಸಾಲ, ಆರ್ಥಿಕ ಮೂಲ
ಬೈರಮ್ಮ: 20,48, 000 ರು
ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು ಸಂಬಳವೆ ಆರ್ಥಿಕ ಮೂಲ ಎಂದಿದ್ದಾರೆ.

ಒಟ್ಟಾರೆ 2,50,12,197 ರು ಒಡತಿಯಾಗಿದ್ದು, 1,13,02,197 ರು ಚರಾಸ್ತಿ, 1,37, 10,000 ರು ಸ್ಥಿರಾಸ್ತಿ, 20,48, 000 ರು ಸಾಲ.

Recommended Video

Congress ಶಾಲಿಗೆ ಬೆಲೆ ಇಲ್ಲಾ ಅನ್ನೋದು ಗೊತ್ತಾಗಿದೆ | Oneindia Kannada

English summary
Rajarajeshwari nagar By Election 2020: Congress Candidate H Kusuma submitted her nomination today(Oct 13). Here is her declared Assets and liabilities details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X