ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟಿಸಂನ ಕತ್ತಲೆ ಮಧ್ಯೆಯೂ ಬೆಳಕಿನ ನಗು ಬೀರುವ 'ರೋಶಿನಿ'

|
Google Oneindia Kannada News

"ನಿಮ್ಮ ಮಗಳು ಎಂಜಿನಿಯರ್ ಮಾಡಿದ್ದಾಳೆ. ಎಂಥ ಬುದ್ಧಿವಂತೆ ಎಂದು ಯಾರಾದರೂ ಹೊಗಳಿದರೆ ಖುಷಿ ಪಡ್ತೀವಿ ಅಲ್ಲವಾ? ಅದೇ ರೀತಿ ರೋಶಿನಿ ಬಗ್ಗೆ ಕೂಡ ನನಗೆ ಹೆಮ್ಮೆ ಇದೆ. ಅವಳಿಗೆ ಆಟಿಸಂ ಇದೆ ಅನ್ನೋ ಕಾರಣಕ್ಕೆ ನಿರ್ಲಕ್ಷ್ಯ ಮಾಡುವುದಕ್ಕೆ ಆಗುವುದಿಲ್ಲ. ಅವಳು ನನ್ನ ಮಗಳು" ಎಂದರು ಆಸ್ಥಾ ಮಿಶ್ರಾ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಆಟಿಸಂ ಸಮ್ಮೇಳನಕ್ಕೆ ತಮ್ಮ ಮಗಳು- ಹದಿನೇಳು ವರ್ಷದ ರೋಶಿನಿ, ತಂದೆ ಅನುರಾಗ್ ತಿವಾರಿ ಹಾಗೂ ತಾಯಿ ಪರಿಮಳಾ ಮಿಶ್ರಾ ಅವರ ಜತೆಗೆ ಕೋಲ್ಕತ್ತಾದಿಂದ ಬಂದಿದ್ದಾರೆ ಆಸ್ಥಾ ಮಿಶ್ರಾ. ತಮ್ಮ ಮಗಳು ರೋಶಿನಿಗೆ ಒಂದೂವರೆ ವರ್ಷ ಇರುವಾಗಲೇ ಆಟಿಸಂ ಇರುವುದನ್ನು ಕಂಡುಕೊಂಡ ಅವರು ಆಕೆಯ ಸಲುವಾಗಿ ಏನೆಲ್ಲ ಮಾಡಿದರು, ಮಾಡುತ್ತಿದ್ದಾರೆ ಎಂಬುದನ್ನು ಒನ್ಇಂಡಿಯಾ ಕನ್ನಡದ ಜತೆಗೆ ಹಂಚಿಕೊಂಡರು.

ಆಟಿಸಂ ಎಂಬ ಮಕ್ಕಳ ಮೆದುಳೊಳಗಿನ ಸಮಸ್ಯೆಗೆ ವೈದ್ಯರು ಹೇಳೋದೇನು?ಆಟಿಸಂ ಎಂಬ ಮಕ್ಕಳ ಮೆದುಳೊಳಗಿನ ಸಮಸ್ಯೆಗೆ ವೈದ್ಯರು ಹೇಳೋದೇನು?

ಆಸ್ಥಾ ಮಿಶ್ರಾ ಹಾಗೂ ಅವರ ಪತಿ ಅನುರಾಗ್ ತಿವಾರಿ ಇಬ್ಬರೂ ವೃತ್ತಿಯಿಂದ ವೈದ್ಯರು. ಅವರೇ ಹೇಳಿಕೊಳ್ಳುವಂತೆ, ತಮ್ಮ ಮಗಳಿಗೆ ಆಟಿಸಂ ಎಂಬ ಕಾರಣಕ್ಕೆ ಒಂದು ದಿನಕ್ಕೂ ಕಣ್ಣೀರು ಹಾಕಿದವರಲ್ಲ. ಆಸ್ಥಾ ಅವರ ತಂದೆ ಶಿಶಿರ್ ಕಾಂತ್ ಮಿಶ್ರಾ ಹಾಗೂ ತಾಯಿ ಪರಿಮಳಾ ಮಿಶ್ರಾ ಮೊಮ್ಮಗಳ ಸಲುವಾಗಿ ಬೆಂಬಲಕ್ಕಿದ್ದಾರೆ. ರೋಶಿನಿ ಬಗ್ಗೆ ಆಸ್ಥಾ ಹಾಗೂ ಅವರ ತಂದೆ ಶಿಶಿರ್ ಕಾಂತ್ ಮಿಶ್ರಾ ಹಂಚಿಕೊಂಡ ವಿವರಗಳು ಇಲ್ಲಿವೆ.

ಭಾವನೆಯೇ ಇರುತ್ತಿರಲಿಲ್ಲ

ಭಾವನೆಯೇ ಇರುತ್ತಿರಲಿಲ್ಲ

"ನನಗೆ ಇಬ್ಬರು ಹೆಣ್ಣುಮಕ್ಕಳು. ರೋಶಿನಿ ಎರಡನೆಯವಳು. ಅವಳಿಗೆ ಒಂದೂವರೆ ವರ್ಷವಿದ್ದಾಗ ಆಟಿಸಂ ಇರುವ ಬಗ್ಗೆ ಗೊತ್ತಾಯಿತು. ಏಕೆಂದರೆ ನಡವಳಿಕೆ ವಿಚಾರವಾಗಿ ದೊಡ್ಡ ಮಗಳಿಗಿಂತ ಇವಳು ಪೂರ್ತಿ ಭಿನ್ನ. ನಾನು ವೃತ್ತಿಯಿಂದ ವೈದ್ಯೆ. ತಾಯಿ ಮನೆಯಿಂದ ಆಚೆ ಹೋಗುವಾಗ ಮಕ್ಕಳು ಅಳುತ್ತವೆ. ತಂದೆ ಕೆಲಸ ಮುಗಿಸಿ ಮನೆಗೆ ಬರುವಾಗ ಖುಷಿ ಪಡುತ್ತವೆ. ಆದರೆ ಅಂಥ ಯಾವ ಭಾವನೆಯೂ ಅವಳಲ್ಲಿ ಇರಲಿಲ್ಲ. ಚಾಕಲೇಟ್ ನ ಕವರ್ ಶಬ್ದ ಮಾಡಿದರೆ ಆ ಕಡೆ ಗಮನ ಕೊಡುತ್ತಿದ್ದಳು ಎಂಬುದು ಬಿಟ್ಟರೆ ಅವಳ ಹೆಸರು ಹಿಡಿದು ಕರೆದರೂ ತಿರುಗಿ ನೋಡುತ್ತಿರಲಿಲ್ಲ. ಆಗ ನಮಗೆ ಗೊತ್ತಾಯಿತು, ರೋಶನಿಗೆ ಆಟಿಸಂ ಇದೆ".

ಅಪ್ಪ-ಅಮ್ಮ ವೈದ್ಯರನ್ನು ಹುಡುಕುತ್ತಿದ್ದರು

ಅಪ್ಪ-ಅಮ್ಮ ವೈದ್ಯರನ್ನು ಹುಡುಕುತ್ತಿದ್ದರು

ಆಗ ಉಳಿದ ಯಾವ ಪರೀಕ್ಷೆಯನ್ನೂ ಮಾಡಿಸುವುದಕ್ಕೆ ಹೋಗಲಿಲ್ಲ. ನೇರವಾಗಿ ಆಟಿಸಂನ ಚಿಕಿತ್ಸೆ ಶುರು ಮಾಡಿಸಿದೆವು. ಇದರ ಚಿಕಿತ್ಸೆಗೆ ನಲವತ್ತು- ಐವತ್ತು ಸಾವಿರದವರೆಗೆ ಹಣ ಬೇಕಾಗುತ್ತದೆ. ಅಪ್ಪ- ಅಮ್ಮ ವೈದ್ಯರು ಹಾಗೂ ತರಬೇತುದಾರರನ್ನು ಹುಡುಕಿಕೊಂಡು ಬರುತ್ತಿದ್ದರು. ನಾನು ಹಣವನ್ನು ಹೊಂದಿಸುತ್ತಿದ್ದೆ. ಅವಳಿಗೆ ಬಿಹೇವಿಯರಲ್ ತರಬೇತಿ ಸೇರಿದಂತೆ ನಾನಾ ತರಬೇತಿಗಳನ್ನು ಕೊಡಿಸ್ತಿದ್ದೇವೆ.

ಶಿಕ್ಷಣದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ

ಶಿಕ್ಷಣದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ

ಆಟಿಸಂ ಇರುವ ಮಕ್ಕಳಿಗೆ ತಮಗೆ ಏನು ಬೇಕು ಎಂಬುದನ್ನು ಹೇಳುವುದಕ್ಕೆ ಗೊತ್ತಾಗಲ್ಲ. ಅಷ್ಟೇ ಅಲ್ಲ, ಹೇಗೆ ನಡೆದುಕೊಳ್ಳಬೇಕು ಎಂಬುದು ಸಹ ಗೊತ್ತಿರಲ್ಲ. ಆದ್ದರಿಂದ ನಾವು ಶಿಕ್ಷಣದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ರೋಶಿನಿಯ ನಡವಳಿಕೆ ಬಗ್ಗೆ ಕಾಳಜಿ ಇತ್ತು. ಆ ಹೆಣ್ಣುಮಗು ಎಲ್ಲರ ಮುಂದೆ ಹೇಗೆಂದರೆ ಹಾಗಿರಲು ಸಾಧ್ಯವಿಲ್ಲ. ಒಂದು ಉದಾಹರಣೆ ಹೇಳ್ತೀನಿ. ರೋಶಿನಿಗೆ ನಾಲ್ಕು ವರ್ಷ ಇರುವಾಗ ಒಮ್ಮೆ ಪಾರ್ಕ್ ನಲ್ಲಿ ಜೋಡಿಗಳಿಬ್ಬರು ಕೂತು ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದರು. ಸೀದಾ ಅವರ ಬಳಿ ಹೋದ ರೋಶಿನಿ, ಅವರಿಬ್ಬರಿಂದ ಅದನ್ನು ಕಸಿದು, ತಾನು ಕುಡಿದಳು. ಅವಳಿಗೆ ಅದು ಬೇಕು ಅನ್ನಿಸಿತು. ಆದರೆ ಹಾಗೆ ಒಂದು ಪುಟ್ಟ ಮಗು ಮಾಡುವುದನ್ನು ಯಾರಾದರೂ ಸಹಿಸ್ತಾರೆ. ಆದರೆ ಹದಿನಾಲ್ಕು- ಇಪ್ಪತ್ನಾಲ್ಕು ವರ್ಷದ ಹುಡುಗಿ ಮಾಡಿದರೆ ಹೇಗಾಗಬಹುದು?

ಮನೆಯಲ್ಲಿ ತನ್ನೆಲ್ಲ ಕೆಲಸ ಮಾಡಿಕೊಳ್ತಾಳೆ

ಮನೆಯಲ್ಲಿ ತನ್ನೆಲ್ಲ ಕೆಲಸ ಮಾಡಿಕೊಳ್ತಾಳೆ

"ಸದ್ಯಕ್ಕೆ ನಮ್ಮ ಮನೆಯಲ್ಲಿ ಅವಳೇ ಎಲ್ಲ ಕೆಲಸವನ್ನು ಮಾಡಿಕೊಳ್ತಾಳೆ. ಅಡುಗೆ ಮಾಡುವುದರಿಂದ ಮೊದಲುಗೊಂಡು ಎಲ್ಲ ಕೆಲಸ ಮಾಡ್ತಾಳೆ. ತನ್ನಷ್ಟಕ್ಕೆ ತಾನೇ ಮಾಡ್ತಾಳೆ. ಆದ್ದರಿಂದ ಮನೆಯಿಂದ ಆಚೆ ಬಂದರೆ ಅವಳಿಗೆ ನೆರವು ಬೇಕಾಗುತ್ತದೆ. ರೋಶಿನಿಯ ಅಕ್ಕನ ಜತೆಗೆ ಅಂಥ ಭಾವನಾತ್ಮಕ ನಂಟಿಲ್ಲ. ಆದರೆ ಬದಲಾವಣೆಗಳು ಕಂಡಿದೆ. ಇನ್ನೂರು ಹಾಡುಗಳನ್ನು ಹೇಳಿಕೊಟ್ಟಿದ್ದೀವಿ. ತನ್ನಷ್ಟಕ್ಕೆ ಹಾಡಿಕೊಳ್ತಾಳೆ. ಈ ರೀತಿ ಹಾಡು ಬರದಿದ್ದಲ್ಲಿ ಏನೇನೋ ಬಡಬಡಿಸ್ತಿದ್ದಳು. ಅದರಿಂದ ಮುಜುಗರ ಆಗ್ತಿತ್ತು. ಆದರೆ ಈಗ ತನಗಿಷ್ಟದ ಹಾಡು ಗುನುಗುನಿಸ್ತಾಳೆ. ಯಾರಿಗೂ ಮುಜುಗರವಾಗಲ್ಲ" ಎನ್ನುತ್ತಾರೆ ಆಸ್ಥಾ.

ಸದಾ ಬಿಜಿಯಾಗಿರುವ ರೋಶಿನಿ

ಸದಾ ಬಿಜಿಯಾಗಿರುವ ರೋಶಿನಿ

ತಮ್ಮ ಮೊಮ್ಮಗಳ ಬಗ್ಗೆ ಮಾತನಾಡುವ ಶಿಶಿರ್ ಕಾಂತ್ ಮಿಶ್ರಾ, ಪ್ರತಿ ದಿನ ಮನೆಗೆ ಜಿಮ್ ಇನ್ ಸ್ಟ್ರಕ್ಟರ್, ಯೋಗ ತರಬೇತುದಾರರು ಇನ್ನಿತರ ತರಬೇತುದಾರರು ಬರುತ್ತಾರೆ. ಇನ್ನು ರೋಶಿನಿ ಬಿಹೇವಿಯರಲ್ ತರಗತಿಗೆ ಹೋಗ್ತಾಳೆ. ಅವಳು ಸದಾ ಬಿಜಿಯಾಗಿರುತ್ತಾಳೆ. ಸ್ವಿಮಿಂಗ್ ಗೆ ಹೋಗ್ತಾಳೆ. ಬಹಳ ಸುಧಾರಿಸಿದ್ದಾಳೆ ಎನ್ನುತ್ತಾರೆ.

ಮೂರರ ಮಗ್ಗಿ ಹೇಳುವ ರೋಶಿನಿ

ಮೂರರ ಮಗ್ಗಿ ಹೇಳುವ ರೋಶಿನಿ

"ಮುಂದಿನ ವರ್ಷ ನ್ಯಾಷನಲ್ ಓಪನ್ ಸ್ಕೂಲ್ ನಲ್ಲಿ ರೋಶಿನಿ ಮೂರನೇ ಕ್ಲಾಸ್ ಗೆ ಸೇರುತ್ತಿದ್ದಾಳೆ. ಈಗಾಗಲೇ ಮೂರರ ಮಗ್ಗಿ ಹೇಳುತ್ತಾಳೆ. ಅವಳಿಗೆ ಏನು ಬೇಕು ಎಂದು ಕೇಳುವಷ್ಟರ ಮಟ್ಟಿಗೆ ಆದರೆ ಸಾಕು. ಈ ಸಮಾಜದಲ್ಲಿ ಹಲವರು ಆಟಿಸಂನ ಅರ್ಥ ಮಾಡಿಕೊಳ್ಳುವವರು ಇದ್ದಾರೆ. ಅವಳು ನನ್ನ ಮಗಳು. ನಮ್ಮ ನಂತರ ಅವಳಿಗೆ ಯಾರ ಅವಲಂಬನೆ ಇರಬಾರದು ಎಂಬುದಕ್ಕೆ ನಮ್ಮ ಈ ಪ್ರಯತ್ನ ಎನ್ನುತ್ತಾರೆ" ತಾಯಿ ಆಸ್ಥಾ ಮಿಶ್ರಾ.

English summary
Roshini- A 17 year girl from Kolkata, fighting with Autism. Here is the story about Roshini, her parents support and grand parents love. Autism found in Roshini at the age of one and half years. After that, they are putting best effort for Roshini.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X